Bangalore News

ಬೆಂಗಳೂರು ಯಲಹಂಕ ಮೇಲ್ಸೇತುವೆ ಮೇಲೆ ಸರಣಿ ಅಪಘಾತ, ಇಬ್ಬರು ಸಾವು

ಬೆಂಗಳೂರು (Bengaluru): ಯಲಹಂಕ ಮೇಲ್ಸೇತುವೆ (Yelahanka) ಮೇಲೆ ಸರಣಿ ಅಪಘಾತ ನಡೆದಿದ್ದು ಇಬ್ಬರು ಸಾವನ್ನಪ್ಪಿರುವ ಧಾರುಣ ಘಟನೆ ನಡೆದಿದೆ. ಅಪಘಾತದ (Accident) ಘಟನೆ ವಿಚಿತ್ರವಾಗಿದ್ದು ಮೊದಲು ಇನ್ನೋವಾ ಕಾರು ಹಾಗೂ ಲಾರಿಗೆ ಡಿಕ್ಕಿಯಾಗಿತ್ತು.

ಮೊದಲು ಲಾರಿ ಕಾರಿಗೆ ಡಿಕ್ಕಿ ಹೊಡೆದಿತ್ತು, ನಂತರ ಇಬ್ಬರು ಚಾಲಕರು ಕೆಳಗೆ ಇಳಿದು ವಾದ ಮತ್ತು ಜಗಳಕ್ಕೆ ಮುಂದಾಗಿದ್ದಾರೆ, ನಡುರಸ್ತೆಯಲ್ಲೇ ನಿಂತು ವಾದಕ್ಕಿಳಿದ ಸಂದರ್ಭ ವೇಗವಾಗಿ ಬಂದ ಬಿಎಂಟಿಸಿ ಬಸ್ ಕೂಡ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ, ಬಸ್ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದು ಲಾರಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಬೆಂಗಳೂರು ಯಲಹಂಕ ಮೇಲ್ಸೇತುವೆ ಮೇಲೆ ಸರಣಿ ಅಪಘಾತ

ಓರ್ವ ಸ್ಥಳದಲ್ಲೇ ಸಾವನ್ನಪ್ಪಿದರೆ ಇನ್ನೊಬ್ಬ ವ್ಯಕ್ತಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಘಟನೆಯಲ್ಲಿ ಬಸ್ ಚಾಲಕನಿಗೂ ಗಾಯಗಳಾಗಿವೆ ಎನ್ನಲಾಗಿದೆ. ಯಲಹಂಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಪ್ರಕರಣ ದಾಖಲಿಸಿದ್ದಾರೆ, ಬಿಬಿಎಂಪಿ ಅಧಿಕಾರಿಗಳು ಸಹ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ.

ಸಾಮಾನ್ಯವಾಗಿ ಏರ್ಪೋರ್ಟ್ ರಸ್ತೆ ಆದ್ದರಿಂದ ವೇಗವಾಗಿ ವಾಹನಗಳು ಸಾಗುತ್ತಿರುತ್ತವೆ, ಕಾರು ಹಾಗೂ ಲಾರಿ ಚಾಲಕ ನಡುರಸ್ತೆಯಲ್ಲಿಯೇ ನಿಂತು ಜಗಳಕ್ಕೆ ನಿಂತು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.

Serial Accident on Bengaluru Yelahanka Flyover

Our Whatsapp Channel is Live Now 👇

Whatsapp Channel

Related Stories