2025-26ರ ಸಾಲಿನ ಕುರಿ ಮತ್ತು ಮೇಕೆ ಸಾಕಾಣಿಕೆಗೆ ₹50,000 ಸಬ್ಸಿಡಿ ಸಾಲ! ಅರ್ಜಿ ಹಾಕಿ - Subsidy Loan

2025-26ರ ಸಾಲಿಗೆ ಕುರಿ ಮತ್ತು ಮೇಕೆ ಸಾಕಾಣಿಕೆಗೆ ಶೇ.50 ಸಬ್ಸಿಡಿ ನೀಡಲು ಸಮಾಜ ಕಲ್ಯಾಣ ಇಲಾಖೆಯಡಿ ಬರುವ ನಿಗಮಗಳಿಂದ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ.

  • ಕುರಿ ಸಾಕಾಣಿಕೆಗೆ ₹50,000 ಸಬ್ಸಿಡಿ
  • ಸಮಾಜ ಕಲ್ಯಾಣ ಇಲಾಖೆಯ ನಿಗಮಗಳಡಿ ಅರ್ಜಿ ಆಹ್ವಾನ
  • ಆರ್ಥಿಕವಾಗಿ ಹಿಂದುಳಿದವರಿಗೇ ಆದ್ಯತೆ

ಕೃಷಿಯ ಜೊತೆಗೆ ಉಪಕಸುಬಾಗಿ ಕುರಿ ಹಾಗೂ ಮೇಕೆ ಸಾಕಾಣಿಕೆ (Sheep and Goat Farming) ಮಾಡುವ ರೈತರಿಗೆ ರಾಜ್ಯ ಸರ್ಕಾರದಿಂದ ದೊಡ್ಡ ಅವಕಾಶ. ಸಮಾಜ ಕಲ್ಯಾಣ ಇಲಾಖೆಯಡಿ ಬರುವ ಹಲವು ನಿಗಮಗಳು, 2025-26ನೇ ಸಾಲಿನಲ್ಲಿ ಶೇ.50 ಸಬ್ಸಿಡಿ ಯೋಜನೆಗೆ ಅರ್ಜಿಗಳನ್ನು ಆಹ್ವಾನಿಸಿವೆ.

ಈ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಒಟ್ಟು ₹1 ಲಕ್ಷ ವೆಚ್ಚದ ಘಟಕ ನೀಡಲಾಗುತ್ತಿದ್ದು, ಅದರಲ್ಲಿ ₹50,000 ಸಬ್ಸಿಡಿ, ಉಳಿದ ₹50,000 ಕ್ಕೆ ಶೇ.4 ಬಡ್ಡಿದರದಲ್ಲಿ ಬ್ಯಾಂಕ್ ಸಾಲವನ್ನು (Bank Loan) ಒದಗಿಸಲಾಗುತ್ತದೆ. ಆದಾಯವನ್ನು ಹೆಚ್ಚಿಸಲು ಬಯಸುವ ಗ್ರಾಮೀಣ ಕುಟುಂಬಗಳಿಗೆ ಇದು ಬಹುಮುಖ್ಯ ಅವಕಾಶ.

ಇದನ್ನೂ ಓದಿ: ಪಿಯುಸಿ ಪಾಸಾದವರಿಗೆ ₹20 ಸಾವಿರ ಪ್ರೋತ್ಸಾಹ ಧನ! ಈ ಕೂಡಲೇ ಅರ್ಜಿ ಸಲ್ಲಿಸಿ

ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಗಳಾಗಿರಬೇಕು ಹಾಗೂ ಸಮಾಜ ಕಲ್ಯಾಣ ಇಲಾಖೆಯಡಿ ಬರುವ ನಿಗಮಗಳ ವರ್ಗಕ್ಕೆ ಸೇರಿರಬೇಕು. ಹಿಂದಿನ ವರ್ಷಗಳಲ್ಲಿ ಇದೇ ಯೋಜನೆಯ ಪ್ರಯೋಜನ ಪಡೆದವರು ಮತ್ತೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಆರ್ಥಿಕವಾಗಿ ಹಿಂದುಳಿದವರಿಗೆ ಮಾತ್ರ ಅವಕಾಶ ಇದೆ.

ಅಂಬೇಡ್ಕರ್ ಅಭಿವೃದ್ಧಿ ನಿಗಮ, ತಾಂಡಾ ಅಭಿವೃದ್ಧಿ ನಿಗಮ, ಆದಿಜಾಂಬವ ಅಭಿವೃದ್ಧಿ ನಿಗಮ, ಭೋವಿ ಅಭಿವೃದ್ಧಿ ನಿಗಮ, ಅಲೆಮಾರಿ ಮತ್ತು ಅರೆಅಲೆಮಾರಿ ಅಭಿವೃದ್ಧಿ ನಿಗಮ, ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ ಸೇರಿದಂತೆ ಹಲವು ನಿಗಮಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

Goat Farming Business

ಇದನ್ನೂ ಓದಿ: ಉಚಿತ ಬೋರ್‌ವೆಲ್, ಕೃಷಿ ಸಾಲ, ವ್ಯಾಪಾರ ಸಾಲ ಯೋಜನೆಗಳಿಗೆ ಅರ್ಜಿ ಆಹ್ವಾನ

ಅರ್ಜಿಯ ಕೊನೆಯ ದಿನಾಂಕ ಸೆಪ್ಟೆಂಬರ್ 10, 2025. ಅರ್ಜಿ ಸಲ್ಲಿಸಲು Seva Sindhu ಪೋರ್ಟಲ್ ಮೂಲಕ ಲಾಗಿನ್ ಆಗಿ, ಅಗತ್ಯ ದಾಖಲೆಗಳು — ಆಧಾರ್ ಕಾರ್ಡ್, ಫೋಟೋ, ಬ್ಯಾಂಕ್ ಪಾಸ್ ಬುಕ್, ಜಾತಿ-ಆದಾಯ ಪ್ರಮಾಣ ಪತ್ರ, ರೇಷನ್ ಕಾರ್ಡ್, ಮೊಬೈಲ್ ನಂಬರ್ — ಸಿದ್ಧಪಡಿಸಬೇಕು.

ಅರ್ಜಿ ಸಲ್ಲಿಸಿದ ಬಳಿಕ ದಾಖಲಾತಿಗಳನ್ನು ಕಾಲೇಜು ಅಥವಾ ಸಂಬಂಧಿಸಿದ ಕಚೇರಿಯಿಂದ ದೃಢೀಕರಿಸಿ, ಸಂಬಂಧಪಟ್ಟ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ https://swdcorp.karnataka.gov.in/ADCLPortal/schemedetail/KMS ಭೇಟಿನೀಡಿ.

Subsidy Loan for Sheep Farming, Applications Open

English Summary▼

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories