ಕೃಷಿಯಲ್ಲಿ ಸಾಧನೆ ಮಾಡಿದ ಕರ್ನಾಟಕ ರೈತರಿಗೆ ಪ್ರಶಸ್ತಿ, ₹50,000 ಬಹುಮಾನ!
ಹೆಚ್ಚು ಇಳುವರಿಯಿಂದ ಕೃಷಿಯಲ್ಲಿ ಸಾಧನೆಗೈದ ರೈತರಿಗೆ ರಾಜ್ಯ ಸರ್ಕಾರದಿಂದ ಸನ್ಮಾನ. ತಾಲೂಕು ಮಟ್ಟದಿಂದ ರಾಜ್ಯ ಮಟ್ಟದವರೆಗಿನ ನಗದು ಬಹುಮಾನ. ಅರ್ಜಿ ಸಲ್ಲಿಸಲು ಅವಕಾಶ.

- ಉತ್ತಮ ಇಳುವರಿ ಪಡೆದ ರೈತರಿಗೆ ₹50,000 ವರೆಗಿನ ನಗದು ಬಹುಮಾನ
- ಅರ್ಜಿ ಸಲ್ಲಿಸಲು ಜಮೀನು ದಾಖಲೆ, ಆಧಾರ್, ಬೆಳೆ ದೃಢೀಕರಣ ಅಗತ್ಯ
- ಕೆ-ಕಿಸಾನ್ (K-Kisan) ಪೋರ್ಟಲ್ ಅಥವಾ ರೈತ ಸಂಪರ್ಕ ಕೇಂದ್ರದಲ್ಲಿ ಅರ್ಜಿ
ಕರ್ನಾಟಕದ (Karnataka) ಸಾವಿರಾರು ರೈತರಿಗೆ ಈ ಬಾರಿ ಒಂದು ದೊಡ್ಡ ಅವಕಾಶ ಸಿಕ್ಕಿದೆ. ರಾಜ್ಯ ಕೃಷಿ ಇಲಾಖೆ (Agriculture Department) ಪ್ರತಿ ವರ್ಷ ನೀಡುವ “ಕೃಷಿ ಪಂಡಿತ ಪ್ರಶಸ್ತಿ”ಗೆ ಈಗ ಅರ್ಜಿ ಆಹ್ವಾನಿಸಲಾಗಿದೆ. ಇದು ಕೇವಲ ಪ್ರಶಸ್ತಿಯಲ್ಲ, ₹50,000 ವರೆಗಿನ ನಗದು ಬಹುಮಾನವೂ ಸೇರಿದೆ!
ಈ ಪ್ರಶಸ್ತಿಯ ಉದ್ದೇಶ? ಹೆಚ್ಚು ಇಳುವರಿ ಪಡೆಯುವ ಕ್ರಿಯಾಶೀಲ ರೈತರಿಗೆ ಉತ್ತೇಜನ ನೀಡುವುದು. ಆಯ್ಕೆ ಪ್ರಕ್ರಿಯೆ ಏನು ಅಂತಾ ಅರ್ಥವಾಗಬೇಕಾದ್ರೆ – ರೈತರು ತಾವು ಬೆಳೆ ಬೆಳೆದಿರುವ ಜಮೀನಿನ ವಿವರಗಳ ಜೊತೆಗೆ ಅರ್ಜಿ ಸಲ್ಲಿಸಬೇಕು. ನಂತರ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ, ಮೀಟರ್ ಅಳತೆಯಲ್ಲಿ ಬೆಳೆಯ ಇಳುವರಿ ಪರೀಕ್ಷಿಸುತ್ತಾರೆ.
ಇದನ್ನೂ ಓದಿ: ಬೆಂಗಳೂರು ಆಟೋ ಚಾಲಕರಿಗೆ ಸರ್ಕಾರದಿಂದ ಶಾಕಿಂಗ್ ಸುದ್ದಿ! ಖಡಕ್ ವಾರ್ನಿಂಗ್
ಪ್ರಶಸ್ತಿ ಮೂರು ಹಂತಗಳಲ್ಲಿ ಸಿಗುತ್ತದೆ: ತಾಲೂಕು, ಜಿಲ್ಲೆ, ಹಾಗೂ ರಾಜ್ಯ ಮಟ್ಟ. ರಾಜ್ಯ ಮಟ್ಟದ ಪ್ರಥಮ ಬಹುಮಾನ ₹50,000! ಇಲ್ಲಿ ಅತೀ ಹೆಚ್ಚು ಇಳುವರಿ ದಾಖಲಿಸಿದ ಮೂರು ರೈತರಿಗೆ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ನೀಡಲಾಗುತ್ತದೆ.
ಅರ್ಜಿಗೆ ಅಗತ್ಯ ದಾಖಲೆಗಳೆಂದರೆ: ಆಧಾರ್ ಕಾರ್ಡ್, ಪಹಣಿ, ಬ್ಯಾಂಕ್ ಪಾಸ್ಬುಕ್, ಪೋಟೋ, ಬೆಳೆ ದೃಢೀಕರಣ ಪತ್ರ ಹಾಗೂ ಮೊಬೈಲ್ ಸಂಖ್ಯೆ. ಇವರೊಂದಿಗೆ ಅರ್ಜಿ ಸಲ್ಲಿಸಬಹುದು.
ಅರ್ಜಿದಾರನು ತಮ್ಮ ಹೆಸರಿನಲ್ಲಿ ಜಮೀನು (Agriculture Land) ಹೊಂದಿರಬೇಕು ಮತ್ತು ಖುದ್ದಾಗಿ ಕೃಷಿಯಲ್ಲಿ ತೊಡಗಿಸಿಕೊಂಡಿರಬೇಕು. ಒಂದು ಕುಟುಂಬದಿಂದ ಒಂದೇ ವ್ಯಕ್ತಿಗೆ ಅವಕಾಶ ಇದೆ. ಸರ್ಕಾರಿ ನೌಕರರಿಗೂ ಈ ಸ್ಪರ್ಧೆಗೆ ಅವಕಾಶವಿಲ್ಲ.
ಇದನ್ನೂ ಓದಿ: ಬೇಕರಿ, ಅಂಗಡಿ ಹಾಗೂ ಸಣ್ಣ ವ್ಯಾಪಾರಿಗಳಿಗೆ ಸಿಹಿಸುದ್ದಿ! ತೆರಿಗೆ ಇಲಾಖೆ ಬಿಗ್ ರಿಲೀಫ್
ಅರ್ಜಿಯನ್ನು ನೀವು ಎರಡು ರೀತಿಯಲ್ಲಿ ಸಲ್ಲಿಸಬಹುದು – ಆನ್ಲೈನ್ ಮೂಲಕ ಅಥವಾ ನೇರವಾಗಿ ಹೋಬಳಿ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ.
ಇದನ್ನೂ ಓದಿ: ಕರ್ನಾಟಕ ರೈತರಿಗೆ ಸೌರ ಪಂಪ್ಸೆಟ್ಗಳ ವಿತರಣೆ! ಏನಿದು ಯೋಜನೆ? ಇಲ್ಲಿದೆ ಡೀಟೇಲ್ಸ್
ಆನ್ಲೈನ್ ಅರ್ಜಿ ಸಲ್ಲಿಸಲು:
K-Kisan Portal ಗೆ ಭೇಟಿ ನೀಡಿ
“Krishi Pandit Prashasti Application Entry” ಕ್ಲಿಕ್ ಮಾಡಿ
ಆಧಾರ್ ನಂಬರ್ ಹಾಕಿ ಡಿಟೆಲ್ಸ್ ಪಡೆದು, ಎಲ್ಲಾ ದಾಖಲೆಗಳ ಅಪ್ಲೋಡ್ ಮಾಡಿ, Submit ಮಾಡಿ
ಇನ್ನು ನಿಗದಿತ ಇಳುವರಿ ಗಡುವನ್ನು ಮೀರುವ ರೈತರನ್ನೇ ಆಯ್ಕೆ ಮಾಡಲಾಗುತ್ತದೆ. ನಿಗದಿತ ಪ್ರಮಾಣಕ್ಕಿಂತ ಕಡಿಮೆ ಇಳುವರಿ ಸಿಕ್ಕಿದ್ದರೆ ಬಹುಮಾನ ಲಭ್ಯವಿಲ್ಲ.
ಇದನ್ನೂ ಓದಿ: ಕರ್ನಾಟಕ ರೈತರಿಗೆ ಸಿಹಿಸುದ್ದಿ! ಪಹಣಿಯಲ್ಲಿ ಬೆಳೆ ದಾಖಲಾತಿಗೆ ಹೊಸ ಸೌಲಭ್ಯ
ಇದೊಂದು ಅವಕಾಶವಲ್ಲದೆ, ಒಂದು ಗೌರವ. ನಿಮ್ಮ ಬೆಳೆ ಸದೃಢವಿದ್ದರೆ ಮತ್ತು ಈ ಬಗ್ಗೆ ಉತ್ಸಾಹವಿದ್ದರೆ, ಈ ಬಾರಿ ಕೃಷಿ ಪಂಡಿತ ಪ್ರಶಸ್ತಿಗೆ ನೀವು ಏಕೆ ಅರ್ಜಿ ಸಲ್ಲಿಸಬಾರದು.
ಅಧಿಕೃತ ವೆಬ್ ಸೈಟ್ : https://kkisan.karnataka.gov.in/
Farmer Award, 50,000 Prize, Apply Now on K-Kisan Portal




