Business News

ವ್ಯಕ್ತಿ ಮೃತಪಟ್ಟ ನಂತರ ಆತನ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಏನು ಮಾಡಬೇಕು ಗೊತ್ತಾ?

ಯಾವುದೇ ವ್ಯಕ್ತಿಯ ಬಳಿ ಆಧಾರ್ ಕಾರ್ಡ್ (Aadhaar Card) ಇರುವುದು ಬಹಳ ಮುಖ್ಯ. ಇದು ನಮ್ಮೆಲ್ಲರ ಬಳಿ ಇರಲೇಬೇಕಾದ ಪ್ರಮುಖವಾದ ಗುರುತಿನ ಚೀಟಿ ಆಗಿದೆ. ಸರ್ಕಾರದ ಸೌಲಭ್ಯಗಳು, ಬ್ಯಾಂಕ್ ಕೆಲಸ (Banking), ಒಂದು ಉದ್ಯೋಗಕ್ಕೆ ಅಪ್ಲೈ ಮಾಡಲು, ಹೀಗೆ ಎಲ್ಲದಕ್ಕೂ ಕೂಡ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ವೋಟರ್ ಐಡಿ, ಪಾಸ್ ಪೋರ್ಟ್ ಇದೆಲ್ಲವೂ ಪ್ರಮುಖವಾಗಿ ಬೇಕಾಗುತ್ತದೆ. ಎಲ್ಲರೂ ಈ ದಾಖಲೆಗಳನ್ನು ಹುಷಾರಾಗಿ ಇಟ್ಟುಕೊಂಡಿರುತ್ತಾರೆ.

ನಾವು ಸರ್ಕಾರಕ್ಕೆ ಸಂಬಂಧಿಸಿದ ಕೆಲಸಕ್ಕೆ ಮಾತ್ರವಲ್ಲ, ಸ್ಟಾಕ್ ಮಾರ್ಕೆಟ್ ಗಳಲ್ಲಿ ಹೂಡಿಕೆ ಮಾಡಲು, ಮ್ಯೂಚುವಲ್ ಫಂಡ್ ಗಳಲ್ಲಿ (Mutual Fund) ಹೂಡಿಕೆ ಮಾಡಲು, ಇನ್ಕಮ್ ಟ್ಯಾಕ್ಸ್ ಕಟ್ಟಲು ಇದೆಲ್ಲದಕ್ಕೂ ಕೂಡ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಇದೆಲ್ಲವೂ ಬೇಕೇ ಬೇಕು.

Do you know what to do with Aadhaar card and pan card after a person dies

ಬ್ಯಾಂಕ್ ಎಟಿಎಂಗೆ ಜಾಗ ಕೊಟ್ಟು ಪ್ರತಿ ತಿಂಗಳಿಗೆ ₹60 ಸಾವಿರ ಆದಾಯ ಬರುವ ಹಾಗೆ ಮಾಡ್ಕೊಳ್ಳಿ!

ಈ ಎಲ್ಲಾ ದಾಖಲೆಗಳು ಇರುವ ವ್ಯಕ್ತಿ ದಿಢೀರ್ ಎಂದು ಮರಣ ಹೊಂದಿದರೆ, ಆಗ ಏನು ಮಾಡಬೇಕು? ಇಂದು ಈ ವಿಚಾರದ ಬಗ್ಗೆ ತಿಳಿದುಕೊಳ್ಳೋಣ.

Pan Card: ಒಬ್ಬ ವ್ಯಕ್ತಿ ಹಣಕಾಸಿಗೆ ಸಂಬಂಧಪಟ್ಟ ಯಾವುದೇ ಕೆಲಸ ಮಾಡಲು ಪ್ಯಾನ್ ಕಾರ್ಡ್ ಬೇಕೇ ಬೇಕು. ಆದಾಯ ತೆರಿಗೆ ಇಲಾಖೆಯಿಂದ ಒಬ್ಬ ವ್ಯಕ್ತಿಗೆ ಕೊಡುವ 10 ಆಲ್ಫ ನ್ಯೂಮೆರಿಕ್ ನಂಬರ್ ಇದಾಗಿದೆ.

ಟ್ಯಾಕ್ಸ್ ಪಾವತಿ, ಬ್ಯಾಂಕ್ ವಹಿವಾಟು (Bank Transaction) ಇದೆಲ್ಲದಕ್ಕೂ ಬೇಕಿರುವ ಪ್ಯಾನ್ ಕಾರ್ಡ್ ಅನ್ನು ಆದಾಯ ತೆರಿಗೆ ಇಲಾಖೆಯಿಂದ ಪಡೆಯುತ್ತೇವೆ. ಒಂದು ವೇಳೆ ಪ್ಯಾನ್ ಕಾರ್ಡ್ ಹೊಂದಿರುವ ವ್ಯಕ್ತಿ ಮೃತರಾದರೆ, ಆ ಪ್ಯಾನ್ ಕಾರ್ಡ್ ಅನ್ನು ಬೇರೆಯವರು ದುರುಪಯೋಗ ಪಡಿಸಿಕೊಳ್ಳಬಹುದು.

ಹಾಗಾಗಿ ಆದಾಯ ತೆರಿಗೆ ಇಲಾಖೆಗೆ ಅವರ ಪ್ಯಾನ್ ಕಾರ್ಡ್ ಅನ್ನು ಹಿಂದಿರುಗಿಸಿ, ಆತನ ಮರಣದ ವಿಚಾರವನ್ನು ತಿಳಿಸಬೇಕು. ಬಳಿಕ ಪ್ಯಾನ್ ಕಾರ್ಡ್ ಅನ್ನು ಡೀಆಕ್ಟಿವೇಟ್ ಮಾಡಿಸಬೇಕು.

ಕೆನರಾ ಬ್ಯಾಂಕ್ ನಲ್ಲಿ 3 ವರ್ಷಗಳ ಫಿಕ್ಸೆಡ್ ಹಣಕ್ಕೆ ಬಡ್ಡಿ ಎಷ್ಟು ಸಿಗುತ್ತೆ? 1 ಲಕ್ಷಕ್ಕೆ ಸಿಗುವ ಬಡ್ಡಿ ಲೆಕ್ಕಾಚಾರ

Pan Cardಆಧಾರ್ ಕಾರ್ಡ್: ಭಾರತ ದೇಶದ ನಾಗರೀಕರಿಗೆ UIDAI ಕೊಡುವ ಗುರುತಿನ ಚೀಟಿ ಇದೆ. ಇದು ಅವಿಭಾಜ್ಯ ದಾಖಲೆ ಎಂದರೆ ತಪ್ಪಲ್ಲ. ಸರ್ಕಾರದ ಸೌಲಭ್ಯಗಳು, ಹಣಕಾಸಿನ ವಹಿವಾಟು ಎಲ್ಲದಕ್ಕೂ ಬೇಕಿರುವ ಆಧಾರ್ ಕಾರ್ಡ್ ಅನ್ನು ನಾವು ಎಲ್ಲಾ ಕೆಲಸಕ್ಕೂ ಬಳಕೆ ಮಾಡುತ್ತೇವೆ..

ಒಬ್ಬ ವ್ಯಕ್ತಿ ಮರಣ ಹೊಂದಿದರೆ, ಇನ್ನೊಬ್ಬರು ಅವರ ಆಧಾರ್ ಕಾರ್ಡ್ ಬಳಸಿ ತಮಗೆ ಬೇಕಾದ್ದನ್ನು ಮಾಡಿಕೊಳ್ಳಬಹುದು. ಹಾಗಾಗಿ ವ್ಯಕ್ತಿಯ ಮರಣದ ನಂತರ, ಆಧಾರ್ ಕಾರ್ಡ್ ಅನ್ನು ಲಾಕ್ ಮಾಡಿಸುವುದು ಉತ್ತಮ.

ಕೆನರಾ ಬ್ಯಾಂಕ್‌ನಲ್ಲಿ 25 ಲಕ್ಷ ಹೋಮ್ ಲೋನ್ ತಗೊಂಡ್ರೆ ಎಷ್ಟು EMI ಕಟ್ಟಬೇಕಾಗುತ್ತೆ? ಇಲ್ಲಿದೆ ಡೀಟೇಲ್ಸ್

ವೋಟರ್ ಐಡಿ: ದೇಶದಲ್ಲಿ ಚುನಾವಣೆ ನಡೆದಾಗ ವೋಟ್ ಮಾಡುವುದಕ್ಕೆ ವೋಟರ್ ಐಡಿ ಬೇಕೇ ಬೇಕು. ವೋಟರ್ ಐಡಿ ಇಲ್ಲದೇ ಯಾರು ಕೂಡ ಮತ ಚಲಾಯಿಸಲು ಆಗುವುದಿಲ್ಲ. ಹಾಗಾಗಿ ಇದು ಪ್ರಮುಖವಾದ ದಾಖಲೆ ಆಗಿದ್ದು, ಒಬ್ಬ ವ್ಯಕ್ತಿ ಮರಣ ಹೊಂದಿದರೆ, ಫಾರ್ಮ್ 7 ಅನ್ನು ಭರ್ತಿ ಮಾಡಿ, ಅವರ ವೋಟರ್ ಐಡಿಯನ್ನು ಕ್ಯಾನ್ಸಲ್ ಮಾಡಿಸಿಬಿಡಿ. ಇಲ್ಲದಿದ್ದರೆ ಮತ್ತೊಬ್ಬರು ಅದರ ದುರುಪಯೋಗ ಪಡಿಸಿಕೊಳ್ಳಬಹುದು.

Do you know what to do with Aadhaar card and pan card after a person dies

Our Whatsapp Channel is Live Now 👇

Whatsapp Channel

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories