Bengaluru NewsKarnataka News

ಗೃಹಲಕ್ಷ್ಮಿ ಹಣ ಬಂದಿಲ್ಲ ಅನ್ನೋರೆ ಹೆಚ್ಚು, ಹಣ ತುಂಬೋದ್ರಲ್ಲಿ ದೊಡ್ಡ ಟ್ವಿಸ್ಟ್

ಪ್ರತಿ ತಿಂಗಳು ಹಣ ವಿತರಣೆ ಘೋಷಿಸಿದ್ದ ಸರ್ಕಾರ ಇದೀಗ ಪದೇಪದೇ ಮಾತು ಬದಲಿಸುತ್ತಿದೆ ಎಂದು ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದ್ದು, ಗೃಹಲಕ್ಷ್ಮಿ ಫಲಾನುಭವಿಗಳಲ್ಲಿ ಗೊಂದಲ ಮೂಡಿಸಿದೆ ಎಂದಿದ್ದಾರೆ.

Publisher: Kannada News Today (Digital Media)

  • ಉಪ ಚುನಾವಣೆಗೆ ಮುನ್ನ ಮಾತ್ರ ಹಣ ಹಾಕುತ್ತಾರೆ
  • ಗೃಹಲಕ್ಷ್ಮಿ ಯೋಜನೆಯ ಬಗ್ಗೆ ನಿಖಿಲ್ ಕುಮಾರಸ್ವಾಮಿ ಆರೋಪ

ಬೆಂಗಳೂರು (Bengaluru): “ರಾಜ್ಯ ಸರ್ಕಾರ ಜನತೆಗೆ ಗ್ಯಾರಂಟಿ ಕೊಟ್ಟಿದ್ರು, ಪ್ರತಿ ತಿಂಗಳು ಹಣ ನೀಡ್ತೀವಿ ಎಂದಿದ್ರು. ಆದರೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಈಗ ತಾನೇ ಹತ್ತಾರು ಕಡೆಗಳಲ್ಲಿ ತಾವು Month-wise ಹಣ ಕೊಡುತ್ತೇವೆ ಎಂದು ಹೇಳಿಲ್ಲವೆಂದು ಹೇಳ್ತಿದ್ದಾರೆ. ಇದು ಸರಿಯೇ?” ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇರವಾಗಿ ಪ್ರಶ್ನಿಸಿದರು.

ಹಣ ಬಿಡುಗಡೆ ವಿಚಾರದಲ್ಲಿ ಡಿಕೆಶಿಯ ಹೇಳಿಕೆ ಗೃಹಲಕ್ಷ್ಮಿ (Gruha Lakshmi Scheme) ಫಲಾನುಭವಿಗಳಿಗೆ ಗೊಂದಲ ಉಂಟುಮಾಡಿದೆಯೆಂದು ನಿಖಿಲ್ ಆರೋಪಿಸಿದರು. “ಮತ್ತು ಆಯಾ ಚುನಾವಣೆಗಳಿಗೆ ಮುನ್ನ ಮಾತ್ರ ಹಣ ಹಾಕುವುದು ಸರಿಯಲ್ಲ.

ಗೃಹಲಕ್ಷ್ಮಿ ಹಣ

ಇದನ್ನೂ ಓದಿ: 7 ಲಕ್ಷಕ್ಕೂ ಹೆಚ್ಚು ಕರ್ನಾಟಕ ರೈತರ ಪಿಎಂ ಕಿಸಾನ್ ಹಣ ರದ್ದು! ಇಲ್ಲಿದೆ ಪಟ್ಟಿ

ಮೂರು ಉಪಚುನಾವಣೆ ಬಂದಾಗ, ಆ ಮೂರು ಕ್ಷೇತ್ರಗಳಿಗೆ ಮಾತ್ರ ನಾಲ್ಕು ತಿಂಗಳ ಹಣ ಹಾಕ್ತಾರೆ. ಈಗ ತಾ.ಪಂ, ಜಿ.ಪಂ ಚುನಾವಣೆಗಳ ತನಕ ಜನ ಕಾಯಬೇಕು,” ಎಂದರು.

“ಈ ಸರ್ಕಾರದಲ್ಲಿ ಹಿರಿಯ ಶಾಸಕರಿಗೆ ಸಹ ಅನುದಾನ ಸಿಗುತ್ತಿಲ್ಲ. ರಸ್ತೆ, ಚರಂಡಿ, ಆಸ್ಪತ್ರೆಗಳಲ್ಲಿ ವೈದ್ಯರ ವೇತನ ಕೊಡಲಾಗುತ್ತಿಲ್ಲ. ಶಾಸಕರುಗಳು ಜನರ ಮುಂದೆ ತಲೆ ಎತ್ತಿ ನಿಲ್ಲೋ ಸಾಧ್ಯವೇ ಇಲ್ಲ,” ಎಂದು ನಿಖಿಲ್ ರಾಜ್ಯದ ಆಡಳಿತದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಉಚಿತ ಹೊಲಿಗೆ ಯಂತ್ರಕ್ಕೆ 30 ಜೂನ್ ಕೊನೆ, ನಾಳೆ ಸಂಜೆ ತನಕ ಅರ್ಜಿ ಅವಕಾಶ

ನಿಖಿಲ್ ಕುಮಾರಸ್ವಾಮಿ

ಕಲ್ಯಾಣ ಕರ್ನಾಟಕ ಸೇರಿದಂತೆ ಹಲವೆಡೆ ಜೆಡಿಎಸ್ ಬಲಿಷ್ಠವಾಗಿದೆ ಎಂದ ನಿಖಿಲ್, “ಇದು ನಿರ್ದಿಷ್ಟ ಭಾಗದ ಪಕ್ಷವಲ್ಲ, ರಾಜ್ಯದ ಏಳು ಕೋಟಿ ಕನ್ನಡಿಗರ ಆಶೀರ್ವಾದವಿದೆ. ನಾವು ಹೋರಾಟದಿಂದ ಬಂದ ಪಕ್ಷ. ಹಾಗೆ ಮುಂದುವರೆಯುತ್ತೇವೆ,” ಎಂದು ಹೇಳಿದರು.

1996-97ರಲ್ಲಿ ಮಾಜಿ ಪ್ರಧಾನಿ ದೇವೇಗೌಡರು ನಾರಾಯಣಪುರ ಕಾಲ್ವೆ ನಿರ್ಮಾಣದ ಮೂಲಕ 1.14 ಲಕ್ಷ ಹೆಕ್ಟೇರ್ ಕೃಷಿಭೂಮಿಗೆ ನೀರಾವರಿ ಒದಗಿಸಿದ ಹೆಮ್ಮೆ ನೆನಪಿಸಿಕೊಂಡ ನಿಖಿಲ್, “ನಮ್ಮ ಪಕ್ಷದ ಹಿನ್ನೆಲೆ ಹೋರಾಟವಾಗಿದೆ. ಅದನ್ನು ನಾವು ಮುಂದುವರಿಸುತ್ತೇವೆ” ಎಂದರು.

ಇದನ್ನೂ ಓದಿ: ಗೃಹಲಕ್ಷ್ಮಿ ಹಣದ ನಿರೀಕ್ಷೆಯ ಕರ್ನಾಟಕ ಗೃಹಲಕ್ಷ್ಮಿಯರಿಗೆ ಇಲ್ಲಿದೆ ಬಿಗ್ ಅಪ್ಡೇಟ್!

ಸ್ಥಳೀಯ ಚುನಾವಣೆ ವಿಚಾರವಾಗಿ, “ಬಿಜೆಪಿ–ಜೆಡಿಎಸ್ ಮೈತ್ರಿಯ ಬಗ್ಗೆ ಈ ಹಂತದಲ್ಲಿ ನಿಖರ ನಿರ್ಧಾರವಿಲ್ಲ. ಸ್ಥಳೀಯ ಚುನಾವಣೆಗಳು ಕಾರ್ಯಕರ್ತರ ಮೇಲೆ ಅವಲಂಬಿತವಾಗಿವೆ. ಡಿಸೆಂಬರ್‌ನಲ್ಲಿ ಚುನಾವಣೆ ಬರುವ ಸಾಧ್ಯತೆ ಇದೆ, ಆದರೆ ನಿಶ್ಚಿತ ನಿರ್ಧಾರ ತೆಗೆದುಕೊಂಡಿಲ್ಲ,” ಎಂದು ನಿಖಿಲ್ ಹೇಳಿದರು.

Nikhil Slams DK Shivakumar Statement on Gruha Lakshi Scheme

English Summary

Related Stories