ಗೃಹಲಕ್ಷ್ಮಿ ಹಣ ಪಡೆಯೋಕೆ ಇನ್ಮೇಲೆ ಈ 4 ರೂಲ್ಸ್ ಕಡ್ಡಾಯ! ಮಹಿಳೆಯರಿಗೆ ಸರ್ಕಾರದಿಂದ ಬಿಗ್ ಅಪ್ಡೇಟ್
ಈವರೆಗೂ 10 ಕಂತುಗಳ ಹಣ ಬಂದಿದ್ದರು, ಇನ್ನು ಕೂಡ ಕೆಲವು ಮಹಿಳೆಯರಿಗೆ ಹಣ ಬರುತ್ತಿಲ್ಲ.. ಅಂಥವರಿಗೆ ಈಗ 4 ಹೊಸ ರೂಲ್ಸ್ ಗಳನ್ನು ಜಾರಿಗೆ ತರಲಾಗಿದ್ದು, ಅವುಗಳನ್ನು ಪಾಲಿಸದೇ ಹೋದರೆ, ಹಣ ಬರುವುದಿಲ್ಲ
ರಾಜ್ಯ ಸರ್ಕಾರ ಮಹಿಳೆಯರಿಗೆ ಆರ್ಥಿಕವಾಗಿ ಸಹಾಯ ಮಾಡಲು ಜಾರಿಗೆ ತಂದಿರುವ ಯೋಜನೆ ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಆಗಿದೆ. ಈ ಒಂದು ಯೋಜನೆಯ ಅಡಿಯಲ್ಲಿ, ಮಹಿಳೆಯರಿಗೆ ಪ್ರತಿ ತಿಂಗಳು ₹2000 ರೂಪಾಯಿಯ ಹಣ ಸಿಗುತ್ತಿದೆ.
ಈವರೆಗೂ 10 ಕಂತುಗಳ ಹಣ ಬಂದಿದ್ದರು, ಇನ್ನು ಕೂಡ ಕೆಲವು ಮಹಿಳೆಯರಿಗೆ ಹಣ ಬರುತ್ತಿಲ್ಲ.. ಅಂಥವರಿಗೆ ಈಗ 4 ಹೊಸ ರೂಲ್ಸ್ ಗಳನ್ನು ಜಾರಿಗೆ ತರಲಾಗಿದ್ದು, ಅವುಗಳನ್ನು ಪಾಲಿಸದೇ ಹೋದರೆ, ಹಣ ಬರುವುದಿಲ್ಲ. ಆ ರೂಲ್ಸ್ ಗಳು ಯಾವುವು ಎಂದು ತಿಳಿಯೋಣ..
ರೇಷನ್ ಕಾರ್ಡ್ ಇರೋರಿಗೆ ಸಿಹಿ ಸುದ್ದಿ, ಸೆಪ್ಟೆಂಬರ್ 30ರ ತನಕ ಗಡುವು ವಿಸ್ತರಣೆ! ಬಂತು ಹೊಸ ಆದೇಶ
1. Kyc ಕಡ್ಡಾಯ: ಇದುವರೆಗೂ ಯಾರೆಲ್ಲಾ kyc ಮಾಡಿಸಿಲ್ಲವೋ ಅಂಥವರು ಈ ಕೂಡಲೇ kyc ಮಾಡಿಸಬೇಕು. ನಿಮಗೆ ಹತ್ತಿರ ಇರುವ ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಗಳಿಗೆ ಭೇಟಿ ನೀಡಿ, ನಿಮ್ಮ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಪ್ಯಾನ್ ಕಾರ್ಡ್ ಇದೆಲ್ಲವನ್ನು ತೆಗೆದುಕೊಂಡು ಹೋಗಿ kyc ಮಾಡಿಸಬಹುದು. ಹಣ ಬರುತ್ತಿದ್ದು, ಈಗಾಗಲೇ kyc ಮಾಡಿಸಿರುವವರು ಮತ್ತೆ ಮಾಡಿಸುವ ಅಗತ್ಯವಿಲ್ಲ ಎನ್ನುವುದು ನೆನಪಿನಲ್ಲಿ ಇರಲಿ..
2. NCPI Mapping ಕಡ್ಡಾಯ: ಒಂದು ವೇಳೆ ನೀವು ಆಧಾರ್ ಕಾರ್ಡ್ ಗೆ NCPI ಮ್ಯಾಪಿಂಗ್ ಮಾಡಿಸಿಲ್ಲ ಎಂದರೆ, ಈ ಕೂಡಲೇ ಮಾಡಿಸಿ. ಯಾವ ಮಹಿಳೆಯರಿಗೆ ಇನ್ನು ಕೂಡ ಒಂದೇ ಒಂದು ಕಂತಿನ ಹಣ ಕೂಡ ಬಂದಿಲ್ಲವೋ, ಅಂಥವರು ನಿರ್ಲಕ್ಷಿಸದೇ NCPI ಮ್ಯಾಪಿಂಗ್ ಮಾಡಿಸುವುದು ಉತ್ತಮ.
ಈ ಒಂದು ಕೆಲಸ ಆಗಿಲ್ಲ ಎಂದರೆ, ನಿಮ್ಮ ಬ್ಯಾಂಕ್ ಖಾತೆಗೆ (Bank Account) ಹಣ ಬರುವುದಿಲ್ಲ. ಹಾಗಾಗಿ NCPI ಮ್ಯಾಪಿಂಗ್ ಆಗಿದ್ಯಾ ಎಂದು ಚೆಕ್ ಮಾಡಿ, ಆಗಿಲ್ಲ ಎಂದರೆ ಈ ಕೂಡಲೇ ಮಾಡಿಸಿ.
3 ತಿಂಗಳಿನಿಂದ ಅನ್ನಭಾಗ್ಯ ಯೋಜನೆ ಹಣ ಬರದೇ ಇದ್ರೆ ಈ ಕೆಲಸ ಮಾಡಿ! ತಕ್ಷಣವೇ ಹಣ ಬರುತ್ತೆ
3. ಬ್ಯಾಂಕ್ ಅಕೌಂಟ್ ಚೆಕ್ ಮಾಡಿ: ಒಂದು ವೇಳೆ ನಿಮ್ಮ ಬ್ಯಾಂಕ್ ಅಕೌಂಟ್ ನಲ್ಲಿ ಏನಾದರೂ ಸಮಸ್ಯೆ ಆಗಿದ್ದು, ಆಕ್ಟಿವ್ ಆಗಿಲ್ಲ ಎಂದರೆ ಆಗಲು ಕೂಡ ನಿಮ್ಮ ಖಾತೆಗೆ ಹಣ ಬರುವುದಿಲ್ಲ.
ಅಂಥ ಸಮಯದಲ್ಲಿ ನೀವು ಬೇರೆ ಬ್ಯಾಂಕ್ ನಲ್ಲಿ ಅಥವಾ ಪೋಸ್ಟ್ ಆಫೀಸ್ ನಲ್ಲಿ ಹೊಸದಾಗಿ ಅಕೌಂಟ್ ಓಪನ್ ಮಾಡಿ, ಆ ಖಾತೆಯನ್ನು ಗೃಹಲಕ್ಷ್ಮಿ ಯೋಜನೆಗೆ ಲಿಂಕ್ ಮಾಡಬಹುದು. ಇದರಿಂದ ನಿಮ್ಮ ಹೊಸ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಬರುವುದಕ್ಕೆ ಶುರುವಾಗುತ್ತದೆ.
ಉಚಿತ ಮನೆ ಯೋಜನೆ, ಪ್ರತಿಯೊಬ್ಬರಿಗೂ ಸ್ವಂತ ಸೂರು! ಸರ್ಕಾರದಿಂದ ಸಿಗಲಿದೆ 5 ಲಕ್ಷ ರೂಪಾಯಿ
4. ಬ್ಯಾಂಕ್ ಅಕೌಂಟ್ ಸ್ಟೇಟಸ್ ಚೆಕ್ ಮಾಡಿ: ಹಲವು ಮಹಿಳೆಯರ ಬ್ಯಾಂಕ್ ಅಕೌಂಟ್ ಸ್ಟೇಟಸ್ ನಲ್ಲಿ ಸಮಸ್ಯೆ ಇದ್ದರೆ, ಅಂಥವರಿಗೂ ಕೂಡ ಗೃಹಲಕ್ಷ್ಮೀ ಯೋಜನೆಯ ಹಣ ಪ್ರತಿ ತಿಂಗಳು ಕ್ರೆಡಿಟ್ ಆಗುತ್ತಿಲ್ಲ.
ಹಾಗಾಗಿ ನೀವು ಒಂದು ಸಾರಿ ಬ್ಯಾಂಕ್ ಅಕೌಂಟ್ ಸ್ಟೇಟಸ್ ಸರಿ ಇದೆಯಾ ಎಂದು ಚೆಕ್ ಮಾಡಿಸಿಕೊಳ್ಳಬಹುದು. ಇದು ಸರಿ ಇದ್ದರೆ, ನಿಮಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ನಿಮ್ಮ ಅಕೌಂಟ್ ಗೆ ಹಣ ಕ್ರೆಡಿಟ್ (Money Credit) ಆಗುತ್ತದೆ.
These 4 rules are mandatory to get Gruha Lakshmi money