ಶಾಲೆಗಳಿಗೆ ರಜೆ, ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಮತ್ತೆ ಮಳೆ ಸೂಚನೆ
ರಾಜ್ಯದ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಜುಲೈ 20ರವರೆಗೂ ಭಾರಿ ಮಳೆಯ ಮುನ್ಸೂಚನೆ; ಕೆಲವು ಜಿಲ್ಲೆಗಳಿಗೆ ರಜೆ ಘೋಷಣೆ; ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

- ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್, ಮಲೆನಾಡಿಗೆ ಯೆಲ್ಲೋ ಅಲರ್ಟ್
- ಬಂಟ್ವಾಳ, ಉಳ್ಳಾಲದಲ್ಲಿ ಶಾಲೆಗಳಿಗೆ ರಜೆ ಘೋಷಣೆ
- ಕುಸಿತಭೀತಿಯಲ್ಲಿ ಇರುವವರಿಗೆ ಸ್ಥಳಾಂತರ ಸೂಚನೆ
ಬೆಂಗಳೂರು (Bengaluru): ಕರ್ನಾಟಕ ರಾಜ್ಯಾದ್ಯಾಂತ (Karnataka Weather) ಮುಂಗಾರು ಮಳೆ ಮತ್ತೆ ಚುರುಕುಗೊಳ್ಳುತ್ತಿದ್ದಂತೆ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಹಲವು ಜಿಲ್ಲೆಗಳಿಗೆ ಆರೆಂಜ್ (Orange Alert) ಹಾಗೂ ಯೆಲ್ಲೋ ಅಲರ್ಟ್ (Yellow Alert) ಘೋಷಣೆ ಮಾಡಲಾಗಿದ್ದು, ಹವಾಮಾನ ಇಲಾಖೆ ನಿರಂತರ ಎಚ್ಚರಿಕೆಘೋಷಿಸಿದೆ.
ದಕ್ಷಿಣ ಕನ್ನಡ (Dakshina Kannada), ಉಡುಪಿ (Udupi), ಕೊಡಗು (Kodagu) ಸೇರಿದಂತೆ ಕರಾವಳಿಯ ಜಿಲ್ಲೆಗಳಲ್ಲಿ ಜುಲೈ 20ರವರೆಗೂ ಭಾರಿ ಮಳೆಯ (Heavy Rain Alert) ಮುನ್ಸೂಚನೆ ನೀಡಲಾಗಿದೆ.
ಭಾರೀ ಗಾಳಿ ಹಾಗೂ ತೀವ್ರ ಮಳೆಯ ಕಾರಣದಿಂದ ಬಂಟ್ವಾಳ, ಉಳ್ಳಾಲ ತಾಲೂಕುಗಳಲ್ಲಿ ಜುಲೈ 15ರಂದು ಎಲ್ಲ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಇದನ್ನೂ ಓದಿ: ಬಡವರ ಮನೆ ಕನಸು ಸಾಕಾರ, ಮನೆ ಇಲ್ಲದವರಿಗೆ ಉಚಿತ ಮನೆ ಯೋಜನೆ! ಅರ್ಜಿ ಹಾಕಿ
ಬೆಂಗಳೂರು (Bengaluru) ನಗರ ಹಾಗೂ ಗ್ರಾಮಾಂತರ ಭಾಗಗಳಲ್ಲಿಯೂ ಹಗುರ ಮಳೆಯ ಅಂತರ ಇದ್ದರೂ ಮುಂದಿನ ದಿನಗಳಲ್ಲಿ ಮಳೆ ತೀವ್ರವಾಗುವ ಸಾಧ್ಯತೆ ಇದೆ. ಮೈಸೂರಿನ (Mysuru), ಚಿತ್ರದುರ್ಗ (Chitradurga), ಗದಗ (Gadag) ಜಿಲ್ಲೆಗಳಲ್ಲಿ ಕೂಡ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಇದಕ್ಕೆ ಪೂರಕವಾಗಿ, ಕಾಸರಗೋಡು (Kasaragod) ಸೇರಿದಂತೆ ಕೇರಳದ ಕರಾವಳಿ ಜಿಲ್ಲೆಗಳಲ್ಲಿ ಮಳೆಗಾಲ ಮತ್ತಷ್ಟು ಬಲ ಪಡೆಯುತ್ತಿರುವುದರಿಂದ ಮೀನುಗಾರಿಕೆ ನಿಷೇಧಿಸಲಾಗಿದೆ. ಎಚ್ಚರಿಕೆ ಸೂಚನೆಯ ಪ್ರಕಾರ, 60 ಕಿ.ಮೀ ವೇಗದ ಗಾಳಿ ಬೀಸುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇದನ್ನೂ ಓದಿ: ಕೃಷಿಯಲ್ಲಿ ಸಾಧನೆ ಮಾಡಿದ ಕರ್ನಾಟಕ ರೈತರಿಗೆ ಪ್ರಶಸ್ತಿ, ₹50,000 ಬಹುಮಾನ!
ಭೂ ಕುಸಿತದ (Landslide) ಭೀತಿಯ ಪ್ರದೇಶಗಳಲ್ಲಿ, ನಿವಾಸಿಗಳು ತಕ್ಷಣ ಸ್ಥಳಾಂತರಗೊಳ್ಳಬೇಕು ಎಂದು ಅಧಿಕಾರಿಗಳು ಸೂಚಿಸಿದ್ದಾರೆ. ನದಿ ದಂಡೆಗಳ ಬಳಿ ಇರುವ ನಿವಾಸಿಗಳಿಗೆ ಕೂಡ ಎಚ್ಚರಿಕೆಯ ಸೂಚನೆ ನೀಡಲಾಗಿದೆ. ಅಪಾಯದ ಮುನ್ಸೂಚನೆಯ ಹಿನ್ನೆಲೆಯಲ್ಲಿ ಸಾರ್ವಜನಿಕರು ಅಧಿಕೃತ ಮಾಹಿತಿ ಪಡೆದು ಸ್ಥಳೀಯ ಆಡಳಿತದೊಂದಿಗೆ ಸಂಪರ್ಕದಲ್ಲಿರಬೇಕು.
ಇದನ್ನೂ ಓದಿ: ಕರ್ನಾಟಕ ರೈತರಿಗೆ ಸೌರ ಪಂಪ್ಸೆಟ್ಗಳ ವಿತರಣೆ! ಏನಿದು ಯೋಜನೆ? ಇಲ್ಲಿದೆ ಡೀಟೇಲ್ಸ್
ಅಲ್ಲದೆ, ಸೋಮವಾರದ ಮಳೆಯ ಅಂಕಿಅಂಶಗಳ ಪ್ರಕಾರ ಉಡುಪಿಯ ಕೋಟಾ 9 ಸೆಂ.ಮೀ., ಮಂಗಳೂರು 8 ಸೆಂ.ಮೀ. ಮಳೆ ದಾಖಲಿಸಿದರೆ, ಬಂಟ್ವಾಳ, ಸುಳ್ಯ, ಆಗುಂಬೆ ಸೇರಿ ಹಲವು ಭಾಗಗಳಲ್ಲಿ 7 ಸೆಂ.ಮೀ. ಮಳೆ ಸುರಿದಿದೆ. ಇದೇ ತೀವ್ರತೆ ಮುಂದಿನ 5 ದಿನಗಳವರೆಗೆ ನಿರೀಕ್ಷಿಸಲಾಗಿದೆ.
ಚಿಕ್ಕಮಗಳೂರು (Chikkamagaluru), ಶಿವಮೊಗ್ಗ (Shivamogga) ಜಿಲ್ಲೆಗಳಲ್ಲಿ ಈಗಾಗಲೇ ಮಳೆ ತೀವ್ರವಾಗಿದೆ. ಅಲ್ಲದೆ ಜುಲೈ 16ರಿಂದ ಹೆಚ್ಚುವರಿ ಮಳೆಪಾತ ಹೆಚ್ಚಾಗುವ ಸೂಚನೆ ಇದೆ. ಚಿಕ್ಕಬಳ್ಳಾಪುರ, ಕೋಲಾರ, ಧಾರವಾಡ, ವಿಜಯಪುರದಂತಹ ಜಿಲ್ಲೆಗಳಿಗೂ ಸಹ ಮುನ್ಸೂಚನೆ ನೀಡಲಾಗಿದೆ.
Orange Alert for Karnataka Coastal Regions till July 20








