ರೇಷನ್ ಕಾರ್ಡ್ ತಿದ್ದುಪಡಿಗೆ ಮತ್ತೆ ಅವಕಾಶ, ಏನೆಲ್ಲಾ ಬದಲಾವಣೆ ಮಾಡಬಹುದು? ಇಲ್ಲಿದೆ ಮಾಹಿತಿ
10ನೇ ತಾರೀಕಿನ ಒಳಗೆ ತಿದ್ದುಪಡಿ ಮಾಡಿಸಿಕೊಳ್ಳಿ. ಈ ಬಾರಿ ಏನೆಲ್ಲಾ ಬದಲಾವಣೆ ಮಾಡಿಸಿಕೊಳ್ಳಬಹುದು? ಎಲ್ಲಿ ಮಾಡಿಸಿಕೊಳ್ಳಬಹುದು? ಇದನ್ನು ತಿಳಿಸುತ್ತೇವೆ ನೋಡಿ
ಹಲವು ಜನರು ತಮ್ಮ ಬಿಪಿಎಲ್ ರೇಷನ್ ಕಾರ್ಡ್ (BPL Ration Card) ತಿದ್ದುಪಡಿ ಮಾಡಿಸುವುದಕ್ಕೆ ಕಾಯುತ್ತಿದ್ದು, ಇದಕ್ಕಾಗಿ ರಾಜ್ಯ ಸರ್ಕಾರ ಈಗ ಮತ್ತೊಮ್ಮೆ ಅವಕಾಶ ಮಾಡಿಕೊಟ್ಟಿದೆ. ಆಗಸ್ಟ್ 10ರ ವರೆಗು ರೇಷನ್ ಕಾರ್ಡ್ ತಿದ್ದುಪಡಿ ಮಾಡುವುದಕ್ಕೆ, ಆನ್ಲೈನ್ ಅರ್ಜಿ ಸಲ್ಲಿಸಬಹುದು.
ಈ ಬಗ್ಗೆ ರಾಜ್ಯದ ಆಹಾರ ಮತ್ತು ಗ್ರಾಹಕ ಸೇವಾ ಇಲಾಖೆ ಮಾಹಿತಿ ಕೊಟ್ಟಿದ್ದು, 10ನೇ ತಾರೀಕಿನ ಒಳಗೆ ತಿದ್ದುಪಡಿ ಮಾಡಿಸಿಕೊಳ್ಳಿ. ಈ ಬಾರಿ ಏನೆಲ್ಲಾ ಬದಲಾವಣೆ ಮಾಡಿಸಿಕೊಳ್ಳಬಹುದು? ಎಲ್ಲಿ ಮಾಡಿಸಿಕೊಳ್ಳಬಹುದು? ಇದನ್ನು ತಿಳಿಸುತ್ತೇವೆ ನೋಡಿ..
ಇನ್ನೆರಡು ದಿನಗಳಲ್ಲಿ ಪೆಂಡಿಂಗ್ ಗೃಹಲಕ್ಷ್ಮಿ ಹಣ ಬಿಡುಗಡೆ, ವರಮಹಾಲಕ್ಷ್ಮಿ ಹಬ್ಬಕ್ಕೆ ಗುಡ್ ನ್ಯೂಸ್!
ಏನೆಲ್ಲಾ ಬದಲಾವಣೆ ಮಾಡಿಸಬಹುದು:
*ಮನೆಯವರ ಹೆಸರು ತಿದ್ದುಪಡಿ
*ಮನೆಯ ಮುಖ್ಯಸ್ಥರ ಬದಲಾವಣೆ
*ನೂತನ ಸದಸ್ಯರ ಹೆಸರು ಸೇರ್ಪಡೆ
*ಅಡ್ರೆಸ್ ಬದಲಾವಣೆ
*ಬೇರೆ ಮನೆಗೆ ಹೋದವರ, ನಿಧನರಾದವರ ಹೆಸರು ತೆಗೆಯುವುದು.
*ಬಯೋಮೆಟ್ರಿಕ್ ಮತ್ತು ಫೋಟೋ ಅಪ್ಡೇಟ್.
ಅಗತ್ಯವಿರುವ ದಾಖಲೆಗಳು:
*ಅರ್ಜಿ ಹಾಕುವವರ ಆಧಾರ್ ಕಾರ್ಡ್ ಕಾಪಿ
*ಹೊಸಬರ ಹೆಸರು ಸೇರಿಸುವುದಕ್ಕೆ ಕ್ಯಾಸ್ಟ್ ಮತ್ತು ಇನ್ಕಮ್ ಸರ್ಟಿಫಿಕೇಟ್
*ಫೋನ್ ನಂಬರ್
*ಪ್ರಸ್ತುತ ಇರುವ ರೇಶನ್ ಕಾರ್ಡ್ ಡೀಟೇಲ್ಸ್, ಇದಿಷ್ಟು ಬೇಕು.
ಎಲ್ಲಿ ತಿದ್ದುಪಡಿ ಮಾಡಿಸಬಹುದು?
ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸುವವರು ನಿಮಗೆ ಹತ್ತಿರ ಇರುವಂಥ ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಗಳಿಗೆ ಭೇಟಿ ನೀಡಿ, ಅಗತ್ಯ ದಾಖಲೆಗಳ ಜೊತೆಗೆ ಹೋಗಿ ಆನ್ಲೈನ್ ಮೂಲಕ ತಿದ್ದುಪಡಿಗೆ ಅರ್ಜಿ ಸಲ್ಲಿಸಬಹುದು.
ತಿದ್ದುಪಡಿಗಾಗಿ (Ration Card Correction) ಆನ್ಲೈನ್ ಅರ್ಜಿ ಸಲ್ಲಿಕೆ ಅವಕಾಶ ಮಾತ್ರ ಇದೆ. ಆಗಸ್ಟ್ 10ನೇ ತಾರೀಕಿನವರೆಗು ಬೆಳಗ್ಗೆ 10 ರಿಂದ ಸಂಜೆ 5ರವರೆಗೂ ತಿದ್ದುಪಡಿಗೆ ಅರ್ಜಿ ಸಲ್ಲಿಸಬಹುದು. ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕಿದ್ದು, ಕೈಯಲ್ಲಿ ಬರೆದ ಅರ್ಜಿಗಳನ್ನು ಆಕ್ಸೆಪ್ಟ್ ಮಾಡುವುದಿಲ್ಲ.
ರೇಷನ್ ಕಾರ್ಡ್ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ಯಾ ಇಲ್ವಾ? ಈ ರೀತಿಯಾಗಿ ಮೊಬೈಲ್‌ನಲ್ಲೇ ಚೆಕ್ ಮಾಡಿ
ವಿದ್ಯುತ್ ಬಿಲ್ ದಾಖಲೆ ಕೊಡುವುದು ಕಡ್ಡಾಯ:
ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸುವವರು ತಮ್ಮ ಮನೆಯ ವಿದ್ಯುತ್ ಮೀಟರ್ ನ RR ನಂಬರ್ ಕೊಡಬೇಕು. ಇದು ಕಡ್ಡಾಯ ಆಗಿದೆ, ವಿದ್ಯುತ್ ಮೀಟರ್ ನಿಮ್ಮ ಹೆಸರಲ್ಲೇ ಇರಲಿ, ಓನರ್ ಹೆಸರಲ್ಲೇ ಇರಲಿ, ಹೇಗೆ ಇದ್ದರು ಕೂಡ, RR ನಂಬರ್ ಮಾಹಿತಿ ಕೊಡಬೇಕು.
ಅಕಸ್ಮಾತ್ ನಿಮ್ಮ ಮನೆಗೆ ವಿದ್ಯುತ್ ಸಂಪರ್ಕ ಇಲ್ಲದೇ ಹೋದರೆ ಅಥವಾ ಇಲ್ಲ ಎಂದು ತಿಳಿಸಬೇಕು. ಅಕಸ್ಮಾತ್ ಭಾಗ್ಯಜ್ಯೋತಿ ವಿದ್ಯುತ್ ಆಗಿದ್ದು ಅಥವಾ ಕ್ವಾಟರ್ಸ್ ಆಗಿದ್ದು, ಎಲ್ಲರಿಗೂ ಕಾಮನ್ ಮೀಟರ್ ಎನ್ನುವುದಾದರೆ ಇದರ ಬಗ್ಗೆ ಕೂಡ ಸ್ಪಷ್ಟವಾಡ ಮಾಹಿತಿ ಕೊಡಬೇಕು.
ಹೊಸ ರೇಷನ್ ಕಾರ್ಡ್ ಕೊಡೋದು ಯಾವಾಗ?
ಯಾರಿಗೆಲ್ಲಾ ಇನ್ನು ಹೊಸ ರೇಷನ್ ಕಾರ್ಡ್ ಸಿಕ್ಕಿಲ್ಲವೋ, ಅಂಥವರಿಗೆ ಹೊಸ ರೇಷನ್ ಕಾರ್ಡ್ ವಿತರಣೆ ಮಾಡೋದು ಯಾವಾಗ ಎನ್ನುವ ಪ್ರಶ್ನೆಗೆ ಇನ್ನು ಉತ್ತರ ಸಿಕ್ಕಿಲ್ಲ. ಪ್ರಸ್ತುತ ಸರ್ಕಾರ ತಿದ್ದುಪಡಿಗೆ ಅವಕಾಶ ಮಾತ್ರ ಕೊಡಲಾಗಿದ್ದು, ಜನರು ಸಧ್ಯಕ್ಕೆ ಅಗತ್ಯ ದಾಖಲೆಗಳ ಜೊತೆಗೆ, ತಮ್ಮ ಹತ್ತಿರದ ಕೇಂದ್ರಗಳಲ್ಲಿ ತಿದ್ದುಪಡಿ ಮಾಡಿಸಿಕೊಳ್ಳಬಹುದು.
https://ahara.kar.nic.in/Home/EServices ಇದು ಸರ್ಕಾರದ ಅಧಿಕೃತ ವೆಬ್ಸೈಟ್ ಲಿಂಕ್ ಆಗಿದ್ದು, ಈ ಒಂದು ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ತಿದ್ದುಪಡಿಗೆ ಆನ್ಲೈನ್ ಅರ್ಜಿ ಸಲ್ಲಿಸಬಹುದು.
Ration card correction allowed again, Here is the information