ಈ 10 ಜಿಲ್ಲೆಗಳಿಗೆ ಹೊಸ ಬಿಪಿಎಲ್ ರೇಷನ್ ಕಾರ್ಡ್ ವಿತರಣೆ! ಮೊದಲ ಹಂತದ ಹೊಸ ಪಟ್ಟಿ ಬಿಡುಗಡೆ
ಈ 10 ಜಿಲ್ಲೆಗಳಲ್ಲಿ ಮೊದಲ ಹಂತದಲ್ಲಿ ರೇಷನ್ ಕಾರ್ಡ್ ಪಡೆಯುವ ಸೌಲಭ್ಯ ಜನರಿಗೆ ಸಿಗಲಿದ್ದು, ಈ ಊರಿನ ಜನರು ಆದಷ್ಟು ಬೇಗ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಪಡೆದುಕೊಳ್ಳಬಹುದು.
ನಮ್ಮ ರಾಜ್ಯದಲ್ಲಿ ಈಗ ಬಿಪಿಎಲ್ ರೇಷನ್ ಕಾರ್ಡ್ ಗಳಿಗೆ (BPL Ration Card) ಎಲ್ಲಿಲ್ಲದ ಬೇಡಿಕೆ ಇದೆ ಎಂದರೆ ತಪ್ಪಲ್ಲ. ರಾಜ್ಯ ಸರ್ಕಾರದಿಂದ ಜಾರಿಗೆ ಬಂದಿರುವ ಗ್ಯಾರೆಂಟಿ ಯೋಜನೆಗಳ ಸೌಲಭ್ಯ ಪಡೆಯಲು, ಕೇಂದ್ರ ಸರ್ಕಾರದ ಇನ್ಯಾವುದೇ ಯೋಜನೆಗಳ ಫಲ ಪಡೆಯುವುದಕ್ಕೆ ಬಿಪಿಎಲ್ ರೇಷನ್ ಕಾರ್ಡ್ ಕಡ್ಡಾಯವಾಗಿ ಇರಲೇಬೇಕು.
ಇದು ಸರ್ಕಾರದ ನಿಯಮ ಆಗಿದೆ. ಆದರೆ ಹಲವಾರು ಜನರ ಬಳಿ ಸರ್ಕಾರದ ಸೌಲಭ್ಯ ಪಡೆಯಲು ಬಿಪಿಎಲ್ ರೇಷನ್ ಕಾರ್ಡ್ ಇಲ್ಲ. ಇತ್ತ ಸರ್ಕಾರ ಕೂಡ ಹೊಸ ಬಿಪಿಎಲ್ ಕಾರ್ಡ್ ವಿತರಣೆ ಮಾಡುತ್ತಿಲ್ಲ.
ಹೌದು, ಕಳೆದ ವರ್ಷ ಎಲೆಕ್ಷನ್ ನಡೆಯುವುದಕ್ಕಿಂತ ಮೊದಲೇ, ಒಂದೂವರೆ ವರ್ಷಗಳ ಹಿಂದೆಯೇ ಸುಮಾರು 3 ಲಕ್ಷ ಜನರು ಹೊಸದಾಗಿ ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಿದ್ದರು, ಆದರೆ ಮಧ್ಯದಲ್ಲೇ ಎಲೆಕ್ಷನ್ ಬಂದು ಚುನಾವಣೆ ನೀತಿ ಸಂಹಿತೆ ಜಾರಿಯಾದ ಕಾರಣ, ಹೊಸ ರೇಷನ್ ಕಾರ್ಡ್ ಅರ್ಜಿಗಳನ್ನು ಪರಿಶೀಲಿಸಿ, ಬಿಪಿಎಲ್ ರೇಷನ್ ಕಾರ್ಡ್ ಗಳನ್ನು (Ration Card) ಒದಗಿಸುವ ಕೆಲಸ ಕೂಡ ಅರ್ಧಕ್ಕೆ ನಿಂತಿತು. ಹೊಸ ಸರ್ಕಾರ ಜಾರಿಗೆ ಬಂದು, ಯೋಜನೆಗಳು ಮತ್ತು ಇನ್ನಿತರ ಕೆಲಸಗಳ ಬಗ್ಗೆ ಹೆಚ್ಚು ಗಮನ ಹರಿಸಲಾಯಿತು.
ರೇಷನ್ ಕಾರ್ಡ್ ಇರೋರಿಗೆ ಸಿಹಿ ಸುದ್ದಿ, ಸೆಪ್ಟೆಂಬರ್ 30ರ ತನಕ ಗಡುವು ವಿಸ್ತರಣೆ! ಬಂತು ಹೊಸ ಆದೇಶ
ಆಗೊಮ್ಮೆ ಈಗೊಮ್ಮೆ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳಲು ಸರ್ಕಾರದಿಂದ ಸಿಕ್ಕಿತಾದರು, ಅದು ಪೂರ್ತಿಯಾಗಿ ಸರಿ ಹೋಗಿಲ್ಲ. ಸರ್ವರ್ ಸಮಸ್ಯೆ ಅಥವಾ ಇನ್ನೇನೋ ಸಮಸ್ಯೆ ಎದುರಾಗಿ ಜನರು ತಮ್ಮ ರೇಶನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳುವುದಕ್ಕೆ ಸಾಧ್ಯವಾಗಿಲ್ಲ. ಹಾಗೆಯೇ ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಕೂಡ ಶುರುವಾಗಿಲ್ಲ. ಈ ಕಾರಣಕ್ಕೆ ಇದರಿಂದ ಜನರಿಗೂ ಗೊಂದಲ ಶುರುವಾಗಿತ್ತು, ಆದರೆ ಸರ್ಕಾರದಿಂದಲೇ ಈಗ ಜನರಿಗೆ ಗುಡ್ ನ್ಯೂಸ್ ಸಿಕ್ಕಿದೆ.
ಶೀಘ್ರದಲ್ಲೇ ರೇಷನ್ ಕಾರ್ಡ್ ಗಳ ಅರ್ಜಿ ಪರಿಶೀಲನೆ ನಡೆಯಲಿದ್ದು, ಮೊದಲ ಹಂತದಲ್ಲಿ ರಾಜ್ಯದ 10 ಜಿಲ್ಲೆಯ ಜನರಿಗೆ ಹೊಸ ರೇಶನ್ ಕಾರ್ಡ್ ಗಳ ವಿತರಣೆ ಆಗಲಿದೆ. ಈ ರೀತಿಯಾಗಿ ಬಿಪಿಎಲ್ ರೇಷನ್ ಕಾರ್ಡ್ ಸಿಕ್ಕರೆ, ಅದರಿಂದ ಜನರಿಗೂ ಕೂಡ ಹೆಚ್ಚಿನ ಪ್ರಯೋಜನ ಸಿಗಲಿದೆ. ಹಾಗಾಗಿ ಯಾವೆಲ್ಲಾ ಜಿಲ್ಲೆಗಳಲ್ಲಿ ಮೊದಲ ಹಂತದಲ್ಲಿ ರೇಷನ್ ಕಾರ್ಡ್ ವಿತರಣೆ ಆಗುತ್ತದೆ ಎಂದು ತಿಳಿಯೋಣ..
ಗೃಹಲಕ್ಷ್ಮಿ ಹಣ ಪಡೆಯೋಕೆ ಇನ್ಮೇಲೆ ಈ 4 ರೂಲ್ಸ್ ಕಡ್ಡಾಯ! ಮಹಿಳೆಯರಿಗೆ ಸರ್ಕಾರದಿಂದ ಬಿಗ್ ಅಪ್ಡೇಟ್
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ತುಮಕೂರು, ಚಿತ್ರದುರ್ಗ, ದಾವಣಗೆರೆ .. ಈ 10 ಜಿಲ್ಲೆಗಳಲ್ಲಿ ಮೊದಲ ಹಂತದಲ್ಲಿ ರೇಷನ್ ಕಾರ್ಡ್ ಪಡೆಯುವ ಸೌಲಭ್ಯ ಜನರಿಗೆ ಸಿಗಲಿದ್ದು, ಈ ಊರಿನ ಜನರು ಆದಷ್ಟು ಬೇಗ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಪಡೆದುಕೊಳ್ಳಬಹುದು. ಇದಕ್ಕಾಗಿ ಇನ್ನು ಜಾಸ್ತಿ ದಿನಗಳ ಕಾಲ ಕಾಯಬೇಕಾದ ಅವಶ್ಯಕತೆ ಇಲ್ಲ.
Distribution of new BPL ration card to these 10 districts