ಬೋಗಸ್ ರೇಷನ್ ಕಾರ್ಡ್ ಪತ್ತೆ ಹಾಗೂ ಶೀಘ್ರದಲ್ಲೇ 1.73 ಲಕ್ಷ ಹೊಸ ಬಿಪಿಎಲ್ ಕಾರ್ಡ್ ವಿತರಣೆ!
ಪ್ರಸ್ತುತ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿರುವ 2.95 ಲಕ್ಷ ಅರ್ಜಿಗಳ ಪೈಕಿ, 2.36 ಲಕ್ಷ ಅರ್ಜಿಗಳಿಗೆ ರೇಷನ್ ಕಾರ್ಡ್ ಹೊಂದುವ ಅರ್ಹತೆ ಇದ್ದು, ಅವರ ಪೈಕಿ 1.73 ಲಕ್ಷ ರೇಷನ್ ಕಾರ್ಡ್ ಗಳನ್ನು ಶೀಘ್ರದಲ್ಲೇ ವಿತರಣೆ ಮಾಡಲಾಗುತ್ತದೆ
ನಮ್ಮ ರಾಜ್ಯದಲ್ಲಿ ಸಿಗುತ್ತಿರುವ 5 ಗ್ಯಾರೆಂಟಿ ಯೋಜನೆಗಳ ಸೌಲಭ್ಯ ಪಡೆಯಬೇಕು ಎಂದರೆ ಅದಕ್ಕಾಗಿ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವುದು ಬಹಳ ಮುಖ್ಯ ಆಗಿರುತ್ತದೆ. ಈ ವೇಳೆ ಹಲವು ಜನರು ತಮ್ಮ ಬಳಿ ಬಿಪಿಎಲ್ ರೇಷನ್ ಕಾರ್ಡ್ (BPL Ration Card) ಇಲ್ಲದ ಕಾರಣ ಅವರಿಗೆ ಸರ್ಕಾರದ ಯಾವುದೇ ಸೌಲಭ್ಯ ಸಿಗುವುದಿಲ್ಲ.
ಈ ವೇಳೆ ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ಹಲವು ಜನರು ವರ್ಷದ ಹಿಂದೆಯೇ ಅರ್ಜಿ ಸಲ್ಲಿಸಿದ್ದರು ಸಹ ಅವರಿಗೆ ರೇಷನ್ ಕಾರ್ಡ್ (Ration Card) ವಿತರಣೆ ಆಗಿಲ್ಲ. ಹೌದು, ಈಗಾಗಲೇ ಸುಮಾರು 2.95 ಲಕ್ಷ ಜನರು ಹೊಸದಾಗಿ ರೇಷನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ.
ಆದರೆ ಅವರಿಗೆ ಇನ್ನು ರೇಷನ್ ಕಾರ್ಡ್ ವಿತರಣೆ ಆಗಿಲ್ಲ. ಅದಕ್ಕೆ ಕಾರಣ ರಾಜ್ಯದಲ್ಲಿ ಈಗಾಗಲೇ ಇರಬೇಕಾದ ಮಿತಿಗಿಂತ ಹೆಚ್ಚು ರೇಶನ್ ಕಾರ್ಡ್ ಗಳನ್ನು ಕುಟುಂಬಗಳಿಗೆ ನೀಡಲಾಗಿದೆ. ಇದೇ ಕಾರಣಕ್ಕೆ ಹೊಸ ರೇಷನ್ ಕಾರ್ಡ್ ವಿತರಣೆ ಮಾಡುವುದಕ್ಕೆ ಸರ್ಕಾರ ಹಿಂದೇಟು ಹಾಕಿತ್ತು, ಆದರೆ ಇದೀಗ ಸರ್ಕಾರದ ಕಡೆಯಿಂದ ಒಂದು ಗುಡ್ ನ್ಯೂಸ್ ಕೇಳಿಬಂದಿದೆ.
15,393 ಅಂಗನವಾಡಿ ಶಿಕ್ಷಕಿ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ! ಆಸಕ್ತರು ಇಂದೇ ಅಪ್ಲೈ ಮಾಡಿ
ನಮಗೆಲ್ಲ ಗೊತ್ತಿರುವ ಹಾಗೆ ರಾಜ್ಯದಲ್ಲಿ ಬಿಪಿಎಲ್ ರೇಶನ್ ಕಾರ್ಡ್ ವಿಚಾರದಲ್ಲಿ ಕೂಡ ಅಕ್ರಮ ನಡೆಯುತ್ತಿದೆ. ಹಲವಾರು ಜನರು ಸುಳ್ಳು ಮಾಹಿತಿಗಳನ್ನು ನೀಡಿ, ರೇಷನ್ ಕಾರ್ಡ್ ಮಾಡಿಸಿಕೊಂಡಿದ್ದಾರೆ. ಅಂಥವರಿಂದ ಸರ್ಕಾರಕ್ಕೆ ನಷ್ಟ ಆಗುತ್ತಿದ್ದು, ಈ ರೀತಿ ಮಾಡಿರುವವರನ್ನು ಪತ್ತೆ ಅಂಥ ರೇಷನ್ ಕಾರ್ಡ್ ಗಳನ್ನು ಬ್ಯಾನ್ ಮಾಡಲಾಗುತ್ತಿದೆ.
ಇದರ ಜೊತೆಗೆ ಇನ್ನು ಒಂದು ಸರ್ಕಾರದ ಕಡೆಯಿಂದಲೇ ಆಗುತ್ತಿದ್ದು, ಅದರಿಂದ ಒಬ್ಬ ರೈತನಿಗೆ ಆಗಿರುವ ಅನ್ಯಾಯದ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ಉಂಟಾಗಿದೆ.
ಹೌದು, ಪ್ರಭಾಕರ್ ಎನ್ನುವ ರೈತನ ವಿಷಯದಲ್ಲಿ ಸರ್ಕಾರದಿಂದಲೇ ಅನ್ಯಾಯ ಆಗಿದೆ. ಆತ ಬಡ ರೈತನಾಗಿದ್ದು, ಆದಾಯ ಪ್ರಮಾಣ ಪತ್ರ (Income Certificate) ಮಾಡಿಸುವಾಗ, ಅವನ ವಾರ್ಷಿಕ ಆದಾಯ 4 ಸಾವಿರ ಎಂದು ಹಾಕುವ ಬದಲು 4 ಲಕ್ಷ ಎಂದು ಹಾಕಿರುವ ಕಾರಣ ಆತನ ಕುಟುಂಬದ ರೇಷನ್ ಕಾರ್ಡ್ ಕ್ಯಾನ್ಸಲ್ ಮಾಡಲಾಗಿದೆ, ಆತನ ಮಗಳ ವಿದ್ಯಾಭ್ಯಾಸಕ್ಕೆ ಸಿಗುತ್ತಿದ್ದ ಸೌಲಭ್ಯ ಕೂಡ ಸಿಗುತ್ತಿಲ್ಲ.
ಈ ರೀತಿಯಾಗಿ ಆ ಬಡ ರೈತನಿಗೆ ಅನ್ಯಾಯ ಆಗಿದ್ದು, ಅವನಿಗೆ ತಕ್ಷಣವೇ ಬಿಪಿಎಲ್ ಕಾರ್ಡ್ ವಾಪಸ್ ಕೊಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಯಿತು.
ಗೃಹಜ್ಯೋತಿ ಯೋಜನೆ ಫಲಾನುಭವಿಗಳಿಗೆ ಬಿಗ್ ಶಾಕ್! ಇದ್ದಕ್ಕಿದ್ದಂತೆ ಹೊಸ ರೂಲ್ಸ್ ತಂದ ಸರ್ಕಾರ
ಈ ನಿಟ್ಟಿನಲ್ಲಿ ಸರ್ಕಾರ ಒಂದು ನಿರ್ಧಾರ ತೆಗೆದುಕೊಂಡಿದ್ದು, ಪ್ರಸ್ತುತ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿರುವ 2.95 ಲಕ್ಷ ಅರ್ಜಿಗಳ ಪೈಕಿ, 2.36 ಲಕ್ಷ ಅರ್ಜಿಗಳಿಗೆ ರೇಷನ್ ಕಾರ್ಡ್ ಹೊಂದುವ ಅರ್ಹತೆ ಇದ್ದು, ಅವರ ಪೈಕಿ 1.73 ಲಕ್ಷ ರೇಷನ್ ಕಾರ್ಡ್ ಗಳನ್ನು ಶೀಘ್ರದಲ್ಲೇ ವಿತರಣೆ ಮಾಡಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.
ಈ ಮೂಲಕ ರೇಷನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿದ್ದವರಿಗೆ ಒಂದು ಗುಡ್ ನ್ಯೂಸ್ ಸಿಕ್ಕಿದ್ದು, ಶೀಘ್ರದಲ್ಲೇ ಅವರು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು.
Detection of Fake ration cards and soon distribution of 1.73 lakh new BPL cards