ಬ್ಯಾಂಕ್ ಎಟಿಎಂಗೆ ಜಾಗ ಕೊಟ್ಟು ಪ್ರತಿ ತಿಂಗಳಿಗೆ ₹60 ಸಾವಿರ ಆದಾಯ ಬರುವ ಹಾಗೆ ಮಾಡ್ಕೊಳ್ಳಿ!
ATM Franchise : ನಾವೆಲ್ಲರೂ ಹಣಕಾಸಿನ ವಹಿವಾಟುಗಳಿಗೆ ಬ್ಯಾಂಕ್ ಗಳ (Banks) ಮೊರೆ ಹೋಗುತ್ತೇವೆ. ಹೆಚ್ಚಿನ ಜನರು ಯುಪಿಐ ಬಳಕೆ ಮಾಡುವುದು ಕಾಮನ್, ಈಗ ಸಣ್ಣ ಪೇಮೆಂಟ್ ಇಂದ ದೊಡ್ಡ ಪೇಮೆಂಟ್ ವರೆಗು ಬಹಳಷ್ಟು ಜನ ಯುಪಿಐ ಅಥವಾ ಆನ್ಲೈನ್ ಟ್ರಾನ್ಸಕ್ಷನ್ ಬಳಕೆ ಮಾಡುತ್ತಾರೆ. ಇದು ದಿನನಿತ್ಯ ನಡೆಯುತ್ತಿದೆ.
ಆದರೆ ಇಂದಿಗೂ ಕೂಡ ಹಲವು ಜನರು ಕ್ಯಾಶ್ ಬೇಕು ಎಂದರೆ ಎಟಿಎಂ ಮೊರೆ ಹೋಗಲೇಬೇಕು. ಎಲ್ಲಾ ಬ್ಯಾಂಕ್ ಗಳು ಕೂಡ ಎಟಿಎಂ ಕಾರ್ಡ್ ಹೊಂದಿದೆ.
ಹೌದು, ಪ್ರಸ್ತುತ ಎಲ್ಲಾ ಬ್ಯಾಂಕ್ ಗಳು ಕೂಡ ತಮ್ಮ ಎಟಿಎಂ ಸೇವೆಗಳನ್ನು ಹೆಚ್ಚಿನ ಜನರಿಗೆ ಒದಗಿಸುವ ಸಲುವಾಗಿ ತಮ್ಮ ಬ್ಯಾಂಕ್ ನ ಎಟಿಎಂ ಮಷಿನ್ ಗಳನ್ನು ಸ್ಥಾಪಿಸುವ ನಿರ್ಧಾರ ಕೈಗೊಂಡಿದೆ.
ಕೆನರಾ ಬ್ಯಾಂಕ್ ನಲ್ಲಿ 3 ವರ್ಷಗಳ ಫಿಕ್ಸೆಡ್ ಹಣಕ್ಕೆ ಬಡ್ಡಿ ಎಷ್ಟು ಸಿಗುತ್ತೆ? 1 ಲಕ್ಷಕ್ಕೆ ಸಿಗುವ ಬಡ್ಡಿ ಲೆಕ್ಕಾಚಾರ
ಒಂದು ವೇಳೆ ನೀವು ಹೊಸ ಬ್ಯುಸಿನೆಸ್ ಶುರು ಮಾಡಬೇಕು ಎಂದುಕೊಂಡಿದ್ದರೆ, ಬ್ಯಾಂಕ್ ಇಂದ ATM ಫ್ರಾಂಚೈಸಿ ಪಡೆಯುವುದು ಉತ್ತಮವಾದ ಆಯ್ಕೆ, ಇದರಿಂದ ನೀವು ತಿಂಗಳಿಗೆ ₹60 ಸಾವಿರ ರೂಪಾಯಿ ಹಣ ಗಳಿಕೆ ಮಾಡಬಹುದು. ಈ ಬ್ಯುಸಿನೆಸ್ ಶುರು (Own Business) ಮಾಡುವುದು ಹೇಗೆ ಎಂದು ಪೂರ್ತಿಯಾಗಿ ತಿಳಿಯೋಣ..
ದೇಶದಲ್ಲಿ 50 ಸಾವಿರ ಎಟಿಎಂ ಸ್ಥಾಪನೆ:
ಹೆಚ್ಚಿನ ಜನರಿಗೆ ATM ಕಾರ್ಡ್ ಸೌಲಭ್ಯ ಸಿಗಬೇಕು, ಅವಶ್ಯಕತೆ ಇದ್ದಾಗ ಕ್ಯಾಶ್ ಪಡೆಯುವುದಕ್ಕೆ ಸುಲಭ ಆಗಬೇಕು ಎನ್ನುವ ಕಾರಣಕ್ಕೆ 50 ಸಾವಿರ ಎಟಿಎಂ ಕಾರ್ಡ್ ಸ್ಥಾಪನೆ ಮಾಡಬೇಕು ಎಂದು ನಿರ್ಧರಿಸಲಾಗಿದೆ.
ಇನ್ನು ಒಂದೂವರೆ ವರ್ಷಗಳಲ್ಲಿ 10 ಸಾವಿರ ಎಟಿಎಂ ಸ್ಥಾಪನೆ ಮಾಡಬೇಕು ಎಂದು ನಿರ್ಧಾರ ಮಾಡಲಾಗಿದೆ. ಈ ಬಗ್ಗೆ ಎಲ್ಲಾ ಬ್ಯಾಂಕ್ ಗಳು ಕೂಡ ಹೊಸ ಹೆಜ್ಜೆ ತೆಗೆದುಕೊಂಡಿದೆ..
ತಪ್ಪಾಗಿ ಬೇರೆಯವರ ಬ್ಯಾಂಕ್ ಅಕೌಂಟ್ ಗೆ ಹಣ ವರ್ಗಾವಣೆ ಆಗೋಯ್ತಾ? ಈ ರೀತಿ ಮಾಡಿ ಸಾಕು
ನಿಗದಿ ಆಗಿರುವ ಮೊತ್ತ ಎಷ್ಟು?
ಎಲ್ಲಾ ಬ್ಯಾಂಕ್ ಗಳು ಸೇರಿ 10 ಸಾವಿರ ಎಟಿಎಂ ಮಷಿನ್ ಗಳ ಸ್ಥಾಪನೆಗೆ ಈಗ ನಿರ್ಧಾರ ಕೈಗೊಳ್ಳಲಾಗಿದೆ. ಒಟ್ಟು 50 ಸಾವಿರ ಎಟಿಎಂ ಮಷಿನ್ ಗಳನ್ನು ಸ್ಥಾಪಿಸಲು 2000 ಕೋಟಿ ರೂಪಾಯಿ ಖರ್ಚಾಗುತ್ತದೆ ಎಂದು ಮಾಹಿತಿ ಸಿಕ್ಕಿದೆ. ಈಗಾಗಲೇ ಹಳ್ಳಿಗಳಲ್ಲಿ ಎಟಿಎಂ ಸ್ಥಾಪನೆಗೆ 51% ವೈಟ್ ಲೇಬಲ್ ಹಾಕಲಾಗಿದೆ ಎಂದು ಸಧ್ಯಕ್ಕೆ ಮಾಹಿತಿ ಸಿಕ್ಕಿದೆ.
ಕೆನರಾ ಬ್ಯಾಂಕ್‌ನಲ್ಲಿ 25 ಲಕ್ಷ ಹೋಮ್ ಲೋನ್ ತಗೊಂಡ್ರೆ ಎಷ್ಟು EMI ಕಟ್ಟಬೇಕಾಗುತ್ತೆ? ಇಲ್ಲಿದೆ ಡೀಟೇಲ್ಸ್
ನೀವು ATM ಶುರು ಮಾಡಿ:
ಬ್ಯಾಂಕ್ ಗಳು ಈಗ ಹೊಸದಾಗಿ ATM ಸ್ಥಾಪಿಸಲು ಜಾಗಗಳನ್ನು ಹುಡುಕುತ್ತಿದೆ, ಅಕಸ್ಮಾತ್ ನಿಮ್ಮ ಬಳಿ ಒಳ್ಳೆಯ ಸ್ಥಳದಲ್ಲಿ ಜಾಗ ಇದ್ದರೆ, ಬ್ಯಾಂಕ್ ಗೆ ಆ ಜಾಗವನ್ನು ATM ಸ್ಥಾಪಿಸಲು ನೀಡಬಹುದು. ಇದಕ್ಕಾಗಿ ಬಾಡಿಗೆ ಪಡೆಯಬಹುದು. ATM ಫ್ರಾಂಚೈಸಿ ಶುರು ಮಾಡುವ ಮೂಲಕ ತಿಂಗಳಿಗೆ ₹60 ಸಾವಿರ ವರೆಗು ಆದಾಯ ಗಳಿಸಬಹುದು. ಇದು ಒಂದು ಉತ್ತಮವಾದ ಆದಾಯ (Income) ಗಳಿಸುವ ಮಾರ್ಗ ಆಗಿದೆ.
Give space to a bank ATM and earn 60,000 per month
Our Whatsapp Channel is Live Now 👇