ರೇಷನ್ ಕಾರ್ಡ್ ನಲ್ಲಿ ಕರೆಕ್ಷನ್ ಮಾಡೋಕೆ ಬಂತು ಬಿಗ್ ಅಪ್ಡೇಟ್! ಏನೆಲ್ಲಾ ಬೇಕು?
Ration Card : ರಾಜ್ಯ ಸರ್ಕಾರ ಜನವರಿ ಒಂದರಿಂದ ಪ್ರಾರಂಭಿಸಿ 31ನೇ ತಾರೀಖಿನವರೆಗೂ ಕೂಡ ತಮ್ಮ ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಅವಕಾಶ ನೀಡಿದೆ.
- ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಮತ್ತೆ ಅವಕಾಶ!
- ರೇಷನ್ ಕಾರ್ಡ್ ನಲ್ಲಿ ಕರೆಕ್ಷನ್ ಮಾಡೋಕೆ ಎಲ್ಲಿವರೆಗೆ ಅವಕಾಶ ಇದೆ?
- ರೇಷನ್ ಕಾರ್ಡ್ ತಿದ್ದುಪಡಿ ಮಾಡೋದಕ್ಕೆ ಏನೆಲ್ಲಾ ದಾಖಲೆ ಬೇಕು
Ration Card : ರಾಜ್ಯದಲ್ಲಿ ಸಾಕಷ್ಟು ಕಡೆಗಳಲ್ಲಿ ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳುವುದಕ್ಕೆ ಒಂದು ವರ್ಗದ ಜನರು ಕಾಯ್ತಾ ಇದ್ರೆ, ಇನ್ನೊಂದು ಕಡೆಯಲಿ ತಮ್ಮ ರೇಷನ್ ಕಾರ್ಡ್ ನಲ್ಲಿ ಇರುವಂತಹ ಸದಸ್ಯರನ್ನ ತೆಗೆಯುವ ಅಥವಾ ಸೇರ್ಪಡೆ ಮಾಡುವಂತಹ ಅಥವಾ ಬೇರೆ ರೀತಿಯ ತಿದ್ದುಪಡಿಗಳನ್ನು ಮಾಡುವುದಕ್ಕೆ ಕಾಯುತ್ತಿರುವಂತಹ ಮತ್ತೊಂದು ವರ್ಗದ ಜನ ಇದ್ದಾರೆ.
ಈಗ ಈ ಎಲ್ಲ ಜನರಿಗೂ ಕೂಡ ರೇಷನ್ ಕಾರ್ಡ್ ವಿಚಾರದಲ್ಲಿ ರಾಜ್ಯ ಸರ್ಕಾರ ಗುಡ್ ನ್ಯೂಸ್ ಕೊಡೋದಕ್ಕೆ ಹೊರಟಿದೆ ಎಂದು ಹೇಳಬಹುದಾಗಿದ್ದು ಬನ್ನಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.
ರೇಷನ್ ಕಾರ್ಡ್ ಬಗ್ಗೆ ಬಂತು ನೋಡಿ ಬಿಗ್ ಅಪ್ಡೇಟ್!
ರಾಜ್ಯ ಸರ್ಕಾರ ರೇಷನ್ ಕಾರ್ಡ್ ತಿದ್ದುಪಡಿ (Ration Card Correction) ಮಾಡೋದಕ್ಕೆ ಜನರಿಗೆ ಡಿಸೆಂಬರ್ ತಿಂಗಳಲ್ಲಿ ಕೂಡ ಅವಕಾಶ ನೀಡಿತ್ತು. ಆದರೆ ಪ್ರತಿಯೊಬ್ಬರು ಕೂಡ ಈ ಅವಕಾಶವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಲು ಸಾಧ್ಯವಾಗಿರಲಿಲ್ಲ ಹೀಗಾಗಿ, ರಾಜ್ಯ ಸರ್ಕಾರ ಜನವರಿ ಒಂದರಿಂದ ಪ್ರಾರಂಭಿಸಿ 31ನೇ ತಾರೀಖಿನವರೆಗೂ ಕೂಡ ತಮ್ಮ ರೇಷನ್ ಕಾರ್ಡನ್ನು ತಿದ್ದುಪಡಿ ಮಾಡಲು ಅವಕಾಶ ನೀಡಿದೆ.
ಬೆಳಿಗ್ಗೆ 10:00 ಗಂಟೆಯಿಂದ ಪ್ರಾರಂಭಿಸಿ ಸಂಜೆ 5:30ರ ವರೆಗೆ ನಿಮ್ಮ ಹತ್ತಿರದ ಕರ್ನಾಟಕ ವನ್, ಗ್ರಾಮ ವನ್ ಗಳಂತಹ ಆನ್ಲೈನ್ ಕೇಂದ್ರಗಳಿಗೆ ಭೇಟಿ ನೀಡಿ ನಿಮ್ಮ ರೇಷನ್ ಕಾರ್ಡ್ ನಲ್ಲಿರುವಂತಹ ಯಾವುದೇ ರೀತಿಯ ತಿದ್ದುಪಡಿಗಳನ್ನು ಜನವರಿ 31ರ ಒಳಗೆ ಮಾಡುವಂತಹ ಅವಕಾಶವನ್ನು ಸರ್ಕಾರ ಅಧಿಕೃತವಾಗಿ ಘೋಷಣೆ ಮಾಡಿದೆ.
ಇನ್ನು ರೇಷನ್ ಕಾರ್ಡ್ ನಲ್ಲಿ ಯಾವ ತಿದ್ದುಪಡಿ (Ration Card Update) ಮಾಡುವಂತಹ ಅವಕಾಶವನ್ನು ಸರ್ಕಾರ ಸದ್ಯಕ್ಕೆ ನೀಡಿದೆ ಅನ್ನೋದನ್ನ ಸಂಪೂರ್ಣ ವಿವರವಾಗಿ ತಿಳಿಯೋಣ.
ರೇಷನ್ ಕಾರ್ಡ್ ನಲ್ಲಿ ಈ ತಿದ್ದುಪಡಿಯನ್ನು ಮಾಡಬಹುದು!
ಕುಟುಂಬದ ಮುಖ್ಯಸ್ಥರ ಹೆಸರನ್ನ ಬದಲಾವಣೆ ಮಾಡಬಹುದು ಹಾಗೂ ನಿಮ್ಮ ವಿಳಾಸವನ್ನು ಕೂಡ ಇದರಲ್ಲಿ ಬದಲಾವಣೆ ಮಾಡುವ ಅವಕಾಶವಿದೆ.
ಹೊಸ ಸದಸ್ಯರನ್ನು ಸೇರ್ಪಡೆ ಮಾಡುವುದು ಅಥವಾ ಹಳೆಯ ಸದಸ್ಯರನ್ನು ತೆಗೆದುಹಾಕುವ ಅವಕಾಶವಿದೆ.
ಕೆವೈಸಿ ಅಪ್ಡೇಟ್, ಆಧಾರ್ ಕಾರ್ಡ್ ಲಿಂಕ್ ಹಾಗೂ ನಿಮ್ಮ ನ್ಯಾಯಬೆಲೆ ಅಂಗಡಿಯನ್ನು ಬದಲಾವಣೆ ಮಾಡುವ ಅವಕಾಶವನ್ನು ಕೂಡ ನೀಡಲಾಗುತ್ತದೆ.
ಬೇಕಾಗಿರುವ ಡಾಕ್ಯುಮೆಂಟ್ಸ್ ಗಳು
ಜಾತಿ ಪ್ರಮಾಣ ಪತ್ರ, ಕುಟುಂಬ ಸದಸ್ಯರ ಆಧಾರ್ ಕಾರ್ಡ್, ಮಕ್ಕಳ ಬರ್ತ್ ಸರ್ಟಿಫಿಕೇಟ್, ಮೊಬೈಲ್ ನಂಬರ್, ರೇಷನ್ ಕಾರ್ಡ್ ಹಾಗೂ ಬದಲಾವಣೆಗೆ ಸಂಬಂಧಪಟ್ಟಂತಹ ಇನ್ನಿತರ ಡಾಕ್ಯುಮೆಂಟ್ಸ್ ಗಳು.
ಹೊಸ ರೇಷನ್ ಕಾರ್ಡ್ ಅಪ್ಡೇಟ್
ಸದ್ಯದ ಮಟ್ಟಿಗೆ ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದಕ್ಕೆ ಯಾವುದೇ ರೀತಿಯಲ್ಲಿ ಸರ್ಕಾರ ಅವಕಾಶ ಜಾರಿಗೆ ತಂದಿಲ್ಲ. ನಿಮ್ಮ ಹತ್ತಿರದ ಸೇವಾ ಕೇಂದ್ರಗಳಿಗೆ ನಿಮ್ಮ ಮೊಬೈಲ್ ನಂಬರ್ ಅನ್ನು ನೀಡಿ.
ಸರ್ಕಾರ ಹೊಸದಾಗಿ ಬಿಪಿಎಲ್ ರೇಷನ್ ಕಾರ್ಡ್ ಅಥವಾ ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ ಅವಕಾಶವನ್ನು ಜಾರಿಗೆ ತಂದ ಕೂಡಲೇ ಅವರು ನಿಮಗೆ ಮಾಹಿತಿಯನ್ನು ನೀಡುತ್ತಾರೆ ಹಾಗೂ ನೀವು ಕೂಡಲೇ ಅರ್ಜಿ ಸಲ್ಲಿಸಬಹುದಾಗಿದೆ.
What Documents Are Required for Ration Card Corrections