Bengaluru NewsKarnataka News

ಕರ್ನಾಟಕ ರೈತರ ಮಕ್ಕಳಿಗೆ ಬಂಪರ್ ಸುದ್ದಿ! ತಿಂಗಳಿಗೆ 1,000 ರೂಪಾಯಿ ಶಿಷ್ಯವೇತನ

ಡಿಪ್ಲೊಮಾ ಪಶುಸಂಗೋಪನೆ ಪ್ರವೇಶಕ್ಕೆ ಅರ್ಜಿ ಪ್ರಕ್ರಿಯೆ ಆರಂಭವಾಗಿದೆ. ಅರ್ಹ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ 1,000 ಶಿಷ್ಯವೇತನ ಲಭ್ಯವಿದ್ದು, ರೈತರ ಮಕ್ಕಳಿಗೆ ಶೇ 50% ಮೀಸಲಾತಿ ಇರುತ್ತದೆ.

Publisher: Kannada News Today (Digital Media)

  • ಅರ್ಜಿ ಸಲ್ಲಿಸಲು ಕೊನೆ ದಿನಾಂಕ 31 ಜುಲೈ 2025
  • ಆಯ್ಕೆ ಪ್ರಕ್ರಿಯೆ SSLC ಅಂಕಗಳ (marks) ಆಧಾರದಲ್ಲಿ
  • ರಾಜ್ಯದ 5 ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಒಟ್ಟು 250 ಸೀಟುಗಳು

ಕರ್ನಾಟಕ ಪಶುವೈದ್ಯಕೀಯ ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ್ ವ್ಯಾಪ್ತಿಯಲ್ಲಿ 2025-26ನೇ ಶೈಕ್ಷಣಿಕ ಸಾಲಿನ ಪಶುಸಂಗೋಪನೆ ಡಿಪ್ಲೊಮಾ (Diploma in Veterinary) ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಈ ಕೋರ್ಸ್ ಎರಡು ವರ್ಷಗಳ ಅವಧಿಯದ್ದು.

ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು 01 ಜುಲೈ 2025 ರಿಂದ 31 ಜುಲೈ 2025ರೊಳಗೆ ವಿಶ್ವವಿದ್ಯಾಲಯದ ಅಧಿಕೃತ ಅನ್ಲೈನ್ ಪೋರ್ಟಲ್ (online portal) ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳನ್ನು ಸಿದ್ಧವಾಗಿಡಬೇಕು.

ಇದನ್ನೂ ಓದಿ: ಬೆಂಗಳೂರು ಆಸ್ತಿ ಮಾಲೀಕರೇ ಇಲ್ಲಿದೆ ಇ-ಖಾತಾಗೆ ಆನ್‌ಲೈನ್ ಅರ್ಜಿ ಮಾಹಿತಿ

ಅರ್ಹತಾ ಮಾನದಂಡಗಳು:

  • ಅಭ್ಯರ್ಥಿಯು SSLC ಪರೀಕ್ಷೆಯಲ್ಲಿ ಕನಿಷ್ಠ 45% (ಪ.ಜಾತಿ/ಪಂಗಡ/ಪ್ರವರ್ಗ-1 ಅಭ್ಯರ್ಥಿಗಳಿಗೆ 40%) ಅಂಕಗಳನ್ನು ಗಳಿಸಿರಬೇಕು.
  • 1ರಿಂದ 10ನೇ ತರಗತಿಯವರೆಗೆ ಗ್ರಾಮೀಣ ಪ್ರದೇಶದಲ್ಲಿ ವಿದ್ಯಾಭ್ಯಾಸ ಮಾಡಿರಬೇಕು.
  • ವಯೋಮಿತಿ: 31 ಜುಲೈ 2025ರ ತನಕ ಅಭ್ಯರ್ಥಿಯು 20 ವರ್ಷ ಮೀರಿರಬಾರದು.

ಕಾಲೇಜುಗಳ ಪಟ್ಟಿ ಹಾಗೂ ಸೀಟುಗಳ ವಿವರ:

ಕೊನೆಹಳ್ಳಿ – 50 ಸೀಟು
ಶಿಗ್ಗಾಂವ (ಕುನ್ನೂರು) – 50 ಸೀಟು
ಹಾಸನ (ಕೊರಮಂಗಲ ಕ್ರಾಸ್) – 50 ಸೀಟು
ಬರ್ಗಿ – 50 ಸೀಟು
ಡೊರ್ನಳ್ಳಿ – 50 ಸೀಟು

ಇದನ್ನೂ ಓದಿ: ಕರ್ನಾಟಕ ರೈತರಿಗೆ ಹಸು-ಕೋಳಿ-ಕುರಿ ಸಾಕಾಣಿಕೆ ಯೋಜನೆಗಳು! ಸಬ್ಸಿಡಿ ಮಾಹಿತಿ

Farmers Schemes

ಶಿಷ್ಯವೇತನ ಹಾಗೂ ಮೀಸಲಾತಿ:

ಆಯ್ಕೆಯಾದ ವಿದ್ಯಾರ್ಥಿಗಳಿಗೆ ಕೋರ್ಸ್ ಅವಧಿಯಲ್ಲಿ ಪ್ರತಿ ತಿಂಗಳು ರೂ 1,000 ಶಿಷ್ಯವೇತನ (monthly stipend) ನೀಡಲಾಗುತ್ತದೆ.
ಶೇ 50% ಸೀಟುಗಳು ಕೃಷಿಕ ಹಾಗೂ ಕೃಷಿಕ ಕಾರ್ಮಿಕರ ಮಕ್ಕಳಿಗೆ ಮೀಸಲಾಗಿರುತ್ತವೆ.

ಇದನ್ನೂ ಓದಿ: ಕರ್ನಾಟಕ ಸೇರಿ ವಿವಿಧ ರಾಜ್ಯಗಳಲ್ಲಿ ಜುಲೈ 5ರವರೆಗೆ ಭಾರೀ ಮಳೆ ಮುನ್ಸೂಚನೆ

ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು:

  1. ಆಧಾರ್ ಕಾರ್ಡ್
  2. ಪೋಟೋ
  3. SSLC ಅಂಕಪಟ್ಟಿ
  4. ಗ್ರಾಮೀಣ ಅಧ್ಯಯನ ಪ್ರಮಾಣ ಪತ್ರ
  5. ಕನ್ನಡ ಮಾಧ್ಯಮ ಪ್ರಮಾಣ ಪತ್ರ
  6. ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  7. ಕೃಷಿ ಪ್ರಮಾಣ ಪತ್ರ (Agriculture Certificate)

ಪ್ರವೇಶ ಕ್ರಮ:

ಅರ್ಹ ಅಭ್ಯರ್ಥಿಗಳಿಗೆ SSLC ಅಂಕಗಳು, ಸರ್ಕಾರಿ ಮೀಸಲಾತಿ ನಿಯಮಗಳು ಮತ್ತು ಮೆರಿಟ್ ಆಧಾರದ ಮೇಲೆ ಡಿಪ್ಲೊಮಾ ಕೋರ್ಸ್ ಪ್ರವೇಶ ನೀಡಲಾಗುತ್ತದೆ.

ಅಧಿಕೃತ ತಾಣ: https://kvafsu.edu.in/admission.html

Veterinary Diploma Admission 2025 Open in Karnataka

English Summary

Related Stories