ಉಚಿತ ಮನೆ ಯೋಜನೆ, ಪ್ರತಿಯೊಬ್ಬರಿಗೂ ಸ್ವಂತ ಸೂರು! ಸರ್ಕಾರದಿಂದ ಸಿಗಲಿದೆ 5 ಲಕ್ಷ ರೂಪಾಯಿ

ಸ್ವಂತ ಮನೆ ಮಾಡಿಕೊಳ್ಳಲು 5 ಲಕ್ಷದವರೆಗೂ ಸಹಾಯ ನೀಡಲಿದೆ, ಇದರಲ್ಲಿ 2 ಲಕ್ಷ ಸಬ್ಸಿಡಿ ಆಗಿದ್ದು, 3 ಲಕ್ಷವನ್ನು ಸರ್ಕಾರ ಭರಿಸಲಿದೆ.

Bengaluru, Karnataka, India
Edited By: Satish Raj Goravigere

ಒಬ್ಬ ಮನುಷ್ಯನಿಗೆ ಬದುಕುವುದಕ್ಕೆ ಆಹಾರ ಎಷ್ಟು ಮುಖ್ಯವೋ, ಅದೇ ರೀತಿ ಪ್ರತಿ ದಿನ ನೆಮ್ಮದಿಯಾಗಿ ಹೋಗಿ ನಿದ್ದೆ ಮಾಡುವುದಕ್ಕೆ ಒಂದು ಮನೆ ಇರಬೇಕು. ಆದರೆ ಹಲವು ಜನರಿಗೆ ಸ್ವಂತ ಮನೆ (Own House) ಮಾಡಿಕೊಳ್ಳಬೇಕು ಎಂದು ಕನಸು ಇದ್ದರು ಕೂಡ, ಮನೆ ಮಾಡಿಕೊಳ್ಳುವಷ್ಟು ಆರ್ಥಿಕವಾಗಿ ಸದೃಢತೆ ಇರುವುದಿಲ್ಲ.

ಅಂಥವರಿಗಾಗಿ ಸರ್ಕಾರ ಈಗ ಹೊಸದೊಂದು ಯೋಜನೆಯನ್ನು ಜಾರಿಗೆ ತಂದಿದ್ದು, ಇದರ ಮೂಲಕ ಸ್ವಂತ ಮನೆ ಮಾಡಿಕೊಳ್ಳಲು 5 ಲಕ್ಷದವರೆಗೂ ಸಹಾಯ ನೀಡಲಿದೆ, ಇದರಲ್ಲಿ 2 ಲಕ್ಷ ಸಬ್ಸಿಡಿ ಆಗಿದ್ದು, 3 ಲಕ್ಷವನ್ನು ಸರ್ಕಾರ ಭರಿಸಲಿದೆ. ಹಾಗಿದ್ದಲ್ಲಿ ಈ ಯೋಜನೆಯ ಬಗ್ಗೆ ಪೂರ್ತಿಯಾಗಿ ತಿಳಿದುಕೊಳ್ಳೋಣ..

5 lakh rupees will be given by the government for the free housing scheme

ರೇಷನ್ ಕಾರ್ಡ್‌ನಲ್ಲಿ ಮಕ್ಕಳ ಹೆಸರನ್ನು ಸೇರಿಸಿಕೊಳ್ಳಿ! ಸುಲಭ ವಿಧಾನಕ್ಕೆ ಡೈರೆಕ್ಟ್ ಲಿಂಕ್ ಇಲ್ಲಿದೆ

ಗ್ರೀನ್ ಸಿಗ್ನಲ್ ಕೊಟ್ಟ ಸಿಎಂ ಸಿದ್ದರಾಮಯ್ಯ!

ಸಿಎಂ ಸಿದ್ದರಾಮಯ್ಯ ಅವರು ನಮ್ಮ ರಾಜ್ಯದಲ್ಲಿ ಕಷ್ಟದಲ್ಲಿರುವ 1.29 ಲಕ್ಷ ಜನರಿಗೆ ಸ್ವಂತ ಮನೆ ಮಾಡಿಕೊಳ್ಳುವುದಕ್ಕೆ ಸಮ್ಮತಿ ಸೂಚಿಸಿದ್ದಾರೆ. ಪ್ರಸ್ತುತ 1.29 ಲಕ್ಷ ಮನೆ ನಿರ್ಮಿಸುವುದಕ್ಕೆ ಎಷ್ಟು ಖರ್ಚಾಗಬಹುದು ಎನ್ನುವ ಚರ್ಚೆ ನಡೆಯುತ್ತಿದೆ.

ವಿವಿಧ ಹಂತಗಳಲ್ಲಿ ಈ ಯೋಜನೆಯ ಸೌಲಭ್ಯವನ್ನು ಜನರಿಗೆ ಹೇಗೆ ತಲುಪಿಸುವುದು, ಮುಂದಿನ ವರ್ಷ ಈ ಯೋಜನೆಗಾಗಿ ಎಷ್ಟು ಹಣ ಬಿಡುಗಡೆ ಮಾಡಬೇಕಾಗುತ್ತದೆ, ಇದೆಲ್ಲದರ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ.

ಸರ್ವರಿಗೂ ಸೂರು ಯೋಜನೆ:

ಜನರು ಸ್ವಂತ ಮನೆ ಮಾಡಿಕೊಳ್ಳಲು ಸಹಾಯ ಮಾಡಬೇಕು ಎಂದುಕೊಂಡಿರುವ ಸರ್ಕಾರದ ಈ ಯೋಜನೆಯ ಹೆಸರು ಸರ್ವರಿಗೂ ಸೂರು ಯೋಜನೆ. ಈ ಒಂದು ಯೋಜನೆಯ ಅಡಿಯಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಮತ್ತು ರಾಜೀವ್ ಗಾಂಧಿ ವಸತಿ ನಿಗಮ ಇವುಗಳಿಗೆ ಸೇರಿರುವ ಬಡ ಕುಟುಂಬದ 1,29,457 ಲಕ್ಷ ಜನರು ಈ ಯೋಜನೆಯ ಸೌಲಭ್ಯ ಪಡೆಯಲಿ, ಇವರುಗಳು ಸ್ವಂತ ಸೂರು ಹೊಂದಲಿ ಎಂದು ಸರ್ಕಾರ ಪ್ರಯತ್ನ ಪಡುತ್ತಿದೆ.

ಎಕರೆಗಟ್ಟಲೆ ಆಸ್ತಿ, ಕೃಷಿ ಜಮೀನು ಇದ್ದವರಿಗೆ ಬಂತು ಹೊಸ ರೂಲ್ಸ್! ಎಲ್ಲಾ ರೈತರಿಗೆ ಬಿಗ್ ಅಪ್ಡೇಟ್

Housing Schemeಜನರು 1 ಲಕ್ಷ ಕಟ್ಟಿದರೆ ಸಾಕು:

ಸರ್ವರಿಗೂ ಸೂರು ಯೋಜನೆಯ ಅಡಿಯಲ್ಲಿ ಜನರಿಗೆ ಸ್ವಂತ ಮನೆ ಮಾಡಿಕೊಳ್ಳಲು ಸರ್ಕಾರದಿಂದ ಸಹಾಯ ಸಿಗುತ್ತಿದೆ. ಈ ಯೋಜನೆಯ ಅನುಸಾರ ಸ್ವಂತ ಮನೆ ನಿರ್ಮಾಣ ಮಾಡಲು 7.5 ಲಕ್ಷ ಖರ್ಚಾಗುತ್ತದೆ, ಇದರಲ್ಲಿ ಕೇಂದ್ರ ಸರ್ಕಾರದಿಂದ 1.5 ಲಕ್ಷ ಸಬ್ಸಿಡಿ, ರಾಜ್ಯ ಸರ್ಕಾರದಿಂದ 2 ಲಕ್ಷ ಸಬ್ಸಿಡಿ ಕೊಡಲಾಗುತ್ತಿತ್ತು, ಬಾಕಿ ಮೊತ್ತವನ್ನು ಯೋಜನೆಯ ಸೌಲಭ್ಯ ಪಡೆಯುತ್ತಿರುವ ವ್ಯಕ್ತಿ ಭರಿಸಬೇಕಿತ್ತು.

ಆದರೆ ಈಗ ಸರ್ಕಾರವು ನಿಯಮ ಬದಲಾವಣೆ ಮಾಡಿದೆ. ಜನರು 1 ಲಕ್ಷ ರೂಪಾಯಿಗಳನ್ನು ಪಾವತಿ ಮಾಡಿದರೆ ಸಾಕು, ಇನ್ನುಳಿದ ಮೊತ್ತವನ್ನು ಸರ್ಕಾರವೇ ಭರಿಸಲಿದೆ..

ಈ 12 ಜಿಲ್ಲೆಗಳಲ್ಲಿ ಇವತ್ತೇ ಬಿಡುಗಡೆ ಆಗಲಿದೆ ಗೃಹಲಕ್ಷ್ಮಿ ಯೋಜನೆ ಹಣ! ಮಹಿಳೆಯರಿಗೆ ಗುಡ್ ನ್ಯೂಸ್

ಒಟ್ಟು 3 ಲಕ್ಷವನ್ನು ರಾಜ್ಯ ಸರ್ಕಾರವೇ ಭರಿಸುತ್ತದೆ. ಈ ಮೂಲಕ ಸರ್ಕಾರದ ಕಡೆಯಿಂದ 5 ಲಕ್ಷ ರೂಪಾಯಿಗಳು ಸಬ್ಸಿಡಿ ರೂಪದಲ್ಲಿ ಸಿಗುತ್ತದೆ. ಒಂದು ವೇಳೆ ನಿಮಗೆ ಸ್ವಂತ ಮನೆ ಮಾಡಿಕೊಳ್ಳಬೇಕು ಎನ್ನುವ ಆಸೆ ಇದ್ದು, ಆರ್ಥಿಕವಾಗಿ ನೀವು ಸಬಲರಾಗಿಲ್ಲ ಎಂದರೆ, ಸರ್ಕಾರವೇ ಅದಕ್ಕೆ ಸಹಾಯ ಮಾಡಲಿದೆ.

ಹಾಗಾಗಿ ಯಾವುದೇ ಯೋಚನೆ ಮಾಡದೇ, ಈ ಒಂದು ಯೋಜನೆಯಲ್ಲಿ ಮನೆ ನಿರ್ಮಿಸುವುದಕ್ಕೆ ಅರ್ಜಿ ಸಲ್ಲಿಸಿ, ಸರ್ಕಾರದಿಂದ ಸಿಗುವ ಸೌಲಭ್ಯವನ್ನು ಪಡೆಯಿರಿ.

5 lakh rupees will be given by the government for the free housing scheme