Ration Card: ಯಾವೆಲ್ಲಾ ಜನರ ಬಿಪಿಎಲ್ ಕಾರ್ಡ್ ರದ್ದಾಗುತ್ತೆ? ಇಲ್ಲಿದೆ ಅಪ್ಡೇಟ್
ಬಿಪಿಎಲ್ ಕಾರ್ಡ್ (BPL Card) ಪರಿಷ್ಕರಣೆಗೆ ಗೃಹ ಸಚಿವ ಪರಮೇಶ್ವರ್ ಬೆಂಬಲ ವ್ಯಕ್ತಪಡಿಸಿದರು. ಗ್ಯಾರಂಟಿ ಯೋಜನೆಗಳಿಗೂ ಬಿಪಿಎಲ್ ಕಾರ್ಡ್ ಮಾರ್ಪಾಡಿಗೂ ಯಾವುದೇ ಸಂಬಂಧವಿಲ್ಲಎಂದರು.
ಮೈಸೂರಿನಲ್ಲಿ ಬಿಪಿಎಲ್ ಕಾರ್ಡ್ (BPL Card) ಪರಿಷ್ಕರಣೆಗೆ ಗೃಹ ಸಚಿವ ಪರಮೇಶ್ವರ್ ಬೆಂಬಲ ವ್ಯಕ್ತಪಡಿಸಿದರು. ಗ್ಯಾರಂಟಿ ಯೋಜನೆಗಳಿಗೂ ಬಿಪಿಎಲ್ ಕಾರ್ಡ್ ಮಾರ್ಪಾಡಿಗೂ ಯಾವುದೇ ಸಂಬಂಧವಿಲ್ಲಎಂದರು.
ಸರ್ಕಾರಿ ನೌಕರರು, ಕಾರು ಹೊಂದಿರುವವರು, ತೆರಿಗೆ ಪಾವತಿಸುವವರು ಹಾಗೂ ಕನಿಷ್ಠ ಮೂರು ಹೆಕ್ಟೇರ್ ಜಮೀನು ಹೊಂದಿರುವವರೂ ಬಿಪಿಎಲ್ ಕಾರ್ಡ್ (Ration Card) ಬಳಸುತ್ತಿದ್ದಾರೆ. ಅಂತಹ ಜನರು ಕಾರ್ಡ್‌ಗಳನ್ನು ಹಿಂತಿರುಗಿಸಬೇಕು ಎಂದರು.
BPL Card: ಅನರ್ಹರ ರೇಷನ್ ಕಾರ್ಡ್ ಮಾತ್ರ ರದ್ದು; ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ
ಇನ್ನು ರೇಷನ್ ಕಾರ್ಡ್ ಸಂಬಂಧಿಸಿದಂತೆ ರಾಜ್ಯದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ, ಪ್ರತಿ ಪಕ್ಷಗಳೂ ಕೂಡ ಈ ಬಗ್ಗೆ ಕಾಂಗ್ರೆಸ್ ಸರ್ಕಾರವನ್ನು ಟೀಕಿಸುತ್ತಿವೆ, ಗ್ಯಾರೆಂಟಿ ಯೋಜನೆಗಳ ಹೊರೆ ತಪ್ಪಿಸಿಕೊಳ್ಳಲು ಈಗ ರೇಷನ್ ಕಾರ್ಡ್ ರದ್ದು ಮಾಡುತ್ತಿದೆ ಸರ್ಕಾರ ಎಂಬ ಆರೋಪ ಮಾಡಿದೆ.
ಆದರೆ ಈ ಬಗ್ಗೆ ಸ್ವತಃ ಸ್ಪಷ್ಟನೆ ನೀಡಿರುವ ಸಿಎಂ ಸಿದ್ದರಾಮಯ್ಯ ನವರು ಬಡವರ ಹಾಗೂ ಅರ್ಹರ ರೇಷನ್ ಕಾರ್ಡ್ ಯಾವುದೇ ಕಾರಣಕ್ಕೂ ರದ್ದಾಗುವುದಿಲ್ಲ, ಈ ಬಗ್ಗೆ ಚಿಂತಿಸುವ ಅಗತ್ಯ ಇಲ್ಲ. ಯಾರು ಸರ್ಕಾರಿ ಕೆಲಸದಲ್ಲಿ ಇದ್ದರೋ, ಯಾರು ತೆರಿಗೆ ಪಾವತಿಸುತ್ತಿದ್ದಾರೋ ಅಂತಹವರ ಕಾರ್ಡುಗಳು ರದ್ದಾಗಲಿವೆ ಎಂದಿದ್ದಾರೆ.
Which people’s BPL cards will be cancelled, Here is the update