ರೇಷನ್ ಕಾರ್ಡ್ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ಯಾ ಇಲ್ವಾ? ಈ ರೀತಿಯಾಗಿ ಮೊಬೈಲ್‌ನಲ್ಲೇ ಚೆಕ್ ಮಾಡಿ

ಈ ಪಟ್ಟಿಯನ್ನು ಚೆಕ್ ಮಾಡಿ, ನಿಮ್ಮ ಹೆಸರು ಅದರಲ್ಲಿ ಇದೆಯಾ ಎಂದು ನೀವು ನೋಡಿಕೊಳ್ಳಬಹುದು. ಕರ್ನಾಟಕ ಪಡಿತರ ಚೀಟಿ ಫಲಾನುಭವಿಗಳ ಪಟ್ಟಿ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯಾ ಎಂದು ಚೆಕ್ ಮಾಡುವುದು ಹೇಗೆ ಎಂದು ನೋಡೋಣ

ಕೇಂದ್ರ ಸರ್ಕಾರದ ಕಡೆಯಿಂದ ನಮ್ಮ ದೇಶದಲ್ಲಿ ಕಷ್ಟಪಡುತ್ತಿರುವವರಿಗೆ ಸಹಾಯ ಆಗಲಿ ಎನ್ನುವ ಕಾರಣಕ್ಕೆ ರೇಷನ್ ಕಾರ್ಡ್ ಗಳನ್ನು (Ration Card) ವಿತರಣೆ ಮಾಡುವ ಒಂದು ಕೆಲಸ ಶುರುವಾಯಿತು. ಇದದಿಂದಾಗಿ ಜನರಿಗೆ ಅನುಕೂಲ ಆಗುತ್ತಿದೆ.

ಬಡವರ್ಗದ ಜನರಿಗಾಗಿ ಎರಡು ರೀತಿಯ ರೇಶನ್ ಕಾರ್ಡ್ ಗಳನ್ನು ವಿತರಣೆ ಮಾಡಲಿದ್ದು, ಬಡತನದ ರೇಖೆಗಿಂತ ಕೆಳಗೆ ಇರುವವರಿಗೆ ಬಿಪಿಎಲ್ ರೇಷನ್ ಕಾರ್ಡ್ (BPL Ration Card), ಬಡತನದ ರೇಖೆಗಿಂತ ಮೇಲಿರುವವರಿಗೆ ಎಪಿಎಲ್ ರೇಷನ್ ಕಾರ್ಡ್ ವಿತರಣೆ ಮಾಡಲಾಗುತ್ತದೆ.

ಪ್ರಸ್ತುತ ಹಲವು ಜನರ ಬಳಿ ರೇಶನ್ ಕಾರ್ಡ್ ಇದ್ದು, ಅದರಲ್ಲೂ ಬಿಪಿಎಲ್ ಕಾರ್ಡ್ (BPL Card) ಹೊಂದಿರುವವರಿಗೆ ಸರ್ಕಾರದ ಕಡೆಯಿಂದ ಅನೇಕ ರೀತಿಯ ಪ್ರಯೋಜನಗಳು ಸಿಗುತ್ತದೆ. ಉಚಿತ ಆಹಾರ ಧಾನ್ಯಗಳು, ಉಚಿತ ಆರೋಗ್ಯ ಸೇವೆ, ಸರ್ಕಾರದ ಸವಲತ್ತುಗಳು, ಹೀಗೆ ಇನ್ನು ಅನೇಕ ಸೇವೆಗಳು ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವವರಿಗೆ ಸಿಗುತ್ತದೆ. ಈ ಕಾರಣಕ್ಕಾಗಿ ಬಡತನದಲ್ಲಿ ಇರುವವರೆಲ್ಲರು ರೇಷನ್ ಕಾರ್ಡ್ ಮಾಡಿಸಿಕೊಂಡು ಸರ್ಕಾರದ ಸವಲತ್ತುಗಳನ್ನು ಪಡೆಯುವುದು ಒಳ್ಳೆಯದು.

Ration Card: ಯಾವೆಲ್ಲಾ ಜನರ ಬಿಪಿಎಲ್ ಕಾರ್ಡ್ ರದ್ದಾಗುತ್ತೆ? ಇಲ್ಲಿದೆ ಅಪ್ಡೇಟ್

ಕೃಷಿ ಜಮೀನಿನಲ್ಲಿ ಬೋರ್ವೆಲ್ ಕೊರೆಸಲು ಸಿಗುತ್ತೆ ರೂ 4.25 ಲಕ್ಷ ಸಬ್ಸಿಡಿ! ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಿ

ಆದರೆ ನಮ್ಮ ದೇಶದಲ್ಲಿ ಅರ್ಹತೆ ಇರುವ ಎಲ್ಲರಿಗೂ ಬಿಪಿಎಲ್ ರೇಶನ್ ಕಾರ್ಡ್ ಸಿಕ್ಕಿಲ್ಲ. ಹೌದು, ಕೆಲವರು ತಪ್ಪು ಮಾಹಿತಿಗಳನ್ನು ಕೊಟ್ಟು ರೇಷನ್ ಕಾರ್ಡ್ ಮಾಡಿಸಿಕೊಂಡಿರುತ್ತಾರೆ.

ಇನ್ನು ಕೆಲವು ಸಾರಿ ರೇಷನ್ ಕಾರ್ಡ್ ವಿತರಣೆ ವೇಳೆ ಆಗುವ ಕೆಲವು ದೋಷಗಳಿಂದ ಕುಟುಂಬದ ಕೆಲವು ವ್ಯಕ್ತಿಗಳ ಹೆಸರು ರೇಷನ್ ಕಾರ್ಡ್ ಇಂದ ಮಿಸ್ ಆಗಿರುತ್ತದೆ. ಈ ಕಾರಣಗಳಿಂದ ಅರ್ಹತೆ ಇರುವ ಫಲಾನುಭವಿಗಳಿಗೆ ಈ ಒಂದು ಸೌಲಭ್ಯ ಸಿಗದೇ ಹೋಗಬಹುದು.

ಈ ಕಾರಣಕ್ಕೆ ಸರ್ಕಾರ ಕೂಡ ರೇಷನ್ ಕಾರ್ಡ್ ತಿದ್ದುಪಡಿ ಮಾಡುವ ಅವಕಾಶ ನೀಡಿತ್ತು. ಅದರಂತೆ ಕೆಲವರು ಆನ್ಲೈನ್ ನಲ್ಲಿ ರೇಶನ್ ಕಾರ್ಡ್ ಗೆ ಹೆಸರು ಸೇರಿಸಲು ಅರ್ಜಿ ಸಲ್ಲಿಸಿದ್ದು, ಇದೀಗ ರೇಷನ್ ಕಾರ್ಡ್ ಗೆ ಹೆಸರು ಸೇರ್ಪಡೆ ಆಗಿರುವವರ ಪಟ್ಟಿ ಬಿಡುಗಡೆ ಆಗಿದೆ.

ಈ ಪಟ್ಟಿಯನ್ನು ಚೆಕ್ ಮಾಡಿ, ನಿಮ್ಮ ಹೆಸರು ಅದರಲ್ಲಿ ಇದೆಯಾ ಎಂದು ನೀವು ನೋಡಿಕೊಳ್ಳಬಹುದು. ಕರ್ನಾಟಕ ಪಡಿತರ ಚೀಟಿ ಫಲಾನುಭವಿಗಳ ಪಟ್ಟಿ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯಾ ಎಂದು ಚೆಕ್ ಮಾಡುವುದು ಹೇಗೆ ಎಂದು ನೋಡೋಣ..

ರೇಷನ್ ಕಾರ್ಡ್ ತಿದ್ದುಪಡಿ ಹಾಗೂ ಬಿಟ್ಟುಹೋದ ಹೆಸರು ಸೇರಿಸಲು ಅವಕಾಶ! ಗುಡ್ ನ್ಯೂಸ್ ಕೊಟ್ಟ ಸರ್ಕಾರ!

ರೇಷನ್ ಕಾರ್ಡ್ ನಲ್ಲಿ ಹೆಸರು ಅಪ್ಡೇಟ್ ಆಗಿದ್ಯಾ ಎಂದು ಚೆಕ್ ಮಾಡುವ ವಿಧಾನ:

*ಮೊದಲಿಗೆ ಸರ್ಕಾರದ ಈ https://ahara.kar.nic.in/Home/EServices ಅಧಿಕೃತ ಲಿಂಕ್ ಗೆ ಭೇಟಿ ನೀಡಿ.
*ಹೋಮ್ ಪೇಜ್ ನಲ್ಲಿ ಬರುವ ಮೆನು ನಲ್ಲಿ ಇ ಸೇವೆಗಳು ಎನ್ನುವ ಆಪ್ಶನ್ ಸೆಲೆಕ್ಟ್ ಮಾಡಿ.
*ಇಲ್ಲಿ ಇ-ರೇಷನ್ ಕಾರ್ಡ್ ಎನ್ನುವ ಆಪ್ಶನ್ ಸೆಲೆಕ್ಟ್ ಮಾಡಿ.
*ಈಗ ಗ್ರಾಮ ಪಟ್ಟಿ ಎನ್ನುವ ಇನ್ನೊಂದು ಆಪ್ಶನ್ ಸೆಲೆಕ್ಟ್ ಮಾಡಿ.

ಈಗ ಬರುವ ಲಿಸ್ಟ್ ನಲ್ಲಿ ಈ ವಿಷಯಗಳನ್ನು ಫಿಲ್ ಮಾಡಿ..

*ನಿಮ್ಮ ಜಿಲ್ಲೆಯ ಹೆಸರು
*ನಿಮ್ಮ ತಾಲ್ಲೂಕಿನ ಹೆಸರು
*ಗ್ರಾಮ ಪಂಚಾಯಿತಿ ಹೆಸರು
*ಗ್ರಾಮದ ಹೆಸರು

ಈ ಎಲ್ಲಾ ಮಾಹಿತಿಗಳನ್ನು ಹಾಕಿದ ನಂತರ, ನಿಮ್ಮ ಕಂಪ್ಯೂಟರ್ ಸ್ಕ್ರೀನ್ ಮೇಲೆ ಲಿಸ್ಟ್ ಬರುತ್ತದೆ. ಇದರಲ್ಲಿ ನಿಮ್ಮ ಹೆಸರು ಇದೆಯಾ ಎಂದು ಚೆಕ್ ಮಾಡಬಹುದು.

Check whether your name is in the ration card list or not

Related Stories