ಕರ್ನಾಟಕ ರೈತರಿಗೆ ಇನ್ನೊಂದು ಬಿಗ್ ಅಪ್ಡೇಟ್ ಕೊಟ್ಟ ರಾಜ್ಯ ಸರ್ಕಾರ
ರಾಜ್ಯದಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ಹಗಲು 7 ಗಂಟೆಗಳ ಕಾಲ 3 ಫೇಸ್ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಬಡಾವಣೆಯ ಕೃಷಿ ಫೀಡರ್‌ಗಳಿಗೆ ನಿರಂತರ ವಿದ್ಯುತ್ ಪೂರೈಕೆಯ ಬಗ್ಗೆ ಇಂಧನ ಸಚಿವ ಕೆ.ಜೆ. ಜಾರ್ಜ್ ಸ್ಪಷ್ಟನೆ ನೀಡಿದರು.
- ಹಗಲಿನ 7 ಗಂಟೆಗಳ 3 ಫೇಸ್ ವಿದ್ಯುತ್ ಪೂರೈಕೆ
- ಬೇಡಿಕೆಯಂತೆ ಮುಕ್ತ ಮಾರುಕಟ್ಟೆಯಿಂದ ವಿದ್ಯುತ್ ಖರೀದಿ
- ಬ್ಯಾಂಕಿಂಗ್ ವ್ಯವಸ್ಥೆಯ ಮೂಲಕ ವಿದ್ಯುತ್ ಕೊರತೆ ನಿವಾರಣೆ
ಬೆಂಗಳೂರು (Bengaluru): ರಾಜ್ಯದಲ್ಲಿ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ (Agriculture Pump Set) 7 ಗಂಟೆಗಳ ಕಾಲ ನಿರಂತರ 3 ಫೇಸ್ ವಿದ್ಯುತ್ (Power Supply) ನೀಡಲಾಗುತ್ತಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.
ಅರಣ್ಯ ಪ್ರದೇಶದ ಮೂಲಕ ಹಾದು ಹೋಗುವ ಕೃಷಿ ಫೀಡರ್‌ಗಳು ಕೂಡಾ ಈ ಯೋಜನೆಯಡಿಯಲ್ಲಿ ಲಾಭ ಪಡೆಯಲಿವೆ. ಆದರೆ, ಅನಿವಾರ್ಯ ಕಾರಣಗಳಿಂದಾಗಿ ವಿದ್ಯುತ್ ಸರಬರಾಜಿನಲ್ಲಿ ತಾತ್ಕಾಲಿಕ ಅಡಚಣೆ ಉಂಟಾದರೆ ಮಾತ್ರ ಸಣ್ಣ ಪ್ರಮಾಣದ ಕಡಿತ ಸಾಧ್ಯವಿರುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಕರ್ನಾಟಕದ ಈ ಸ್ಥಳಗಳಲ್ಲಿ ಇನ್ಮುಂದೆ ಸೋಪು, ಶ್ಯಾಂಪೂ ಮಾರಾಟ ನಿಷೇಧ!
ರಾಜ್ಯದಲ್ಲಿ ಈಗ ಯಾವುದೇ ವಿದ್ಯುತ್ ಕೊರತೆಯ ಸಮಸ್ಯೆ ಇಲ್ಲ. 2024-25ರ ಅವಧಿಯಲ್ಲಿ ರಾಜ್ಯದ ವಿದ್ಯುತ್ ಬಳಕೆ 92,087 ಮೆಗಾ ಯುನಿಟ್ (Mega Unit) ಎಂದು ಅಂದಾಜಿಸಲಾಗಿದೆ.
ಇದರಲ್ಲಿ, ಏಪ್ರಿಲ್‌ನಿಂದ ಡಿಸೆಂಬರ್ ತನಕ ಸರಾಸರಿ 235 ಮೆಗಾ ವ್ಯಾಟ್ (Mega Watt) ಯುನಿಟ್ ದಿನದಬಳಕೆ ಆಗಲಿದೆ. ಈಗಾಗಲೇ 18,365 ಮೆಗಾವ್ಯಾಟ್ ವಿದ್ಯುತ್ ಬೇಡಿಕೆ ಪೂರೈಸಲಾಗಿದ್ದು, ಮುಂದಿನ ದಿನಗಳಲ್ಲಿ ಇದು 19,000 ಮೆಗಾವ್ಯಾಟ್ ತಲುಪಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಇದನ್ನೂ ಓದಿ: ನಿಮ್ಮ ಬಿಪಿಎಲ್ ಕಾರ್ಡ್ ಆಕ್ಟಿವ್ ಇದ್ಯಾ? 20 ಲಕ್ಷ ರೇಷನ್ ಕಾರ್ಡ್ ಕ್ಯಾನ್ಸಲ್
ಬೇಡಿಕೆ ಹೆಚ್ಚಾದರೂ ಕರ್ನಾಟಕದಲ್ಲಿ (Karnataka) ವಿದ್ಯುತ್ ಪೂರೈಕೆ ವ್ಯತ್ಯಯವಾಗುವುದಿಲ್ಲ. ರಾಜ್ಯದಲ್ಲಿ ಉತ್ಪಾದನೆ ಕಡಿಮೆಯಾಗಿದರೆ, ಬ್ಯಾಂಕಿಂಗ್ ವ್ಯವಸ್ಥೆ (Banking System) ಮತ್ತು ಮುಕ್ತ ಮಾರುಕಟ್ಟೆಯಿಂದ (Open Market) ವಿದ್ಯುತ್ ಖರೀದಿ ಮಾಡಿ ಸರಬರಾಜು ನಿರ್ವಹಿಸಲಾಗುವುದು. ಈ ಬಾರಿ ರಾಜ್ಯದಲ್ಲಿ ಉತ್ತಮ ಮಳೆಯಾದ ಕಾರಣ, ಜಲಾಶಯಗಳ ನೀರಿನ ಲಭ್ಯತೆಯೂ ಸುಧಾರಿಸಿದೆ.
ಇದನ್ನೂ ಓದಿ: ಕರ್ನಾಟಕ ರೈತರ ಕೃಷಿ ಪಂಪ್ ಸೆಟ್‌ಗಳಿಗೆ ಉಚಿತ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಸೌಲಭ್ಯ!
ಬೇಸಿಗೆಯಲ್ಲಿ ಹೆಚ್ಚುವರಿ ವಿದ್ಯುತ್ ಬೇಡಿಕೆಗೆ ತಕ್ಕಂತೆ, ದಿನನಿತ್ಯದ ಅವಶ್ಯಕತೆಗಳನ್ನು ಪೂರೈಸಲು ವಿದ್ಯುತ್ ವಿನಿಮಯ ಕೇಂದ್ರಗಳಿಂದ (Power Exchange) ನಿರಂತರವಾಗಿ ವಿದ್ಯುತ್ ಖರೀದಿಸಲಾಗುತ್ತಿದೆ. ಈ ರೀತಿಯಾಗಿ ರಾಜ್ಯದ ಎಲ್ಲಾ ಪ್ರದೇಶಗಳಿಗೆ ನಿಯಮಿತ ವಿದ್ಯುತ್ ಪೂರೈಕೆಗೆ ಸರ್ಕಾರ ಬದ್ಧವಾಗಿದೆ ಎಂದು ಕೆ.ಜೆ. ಜಾರ್ಜ್ ಸ್ಪಷ್ಟಪಡಿಸಿದರು.
Uninterrupted 7-hour power supply for Karnataka farmers
Our Whatsapp Channel is Live Now 👇