ಆಟೋ ಚಾಲಕನ ಕಾಲಿಗೆ ಬಿದ್ದು ಕ್ಷಮೆ ಕೇಳಿದ ಚಪ್ಪಲಿಯಲ್ಲಿ ಹೊಡೆದ ಮಹಿಳೆ

ಆಟೋ ಚಾಲಕನಿಗೆ ಚಪ್ಪಲಿಯಿಂದ ಹೊಡೆದ ಪ್ರಕರಣದಲ್ಲಿ ಬೆಳ್ಳಂದೂರು ಪೊಲೀಸ್‌ ಠಾಣೆ ಸಿಬ್ಬಂದಿ ಮಹಿಳೆಯನ್ನು ಬಂಧಿಸಿ, ವಿಚಾರಣೆ ನಡೆಸಿದ ನಂತರ ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ ಎಂದು ಮಾಹಿತಿ ನೀಡಿದೆ.

ಬೆಂಗಳೂರು (Bengaluru): ಕನ್ನಡಪರ ಸಂಘಟನೆಗಳ ಒತ್ತಡದ ಹಿನ್ನೆಲೆಯಲ್ಲಿ, ಬೆಳ್ಳಂದೂರು ಪೊಲೀಸರು ಆಟೋ ಚಾಲಕನಿಗೆ (Auto Driver) ಚಪ್ಪಲಿಯಿಂದ ಹೊಡೆದ ಮಹಿಳೆ ಫಂಕೂರಿ ಮಿಶ್ರಾವನ್ನು ಭಾನುವಾರ ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ವಿಚಾರಣೆಯ ಬಳಿಕ ಠಾಣಾ ಜಾಮೀನಿನ ಮೇಲೆ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಘಟನೆ ಶನಿವಾರ ಮಧ್ಯಾಹ್ನ ಬೆಳ್ಳಂದೂರು ಸೆಂಟ್ರಲ್ ಮಾಲ್ ಬಳಿ ನಡೆದಿದೆ. ಬಿಹಾರ ಮೂಲದ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಫಂಕೂರಿ ಮಿಶ್ರಾ (Fankuri Mishra), ಗರ್ಭಿಣಿಯಾಗಿರುವ ಅವರು ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದ ವೇಳೆ, ಲೋಕೇಶ್ ಎಂಬ ಆಟೋ ಚಾಲಕ ಅವರ ವಾಹನಕ್ಕೆ ಢಿಕ್ಕಿ ಹೊಡೆದಿದ್ದಾನೆ ಎಂಬ ಆರೋಪವಿದೆ. ಈ ಸಂಬಂಧ ಕೋಪಗೊಂಡ ಫಂಕೂರಿ, ಸ್ಥಳದಲ್ಲೇ ಚಪ್ಪಲಿಯಿಂದ ಲೊಕೇಶ್‌ಗೆ ಹೊಡೆದು ದರ್ಪ ಮೆರೆದಿದ್ದರು.

ಇದನ್ನೂ ಓದಿ: ಬೆಂಗಳೂರು ಆಸ್ತಿ ಮಾಲೀಕರಿಗೆ ಸಿಹಿ ಸುದ್ದಿ! ಸೈಟ್‌ಗಳಿಗೆ ಎ ಖಾತಾ ನೀಡುವ ಪ್ರಸ್ತಾವನೆ

ಈ ವಿಡಿಯೋವನ್ನು ಸಾರ್ವಜನಿಕರು ಮೊಬೈಲ್‌ ಮೂಲಕ ಸೆರೆಹಿಡಿದು ಸೋಶಿಯಲ್ ಮೀಡಿಯಾದಲ್ಲಿ (social media) ಹಂಚಿದ ಕಾರಣ ಘಟನೆಗೆ ಹೆಚ್ಚಿನ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೆ, ವಿಡಿಯೋದಲ್ಲಿ ಫಂಕೂರಿಯ ಬೈಕ್‌ ನೋಂದಣಿ ಸಂಖ್ಯೆ ಆಧಾರವಾಗಿ ಪೊಲೀಸರು ಅವರನ್ನು ಪತ್ತೆಹಚ್ಚಿದ್ದಾರೆ. ಬಳಿಕ ನೋಟಿಸ್‌ ನೀಡಲಾಗಿದ್ದು, ಭಾನುವಾರ ಅವರು ಠಾಣೆಗೆ ಹಾಜರಾಗಿದ್ದಾರೆ.

ಪೊಲೀಸ್‌ ವಿಚಾರಣೆಯ ವೇಳೆ ಫಂಕೂರಿ, “ಆಟೋ ಚಾಲಕ ನನ್ನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ನಂತರ ಜಾಸ್ತಿ ಮಾತಾಡಿದ. ನಾನು ಕೋಪದಲ್ಲಿ ಚಪ್ಪಲಿಯಿಂದ ಹೊಡೆದಿದ್ದೇನೆ” ಎಂದು ಹೇಳಿಕೆ ನೀಡಿದ್ದಾರೆ. ಪೊಲೀಸರು ಈ ಹೇಳಿಕೆಯನ್ನು ದಾಖಲಿಸಿಕೊಂಡು ಠಾಣಾ ಜಾಮೀನಿನ ಮೇಲೆ ಅವರನ್ನು ಬಿಡುಗಡೆ ಮಾಡಿದ್ದಾರೆ.

ಇದನ್ನೂ ಓದಿ: ಗೃಹಲಕ್ಷ್ಮಿ ಹಣ ಬಿಡುಗಡೆ! ಏಪ್ರಿಲ್, ಮೇ ತಿಂಗಳ ಹಣ ಖಾತೆಗೆ: ಲಕ್ಷ್ಮೀ ಹೆಬ್ಬಾಳ್ಕರ್

ಘಟನೆ ಬಳಿಕ, ಫಂಕೂರಿ ಪತಿ ಜತೆ ಪೊಲೀಸ್‌ ಠಾಣೆಗೆ ಬಂದು, ಲೊಕೇಶ್‌ ಅವರನ್ನು ನೋಡಿ ಕ್ಷಮೆ ಕೇಳಿದ್ದು, ಕಾಲಿಗೆ ಬಿದ್ದಿದ್ದಾರೆ. “ಈ ತಪ್ಪಿಗೆ ವಿಷಾದಿಸುತ್ತೇವೆ. ಮತ್ತೆ ಇಂತಹ ಕೆಲಸ ಮಾಡುವುದಿಲ್ಲ. ಎಲ್ಲ ಕನ್ನಡಿಗರಿಗೂ ಕ್ಷಮೆ ಕೇಳುತ್ತೇವೆ” ಎಂದು ಅವರು ತಿಳಿಸಿದ್ದಾರೆ. ಈ ಕ್ಷಮೆ ಕೇಳುವ ದೃಶ್ಯ ಕೂಡ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇನ್ನು, ಚಪ್ಪಲಿಯಿಂದ ಹೊಡೆಯುತ್ತಿರುವ ದೃಶ್ಯ ಎಲ್ಲೆಡೆ ವೈರಲ್ ಆಗಿದ್ದು, ಘಟನೆಗೆ ಸಾರ್ವಜನಿಕ ಆಕ್ರೋಶವೂ ವ್ಯಕ್ತವಾಗಿತ್ತು. ಈ ಕುರಿತು ಬೆಳ್ಳಂದೂರು ಠಾಣೆಯಲ್ಲಿ ಅಧಿಕೃತ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Slipper attack woman asked sorry touching feet

English Summary

Related Stories