ಬೆಂಗಳೂರಿನ 85ಕ್ಕೂ ಹೆಚ್ಚು ಏರಿಯಾಗಳಲ್ಲಿ ನಾಳೆ ಫುಲ್ ಡೇ ಕರೆಂಟ್ ಇರಲ್ಲ - Bengaluru Power Outage
ಜುಲೈ 30ರಂದು ನಗರದ ಹಲವೆಡೆ ಬೆಳಿಗ್ಗೆಯಿಂದ ಸಂಜೆವರೆಗೆ ವಿದ್ಯುತ್ ಪೂರೈಕೆ ಸ್ಥಗಿತವಾಗಲಿದೆ. ತುರ್ತು ನಿರ್ವಹಣಾ ಕಾಮಗಾರಿಯಿಂದಾಗಿ ಈ ತಾತ್ಕಾಲಿಕ ವ್ಯತ್ಯಾಸ ಉಂಟಾಗುತ್ತಿದೆ ಎಂದು ಬೆಸ್ಕಾಂ ಪ್ರಕಟಿಸಿದೆ.

- ಬೆಸ್ಕಾಂ ಕಾಮಗಾರಿಯಿಂದ 80ಕ್ಕೂ ಹೆಚ್ಚು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
- ಜುಲೈ 30 ರಂದು ಬೆಳಿಗ್ಗೆ 11ರಿಂದ ಸಂಜೆ 5ರವರೆಗೆ ಪೂರೈಕೆ ಸ್ಥಗಿತ
- ಆರ್ಟಿ ನಗರ, ಹೆಬ್ಬಾಳ, ಸಂಜಯನಗರ, ಗಂಗಾನಗರ ಸೇರಿದಂತೆ ಪ್ರಮುಖ ಪ್ರದೇಶಗಳು
ಬೆಂಗಳೂರು (Bengaluru Power Outage): ಜುಲೈ 30ರಂದು ಬೆಂಗಳೂರು ನಗರದಲ್ಲಿ ಹೆಬ್ಬಾಳ ಉಪಕೇಂದ್ರ ವ್ಯಾಪ್ತಿಯ 80ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಬೆಳಿಗ್ಗೆ 11ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಾಸವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಹೌದು, ಬೆಂಗಳೂರು ನಗರದಲ್ಲಿ ಜುಲೈ 30, ಬುಧವಾರದಂದು ವಿದ್ಯುತ್ ಪೂರೈಕೆಯಲ್ಲಿ ದೊಡ್ಡ ಮಟ್ಟದ ವ್ಯತ್ಯಾಸ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ಸ್ಪಷ್ಟಪಡಿಸಿದೆ. ಕೆಪಿಟಿಸಿಎಲ್ ವತಿಯಿಂದ ಹೆಬ್ಬಾಳ ಉಪಕೇಂದ್ರದಲ್ಲಿ ತುರ್ತು ನಿರ್ವಹಣಾ ಕೆಲಸ ನಡೆಯುತ್ತಿರುವ ಕಾರಣ, ಬೆಳಿಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆವರೆಗೆ ಹಲವು ಪ್ರದೇಶಗಳಿಗೆ ವಿದ್ಯುತ್ ಪೂರೈಕೆ ಇಲ್ಲದಿರಬಹುದು.
ಇದನ್ನೂ ಓದಿ: ಬೆಂಗಳೂರು ಸೇರಿ ಕರ್ನಾಟಕ ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ
ವಿದ್ಯುತ್ ಪೂರೈಕೆ ಸ್ಥಗಿತವಾಗಲಿರುವ ಪ್ರದೇಶಗಳ ಪಟ್ಟಿಯು ಬಹಳ ವಿಸ್ತೃತವಾಗಿದೆ. ಹೆಬ್ಬಾಳ, ಆರ್ಟಿ ನಗರ, ಸಂಜಯನಗರ, ಗಂಗಾನಗರ, ಲಕ್ಷ್ಮಯ್ಯ ಬ್ಲಾಕ್, ಸಿಪಿಯು ಬ್ಲಾಕ್, ಡಾಲರ್ಸ್ ಕಾಲೋನಿ, ನೇತಾಜಿ ನಗರ, ಮುನಿರಾಮಯ್ಯ ಬ್ಲಾಕ್, ಆಲ್ಪೈನ್ ಅಪಾರ್ಟ್ಮೆಂಟ್, ಜೈನ್ ಅಪಾರ್ಟ್ಮೆಂಟ್, ರಿಂಗ್ ರೋಡ್, ಕುವೆಂಪು ಲೇಔಟ್, ಯೋಗೇಶ್ವರ ನಗರ ಮುಂತಾದ ಹಲವು ಬಡಾವಣೆಗಳು ಈ ವ್ಯತ್ಯಾಸದಿಂದ ಪ್ರಭಾವಿತವಾಗಲಿವೆ.
ಹಾಗೆಯೇ, ಮಾಜಿ ಸೈನಿಕರ ಕಾಲೋನಿ, ದಿನ್ನೂರ್ ಮುಖ್ಯ ರಸ್ತೆ, ಎಚ್.ಎಂ.ಟಿ ಬ್ಲಾಕ್, ಶಾಂತಿಸಾಗರ ರಸ್ತೆ, ಎಂಎಲ್ಎ ಲೇಔಟ್, ಗಾಯತ್ರಿ ಅಪಾರ್ಟ್ಮೆಂಟ್, ನೃಪತುಂಗ ಬಡಾವಣೆ, ಫುಡ್ವರ್ಲ್ಡ್ ಆರ್ಟಿ ನಗರ ಸೇರಿದಂತೆ ಹಲವಾರು ವಸತಿ ಪ್ರದೇಶಗಳು ಕೂಡ ವಿದ್ಯುತ್ ವ್ಯತ್ಯಾಸದಿಂದಾಗಿ ತಾತ್ಕಾಲಿಕ ತೊಂದರೆಯನ್ನು ಅನುಭವಿಸಬಹುದು.
ಇದನ್ನೂ ಓದಿ: ಆಸ್ತಿ ತೆರಿಗೆ ಕಟ್ಟದ ಬೆಂಗಳೂರು ಆಸ್ತಿ ಮಾಲೀಕರ ವಿರುದ್ಧ ಬಿಬಿಎಂಪಿ ದಿಟ್ಟ ಕ್ರಮ
ಈ ಹಿನ್ನೆಲೆಯಲ್ಲಿ ಬೆಸ್ಕಾಂ ಸಾರ್ವಜನಿಕರಿಗೆ ಪೂರ್ವಜ್ಞಾಪನೆ ನೀಡಿ, ಅಗತ್ಯವಿರುವ ಮನೆಬಳಕೆ, ಕೆಲಸಗಳಿಗಾಗಿ ವ್ಯವಸ್ಥಿತ ಯೋಜನೆ ರೂಪಿಸಿಕೊಳ್ಳುವಂತೆ ಮನವಿ ಮಾಡಿದೆ. ಇದರೊಂದಿಗೆ, ವೆಬ್ಸೈಟ್ ಅಥವಾ ಬೆಸ್ಕಾಂ ಮೆಸೇಜ್ ಸೇವೆ ಮೂಲಕ ನಿಖರ ಮಾಹಿತಿ ಪಡೆದುಕೊಳ್ಳಬಹುದಾಗಿದೆ.
Power Outage in Over 80 Bengaluru Areas on July 30



