ಬೆಂಗಳೂರು ಎಲೆಕ್ಟ್ರಿಕ್ ಬೈಕ್ ಶೋರೂಂ ಬೆಂಕಿ ಅವಘಡ, ಮಾಲೀಕ ಬಂಧನ
ಎಲೆಕ್ಟ್ರಿಕ್ ಬೈಕ್ ಶೋರೂಂನಲ್ಲಿ ಬೆಂಕಿ ಅವಘಡ ಸಂಭವಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶೋರೂಂ ಮಾಲೀಕ ಹಾಗೂ ಮ್ಯಾನೇಜರ್ ಬಂಧನ
ಬೆಂಗಳೂರು (Bengaluru): ಬೆಂಗಳೂರಿನ ರಾಜ್‌ಕುಮಾರ್ ರಸ್ತೆಯಲ್ಲಿರುವ ಎಲೆಕ್ಟ್ರಿಕ್ ಬೈಕ್ ಶೋರೂಂನಲ್ಲಿ (Electric Bike Showroom) ಬೆಂಕಿ ಅವಘಡ ಸಂಭವಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶೋರೂಂ ಮಾಲೀಕ ಪುನೀತ್ ಹಾಗೂ ಮ್ಯಾನೇಜರ್ ಯುವರಾಜ್ ಎಂಬುವರನ್ನು ರಾಜಾಜಿನಗರ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಮಂಗಳವಾರ ಸಂಜೆ 5.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡು ಅಪಾರ ಪ್ರಮಾಣದ ವಾಹನಗಳು ಹಾಗೂ ಶೋರೂಂ ಸಂಪೂರ್ಣ ಸುಟ್ಟು ಭಸ್ಮವಾಗಿದೆ.
ಸ್ಕೂಟರ್‌ಗಳಲ್ಲಿದ್ದ (Electric Scooter) ಬ್ಯಾಟರಿಗಳು ಸ್ಫೋಟಗೊಂಡಿದ್ದರಿಂದ ಬೆಂಕಿ ಕಾಣಿಸಿಕೊಂಡಿದೆ. ಉದ್ಯೋಗಿ ಪ್ರಿಯಾ ಬೆಂಕಿಯನ್ನು ನೋಡಿ ತನ್ನ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾಳೆ. ಕೊನೆಗೆ ಬೆಂಕಿ ಅಲ್ಲಿಯೂ ವ್ಯಾಪಿಸಿ ಸಜೀವ ದಹನವಾಗಿದ್ದಾರೆ.
ಇನ್ನು ಕೆಲವರು ಹೊರಗೆ ಓಡಿ ಬಂದು ಪ್ರಾಣ ಉಳಿಸಿಕೊಂಡರು. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಪ್ರಿಯಾ ತನ್ನ 27 ನೇ ಹುಟ್ಟುಹಬ್ಬವನ್ನು ಬುಧವಾರ ಆಚರಿಸಬೇಕಾಗಿತ್ತು, ಈ ನಡುವೆ ಈ ದುರಂತ ಸಂಭವಿಸಿದೆ.
ಶೋರೂಂ ಸಿಬ್ಬಂದಿ ತಮ್ಮ ಮಗಳ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸಿಲ್ಲ ಎಂದು ಆಕೆಯ ತಂದೆ ಅಳಲು ತೋಡಿಕೊಂಡರು. ಪೊಲೀಸರು ಹಾಗೂ ಫೋರೆನ್ಸಿಕ್ ಸಿಬ್ಬಂದಿ ಶೋ ರೂಂ ಪರಿಶೀಲನೆ ನಡೆಸಿದ್ದಾರೆ. ಪ್ರತ್ಯಕ್ಷದರ್ಶಿಗಳಿಂದ ಹೇಳಿಕೆಗಳನ್ನು ತೆಗೆದುಕೊಳ್ಳಲಾಗಿದೆ.
owner arrested in Bengaluru electric bike showroom fire incident