ಕೃಷಿ ಜಮೀನಿನಲ್ಲಿ ಬೋರ್ವೆಲ್ ಕೊರೆಸಲು ಸಿಗುತ್ತೆ ರೂ 4.25 ಲಕ್ಷ ಸಬ್ಸಿಡಿ! ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಿ
Loan Scheme : ರಾಜ್ಯ ಸರ್ಕಾರವು ರೈತರ ಕೃಷಿ ನೆಲದಲ್ಲಿ ನೀರಾವರಿ ಸೌಲಭ್ಯ ಒದಗಿಸಿಕೊಡುವುದಕ್ಕಾಗಿ ಗಂಗಾ ಕಲ್ಯಾಣ ಯೋಜನೆಯನ್ನು ಜಾರಿಗೆ ತಂದಿದೆ. ಈ ಒಂದು ಯೋಜನೆಯ ಮೂಲಕ ರೈತರ ಜಮೀನಿಗೆ ಬೋರ್ವೆಲ್ (borewell) ಕೊರೆಸುವುದಕ್ಕೆ, ಕೊಳವೆ ಬಾವಿ ಕೊರೆಸುವುದಕ್ಕೆ ಸರ್ಕಾರದಿಂದ ಸಾಲ ಸೌಲಭ್ಯ (Loan Facility) ಸಿಗಲಿದ್ದು, ಇದರ ಅನುಕೂಲ ಪಡೆಯುವುದು ಹೇಗೆ? ಈ ಯೋಜಬೆಗೆ ಅಪ್ಲೈ ಮಾಡುವುದು ಹೇಗೆ? ಅರ್ಹತೆಯ ಮಾನದಂಡಗಳು ಏನೇನು? ಇದೆಲ್ಲದರ ಬಗ್ಗೆ ಪೂರ್ತಿಯಾಗಿ ತಿಳಿದುಕೊಳ್ಳೋಣ.
ರೇಷನ್ ಕಾರ್ಡ್ ತಿದ್ದುಪಡಿ ಹಾಗೂ ಬಿಟ್ಟುಹೋದ ಹೆಸರು ಸೇರಿಸಲು ಅವಕಾಶ! ಗುಡ್ ನ್ಯೂಸ್ ಕೊಟ್ಟ ಸರ್ಕಾರ!
ಗಂಗಾ ಕಲ್ಯಾಣ ಯೋಜನೆಯಲ್ಲಿ ಸಿಗುವ ಹಣವೆಷ್ಟು?
ಈ ಯೋಜನೆಯ ಮೂಲಕ ನೀವು ಎಷ್ಟು ಹಣ ಪಡೆಯಬಹುದು ಎಂದು ನೋಡುವುದಾದರೆ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು ಈ ಜಿಲ್ಲೆಯ ರೈತರು ತಮ್ಮ ಜಮಿನಿನಲ್ಲಿ ಕೊಳವೆ ಬಾವಿ ತೆರೆಯುವುದಕ್ಕೆ, ಇಲ್ಲಿ ನಿಮಗೆ ₹4.75 ಲಕ್ಷ ಸಿಗಲಿದ್ದು, ಇದಲ್ಲಿ ₹4.25 ಲಕ್ಷ ಸಹಾಯಧನ ಆಗಿರುತ್ತದೆ.
ಇನ್ನು 50 ಸಾವಿರಕ್ಕೆ 4% ಬಡ್ಡಿ ದರದಲ್ಲಿ ನೀವು ಸಾಲ ಮರುಪಾವತಿ (Loan Re Payment) ಮಾಡಬೇಕಾಗುತ್ತದೆ. ಇನ್ನುಳಿದ ಬೇರೆ ಜಿಲ್ಲೆಗಳಲ್ಲಿ ₹3.75 ಲಕ್ಷ ಸಾಲ ಸಿಗಲಿದ್ದು, ₹3.25 ಲಕ್ಷ ಸಹಾಯಧನ ಆಗಿರಲಿದೆ, ಇನ್ನು ₹50 ಸಾವಿರ ರೂಪಾಯಿಗಳನ್ನು 4% ಬಡ್ಡಿದರಲ್ಲಿ ಮರುಪಾವತಿ ಮಾಡಬೇಕಾಗುತ್ತದೆ.
ಅರ್ಜಿ ಸಲ್ಲಿಕೆ ಪ್ರಕ್ರಿಯೆ:
ನೀವು ಈ ಯೋಜನೆಯ ಸೌಲಭ್ಯ ಪಡೆಯಲು ಆಸಕ್ತಿ ಹೊಂದಿದ್ದರೆ, ಅಗತ್ಯವಿರುವ ದಾಖಲೆಗಳನ್ನು ತೆಗೆದುಕೊಂಡು ನಿಮಗೆ ಹತ್ತಿರ ಇರುವ ಗ್ರಾಮ ಒನ್, ಕರ್ನಾಟಕ ಒನ್ ಆಫೀಸ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಗಂಗಾ ಕಲ್ಯಾಣ ಯೋಜನೆಗೆ ಆನ್ಲೈನ್ ಅರ್ಜಿ ಸಲ್ಲಿಕೆ ಮಾತ್ರ ಮಾಡಬಹುದು.
ಬೇಕಾಗುವ ದಾಖಲೆಗಳು:
*ಕ್ಯಾಸ್ಟ್ ಮತ್ತು ಇನ್ಕಮ್ ಸರ್ಟಿಫಿಕೇಟ್
*ಆಧಾರ್ ಕಾರ್ಡ್
*ಬ್ಯಾಂಕ್ ಅಕೌಂಟ್ ಡೀಟೇಲ್ಸ್ (Bank Account Details)
*ಜಮೀನಿನ ಪಹಣಿ ಪತ್ರ
*ಪಾಸ್ ಪೋರ್ಟ್ ಸೈಜ್ ಫೋಟೋ
*ರೈತರು ಸಣ್ಣ ಅಥವಾ ಅತಿಸಣ್ಣ ರೈತರಾದರೆ ಅದರ ಪ್ರಮಾಣಪತ್ರ
*ಮನೆಯವರ ರೇಷನ್ ಕಾರ್ಡ್ ಕಾಪಿ
*ಫೋನ್ ನಂಬರ್
ಮುಲಾಜಿಲ್ಲದೆ ಇಂತಹವರ ರೇಷನ್ ಕಾರ್ಡ್ ಕ್ಯಾನ್ಸಲ್ ಮಾಡಲು ನಿರ್ಧಾರ, ಸರ್ಕಾರದಿಂದ ಕಟ್ಟುನಿಟ್ಟಿನ ಕ್ರಮ
ಅರ್ಜಿ ಸಲ್ಲಿಕೆಗೆ ಅರ್ಹತೆ:
*ಅರ್ಜಿ ಸಲ್ಲಿಸುವ ವ್ಯಕ್ತಿಯ ಮನೆಯವರ ವಾರ್ಷಿಕ ಆದಾಯ 98 ಸಾವಿರದ ಒಳಗಿರಬೇಕು
*18 ವರ್ಷ ಮೇಲ್ಪಟ್ಟವರು ಅರ್ಜಿ ಸಲ್ಲಿಸಬಹುದು
*ಒಂದೇ ಜಾಗದಲ್ಲಿ ಇರುವ ಹಾಗೆ 2 ಎಕರೆ ಅಥವಾ 5 ಎಕರೆ ಜಮೀನು ಇರಬೇಕು
*ದಕ್ಷಿಣ ಕನ್ನಡ, ಉಡುಪಿ, ಕೊಡಗು, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಈ ಜಿಲ್ಲೆಯವರ ಹತ್ತಿರ ಮಿನಿಮಮ್ 1 ಎಕರೆ ಜಾಗ ಇರಬೇಕು.
*ಅರ್ಜಿದಾರರ ಜಮೀನಿನಲ್ಲಿ ಇನ್ಯಾವುದೆ ನೀರಾವರಿ ಸೌಲಭ್ಯ ಹೊಂದಿರಬಾರದು. ಸಣ್ಣ ಅಥವಾ ಅತೀಸಣ್ಣ ರೈತರಾಗಿರಬೇಕು.
*ಒಂದು ನಿಗಮದ, ವರ್ಗಕ್ಕೆ ಸೇರಿರುವವರಿಗೆ ಅರ್ಜಿ ಸಲ್ಲಿಕೆಗೆ ಅವಕಾಶ ಇರುತ್ತದೆ.
ಯಾವೆಲ್ಲಾ ವರ್ಗದವರು ಅರ್ಜಿ ಸಲ್ಲಿಸಬಹುದು?
*ಉಪ್ಪಾರ ಅಭಿವೃದ್ಧಿ ನಿಗಮ
*ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ
*ಮರಾಠ ಅಭಿವೃದ್ಧಿ ನಿಗಮ
*ವಿಶ್ವಕರ್ಮ ಅಭಿವೃದ್ಧಿ ನಿಗಮ
*ಮಡಿವಾಳ ಮಾಚದೇವ ಅಭಿವೃದ್ಧಿ ನಿಗಮ
*ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ
*ಸವಿತಾ ಸಮಾಜ ಅಭಿವೃದ್ಧಿ ನಿಗಮ
*ಅಲೆಮಾರಿ ಅರೆ ಅಲೆಮಾರಿ ಅಭಿವೃದ್ಧಿ ನಿಗಮ
*ಒಕ್ಕಲಿಗ ಅಭಿವೃದ್ಧಿ ನಿಗಮ
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ:
ಈ ಯೋಜನೆಗೆ ಅರ್ಜಿ ಸಲ್ಲಿಸಲು ಆಗಸ್ಟ್ 31 ಕೊನೆಯ ದಿನಾಂಕ ಆಗಿದ್ದು, ಆ ದಿನಾಂಕದ ಒಳಗೆ ಆಸಕ್ತಿ ಇರುವವರು ಅರ್ಜಿ ಸಲ್ಲಿಸಬಹುದು.
Rs 4.25 lakh subsidy for drilling borewell in your agricultural land
Our Whatsapp Channel is Live Now 👇