ರಾಜ್ಯ ಸರ್ಕಾರ ಮಹಿಳೆಯರ ಹಿತದೃಷ್ಟಿಯನ್ನು ನೆನಪಿನಲ್ಲಿ ಇಟ್ಟುಕೊಂಡು ಜಾರಿಗೆ ತಂದಿರುವ ಯೋಜನೆ ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಆಗಿದೆ. ಈ ಒಂದು ಯೋಜನೆಯ ಮೂಲಕ ರಾಜ್ಯ ಸರ್ಕಾರವು ಸಂಸಾರವನ್ನು ನಡೆಸಿಕೊಂಡು ಹೋಗುತ್ತಿರುವ ಮನೆಯ ಮುಖ್ಯಸ್ಥೆಯ ಬ್ಯಾಂಕ್ ಖಾತೆಗೆ (Bank Account) ಪ್ರತಿ ತಿಂಗಳು ₹2000 ರೂಪಾಯಿಗಳನ್ನು ಡಿಬಿಟಿ ವರ್ಗಾವಣೆ (Money Deposit) ಮಾಡುತ್ತಿದೆ.

ಆದರೆ ಇದೀಗ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಹೊಸ ಅಪ್ಡೇಟ್ ಸಿಕ್ಕಿದ್ದು, ಇಂಥ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯ ಹಣ ಸಿಗೋದಿಲ್ಲ ಎಂದು ಮಾಹಿತಿ ಸಿಕ್ಕಿದೆ.

The government will cancel the Gruha Lakshmi Yojana Money for tax paying women

ಅಂಗನವಾಡಿ ಟೀಚರ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಪಿಯುಸಿ ಪಾಸ್ ಆಗಿದ್ರೆ ಸಾಕು ಅಪ್ಲೈ ಮಾಡಿ!

ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತರಲಾಯಿತು. ಇವರೆಗೂ 11 ಕಂತುಗಳ ಹಣ ಮಹಿಳೆಯರನ್ನು ತಲುಪಿದೆ. ರಾಜ್ಯದಲ್ಲಿ 1.18 ಕೋಟಿಗಿಂತ ಹೆಚ್ಚು ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದರು, ಅವರಲ್ಲಿ ಎಲ್ಲರಿಗೂ ಗೃಹಲಕ್ಷ್ಮೀ ಯೋಜನೆಯ ಹಣ ತಲುಪಿಲ್ಲ.. ಯೋಜನೆಗೆ ಅರ್ಜಿ ಸಲ್ಲಿಸಿ, ಸರಿಯಾದ ದಾಖಲೆಗಳನ್ನು ನೀಡಿರುವ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತಲಿದೆ.

ಮಹಿಳೆಯರು ಈ ಹಣವನ್ನು ತಮ್ಮ ಸಂಸಾರ ನಡೆಸಿಕೊಂಡು ಹೋಗಲು ಅಥವಾ ಬೇಕಿರುವ ವಸ್ತುಗಳನ್ನು ಖರೀದಿ ಮಾಡಲು ಬಳಸುತ್ತಿದ್ದಾರೆ. ಆದರೆ ಲೋಕಸಭಾ ಎಲೆಕ್ಷನ್ ನಡೆದು, ಕಾಂಗ್ರೆಸ್ ಸರ್ಕಾರ ಉತ್ತಮ ವಿಜಯ ಸಾಧಿಸದೇ ಇದ್ದ ಕಾರಣ ರಾಜ್ಯದಲ್ಲಿ ಗೃಹಲಕ್ಷ್ಮೀ ಯೋಜನೆ ಸೇರಿದಂತೆ ಇನ್ನೆಲ್ಲಾ ಗ್ಯಾರೆಂಟಿ ಯೋಜನೆಗಳು ಕೂಡ ನಿಂತು ಹೋಗುತ್ತದೆ ಎನ್ನುವ ಮಾತು ಕೇಳಿಬಂದಿತ್ತು. ಆದರೆ ಖುದ್ದು ಸಿದ್ದರಾಮಯ್ಯ ಅವರೇ ಈ ಬಗ್ಗೆ ಕ್ಲಾರಿಟಿ ನೀಡಿದ್ದಾರೆ.

ಫ್ರೀ ಕರೆಂಟ್ ಇದ್ರೂ ಪ್ರತಿ ತಿಂಗಳು ವಿದ್ಯುತ್ ಬಿಲ್ ಕಟ್ಟುವವರಿಗೆ ಸರ್ಕಾರದಿಂದ ಬಂತು ಹೊಸ ರೂಲ್ಸ್!

Gruha Lakshmi Yojanaಸರ್ಕಾರ ಅಧಿಕಾರದಲ್ಲಿ ಇರುವಷ್ಟು ದಿವಸ ಕೂಡ ಯಾವುದೇ ಕಾರಣಕ್ಕೂ ಗೃಹಲಕ್ಷ್ಮೀ ಯೋಜನೆ ನಿಲ್ಲುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಹಾಗೆಯೇ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಕೂಡ ಇದೇ ಭರವಸೆ ನೀಡಿದ್ದಾರೆ. ಆದರೆ ಗೃಹಲಕ್ಷ್ಮೀ ಯೋಜನೆಯ ಬಗ್ಗೆ ಒಂದು ವಿಷಯವನ್ನು ಗಮನದಲ್ಲಿ ಇಡಬೇಕಿದ್ದು, ಯಾವೆಲ್ಲಾ ಮಹಿಳೆಯರು ಒಳ್ಳೆಯ ಕೆಲಸದಲ್ಲಿದ್ದು, ತೆರಿಗೆ ಪಾವತಿ ಮಾಡುತ್ತಿದ್ದಾರೋ ಅಂಥವರಿಗೆ ಗೃಹಲಕ್ಷ್ಮೀ ಯೋಜನೆಯ ಸೌಲಭ್ಯ ಸಿಗುವುದಿಲ್ಲ ಎಂದು ಸರ್ಕಾರ ತಿಳಿಸಿದೆ.

3 ಲಕ್ಷ ಬಿಪಿಎಲ್ ಕಾರ್ಡ್ ಕ್ಯಾನ್ಸಲ್, ಯಾವುದೇ ಯೋಜನೆಯ ಸೌಲಭ್ಯ ಸಿಗೋಲ್ಲ! ಸರ್ಕಾರ ಧಿಡೀರ್ ನಿರ್ಧಾರ

ಹೌದು, ಟ್ಯಾಕ್ಸ್ ಪಾವತಿ (Tax Pay) ಮಾಡುವ ಮಹಿಳೆಯರ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಸರ್ಕಾರ ಕ್ಯಾನ್ಸಲ್ ಮಾಡಲಿದೆ. ಈಗಾಗಲೇ 1.78 ಲಕ್ಷ ಟ್ಯಾಕ್ಸ್ ಪಾವತಿ ಮಾಡುವ ಮಹಿಳೆಯರನ್ನು ಸರ್ಕಾರ ಗುರುತಿಸಿ ಅವರಿಗೆ ಗೃಹಲಕ್ಷ್ಮೀ ಯೋಜನೆಯ ಹಣ ಬರುವುದನ್ನು ಕ್ಯಾನ್ಸಲ್ ಮಾಡಿದೆ.

ಇನ್ನುಳಿದ ಹಾಗೆ ಬಿಪಿಎಲ್ ಕಾರ್ಡ್ (BPL Ration Card), ಎಪಿಎಲ್ (APL Card) ಯಾವುದೇ ಇದ್ದರೂ ಗೃಹಲಕ್ಷ್ಮೀ ಹಣ ಸಿಗುತ್ತಿದೆ. ಆದರೆ ಟ್ಯಾಕ್ಸ್ ಪಾವತಿ ಮಾಡುವವರು ಮಾತ್ರ ಈ ಸೌಲಭ್ಯ ಪಡೆಯಲು ಅರ್ಹರಾಗಿರುವುದಿಲ್ಲ ಎಂದು ಸರ್ಕಾರದಿಂದ ತಿಳಿದುಬಂದಿದೆ.

The government will cancel the Gruha Lakshmi Yojana Money for tax paying women