ಬೆಂಗಳೂರು 2ನೇ ವಿಮಾನ ನಿಲ್ದಾಣ, ಈ ಜಾಗದ ಭೂಮಿ ಬೆಲೆ ಶೇ 5% ಹೆಚ್ಚಳ
Bengaluru 2nd Airport : ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುದ್ದಿಯ ಹಿನ್ನೆಲೆಯಲ್ಲಿ ಕನಕಪುರ ಭಾಗದ ರಿಯಲ್ ಎಸ್ಟೇಟ್ ಮಾರುಕಟ್ಟೆ ಚುರುಕಾಗಿದೆ. ಭೂಮಿಯ ದರ ಆಕಾಶಕ್ಕೆ ಏರುತ್ತಿದೆ.

- ಕನಕಪುರದಲ್ಲಿ ಭೂಮಿಯ ದರ ಶೇ.5ರಷ್ಟು ಏರಿಕೆ
- 5 ಸ್ಥಳಗಳಲ್ಲಿ ಶಾರ್ಟ್ಲಿಸ್ಟ್, ಆದರೆ ಕನಕಪುರ ಮುಂಚೂಣಿಯಲ್ಲಿ
- ಸರ್ಕಾರದಿಂದ ಇನ್ನೂ ಅಧಿಕೃತ ಘೋಷಣೆ ಬಾಕಿ
ಬೆಂಗಳೂರು (Bengaluru): ಕನಕಪುರ ರಸ್ತೆಯ ಸುತ್ತಮುತ್ತ ಭೂಮಿ ಮೌಲ್ಯ (Land Value) ಶೇ.3% ರಿಂದ 5% ರಷ್ಟು ಏರಿಕೆಯಾಗಿದೆ ಎಂಬುದು ಲೇಟೆಸ್ಟ್ ಡೇಟಾ. ಇದಕ್ಕೆ ಕಾರಣವೆಂದರೆ ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (Bengaluru 2nd Airport) ತೀವ್ರ ನಿರೀಕ್ಷೆ.
ವಿಮಾನ ನಿಲ್ದಾಣ ಯೋಜನೆಯ ಸುದ್ದಿ ಬಂದ ಒಂದು ವರ್ಷದಲ್ಲಿ ಈ ಭಾಗದಲ್ಲಿ ಭೂಮಿಯ ದರಗಳು ಬರೋಬ್ಬರಿ ಬದಲಾವಣೆಗೆ ಒಳಪಟ್ಟಿವೆ.
ಇದನ್ನೂ ಓದಿ: ಚಿನ್ನದ ಬೆಲೆ ಇಳಿಕೆ ಶುರು, ಇನ್ನೂ ಇಳಿಕೆ ಆಗುತ್ತಂತೆ! ಇಲ್ಲಿದೆ ಬೆಂಗಳೂರು ಅಪ್ಡೇಟ್
ಇನ್ನು ಆಸ್ತಿ ಮೌಲ್ಯದ ಬಗ್ಗೆ ಹೇಳೋಣ ಅಂದ್ರೆ, ಕನಕಪುರದಲ್ಲಿ ಪ್ರತಿ ಚದರ ಅಡಿಗೆ ಭೂಮಿ ಬೆಲೆ ₹600 ರಿಂದ ₹4,500 ವರೆಗೆ ಇದೆ. ಫ್ಲಾಟ್ಗಳ ದರವು ₹9,300 ಚದರ ಅಡಿಗೆ ಸರಾಸರಿ ಇದ್ದು, ಅಪಾರ್ಟ್ಮೆಂಟ್ ಬೆಲೆ ₹7,000 ರಿಂದ ₹9,950 ರವರೆಗೆ ಇದೆ ಎಂದು 99acres.com ವರದಿ ಮಾಡಿದೆ. 3 BHK ಅಪಾರ್ಟ್ಮೆಂಟ್ಗಳ ದರವು ₹2.28 ಕೋಟಿಯಿಂದ ₹2.53 ಕೋಟಿ ರವರೆಗೆ ಹೆಚ್ಚಾಗಿದೆ.
ವಿಮಾನ ನಿಲ್ದಾಣದ ಸ್ಥಳ ಆಯ್ಕೆ ಸಂಬಂಧ ಭಾರತ ವಿಮಾನ ನಿಲ್ದಾಣ ಪ್ರಾಧಿಕಾರ (Airport Authority of India) ಈಗಾಗಲೇ ಪರಿಶೀಲನೆ ನಡೆಸಿದ್ದು, ಕನಕಪುರ ಹಾಗೂ ನೆಲಮಂಗಲ ಭಾಗಗಳನ್ನು ಶಾರ್ಟ್ ಲಿಸ್ಟ್ ಮಾಡಲಾಗಿದೆ.
ಆದರೂ ಜನತೆ ಕನಕಪುರ ಭಾಗದತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪ್ರಭಾವ ಈ ಭಾಗದಲ್ಲಿ ಯೋಜನೆ ಬಲಕ್ಕೆ ಕಾರಣವಾಗಿದೆ ಎಂಬ ಅಭಿಪ್ರಾಯ ಇದೆ.
ಇದನ್ನೂ ಓದಿ: ಇವತ್ತೇ ಲಾಸ್ಟ್ ಡೇಟ್, ಈ ಕೆಲಸ ಮಾಡದಿದ್ರೆ ರೇಷನ್ ಕಾರ್ಡ್ ರದ್ದು! ರೇಷನ್ ಸಿಗಲ್ಲ
ಮೂಲತಃ ಐದು ಪ್ರಮುಖ ಪ್ರದೇಶಗಳನ್ನು ವಿಮಾನ ನಿಲ್ದಾಣಕ್ಕೆ ಶಾರ್ಟ್ ಲಿಸ್ಟ್ ಮಾಡಲಾಗಿದ್ದು, ಅಂತಿಮವಾಗಿ ಒಂದು ಭಾಗ ಮಾತ್ರ ಆಯ್ಕೆಯಾಗಬೇಕಾಗಿದೆ. ಆದರೆ ರಾಜ್ಯ ಸರ್ಕಾರದಿಂದಲೂ ಹಾಗೂ ಕೇಂದ್ರ ಸರ್ಕಾರದಿಂದಲೂ ಯಾವುದೇ ಅಧಿಕೃತ ಘೋಷಣೆ ಅಥವಾ ಮುಂದಿನ ಹೆಜ್ಜೆಗಳ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಇದರಿಂದ ಯೋಜನೆಯ ಪ್ರಗತಿ ಕುಂಠಿತವಾಗಿದೆ ಎಂಬ ಅಭಿಪ್ರಾಯ ಹಬ್ಬಿದೆ.
ಇದನ್ನೂ ಓದಿ: ಗೃಹಲಕ್ಷ್ಮಿ ಹಣ ಬಂದಿಲ್ಲ ಅನ್ನೋರೆ ಹೆಚ್ಚು, ಹಣ ತುಂಬೋದ್ರಲ್ಲಿ ದೊಡ್ಡ ಟ್ವಿಸ್ಟ್
ಆದರೆ, ಕನಕಪುರ ಭಾಗದಲ್ಲಿ ರಿಯಲ್ ಎಸ್ಟೇಟ್ (Real Estate) ಮಾರುಕಟ್ಟೆ ಈಗಾಗಲೇ ಚಿಗುರೊಡೆದು ಬೆಳೆದಿದೆ. ಜನರು ಭವಿಷ್ಯದ ಏರಿಕೆಯ ನಿರೀಕ್ಷೆಯಲ್ಲಿ ಹೂಡಿಕೆಗೆ ಮುಂದಾಗಿದ್ದಾರೆ. ಈ ಯೋಜನೆಯ ಪೂರಕವಾಗಿ ಈ ಭಾಗದ ಆಸ್ತಿ ಮೌಲ್ಯ (Property Price) ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ.
Real Estate Boom Near Bengaluru’s 2nd Airport, Kanakapura in Spotlight




