Bangalore NewsKarnataka News
ಕೋಲಾರ: ಮಣ್ಣು ತೆಗೆಯುತ್ತಿದ್ದ ವೇಳೆ ಕಲ್ಲು ಬಿದ್ದು ಟ್ರ್ಯಾಕ್ಟರ್ ಚಾಲಕ ಸಾವು
ಕೋಲಾರ (Kolar): ಗುಡ್ಡದಿಂದ ಮಣ್ಣು ತೆಗೆಯುತ್ತಿದ್ದ ವೇಳೆ ಕಲ್ಲುಬಂಡೆ ಬಿದ್ದು ಟ್ರ್ಯಾಕ್ಟರ್ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಅರಭಿ ಕೊತ್ತನೂರು ಗ್ರಾಮದ ಕಲ್ಲುಗಣಿಯಲ್ಲಿ ಭಾನುವಾರ ನಡೆದಿದೆ.
ಗ್ರಾಮದ ನಾಗರಾಜ್ (38) ಎಂಬ ಟ್ರ್ಯಾಕ್ಟರ್ ಚಾಲಕ 1 ಜೆಸಿಬಿ ಹಾಗೂ 2 ಟ್ರ್ಯಾಕ್ಟರ್ ಸಹಾಯದಿಂದ ಮಣ್ಣು ಸರಿಸಲು ಹೋಗಿದ್ದಾನೆ. ಜೆಸಿಬಿ ಬಳಸಿ ಮಣ್ಣು ತೆಗೆಯುತ್ತಿದ್ದ ವೇಳೆ ಟ್ರ್ಯಾಕ್ಟರ್ ಮೇಲೆ ಕಲ್ಲುಬಂಡೆ ಬಿದ್ದಿದೆ.
ನಾಗರಾಜ್ ಬಂಡೆಯಡಿ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ. ವಿಷಯ ತಿಳಿದ ತಕ್ಷಣ ಕೋಲಾರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಬಂಡೆಯಡಿ ಸಿಲುಕಿದ್ದ ನಾಗರಾಜ್ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಜೆಸಿಬಿ ಹಾಗೂ ಟ್ರ್ಯಾಕ್ಟರ್ ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Tractor driver dies after falling stone while digging soil in Kolar
English Summary▼