ನವೆಂಬರ್ 19ರಂದು ಬೆಂಗಳೂರಿನ 50ಕ್ಕೂ ಹೆಚ್ಚು ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯ
ಕೆಪಿಟಿಸಿಎಲ್ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ನವೆಂಬರ್ 19ರಂದು ರಾಜಾಜಿನಗರ, ವಿಜಯನಗರ ಸೇರಿ 50 ಕ್ಕೂ ಅಧಿಕ ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಜಾರಿಯಾಗಲಿದೆ ಎಂದು ತಿಳಿಸಲಾಗಿದೆ.

Bengaluru power cut: ಬೆಂಗಳೂರು ನಗರದ ಕೆಲವು ಪ್ರಮುಖ ವಸತಿ ಹಾಗೂ ವ್ಯಾಪಾರ ಪ್ರದೇಶಗಳು ಬುಧವಾರ ಕೆಲ ಗಂಟೆಗಳ ಕಾಲ ವಿದ್ಯುತ್ ಇಲ್ಲದೆ ಇರಬೇಕಾಗಲಿದೆ. ಕೆಪಿಟಿಸಿಎಲ್ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನವೆಂಬರ್ 19ರಂದು ಪವರ್ ಕಟ್ ಅನಿವಾರ್ಯವಾಗುತ್ತಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.
ಈ ಬಾರಿ ವಿದ್ಯುತ್ ವ್ಯತ್ಯಯಕ್ಕೆ ಒಳಗಾಗುವ ಪ್ರದೇಶಗಳ ಪಟ್ಟಿ ದೊಡ್ಡದಾಗಿದ್ದು, ರಾಜಾಜಿನಗರದ 1ರಿಂದ 6ನೇ ಬ್ಲಾಕ್‌ಗಳು, ಮಂಜುನಾಥನಗರ, ಶಿವನಗರ, ಡಾ. ಮೋದಿ ಆಸ್ಪತ್ರೆ ರಸ್ತೆ, ಕೆ.ಹೆಚ್.ಬಿ ಕಾಲೋನಿ, ಮಹಾಗಣಪತಿನಗರ, ಸುಬ್ರಮಣ್ಯನಗರ, ಗಾಯತ್ರಿ ನಗರ ಸೇರಿದಂತೆ ಸುತ್ತಮುತ್ತಲಿನ ಅನೇಕ ಬಡಾವಣೆಗಳು ಸೇರಿವೆ. ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಪೂರೈಕೆ ಸ್ಥಗಿತಗೊಳ್ಳಲಿದೆ.
ವಿಜಯನಗರ, ಎಂ.ಸಿ ಲೇಔಟ್, ಹಂಪಿನಗರ, ಬಿನ್ನಿಪೇಟೆ, ಮಾಗಡಿ ರಸ್ತೆ, ಹೊಸಹಳ್ಳಿ, ಜಗಜೀವನರಾಮ್ ನಗರ ಸೇರಿದಂತೆ ಪಶ್ಚಿಮ ವಿಭಾಗದ ಅನೇಕ ಭಾಗಗಳಲ್ಲೂ ಪವರ್ ಸ್ಥಗಿತ ಕ್ರಮ ಜಾರಿಯಲ್ಲಿರುತ್ತದೆ. ಗೋರಿಪಾಳ್ಯ, ವಿ.ಎಸ್ ಗಾರ್ಡನ್ ಮತ್ತು ಗೂಡ್ಸ್ ಶೆಡ್ ರಸ್ತೆ ಭಾಗದ ನಿವಾಸಿಗಳಿಗೂ ಇದೇ ಸಮಯದಲ್ಲಿ ವಿದ್ಯುತ್ ಲಭ್ಯವಿರುವುದಿಲ್ಲ.
ಇದನ್ನೂ ಓದಿ: ಕರ್ನಾಟಕ ರೇಷನ್ ಕಾರ್ಡ್‌ಗಳಿಗೆ ಹೊಸ ಅಪ್ಡೇಟ್, ಸರ್ಕಾರದಿಂದ ಮಹತ್ವದ ಕ್ರಮ!
ಇದೇ ರೀತಿ ರಾಜ್ ಕುಮಾರ್ ರಸ್ತೆ, ದೇವಯ್ಯ ಪಾರ್ಕ್, ಲಿಂಕ್ ರಸ್ತೆ, ನಾಗಪ್ಪ ಬ್ಲಾಕ್, ಪ್ಯಾಲೇಸ್ ಗುಟ್ಟಹಳ್ಳಿ, ಇಸ್ಕಾನ್ ದೇವಾಲಯ ಪ್ರದೇಶ, ನಾರಾಯಣ ನೇತ್ರಾಲಯ ಹಾಗೂ ಪಲಾಡಿಯಂ ಅಪಾರ್ಟ್‌ಮೆಂಟ್‌ಗಳಿಗೂ ಪವರ್ ವ್ಯತ್ಯಯ ಅನ್ವಯವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಲವಾರು ಭಾಗಗಳಲ್ಲಿ EPOS ಹಾಗೂ ಲೈನ್ ಸುಧಾರಣೆ ಕೆಲಸಗಳಿಗೆ ಈ ನಿರ್ವಹಣಾ ಅವಧಿಯನ್ನು ಬಳಸಲಾಗುತ್ತಿದೆ.
ನಿರ್ವಹಣಾ ಕಾಮಗಾರಿಯಿಂದಾಗಿ ತಾತ್ಕಾಲಿಕ ತೊಂದರೆ ಉಂಟಾದರೂ, ಮುಂದಿನ ದಿನಗಳಲ್ಲಿ ವಿದ್ಯುತ್ ಪೂರೈಕೆ ಗುಣಮಟ್ಟ ಸುಧಾರಿಸುವ ಉದ್ದೇಶದೊಂದಿಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬೆಸ್ಕಾಂ ಹೇಳಿದೆ. ನಾಗರಿಕರು ಮುಂಚಿತವಾಗಿ ಸಿದ್ಧತೆ ಮಾಡಿಕೊಂಡಿರಲು ಮನವಿ ಸಹ ಮಾಡಲಾಗಿದೆ.
Power Cut in 50 Plus Areas of Bengaluru on Wednesday
ಗೃಹಲಕ್ಷ್ಮಿ ಯೋಜನೆಯ ಹೊಸ ಲಿಸ್ಟ್ ಸಿದ್ದ; ಈ ಪಟ್ಟಿಯಲ್ಲಿ ಹೆಸರಿದ್ದರೆ ಮಾತ್ರ ಸಿಗುತ್ತೆ ಹಣ!
Read the story
ಕರ್ನಾಟಕ ಮಹಿಳೆಯರಿಗೆ ₹2 ಲಕ್ಷದವರೆಗೆ ಸಾಲ ಸೌಲಭ್ಯ; ಸ್ವಂತ ಉದ್ಯಮ ಆರಂಭಿಸಲು ಆರ್ಥಿಕ ನೆರವು
Read the story
10 ಲಕ್ಷ ಮಂದಿ ರೈತರಿಗೆ ಪಿಎಂ ಕಿಸಾನ್ ಯೋಜನೆ ಹಣ ಸ್ಥಗಿತ! ಕೇಂದ್ರದ ಶಾಕಿಂಗ್ ನಿರ್ಧಾರ
Read the story
ಕರ್ನಾಟಕ SSLC ವಿದ್ಯಾರ್ಥಿಗಳು ಹಾಗೂ ಶಾಲೆಗಳಿಗೆ KSEAB ಮಹತ್ವದ ಸೂಚನೆ! ತಪ್ಪದೇ ಗಮನಿಸಿ
Read the story
ಕರ್ನಾಟಕ ರಾಜ್ಯದಲ್ಲಿ ಅಕ್ಕಿ ಬೆಲೆ ಗಗನಕ್ಕೆ; ಕೆಜಿಗೆ ₹20 ರೂಪಾಯಿ ಏರಿಕೆ! 4 ತಿಂಗಳಲ್ಲಿ ಶೇ 30ರಷ್ಟು ಹೆಚ್ಚಳ
Read the story



