ಬೆಂಗಳೂರು: ತಾಯಿಯ ಆಸ್ಪತ್ರೆ ಖರ್ಚಿಗೆ ಕಳ್ಳತನ ಮಾಡುತ್ತಿದ್ದ ಕಳ್ಳನ ಬಂಧನ
ಬೆಂಗಳೂರು ಬಾಣಸವಾಡಿಯಲ್ಲಿ (Banasawadi) ಪತಿಯನ್ನು ಆಸ್ಪತ್ರೆಗೆ ಕರೆದೊಯ್ದ ಮಹಿಳೆಯೊಬ್ಬರು ತಮ್ಮ ಚಿನ್ನಾಭರಣಗಳನ್ನು ಕಾರಿನಲ್ಲಿಟ್ಟು ಹೋಗಿದ್ದರು, ಆರೋಪಿಗಳು ಆ ಹಣವನ್ನು ಕದ್ದೊಯ್ದಿದ್ದಾರೆ.
ಬೆಂಗಳೂರು, ಕೃಷ್ಣರಾಜಪುರ (Bengaluru): ಕೆಲವರು ಒಳ್ಳೆಯ ಕೆಲಸಕ್ಕಾಗಿ ಕೆಟ್ಟ ಹಾದಿ ತುಳಿಯುತ್ತಾರೆ. ತಾಯಿಯ ಚಿಕಿತ್ಸಾ ವೆಚ್ಚಕ್ಕಾಗಿ ಕಳ್ಳತನ ಮಾಡುತ್ತಿದ್ದ ಕಳ್ಳ ಸಿಕ್ಕಿಬಿದ್ದಿದ್ದಾನೆ ಆರೋಪಿ ಮೊಹಮ್ಮದ್ ವಾಸಿಫ್ ಆಗಿದ್ದು, ಆತನಿಂದ 144 ಗ್ರಾಂ ಚಿನ್ನಾಭರಣ ಹಾಗೂ 13 ಲಕ್ಷ ರೂ.ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಸ್ಕೇಲ್ ಬಳಸಿ ನಿಲ್ಲಿಸಿದ ಕಾರುಗಳ ಬಾಗಿಲು ತೆರೆದು ಬೆಲೆಬಾಳುವ ವಸ್ತುಗಳನ್ನು ಕದಿಯುತ್ತಿದ್ದರು. ಬೆಂಗಳೂರು ಬಾಣಸವಾಡಿಯಲ್ಲಿ (Banasawadi) ಪತಿಯನ್ನು ಆಸ್ಪತ್ರೆಗೆ ಕರೆದೊಯ್ದ ಮಹಿಳೆಯೊಬ್ಬರು ತಮ್ಮ ಚಿನ್ನಾಭರಣಗಳನ್ನು ಕಾರಿನಲ್ಲಿಟ್ಟು ಹೋಗಿದ್ದರು, ಆರೋಪಿಗಳು ಆ ಹಣವನ್ನು ಕದ್ದೊಯ್ದಿದ್ದಾರೆ.
ಬಾಣಸವಾಡಿ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಗಳು ಎಲ್ಲೆಲ್ಲಿ ಕಳ್ಳತನ ಮಾಡಿದ್ದಾರೆ ಎಂಬ ವಿವರವನ್ನು ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ.
ತಾಯಿಯ ಆರೋಗ್ಯ ಸರಿಯಿಲ್ಲದ ಕಾರಣ ಆಕೆಗೆ ಉತ್ತಮ ಚಿಕಿತ್ಸೆ ಕೊಡಿಸಲು ಹೆಚ್ಚಿನ ಹಣದ ಅವಶ್ಯಕತೆ ಇದೆ, ಹೀಗಾಗಿ ಕಳ್ಳತನ ಮಾಡುತ್ತಿದ್ದದ್ದೆ ಎಂದು ಆತ ಸ್ಟೋರಿ ಹೇಳಿದ್ದಾನೆ.
The thief who was stealing for mother’s hospital expenses was arrested in Bengaluru