Bengaluru Rains: ಬೆಂಗಳೂರು ಮಳೆಗೆ ರಸ್ತೆಗಳು ಜಲಾವೃತ, ಮನೆಗಳಿಗೆ ನೀರು, ನಗರ ಜೀವನ ಅಸ್ತವ್ಯಸ್ತ
Bengaluru Rains: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸತತ ಎರಡನೇ ದಿನವೂ ಧಾರಾಕಾರ ಮಳೆ ಸುರಿದಿದೆ. ಈ ಮೂಲಕ ನಗರ ಜೀವನ ಅಸ್ತವ್ಯಸ್ತವಾಗಿದೆ.
ಬೆಂಗಳೂರು (Bengaluru): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸತತ ಎರಡನೇ ದಿನವೂ ಧಾರಾಕಾರ ಮಳೆ (Bengaluru Rains) ಸುರಿದಿದೆ. ಈ ಮೂಲಕ ನಗರ ಜೀವನ ಅಸ್ತವ್ಯಸ್ತವಾಗಿದೆ. ಈಶಾನ್ಯ ಮುಂಗಾರು ಆಗಮನ ಹಾಗೂ ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಕಡಿಮೆ ಒತ್ತಡದ ಪರಿಣಾಮ ವರುಣ ಅಬ್ಬರಿಸುತ್ತಿದ್ದಾನೆ.
ಬೆಂಗಳೂರಿನಾದ್ಯಂತ ಭಾನುವಾರ ರಾತ್ರಿಯಿಂದ ಮಂಗಳವಾರ ಬೆಳಗಿನ ಜಾವ ಸುರಿದ ಧಾರಾಕಾರ ಮಳೆಗೆ ಎಲ್ಲೆಂದರಲ್ಲಿ ರಸ್ತೆಯಲ್ಲಿ ಮೊಣಕಾಲು ಆಳದ ನೀರಿನಲ್ಲಿ ವಾಹನ ಸವಾರರು ಪರದಾಡಿದರು. ಹಲವೆಡೆ ದ್ವಿಚಕ್ರ ವಾಹನಗಳು ಕೆಟ್ಟು ನಿಂತಿದ್ದವು.
ಬೆಂಗಳೂರು ಮಳೆ ಅವಾಂತರ, ರಸ್ತೆಯಲ್ಲೇ ಸೊಳ್ಳೆ ಪರದೆ, ಸೀರೆ ಹಾಕಿ ಮೀನು ಹಿಡಿದ ಜನರು
ನಗರದ ಕೆಂಗೇರಿ, ಆರ್.ಆರ್.ನಗರ, ದಾಸರಹಳ್ಳಿ ಭಾಗದಲ್ಲಿ ಮನೆಗಳಿಗೆ ನೀರು ನುಗ್ಗಿ ಸ್ಥಳೀಯರು ಪರದಾಡಿದರು. ಮೈಸೂರು ರಸ್ತೆಯ ಬ್ಯಾಟರಾಯನಪುರದಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿ ಅಡುಗೆ ಮಾಡಲು ಆಗದೆ ಪರದಾಡುವಂತಾಯಿತು.
ಮೈಸೂರು ರಸ್ತೆಯಲ್ಲಿರುವ (Mysore Road) ಪುರಾತನ ಗಾಳಿ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಮಳೆ ನೀರು ನುಗ್ಗಿದೆ. ದೇವಸ್ಥಾನದ ಮುಂಭಾಗದ ಮುಖ್ಯರಸ್ತೆಯಲ್ಲಿ ನೀರು ನಿಂತಿದ್ದರಿಂದ ವಾಹನ ಸವಾರರು ಪರದಾಡಿದರು. ಪ್ರತಿ ಬಾರಿ ಮಳೆ ಬಂದಾಗ ರಾಜ ಕಾಲುವೆಯಿಂದ ನೀರು ದೇವಸ್ಥಾನಕ್ಕೆ ಹರಿಯುತ್ತದೆ ಎಂದು ಸ್ಥಳೀಯರು ಆರೋಪಿಸಿದರು.
ಬೆಂಗಳೂರು: ಚೆನ್ನಪಟ್ಟಣದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸಿಪಿ ಯೋಗೇಶ್ವರ್ ಸ್ಪರ್ಧೆ
ಜೆಜೆಆರ್ ನಗರದ ವಿಎಸ್ ಗಾರ್ಡನ್‌ನಲ್ಲಿರುವ ರಾಜಾ ಕಾಲುವೆಯ ಗೋಡೆ ಕುಸಿದು 10ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿವೆ. ಇದರಿಂದ ಸ್ಥಳೀಯ ನಿವಾಸಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ಪ್ರತಿ ಬಾರಿ ಮಳೆ ಬಂದಾಗಲೂ ಇದೇ ರೀತಿ ತೊಂದರೆ ಅನುಭವಿಸುವಂತಾಗಿದೆ ಎಂದು ಜನರು ದೂರಿದರು.
ಹೆಬ್ಬಾಳ (Hebbal) ಸುತ್ತಮುತ್ತಲಿನ ರಸ್ತೆಗಳಲ್ಲಿ ಮಳೆ ನೀರು ಮತ್ತು ಟ್ರಾಫಿಕ್ ಜಾಮ್‌ನಿಂದ ವಾಹನ ಸವಾರರು ತೀವ್ರ ತೊಂದರೆ ಅನುಭವಿಸಿದರು.
Roads are flooded due to Bengaluru rain, houses are waterlogged