ಬೆಂಗಳೂರು ಕೆಂಗೇರಿಯಲ್ಲಿದ್ದ ನಟ ವಿಷ್ಣುವರ್ಧನ್ ಸ್ಮಾರಕ ತೆರವು, ಅಭಿಮಾನಿಗಳ ಆಕ್ರೋಶ - Bengaluru Abhiman Studio
ಅಭಿಮಾನಿಗಳ ನೆನಪಿನ ಸ್ಮಾರಕವನ್ನು ರಾತ್ರೋರಾತ್ರಿ ತೆರವುಗೊಳಿಸಿದ ಘಟನೆ ವಿಷ್ಣುವರ್ಧನ್ ಅಭಿಮಾನಿಗಳಲ್ಲಿ ಭಾರಿ ಆಕ್ರೋಶ ಉಂಟುಮಾಡಿದೆ. ಹೈಕೋರ್ಟ್ ಸೂಚನೆ, ಸರ್ಕಾರ ಮತ್ತು ಸ್ಟುಡಿಯೋ ನಿರ್ವಹಣೆ ವಿರುದ್ಧ ಆಕ್ರೋಶ.
- ವಿಷ್ಣುವರ್ಧನ್ ಸ್ಮಾರಕ ತೆರವು ಅಭಿಮಾನಿಗಳ ಆಕ್ರೋಶಕ್ಕೆ ಕಾರಣ
- ಹೈಕೋರ್ಟ್ ಸೂಚನೆ ಮೇರೆಗೆ ರಾತ್ರೋರಾತ್ರಿ ತೆರವು
- ಅಭಿಮಾನ್ ಸ್ಟುಡಿಯೋ ಬಾಗಿಲಿಗೆ ಬೀಗ, ಪೊಲೀಸ್ ಬಂದೋಬಸ್ತ್
ಬೆಂಗಳೂರು ಹೊರವಲಯದ ಅಭಿಮಾನ್ ಸ್ಟುಡಿಯೋ (Bengaluru Abhiman Studio) ಪ್ರಾಂಗಣದಲ್ಲಿ ನಿರ್ಮಿಸಲಾಗಿದ್ದ ಸಾಹಸಸಿಂಹ ಡಾ. ವಿಷ್ಣುವರ್ಧನ್ ಸ್ಮಾರಕ (Actor Dr Vishnuvardhan memorial) ಈಗ ನೆಲಸಮವಾಗಿದೆ. ಹೈಕೋರ್ಟ್ ಸೂಚನೆಯಂತೆ ಅಧಿಕಾರಿಗಳು ರಾತ್ರೋರಾತ್ರಿ ಕಾರ್ಯಾಚರಣೆ ನಡೆಸಿ ಸ್ಮಾರಕವನ್ನು ತೆರವುಗೊಳಿಸಿದ್ದು, ವಿಷ್ಣು ಅಭಿಮಾನಿಗಳು ಇದನ್ನು ತೀವ್ರವಾಗಿ ಖಂಡಿಸಿದ್ದಾರೆ.
ಅಭಿಮಾನಿಗಳ ನೆನಪಿನಲ್ಲಿರುವ ಈ ಸ್ಥಳ, ದಿವಂಗತ ನಟ ಅಂಬರೀಶ್ ಇದ್ದಾಗಲೇ ವಿಶೇಷವಾಗಿತ್ತು. ವಿಷ್ಣುವರ್ಧನ್ ಪಾರ್ಥಿವ ಶರೀರಕ್ಕೆ ಇದೇ ಸ್ಥಳದಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ ಅಂತಿಮ ವಿಧಿ ನೆರವೇರಿಸಲಾಯಿತು. ನಂತರ ಅಭಿಮಾನಿಗಳೇ ತಮ್ಮ ಶ್ರದ್ಧೆಯಿಂದ ಸ್ಮಾರಕವನ್ನು ಕಟ್ಟಿದರು.
ಇದನ್ನೂ ಓದಿ: ಬೆಂಗಳೂರು ಸೇರಿ ಕರ್ನಾಟಕ ರಾಜ್ಯದ 16 ಜಿಲ್ಲೆಗಳಿಗೆ 2 ದಿನ ಭಾರೀ ಮಳೆ ಅಲರ್ಟ್
ಆದರೆ ಕಳೆದ ಕೆಲ ವರ್ಷಗಳಿಂದ ಪುಣ್ಯಸ್ಮರಣೆ ಕಾರ್ಯಕ್ರಮಕ್ಕೂ ಅವಕಾಶ ನೀಡಲಾಗುತ್ತಿರಲಿಲ್ಲ ಎಂಬ ಅಸಮಾಧಾನ ಅಭಿಮಾನಿಗಳಲ್ಲಿ ಬೆಳೆದಿತ್ತು. ಇತ್ತೀಚೆಗೆ ಹಿರಿಯ ನಟ ಬಾಲಕೃಷ್ಣ ಕುಟುಂಬ ಹಾಗೂ ವಿಷ್ಣುವರ್ಧನ್ ಅಭಿಮಾನಿಗಳ ನಡುವೆ ವಾಗ್ವಾದವೂ ನಡೆದಿತ್ತು.
ರಾತ್ರೋರಾತ್ರಿ ತೆರವು ನಂತರ ಅಭಿಮಾನಿಗಳು ಸರ್ಕಾರ, ಪೊಲೀಸ್ ಇಲಾಖೆ ಹಾಗೂ ವಾಣಿಜ್ಯ ಮಂಡಳಿ ವಿರುದ್ಧ ಘೋಷಣೆ ಕೂಗಿದರು. ಬೆಂಗಳೂರು ಹೊರವಲಯದ ಕೆಂಗೇರಿ ಬಳಿಯ (Bengaluru Kengeri) ಅಭಿಮಾನ್ ಸ್ಟುಡಿಯೋ ಮುಖ್ಯ ದ್ವಾರಕ್ಕೆ ಬೀಗ ಹಾಕಲಾಗಿದ್ದು, ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ವಿಷ್ಣುವರ್ಧನ್ ಅವರ 35 ವರ್ಷಗಳ ಕಲಾಸೇವೆಗೆ ಸ್ಮಾರಕವಾಗಿ, ಅವರ ಆಸೆಯಂತೆ ಮೈಸೂರಿನಲ್ಲಿ ಹೊಸ ಭವ್ಯ ಸ್ಮಾರಕ ಈಗಾಗಲೇ ನಿರ್ಮಾಣವಾಗಿದೆ. ಆದರೆ ಕೆಂಗೇರಿಯಲ್ಲಿದ್ದ ಹಳೆಯ ಸ್ಮಾರಕ ತೆರವು ಅಭಿಮಾನಿಗಳ ಹೃದಯಕ್ಕೆ ನೋವು ತಂದಿದೆ.
Vishnuvardhan Memorial Demolished, Fans Outraged






