ತಪ್ಪಾಗಿ ಬೇರೆಯವರ ಬ್ಯಾಂಕ್ ಅಕೌಂಟ್ ಗೆ ಹಣ ವರ್ಗಾವಣೆ ಆಗೋಯ್ತಾ? ಈ ರೀತಿ ಮಾಡಿ ಸಾಕು
ಯುಪಿಐ ಇಂದ ತಪ್ಪಾದ ವ್ಯಕ್ತಿಗೆ ಹಣ ವರ್ಗಾವಣೆ ಮಾಡಿದರೆ, ಅದನ್ನು ವಾಪಸ್ ಪಡೆಯುವುದಕ್ಕೆ ಕೆಲವು ಮಾರ್ಗಗಳು ಇದೆ.
ಈಗ ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಗೆ ಹಣ ವರ್ಗಾವಣೆ (Money Transfer) ಮಾಡುವುದು ಬಹಳ ಸುಲಭ. ಮೊದಲೆಲ್ಲಾ ಬ್ಯಾಂಕ್ ಗೆ ಹೋಗಿ ಮಾಡಬೇಕಿತ್ತು, ಆದರೆ ಈಗ ಬೆರಳ ತುದಿಯಲ್ಲಿ ನಿಮ್ಮ ಮೊಬೈಲ್ ಫೋನ್ ನಲಿಯೇ ಮಾಡಬಹುದು.
ಯುನಿಫೈಡ್ ಇಂಟರ್ ಫೇಸ್ ಲಿಂಕ್ (UPI) ಮೂಲಕ ಹಣ ವರ್ಗಾವಣೆ ಮಾಡುವ ಕೆಲಸ ಬಹಳ ಸುಲಭ ಆಗಿದೆ. UPI ಬಳಸಿ ಹಣ ವರ್ಗಾವಣೆ ಮಾಡುವುದು, ಆನ್ಲೈನ್ ಶಾಪಿಂಗ್, ಟಿಕೆಟ್ ಬುಕಿಂಗ್, ಫೋನ್ ರೀಚಾರ್ಜ್ ಸೇರಿದಂತೆ ಇನ್ನು ಅನೇಕ ಕೆಲಸಗಳನ್ನು ನಿಮ್ಮ ಫೋನ್ ಇಂದಲೇ ಮಾಡಿಕೊಳ್ಳಬಹುದು.
ನಿಮ್ಮ ಮೊಬೈಲ್ ನಲ್ಲಿ ಯುಪಿಐ ಆಪ್ ಗಳನ್ನು ಬಳಸಿ ಈ ರೀತಿ ಡಿಜಿಟಲ್ ವ್ಯವಹಾರ ಮಾಡಬಹುದು. ಹಾಗೆಯೇ ಮತ್ತೊಬ್ಬರಿಗೆ ಹಣ ವರ್ಗಾವಣೆ ಮಾಡುವುದು ಕೂಡ ಅಷ್ಟೇ ಸುಲಭ.
ಮೊದಲಿನ ಹಾಗೆ ಬ್ಯಾಂಕ್ ಗೆ ಹೋಗಿ ಚೆಕ್ ಹಾಕುವ ಅವಶ್ಯಕತೆ ಇಲ್ಲ. ಯುಪಿಐ ಮೂಲಕ ಹಣ ವರ್ಗಾವಣೆ ಮಾಡುವುದಕ್ಕೆ ನಿಮ್ಮ ಬ್ಯಾಂಕ್ ಅಕೌಂಟ್ (Bank Account) ಲಿಂಕ್ ಆಗಿರುವ ಮೊಬೈಲ್ ನಂಬರ್ ಹಾಗೂ ನಿಮ್ಮ ಫೋನ್ ನಲ್ಲಿ ಯುಪಿಐ ಆಪ್ ಇನ್ಸ್ಟಾಲ್ ಆಗಿದ್ರೆ ಸಾಕು, ಇನ್ಯಾವುದರ ಬಗ್ಗೆ ಕೂಡ ಯೋಚನೆ ಮಾಡುವ ಅಗತ್ಯವಿಲ್ಲ.
ಸ್ಟೇಟ್ ಬ್ಯಾಂಕ್‌ನಲ್ಲಿ 12 ಲಕ್ಷ ಕಾರ್ ಲೋನ್ ತಗೊಂಡ್ರೆ ಎಷ್ಟು EMI ಕಟ್ಟಬೇಕಾಗುತ್ತೆ? ಇಲ್ಲಿದೆ ಡೀಟೇಲ್ಸ್
ಕೆಲವೊಮ್ಮೆ ತಪ್ಪಾದ ವ್ಯಕ್ತಿಗೆ ಹಣ ವರ್ಗಾವಣೆ ಆಗಬಹುದು:
ಡಿಜಿಟಲ್ ಆಗಿ ಹಣವನ್ನು ವರ್ಗಾವಣೆ ಮಾಡುವುದು ಬಹಳ ಸುಲಭ. ಆದರೆ ಫೋನ್ ನಂಬರ್ ಗೆ ಯುಪಿಐ ಮೂಲಕ ಹಣ ಕಳಿಸುವಾಗ ಬಹಳ ಹುಷಾರಾಗಿ ಇರಬೇಕು. ಮತ್ತೊಬ್ಬ ವ್ಯಕ್ತಿಯ ಫೋನ್ ನಂಬರ್ ನಲ್ಲಿ ಒಂದೇ ಒಂದು ಸಂಖ್ಯೆ ತಪ್ಪಾದರು ಅದು ಇನ್ಯಾರದ್ದೋ ಫೋನ್ ನಂಬರ್ ಆಗಿದ್ದು, ಆ ವ್ಯಕ್ತಿಗೆ ಹೋಗಬಹುದು. ಕೆಲವೊಮ್ಮೆ ಈ ರೀತಿ ಆಗುತ್ತದೆ. ಒಂದು ವೇಳೆ ಈ ರೀತಿ ಆದರೆ ನಿಮ್ಮ ಹಣ ಹೋದಾಗ ಎಂದು ಚಿಂತೆ ಮಾಡುವ ಅವಶ್ಯಕತೆ ಇಲ್ಲ.
ನಿಮ್ಮ ಹಣವನ್ನು ನೀವು ವಾಪಸ್ ಪಡೆದುಕೊಳ್ಳಬಹುದು. ಹೌದು, ಯುಪಿಐ ಇಂದ ತಪ್ಪಾದ ವ್ಯಕ್ತಿಗೆ ಹಣ ವರ್ಗಾವಣೆ ಮಾಡಿದರೆ, ಅದನ್ನು ವಾಪಸ್ ಪಡೆಯುವುದಕ್ಕೆ ಕೆಲವು ಮಾರ್ಗಗಳು ಇದೆ. ಆ ಮಾರ್ಗವನ್ನು ಅನುಸರಿಸಿ ಹಣವನ್ನು ವಾಪಸ್ ಪಡೆಯಬಹುದು. ಅದು ಹೇಗೆ ಎಂದು ತಿಳಿಯೋಣ. ಹಣವನ್ನು ವಾಪಸ್ ಪಡೆಯುವ ಪ್ರಕ್ರಿಯೆ ಈ ರೀತಿ ಇರುತ್ತದೆ.
ಮನೆಯಲ್ಲಿ ಎಷ್ಟು ಕ್ಯಾಶ್ ಇಟ್ಟುಕೊಳ್ಳಬಹುದು? ಈ ಮಿತಿ ಗೊತ್ತಿರಲಿ, ಇಲ್ಲದೆ ಹೋದ್ರೆ ಕಟ್ಟಬೇಕು ದಂಡ!
ಹಣ ಹಿಂಪಡೆಯುವುದು ಹೀಗೆ;
ಒಂದು ವೇಳೆ ನೀವು ನಿಮ್ಮ ಬ್ಯಾಂಕ್ ಅಕೌಂಟ್ ಇಂದ ಇನ್ನೊಂದು ಬ್ಯಾಂಕ್ ಅಕೌಂಟ್ ಗೆ ಹಣ ವರ್ಗಾವಣೆ ಮಾಡುವಾಗ, 1 ನಂಬರ್ ಹೆಚ್ಚು ಕಡಿಮೆ ಆದರೂ ಕೂಡ, ಮತ್ತೊಬ್ಬ ವ್ಯಕ್ತಿಗೆ ವರ್ಗಾವಣೆ ಆಗಿಬಿಡುತ್ತದೆ.
ಆ ರೀತಿ ಆದಾಗ ನೀವು ನಿರ್ದಿಷ್ಟ ಸಮಯದ ಒಳಗೆ ಬ್ಯಾಂಕ್ ಗೆ ರಿಪೋರ್ಟ್ ಮಾಡಿದರೆ, ಈ ಹಣವನ್ನು ವಾಪಸ್ ಪಡೆಯಬಹುದು.. ಅದು ಹೇಗೆ, ಯಾವ ಪ್ರೊಸಿಜರ್ ಫಾಲೋ ಮಾಡಬೇಕು, ಎಲ್ಲವನ್ನು ತಿಳಿದುಕೊಳ್ಳೋಣ..
*ತಪ್ಪಾದ ವ್ಯಕ್ತಿಗೆ ಹಣ ವರ್ಗಾವಣೆ ಮಾಡಿದಾಗ, ಮೊದಲು ನಿಮ್ಮ ಬ್ಯಾಂಕ್ ಅಕೌಂಟ್ ಇರುವ ಬ್ರಾಂಚ್ ಗೆ ಹೋಗಿ..
*ಬ್ಯಾಂಕ್ ಗೆ ಹೋಗಲು ಆಗದೇ ಇದ್ದಾಗ ನಿಮ್ಮ ಬ್ಯಾಂಕ್ ನ ಕಸ್ಟಮರ್ ಕೇರ್ ಸರ್ವಿಸ್ ಗೆ ಕರೆಮಾಡಿ, ತಪ್ಪು ವರ್ಗಾವಣೆ ಆಗಿರುವ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ.
ನಿಮ್ಮತ್ರ ಯಾವುದೇ ಬ್ಯಾಂಕ್ ಡೆಬಿಟ್ ಕಾರ್ಡ್ ಇದ್ರೂ ಸಹ ಸಿಗಲಿದೆ 10 ಲಕ್ಷ ರೂಪಾಯಿ ಬೆನಿಫಿಟ್!
*ಬಳಿಕ ಈ ವಿಷಯ ಬ್ಯಾಂಕ್ ಮ್ಯಾನೇಜರ್ ಅವರನ್ನು ತಲುಪಿ, ಅವರು ನಿಮ್ಮ ಅಕೌಂಟ್ ಇಂದ ಯಾರ ಅಕೌಂಟ್ ಗೆ ಹಣ ವರ್ಗಾವಣೆ ಆಗಿದೆ ಎನ್ನುವುದನ್ನು ಪತ್ತೆ ಹಚ್ಚುತ್ತಾರೆ.
*ಒಂದು ವೇಳೆ ನಿಮ್ಮ ಬ್ಯಾಂಕ್ ನಲ್ಲಿ ಇದಕ್ಕೆ ಪರಿಹಾರ ಸಿಗದೇ ಹೋದರೆ, bankingombudsman.rbi.org.in ಈ ಲಿಂಕ್ ಮೂಲಕ RBI ಗೆ ನೇರವಾಗಿ ದೂರು ಸಲ್ಲಿಸಬಹುದು.
ನೀವು ಇನ್ಯಾರದ್ದೋ ಖಾತೆಗೆ ಹಣ ವರ್ಗಾವಣೆ ಮಾಡಿ, ಕೆಲವು ಗಂಟೆಗಳ ಒಳಗೆ ಕಂಪ್ಲೇಂಟ್ ಕೊಡುವ ಈ ಕೆಲಸವನ್ನು ಮಾಡಬೇಕು. ತುಂಬಾ ತಡವಾದರೆ ಹಾಗೂ ಹಣ ಪಡೆದ ವ್ಯಕ್ತಿ ಅಕೌಂಟ್ ಇಂದ ಹಣವನ್ನು ವಿತ್ ಡ್ರಾ ಮಾಡಿಬಿಟ್ಟರೆ ಹಣವನ್ನು ಹಿಂಪಡೆಯಲು ಆಗುವುದಿಲ್ಲ.
What to do when money is transferred to someone bank account by mistake