ಕರ್ನಾಟಕದ ಈ ಸ್ಥಳಗಳಲ್ಲಿ ಇನ್ಮುಂದೆ ಸೋಪು, ಶ್ಯಾಂಪೂ ಮಾರಾಟ ನಿಷೇಧ!

ನದಿ, ಸರೋವರ, ಕಲ್ಯಾಣಿಗಳ ಮಾಲಿನ್ಯ ತಡೆಗಟ್ಟಲು ಅರಣ್ಯ ಇಲಾಖೆ ಹೊಸ ನಿರ್ಧಾರ. 500 ಮೀಟರ್ ವ್ಯಾಪ್ತಿಯಲ್ಲಿ ಸೋಪು, ಶ್ಯಾಂಪೂ ಮಾರಾಟ ನಿಷೇಧ. ಪ್ರವಾಸಿಗರು, ಭಕ್ತರು ನದಿ-ಸರೋವರಗಳಿಗೆ ಹಾನಿ ಮಾಡದಂತೆ ಕಟ್ಟುನಿಟ್ಟಿನ ಕ್ರಮ.

  • ನದಿ, ಸರೋವರಗಳ ವ್ಯಾಪ್ತಿಯಲ್ಲಿ ಸೋಪು, ಶ್ಯಾಂಪೂ ಮಾರಾಟ ನಿಷೇಧ
  • ನದಿ, ಸರೋವರಗಳಿಗೆ ಹಾನಿ ಮಾಡದಂತೆ ಕಟ್ಟು ನಿಟ್ಟಿನ ಕ್ರಮ
  • ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರೀಕನ ಜವಾಬ್ದಾರಿ

ಬೆಂಗಳೂರು (Bengaluru): ನಮ್ಮ ಭಾರತದಲ್ಲಿ ಪವಿತ್ರ ನದಿಗಳಿಗೆ (Karnataka Rivers) ದೊಡ್ಡ ಪ್ರಾಮುಖ್ಯತೆ ಇದೆ. ಕಾವೇರಿ (Kaveri), ತುಂಗಭದ್ರಾ, ನೇತ್ರಾವತಿ ನದಿಗಳ ಪುಣ್ಯ ಸ್ನಾನ ಮಾಡಿ ದೇವರ ದರ್ಶನ ಪಡೆಯುವ ಭಕ್ತರ ಸಂಖ್ಯೆ ಅಪಾರ.

ಆದರೆ, ಭಕ್ತರ ನಿರ್ಲಕ್ಷ್ಯ, ಪ್ರವಾಸಿಗರ ಬೇಜವಾಬ್ದಾರಿ ಕಾರಣದಿಂದ ಈ ನದಿಗಳು, ಸರೋವರಗಳು ಮಾಲಿನ್ಯವಾಗುತ್ತಿರುವುದು ದೊಡ್ಡ ಸಮಸ್ಯೆಯಾಗಿಬಿಟ್ಟಿದೆ. ಇದರ ವಿರುದ್ಧ ತೀವ್ರ ಕ್ರಮ ಕೈಗೊಳ್ಳಲು ಅರಣ್ಯ ಮತ್ತು ಪರಿಸರ ಇಲಾಖೆ ಮುಂದಾಗಿದೆ.

ಇದನ್ನೂ ಓದಿ: ನಿಮ್ಮ ಬಿಪಿಎಲ್ ಕಾರ್ಡ್ ಆಕ್ಟಿವ್ ಇದ್ಯಾ? 20 ಲಕ್ಷ ರೇಷನ್ ಕಾರ್ಡ್ ಕ್ಯಾನ್ಸಲ್

ಅರಣ್ಯ ಸಚಿವ ಈಶ್ವರ್ ಖಂಡ್ರೆ, ಪುಣ್ಯ ಕ್ಷೇತ್ರಗಳ ನದಿ, ಸರೋವರ, ಕಲ್ಯಾಣಿಗಳ ಶುಚಿತ್ವ ಕಾಪಾಡಲು ನದಿಗಳ ಸ್ನಾನಘಟ್ಟದಿಂದ 500 ಮೀಟರ್ ವ್ಯಾಪ್ತಿಯಲ್ಲಿ ಸೋಪು, ಶ್ಯಾಂಪೂ ಮಾರಾಟ ಸಂಪೂರ್ಣ ನಿಷೇಧಿಸುವಂತೆ (Soap and shampoo sales Ban) ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದರಿಂದ ನದಿಗಳ ನೀರಿನ ಗುಣಮಟ್ಟವನ್ನು ಉಳಿಸಬಹುದು ಮತ್ತು ಪರಿಸರ ಮಾಲಿನ್ಯವನ್ನು ಕಡಿಮೆಗೆ ತರಬಹುದು.

ಪವಿತ್ರ ನದಿಗಳು ದಿನದಿನಕ್ಕೂ ಮಾಲಿನ್ಯಗೊಳ್ಳುತ್ತಿರುವ ಪ್ರಮುಖ ಕಾರಣಗಳಲ್ಲೊಂದು ಶ್ಯಾಂಪೂ ಸ್ಯಾಚೆಟ್‌ಗಳು, ಸಣ್ಣ ಸೋಪುಗಳು (Soap and shampoo). ನದಿ ತೀರದ ಅಂಗಡಿಗಳಲ್ಲಿ ಸುಲಭವಾಗಿ ಸಿಗುವ ಈ ವಸ್ತುಗಳನ್ನು ಜನ ಸ್ನಾನಕ್ಕೆ ಬಳಸುವಾಗ, ಬಳಕೆ ನಂತರ ಅದನ್ನು ನೀರಿನಲ್ಲಿ ಅಥವಾ ದಂಡೆಯಲ್ಲಿ ಎಸೆದು ಹೋಗುತ್ತಾರೆ.

ಇದನ್ನೂ ಓದಿ: ಕರ್ನಾಟಕ ಅಂಗನವಾಡಿ ಹುದ್ದೆಗಳ ನೇಮಕಾತಿ, 8ನೇ ತರಗತಿ ಪಾಸಾದವರಿಗೂ ಅವಕಾಶ

river

ಇದರಿಂದ ಜಲಚರಗಳು ಸಾವನ್ನಪ್ಪುತ್ತವೆ, ನದಿ ನೀರು ಕುಡಿಯುವ ಜನ ಹಾಗೂ ಜಾನುವಾರುಗಳು ಆರೋಗ್ಯ ಸಮಸ್ಯೆ ಎದುರಿಸುತ್ತವೆ. ಹೀಗಾಗಿ, ನದಿಗಳ ಸಮೀಪ ಈ ರೀತಿಯ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ನೀಡಬಾರದು ಎಂಬುದು ಸರ್ಕಾರದ ನಿಲುವಾಗಿದೆ.

ಇದನ್ನೂ ಓದಿ: ಕರ್ನಾಟಕ ರೈತರ ಕೃಷಿ ಪಂಪ್ ಸೆಟ್‌ಗಳಿಗೆ ಉಚಿತ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಸೌಲಭ್ಯ!

ಈ ನಿರ್ಧಾರದ ಜೊತೆಗೆ ಮತ್ತೊಂದು ಮಹತ್ವದ ವಿಚಾರ, ಭಕ್ತರು, ಯಾತ್ರಾರ್ಥಿಗಳು ನದಿಗಳಲ್ಲಿ ಬಟ್ಟೆಗಳನ್ನು ತೊಳೆದು ವಿಸರ್ಜನೆ ಮಾಡುತ್ತಿರುವುದು. ಕೆಲವು ಪ್ರಸಿದ್ಧ ತೀರ್ಥ ಕ್ಷೇತ್ರಗಳಲ್ಲಿ ರಾಶಿ-ರಾಶಿ ಬಟ್ಟೆಗಳು ಹರಿದು ಬಿದ್ದಿರುವ ದೃಶ್ಯಗಳು ಸಾಮಾನ್ಯವಾಗಿವೆ. ಹೀಗಾಗಿ, ನದಿ ತೀರದಲ್ಲಿ ಬಟ್ಟೆಗಳನ್ನು ವಿಸರ್ಜನೆ ಮಾಡದಂತೆ ಕಟ್ಟುನಿಟ್ಟಿನ ಕ್ರಮ ಜಾರಿಗೆ ತರಲು ಅರಣ್ಯ ಇಲಾಖೆ ತೀರ್ಮಾನಿಸಿದೆ.

Dirty River

ಪ್ರಕೃತಿಯ ಸಂರಕ್ಷಣೆ ಕೇವಲ ಸರ್ಕಾರದ ಜವಾಬ್ದಾರಿ ಮಾತ್ರವಲ್ಲ, ಪ್ರತಿಯೊಬ್ಬ ನಾಗರೀಕನೂ ಅದರಲ್ಲಿ ಪಾತ್ರ ವಹಿಸಬೇಕು. ಪವಿತ್ರ ನದಿಗಳನ್ನು ಶುದ್ಧವಾಗಿಡಲು ಸರ್ಕಾರ ತೆಗೆದುಕೊಂಡಿರುವ ಈ ನಿರ್ಧಾರ ನಿಜಕ್ಕೂ ಶ್ಲಾಘನೀಯ.

ಇದನ್ನೂ ಓದಿ: ಕರ್ನಾಟಕ ಉಚಿತ ಬಸ್‌ ಯೋಜನೆಯಲ್ಲಿ ಮಹಿಳೆಯರಿಗೆ ಇನ್ನೊಂದು ಗುಡ್‌ನ್ಯೂಸ್‌

ನದಿ, ಸರೋವರಗಳನ್ನು ಮಾಲಿನ್ಯಗೊಳಿಸುವ ಜನರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಕುರಿತೂ ಸರ್ಕಾರ ಮುಂದಿನ ದಿನಗಳಲ್ಲಿ ಸೂಕ್ತ ಗೈಡ್‌ಲೈನ್ಸ್ ತರುವ ಸಾಧ್ಯವಿದೆ.

Soap and Shampoo Ban Near Rivers, Karnataka Govt Bold Move for Environment

English Summary▼

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories