ಸ್ಟೇಟ್ ಬ್ಯಾಂಕ್‌ನಲ್ಲಿ 12 ಲಕ್ಷ ಕಾರ್ ಲೋನ್ ತಗೊಂಡ್ರೆ ಎಷ್ಟು EMI ಕಟ್ಟಬೇಕಾಗುತ್ತೆ? ಇಲ್ಲಿದೆ ಡೀಟೇಲ್ಸ್

Car Loan : ಈಗ ಪ್ರತಿಯೊಬ್ಬರ ಮನೆಯಲ್ಲಿ ಒಂದು ವಾಹನ ಇರುವುದು ಒಳ್ಳೆಯದು ಎನ್ನುವ ಭಾವನೆ ಇದೆ. ಏಕೆಂದರೆ ಕುಟುಂಬ ಸಮೇತ ಅಥವಾ ಸ್ನೇಹಿತರ ಜೊತೆಗೆ ಎಲ್ಲಾದರೂ ಹೋಗಬೇಕು ಎಂದರೆ, ದೈನಂದಿನ ಪ್ರಯಾಣಗಳಿಗೆ ಎಲ್ಲದಕ್ಕೂ Bike ಅಥವಾ Car ಬೇಕೇ ಬೇಕು.

ದೂರದ ಪ್ರಯಾಣ ಎಂದರೆ ಅದಕ್ಕೆ ಕಾರ್ ಸೂಕ್ತ. ಹಾಗಾಗಿ ಕಾರ್ ಖರೀದಿ ಮಾಡುವ ಆಸೆ ಎಲ್ಲರಿಗೂ ಇರುತ್ತದೆ. ಆದರೆ ಕಾರ್ ಗೆ ಬೆಲೆ ಲಕ್ಷದಿಂದ ಹಿಡಿದು ಕೋಟಿಗಟ್ಟಲೇ ಇರುತ್ತದೆ. ಅವುಗಳನ್ನು ಸಾಮಾನ್ಯ ಜನರು ಖರೀದಿ ಮಾಡುವುದು ಕಷ್ಟವೇ..

ಮನೆಯಲ್ಲಿ ಎಷ್ಟು ಕ್ಯಾಶ್ ಇಟ್ಟುಕೊಳ್ಳಬಹುದು? ಈ ಮಿತಿ ಗೊತ್ತಿರಲಿ, ಇಲ್ಲದೆ ಹೋದ್ರೆ ಕಟ್ಟಬೇಕು ದಂಡ!

ಹಾಗಾಗಿ ಜನರಿಗೆ ಬ್ಯಾಂಕ್ ಇಂದ ಲೋನ್ (Bank Loan) ಸಿಗುತ್ತದೆ. ಹೌದು, ಬ್ಯಾಂಕ್ ಗಳಿಂದ Car Loan ಪಡೆದು ನಿಮ್ಮಿಷ್ಟದ ಕಾರ್ ಅನ್ನು ಖರೀದಿ ಮಾಡಬಹುದು. ಈ ರೀತಿಯಾಗಿ ನಿಮ್ಮ ಕನಸಿನ ಕಾರ್ ಅನ್ನು ಖರೀದಿ ಮಾಡಿ, ಇಎಂಐ ಪಾವತಿ ಮಾಡುತ್ತಾ ಸಾಲವನ್ನು ತೀರಿಸುತ್ತಾ ಬರಬಹುದು.

ಬಹುತೇಕ ಎಲ್ಲಾ ಬ್ಯಾಂಕ್ ಗಳು ಕೂಡ ಕಾರ್ ಲೋನ್ ಕೊಡುತ್ತದೆ. ಇಂದು SBI ನಲ್ಲಿ ಕಾರ್ ಲೋನ್ ಗೆ ಇರುವ ಬಡ್ಡಿ ಎಷ್ಟು, ಪ್ರತಿ ತಿಂಗಳು ಎಷ್ಟು ಇಎಂಐ ಕಟ್ಟಬೇಕಾಗುತ್ತದೆ ಎಂದು ತಿಳಿದುಕೊಳ್ಳೋಣ..

SBI Car Loan

ನಮ್ಮ ದೇಶದ ಅತ್ಯಂತ ಹಾಗೂ ವಿಶ್ವಾಸಾರ್ಹ ಬ್ಯಾಂಕ್ ಗಳಲ್ಲಿ SBI ಪ್ರಮುಖ ಸ್ಥಾನದಲ್ಲಿದೆ. ಈ ಬ್ಯಾಂಕ್ ನಲ್ಲಿ ಕಾರ್ ಲೋನ್ ಗೆ ಬಡ್ಡಿದರ ಹೇಗಿದೆ ಎಂದು ನೋಡುವುದಾದರೆ, SBI ನಲ್ಲಿ 8.85% ಇಂದ 9.80% ವರೆಗು ಬಡ್ಡಿದರ ಇರುತ್ತದೆ..

ಈ ಬಡ್ಡಿದರವನ್ನು ನಿಮ್ಮ ಸಿಬಿಲ್ ಸ್ಕೋರ್ (CIBIL Score) ಆಧಾರದ ಮೇಲೆ ನಿಗದಿ ಮಾಡಲಾಗುತ್ತದೆ. ನಿಮ್ಮ ಸಿಬಿಲ್ ಸ್ಕೋರ್ ಚೆನ್ನಾಗಿದ್ದು, 800 ಗಿಂತ ಜಾಸ್ತಿ ಇದ್ದರೆ 8.85% ಬಡ್ಡಿದರದಲ್ಲಿ ಕಾರ್ ಲೋನ್ ಪಡೆಯಬಹುದು. ಇದು ಉತ್ತಮವಾದ ಬಡ್ಡಿದರ ಆಗಿದೆ.

ನಿಮ್ಮತ್ರ ಯಾವುದೇ ಬ್ಯಾಂಕ್ ಡೆಬಿಟ್ ಕಾರ್ಡ್ ಇದ್ರೂ ಸಹ ಸಿಗಲಿದೆ 10 ಲಕ್ಷ ರೂಪಾಯಿ ಬೆನಿಫಿಟ್!

Car Loan12 ಲಕ್ಷದ ಕಾರ್ ಗೆ ಕಟ್ಟಬೇಕಾದ EMI ಎಷ್ಟು?

ಒಂದು ವೇಳೆ ನೀವು ನಿಮಗೆ ಇಷ್ಟವಾದ 12 ಲಕ್ಷ ರೂಪಾಯಿಯ ಕಾರ್ ಖರೀದಿ ಮಾಡಿದರೆ, ಅದಕ್ಕಾಗಿ ನೀವು 12 ಲಕ್ಷ ಲೋನ್ ಪಡೆದು, ನಿಮ್ಮ ಸಿಬಿಲ್ ಸ್ಕೋರ್ ಚೆನ್ನಾಗಿರುವ ಕಾರಣ ನಿಮಗೆ 8.85% ಬಡ್ಡಿದರ ನಿಗದಿಯಾದರೆ. ಪ್ರತಿ ತಿಂಗಳು ನೀವು ₹24,823 ರೂಪಾಯಿಗಳ ಇಎಂಐ ಕಟ್ಟಬೇಕಾಗುತ್ತದೆ. ಇದು ನಿಮ್ಮ ನೆನಪಿನಲ್ಲಿ ಇರಲಿ. ಇಲ್ಲಿ ನೀವು ಲೋನ್ ಮರುಪಾವತಿ ಮಾಡುವುದಕ್ಕೆ ಇರುವ ಸಮಯ 5 ವರ್ಷಗಳು.

ಸ್ಟೇಟ್ ಬ್ಯಾಂಕ್‌ನಲ್ಲಿ 2 ವರ್ಷಕ್ಕೆ 5 ಲಕ್ಷ ಡೆಪಾಸಿಟ್ ಇಟ್ರೆ ಬಡ್ಡಿ ಎಷ್ಟು ಸಿಗುತ್ತೆ ಗೊತ್ತಾ? ಇಲ್ಲಿದೆ ಲೆಕ್ಕಾಚಾರ

ಈ ಅವಧಿಯಲ್ಲಿ ಲೋನ್ ಮೊತ್ತವನ್ನು ಪಾವತಿ ಮಾಡುವ ವೇಳೆಗೆ ₹2,89,365 ರೂಪಾಯಿಗಳನ್ನು ನೀವು ಬಡ್ಡಿ ಮೊತ್ತವಾಗಿ ಬ್ಯಾಂಕ್ ಗೆ ಕಟ್ಟಬೇಕಾಗುತ್ತದೆ. ಕಾರ್ ಖರೀದಿಗೆ ಎಷ್ಟು ಖರ್ಚಾಗುತ್ತೋ, ಅದಕ್ಕಿಂತ ಜಾಸ್ತಿ ಲೋನ್ ಕಟ್ಟಬೇಕು.

12 ಲಕ್ಷದ ಕಾರ್ ಗೆ ₹14,89,365 ರೂಪಾಯಿ ಕಟ್ಟುತ್ತೀರಿ. ಕಾರ್ ಖರೀದಿ ಮಾಡಬೇಕು ಎನ್ನುವ ಮನಸ್ಸಿದ್ದರೆ ಈ ರೀತಿಯಾಗಿ ಲೋನ್ ಪಾವತಿ (Loan Re Payment) ಮಾಡಿ, ಖರೀದಿ ಮಾಡಲೇಬೇಕಾಗುತ್ತದೆ.

How much EMI for a 12 lakh car loan in State Bank Of India

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories