ಫ್ರೀ ಕರೆಂಟ್ ಇದ್ರೂ ಪ್ರತಿ ತಿಂಗಳು ವಿದ್ಯುತ್ ಬಿಲ್ ಕಟ್ಟುವವರಿಗೆ ಸರ್ಕಾರದಿಂದ ಬಂತು ಹೊಸ ರೂಲ್ಸ್!
ಇದೀಗ ವಿದ್ಯುತ್ ಬಿಲ್ ಗೆ ಸಂಬಂಧಿಸಿದ ಹಾಗೆ ಸರ್ಕಾರವು ಹೊಸದೊಂದು ನಿಯಮವನ್ನು ಜಾರಿಗೆ ತಂದದ್ದು, ಈ ನಿಯಮ ಸೆಕ್ಯೂರಿಟಿ ವಿದ್ಯುತ್ ಡೆಪಾಸಿಟ್ ಬಗ್ಗೆ ಆಗಿದೆ
ನಾವು ಪ್ರತಿದಿನ ಬಳಕೆ ಮಾಡುವ ಸೌಲಭ್ಯಗಳಲ್ಲಿ ವಿದ್ಯುತ್ ಕೂಡ ಒಂದು, ದಿನನಿತ್ಯದ ಬಳಕೆಗಳಿಗೆ ವಿದ್ಯುತ್ (Electricity) ಬೇಕೇ ಬೇಕು. ರಾಜ್ಯದಲ್ಲಿ ಹೊಸ ಸರ್ಕಾರ ಜಾರಿಗೆ ಬಂದ ನಂತರ ಗೃಹಜ್ಯೋತಿ ಯೋಜನೆ (Gruha Jyothi Scheme) ಬಂದಿದ್ದು, ಪ್ರತಿ ತಿಂಗಳು 200 ಯೂನಿಟ್ ವರೆಗು ಉಚಿತ ವಿದ್ಯುತ್ (Free Electricity) ಸಿಗುತ್ತಿದೆ.
ಆದರೆ ಇದೀಗ ವಿದ್ಯುತ್ ಬಿಲ್ ಗೆ (Electricity Bill) ಸಂಬಂಧಿಸಿದ ಹಾಗೆ ಸರ್ಕಾರವು ಹೊಸದೊಂದು ನಿಯಮವನ್ನು ಜಾರಿಗೆ ತಂದದ್ದು, ಈ ನಿಯಮ ಸೆಕ್ಯೂರಿಟಿ ವಿದ್ಯುತ್ ಡೆಪಾಸಿಟ್ ಬಗ್ಗೆ ಆಗಿದೆ.
ಹೌದು, ನಮಗೆಲ್ಲ ಗೊತ್ತಿರುವ ಹಾಗೆ ನಾವೆಲ್ಲರೂ ಕೂಡ ವರ್ಷಕ್ಕೆ ಒಂದು ಸಾರಿ ವಿದ್ಯುತ್ ಬಿಲ್ ಜೊತೆಗೆ ಸೆಕ್ಯೂರಿಟಿ ವಿದ್ಯುತ್ ಡೆಪಾಸಿಟ್ ಅನ್ನು ವಿದ್ಯುತ್ ಇಲಾಖೆಗೆ ಕಟ್ಟಬೇಕು, ಪ್ರತಿ ವರ್ಷ ಇದನ್ನು ಕಟ್ಟುವುದು ಸರ್ಕಾರದ ನಿಯಮ ಆಗಿದೆ.
12ನೇ ಕಂತಿನ ಗೃಹಲಕ್ಷ್ಮಿ ಯೋಜನೆ ಹಣ ಖಾತೆಗೆ ಜಮೆ! ಇನ್ಮುಂದೆ ಪ್ರತಿ ತಿಂಗಳು ಇದೇ ದಿನ ಹಣ ಬರುತ್ತೆ!
ಆದರೆ ಈ ನಿಯಮವನ್ನು ಸರ್ಕಾರ ಬದಲಾವಣೆ ಮಾಡಲಾಗಿದ್ದು, ಇನ್ನುಮುಂದೆ ಪ್ರತಿ ತಿಂಗಳು ಸ್ವಲ್ಪ ಸ್ವಲ್ಪ ಮೊತ್ತವನ್ನು ಕಂತಿನ ರೂಪದಲ್ಲಿ ಸರ್ಕಾರಕ್ಕೆ ಕಟ್ಟಿ ಕೊಡಬೇಕಾಗುತ್ತದೆ. ಇದು ಹೊಸ ನಿಯಮ ಆಗಿದೆ.
ಈ ರೀತಿಯ ಹೊಸ ನಿಯಮವನ್ನ ಜಾರಿಗೆ ತರುವುದಕ್ಕೆ ಒಂದು ಪ್ರಮುಖ ಕಾರಣ ಕೂಡ ಇದೆ. ವರ್ಷಕ್ಕೆ ಒಂದು ಸಾರಿ ಇಡೀ ಸೆಕ್ಯೂರಿಟಿ ಡೆಪಾಸಿಟ್ ಕಟ್ಟುವುದಕ್ಕೆ ಜನರಿಗೆ ಕಷ್ಟವಾಗುತ್ತಿದೆ, ವರ್ಷದ ಡೆಪಾಸಿಟ್ ಕಟ್ಟದೇ ಆ ಮೊತ್ತವನ್ನು ಹಾಗೆಯೇ ಬಾಕಿ ಉಳಿಸಿಕೊಂಡು ಬರುತ್ತಿದ್ದಾರೆ ಬಹಳಷ್ಟು ಜನರು. ಹಾಗಾಗಿ ಅಂಥವರಿಗೆ ಒತ್ತಡ ಆಗಬಾರದು ಎನ್ನುವ ಕಾರಣದಿಂದ ಸರ್ಕಾರ ಈ ಒಂದು ಹೊಸ ನಿಯಮವನ್ನು ಜಾರಿಗೆ ತಂದಿದ್ದು, ಜನರು ಇದನ್ನು ಪಾಲಿಸಬೇಕು.
ಹೌದು, ಸೆಕ್ಯೂರಿಟಿ ಹಣವನ್ನು ಇನ್ನು ಯಾರೆಲ್ಲಾ ಕಟ್ಟಿಲ್ಲವೋ, ಹಾಗೆಯೇ ಕರೆಂಟ್ ಬಿಲ್ ನಲ್ಲಿ ಯಾರೆಲ್ಲಾ ಹೆಚ್ಚು ಹಣವನ್ನು ಬಾಕಿ ಉಳಿಸಿಕೊಂಡಿದ್ದಾರೋ ಅಂಥವರಿಗೆ ಸರ್ಕಾರದ ಕಡೆಯಿಂದ ನೇರವಾಗಿ ನೋಟಿಸ್ ಕೂಡ ಕಳಿಸಲಾಗುತ್ತಿದೆ.
ಈಗಾಗಲೇ 2024-25ರ ಆರ್ಥಿಕ ವರ್ಷ ಶುರುವಾಗುತ್ತಿದ್ದ ಹಾಗೆ ಸರ್ಕಾರ ಈ ನಿಯಮವನ್ನು ಜಾರಿಗೆ ತಂದಿದೆ. ಜನರು ಕಟ್ಟುವ ಸೆಕ್ಯೂರಿಟಿ ಹಣ ಸರ್ಕಾರದ ಬಳಿ ಇರಲಿದ್ದು, ವರ್ಷವಿಡೀ ವಿದ್ಯುತ್ ಬಿಲ್ ಪಾವತಿ ಸರಿಯಾಗಿ ಮಾಡಿದರೆ, ಆಗ ಆ ಹಣಕ್ಕೆ ಬಡ್ಡಿ ಕೂಡ ಕೊಡಲಾಗುತ್ತದೆ.
3 ಲಕ್ಷ ಬಿಪಿಎಲ್ ಕಾರ್ಡ್ ಕ್ಯಾನ್ಸಲ್, ಯಾವುದೇ ಯೋಜನೆಯ ಸೌಲಭ್ಯ ಸಿಗೋಲ್ಲ! ಸರ್ಕಾರ ಧಿಡೀರ್ ನಿರ್ಧಾರ
ಆದರೆ ವಿದ್ಯುತ್ ಬಿಲ್ ಪಾವತಿ (Pay Electricity Bill) ಮಾಡದೇ ಇದ್ದಾಗ, ಇದೇ ಸೆಕ್ಯೂರಿಟಿ ಡೆಪಾಸಿಟ್ ಇಂದ ಬಿಲ್ ಮೊತ್ತವನ್ನು ಪಡೆದುಕೊಳ್ಳುತ್ತದೆ. ಕರೆಂಟ್ ಬಿಲ್ ತಯಾರಾಗಿ ಜನರನ್ನು ತಲುಪಲು 7 ದಿನಗಳ ಕಾಲ ತೆಗೆದುಕೊಳ್ಳುತ್ತದೆ, ಆ ಮೊತ್ತ ಪಾವತಿ ಮಾಡಲು ಜನರಿಗೆ 15 ದಿನ ಸಮಯ ಇರುತ್ತದೆ.
ಈ ಎಲ್ಲಾ ಪ್ರಕ್ರಿಯೆಗೆ ಒಟ್ಟು 45 ದಿನಗಳ ಸಮಯ ತೆಗೆದುಕೊಳ್ಳುತ್ತದೆ. ಒಂದು ವೇಳೆ ನೀವು ಅತಿಯಾಗಿ ವಿದ್ಯುತ್ ಬಳಕೆ ಮಾಡಿದ್ದರೆ, ಅದರ ಮೇಲೆ ಕೂಡ ಡೆಪಾಸಿಟ್ ಹಣವನ್ನು ಸರ್ಕಾರ ಚಾರ್ಜ್ ಮಾಡುತ್ತದೆ. ಈ ವಿಷಯ ನೆನಪಲ್ಲಿ ಇರಲಿ.
There are new rules from the government for those who pay the electricity bill every month