ಬೆಂಗಳೂರು ನಗರದಲ್ಲಿ ವೊಡಾಫೋನ್ 5ಜಿ ಸೇವೆ ಆರಂಭ! ವೇಗದ ನೆಟ್, ಅನ್‌ಲಿಮಿಟೆಡ್ ಡೇಟಾ

ವೊಡಾಫೋನ್ ಐಡಿಯಾ (ವಿಐ) ಬೆಂಗಳೂರು ನಗರದಲ್ಲಿ ತನ್ನ 5ಜಿ ಸೇವೆ ಆರಂಭಿಸಿದ್ದು, ಅನ್‌ಲಿಮಿಟೆಡ್ ಡೇಟಾ ಪ್ಲಾನ್‌ಗಳು 299 ರೂ. ರಿಂದ ಲಭ್ಯವಿದೆ. ಡಿಜಿಟಲ್ ಬಳಕೆದಾರರಿಗೆ ಹೊಸ ಅನುಭವ.

  • ಬೆಂಗಳೂರಿಗೆ ವಿಐ 5ಜಿ ಸೇವೆಯ ಅಧಿಕೃತ ಪ್ರಾರಂಭ
  • 299 ರೂ. ಪ್ಲಾನ್‌ನಲ್ಲಿ ಅನ್‌ಲಿಮಿಟೆಡ್ 5ಜಿ ಡೇಟಾ ಲಭ್ಯ
  • ಗ್ರಾಹಕರಿಗೆ ಗೇಮಿಂಗ್, ಸ್ಟ್ರೀಮಿಂಗ್, ಕ್ಲೌಡ್ ಆಕ್ಸೆಸ್‌ನಲ್ಲಿ ವೇಗ

ಬೆಂಗಳೂರು (Bengaluru) : ಬೆಂಗಳೂರು ನಗರದಲ್ಲಿ ವೊಡಾಫೋನ್ ಐಡಿಯಾ (Vodafone Idea launches 5G) ತನ್ನ 5ಜಿ ಸೇವೆ ಆರಂಭಿಸಿದ್ದು, ಅತಿ ವೇಗದ ಡೇಟಾ ಸಂಪರ್ಕದ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆಯಲಾಗಿದೆ. ತಂತ್ರಜ್ಞಾನ ಪ್ರೇಮಿಗಳ ನಗರವಿರುವ ಇಲ್ಲಿ, ಡಿಜಿಟಲ್ ಸೇವೆಗಳ ಹೊಸ ಮಟ್ಟದ ಅನುಭವ ಗ್ರಾಹಕರಿಗೆ ಲಭ್ಯವಾಗಲಿದೆ.

299 ರೂಪಾಯಿಯಿಂದ ಆರಂಭವಾಗುವ ಪ್ರಾರಂಭಿಕ ಪ್ಲಾನ್‌ಗಳಲ್ಲಿ (Recharge Plans) ಗ್ರಾಹಕರು ಅನ್‌ಲಿಮಿಟೆಡ್ 5ಜಿ ಡೇಟಾ ಪಡೆಯಬಹುದು. ಇದರ ಮೂಲಕ ಅವರು ವಿಡಿಯೋ ಸ್ಟ್ರೀಮಿಂಗ್ (streaming), ಆನ್‌ಲೈನ್ ಗೇಮಿಂಗ್ (online gaming), ನೈಜ-ಸಮಯದ ಕ್ಲೌಡ್‌ ಆಕ್ಸೆಸ್ (real-time cloud access) ಮತ್ತು ವೇಗದ ಡೌನ್‌ಲೋಡ್ (download) ಸೌಲಭ್ಯಗಳನ್ನು ಆನಂದಿಸಬಹುದು.

ಇದನ್ನೂ ಓದಿ: ಈಗಲೇ Gmail ಪಾಸ್‌ವರ್ಡ್ ಚೇಂಜ್ ಮಾಡಿ! ಇಲ್ಲವೇ ನಾಳೆಯಿಂದ ಬಳಕೆ ಸಾಧ್ಯವಿಲ್ಲ

ಈ ವರ್ಷದ ಆಗಸ್ಟ್ ವೇಳೆಗೆ 5ಜಿ-ಸಪೋರ್ಟ್ ಮಾಡುವ ಮೊಬೈಲ್‌ ಇರುವ ಬಳಕೆದಾರರು ಬೆಂಗಳೂರು ಭಾಗದಲ್ಲಿ ಈ ಸೇವೆ ಬಳಸಬಹುದು. ನಗರದಲ್ಲಿನ ಡಿಜಿಟಲ್ ಪ್ರೇಮಿಗಳಿಗೆ ಶ್ರೇಷ್ಠ ಅನುಭವ ಒದಗಿಸಲು ಈ ಯೋಜನೆ ರೂಪಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

ಇದಕ್ಕೂ ಮೊದಲು ಮುಂಬೈ, ದೆಹಲಿ, ಚಂಡಿಗಢ ಸೇರಿದಂತೆ 17 ಪ್ರಮುಖ ವಲಯಗಳಲ್ಲಿ ವಿಐ 5ಜಿ ಆರಂಭಿಸಲಾಗಿತ್ತು. ಈಗ ಹಂತ ಹಂತವಾಗಿ ಈ ಸೇವೆ ದೇಶದ ಇತರ ಭಾಗಗಳಿಗೂ ವಿಸ್ತಾರಗೊಳ್ಳುತ್ತಿದೆ.

Vodafone Idea Recharge Plan

ಬೇರೆ ಯಾವುದೇ ತಾಂತ್ರಿಕ ಸಮಸ್ಯೆ ಅಥವಾ ತಡೆಗಳಿಲ್ಲದೆ ಶ್ರೇಷ್ಠ 5ಜಿ ಅನುಭವ ನೀಡಲು ವಿಐ ಸಂಸ್ಥೆ ಸ್ಯಾಮ್‌ಸಂಗ್‌ ಸಹಭಾಗಿತ್ವದಲ್ಲಿ ದಕ್ಷ ಇಂಧನ ವ್ಯವಸ್ಥೆ, ಸ್ಮಾಲ್‌ ಫಾರ್ಮ್ ಫ್ಯಾಕ್ಟರ್‌ ರೇಡಿಯೋಗಳ (small form factor radios) ಅಳವಡಿಕೆ ಹಾಗೂ ಕೃತಕ ಬುದ್ಧಿಮತ್ತೆ (AI) ಮೂಲಕ ಸ್ವಯಂ-ಸಂಘಟಿತ ಜಾಲವ್ಯವಸ್ಥೆ ಜಾರಿಗೆ ತಂದಿದೆ.

ಇದನ್ನೂ ಓದಿ: ಮೊಬೈಲ್ ಕ್ಯಾಂಟಿನ್‌ಗೆ ಸಿಗುತ್ತೆ ₹5 ಲಕ್ಷ ಸಬ್ಸಿಡಿ! ಏನಿದು ಯೋಜನೆ? ಇಲ್ಲಿದೆ ಡೀಟೇಲ್ಸ್

ವಿ ಸಂಸ್ಥೆ 4ಜಿ ಸಂಪರ್ಕದ ಸಾಮರ್ಥ್ಯವನ್ನೂ ಹೆಚ್ಚಿಸಿದ್ದು, ಬೆಂಗಳೂರು ಸೇರಿದಂತೆ ಕರ್ನಾಟಕದ 3,000 ಸೈಟ್‌ಗಳಲ್ಲಿ 900 MHz ತರಂಗಾಂತರ ಅಳವಡಿಸಲಾಗಿದೆ. 1,000 ಸ್ಥಳಗಳಲ್ಲಿ 2100 MHz ಸಾಮರ್ಥ್ಯವನ್ನು ಸೇರಿಸಲಾಗಿದೆ. ಈ ಎಲ್ಲ ನವೀಕರಣಗಳಿಂದ ದತ್ತಾಂಶ ದಟ್ಟಣೆಯ ನಿರ್ವಹಣೆಯಲ್ಲಿ ಸುಧಾರಣೆ ಆಗಿದೆ.

Vodafone Idea

“ಬೆಂಗಳೂರು ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದು, ಇಲ್ಲಿ 5ಜಿ ಆರಂಭಿಸುವುದು ನಮಗೆ ಹೆಮ್ಮೆ. ಗ್ರಾಹಕರಿಗೆ ಹೆಚ್ಚು ಮೌಲ್ಯ ನೀಡುವ ನಿಟ್ಟಿನಲ್ಲಿ ನಮ್ಮ 4ಜಿ ಮತ್ತು 5ಜಿ ಜಾಲವನ್ನು ಇನ್ನಷ್ಟು ಬಲಪಡಿಸುತ್ತೇವೆ,” ಎಂದು ವಿಐ ಸಂಸ್ಥೆಯ ಕರ್ನಾಟಕ ವಹಿವಾಟು ಮುಖ್ಯಸ್ಥ ಆನಂದ ದಾನಿ ತಿಳಿಸಿದ್ದಾರೆ.

ಇದನ್ನೂ ಓದಿ: ಫೋನ್ ಪೇ, ಗೂಗಲ್ ಪೇ ಸೆಂಡಿಂಗ್ ಫೇಲ್ ಆದ್ರೆ ಏನು ಮಾಡಬೇಕು? ಇಲ್ಲಿದೆ ಟ್ರಿಕ್ಸ್

ಗ್ರಾಹಕರ ಬದಲಾಗುತ್ತಿರುವ ಡಿಜಿಟಲ್ ಅಗತ್ಯಗಳಿಗೆ ಸ್ಪಂದಿಸುವ ರೀತಿಯಲ್ಲಿ, ವಿಐ ಸಂಸ್ಥೆ ಭವಿಷ್ಯಮುಖಿ ದೂರಸಂಪರ್ಕ ಜಾಲ ನಿರ್ಮಾಣದತ್ತ ಹೆಜ್ಜೆ ಇಟ್ಟಿದ್ದು, Bengaluru ಬಳಕೆದಾರರಿಗೆ ಇದು ಪ್ಲಸ್ ಪಾಯಿಂಟ್ ಆಗಿದೆ.

ಹೆಚ್ಚಿನ ವಿವರಗಳಿಗೆ ಮತ್ತು ಪ್ಲಾನ್‌ಗಳ ಸಂಪೂರ್ಣ ಮಾಹಿತಿಗೆ ಸಂಸ್ಥೆಯ ಅಧಿಕೃತ (official website) ತಾಣಕ್ಕೆ ಭೇಟಿ ನೀಡಬಹುದು.

Vodafone Idea launches 5G in Bengaluru

English Summary

======== Story End ========

Writer of This Story

Author of the Story
About Author:

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ ಮಟ್ಟದ ಸುದ್ದಿ ಅಪ್‌ಡೇಟುಗಳನ್ನು ನಿಖರವಾಗಿ, ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ವಿವರಿಸಿ ತಲುಪಿಸುವ ಶೈಲಿ ಅವರದು... ಇನ್ನಷ್ಟು ಓದಿ

✉︎ Feedback: editor@kannadanews.today

For Article Corrections/Report Issues Click here

Related Stories