ಹೊಸ ಮನೆ ಹಾಗೂ ಬಾಡಿಗೆ ಮನೆಯವರಿಗೆ ಗೃಹಜ್ಯೋತಿ ಉಚಿತ ವಿದ್ಯುತ್ ಇಲ್ಲ!
ರಾಜ್ಯದ ಗೃಹ ಜ್ಯೋತಿ ಯೋಜನೆ ಅಡಿಯಲ್ಲಿ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ಸಿಗುವ ಗ್ಯಾರಂಟಿ ಇದ್ದರೂ, ಹೊಸ ಮನೆ ಕಟ್ಟಿದವರು ಹಾಗೂ ಬಾಡಿಗೆ ಮನೆ ಬದಲಾಯಿಸಿದವರಿಗೆ ಸಂಪೂರ್ಣ ಲಾಭ ಸಿಗದೆ ಅಸಮಾಧಾನ ಮನೆಮಾಡಿದೆ.
- 58 ಯೂನಿಟ್‌ವರೆಗೆ ಮಾತ್ರ ಉಚಿತ ವಿದ್ಯುತ್ ಲಭ್ಯ
- 2023-24ರ ಬಳಕೆ ಆಧಾರದ ಮೇಲೆ 2025-26ರಲ್ಲಿ ಪರಿಷ್ಕರಣೆ ಸಾಧ್ಯ
- ಸರಾಸರಿ ಪರಿಷ್ಕರಣೆಗೆ ₹500-₹600 ಕೋಟಿ ವೆಚ್ಚ ಸಾಧ್ಯತೆ
ಬೆಂಗಳೂರು (Bengaluru): ಕರ್ನಾಟಕ ರಾಜ್ಯ ಸರ್ಕಾರದ ಗೃಹಜ್ಯೋತಿ (Gruha Jyothi Scheme) ಯೋಜನೆಯು ಬಹುತೇಕ ಮನೆಗಳಿಗೆ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ (Free Electricity) ಒದಗಿಸುತ್ತಿದೆ. ಆದರೆ, ಹೊಸ ಮನೆ ನಿರ್ಮಿಸಿದವರು ಹಾಗೂ ಬಾಡಿಗೆ ಮನೆ ಬದಲಾಯಿಸಿದವರಿಗೆ ಈ ಯೋಜನೆಯ ಸಂಪೂರ್ಣ ಲಾಭ ಸಿಗುತ್ತಿಲ್ಲ. ಇದಕ್ಕೆ ಕಾರಣವೇನು?
ಈ ಯೋಜನೆಯು 2023ರ ಜುಲೈ 1ರಿಂದ ಜಾರಿಗೆ ಬಂದು, ಆಗಸ್ಟ್ 1ರಿಂದ ಲಾಭ ದೊರಕಲು ಆರಂಭವಾಯಿತು. ಆದರೆ, 2022-23ರ ಆರ್ಥಿಕ ವರ್ಷದ ಸರಾಸರಿ ಬಳಕೆಯ ಆಧಾರದ ಮೇಲೆ ಉಚಿತ ವಿದ್ಯುತ್ ಲೆಕ್ಕ ಹಾಕಲಾಗಿದೆ. ಈ ಕಾರಣದಿಂದ, ಹೊಸ ಮನೆ ನಿರ್ಮಿಸಿದವರು ಅಥವಾ ಹೊಸ ಸಂಪರ್ಕ ಪಡೆದವರು ಕೇವಲ 58 ಯೂನಿಟ್‌ವರೆಗೆ ಮಾತ್ರ ಉಚಿತ ವಿದ್ಯುತ್ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ಬಿಪಿಎಲ್ ಕಾರ್ಡುದಾರರಿಗೆ ಭರ್ಜರಿ ಸುದ್ದಿ, ಬಡವರಿಗೆ ಹೆಚ್ಚಿನ ಸೌಲಭ್ಯಗಳು!
ಬಾಡಿಗೆದಾರರ ಸಮಸ್ಯೆ ಏನು?
ಬಾಡಿಗೆ ಮನೆಯಲ್ಲಿ ಇದ್ದ ಹಿಂದಿನ ಗ್ರಾಹಕರು 98 ಯೂನಿಟ್ ಬಳಸುತ್ತಿದ್ದರೆ, ಹೊಸ ಬಾಡಿಗೆದಾರರು 150 ಯೂನಿಟ್ ಬಳಕೆ ಮಾಡಿದರೂ, ಅವರಿಗೆ ಕೇವಲ 98 ಯೂನಿಟ್ ಉಚಿತ ಲಭ್ಯ. ಉಳಿದ 52 ಯೂನಿಟ್‌ಗಳಿಗೆ ಅವರು ಬಿಲ್ (Electricity Bill) ಪಾವತಿಸಲೇಬೇಕು.
ಈ ಲೆಕ್ಕಾಚಾರ 2022-23ರ ಬಳಕೆಯ ಮೇಲೆ ನಿಗದಿಯಾಗಿರುವುದರಿಂದ, ಹೊಸ ಬಾಡಿಗೆದಾರರು ಸಂಪೂರ್ಣ ಲಾಭ ಪಡೆಯಲು ಸಾಧ್ಯವಾಗುತ್ತಿಲ್ಲ.
ಹೊಸ ಮನೆ ಕಟ್ಟಿದವರಿಗೆ?
ಹೊಸ ಮನೆ ನಿರ್ಮಿಸಿದವರು 200 ಯೂನಿಟ್ ಒಳಗೆ ವಿದ್ಯುತ್ ಬಳಸಿದರೂ, ಅವರಿಗೆ ಕೇವಲ 58 ಯೂನಿಟ್‌ವರೆಗೆ ಮಾತ್ರ ಉಚಿತ ಲಾಭ ಸಿಗುತ್ತಿದೆ. ಇಂಧನ ಸಚಿವ ಕೆ.ಜೆ. ಜಾರ್ಜ್ (KJ George) ಅವರ ಹೇಳಿಕೆಯಂತೆ, ಈ ಲೆಕ್ಕವನ್ನು 2024ರ ಜುಲೈ ಬಳಿಕ ಪರಿಷ್ಕರಿಸಲು ಯೋಜನೆ ಇದ್ದರೂ, ಇದುವರೆಗೆ ಯಾವುದೇ ಪರಿಷ್ಕರಣೆ ಮಾಡಲಾಗಿಲ್ಲ.
ಇದನ್ನೂ ಓದಿ: ಗೃಹಲಕ್ಷ್ಮಿ ಹಣ ಬಿಡುಗಡೆಗೆ ಹೊಸ ಗಡುವು, ಒಟ್ಟಿಗೆ 3 ತಿಂಗಳ 6 ಸಾವಿರ ಬಿಡುಗಡೆ!
ನೀಡಲಾದ ಪರಿಹಾರವೇನು?
ಸಮಸ್ಯೆ ಪರಿಹಾರಕ್ಕಾಗಿ ಸರ್ಕಾರ, ಹೊಸ ಮನೆಗಳಿಗೆ ಅಥವಾ ಹೊಸ ಬಾಡಿಗೆದಾರರಿಗೆ ಪ್ರತ್ಯೇಕ ಲೆಕ್ಕಪತ್ರ ರೂಪಿಸಿ, ಅವರ ಬಳಕೆಯ ಆಧಾರದ ಮೇಲೆ ಉಚಿತ ವಿದ್ಯುತ್ ನೀಡುವ ವ್ಯವಸ್ಥೆ ಮಾಡಬೇಕು.
ಸರಾಸರಿ ಬಳಕೆಯನ್ನು ಪರಿಷ್ಕರಿಸುವ ಬಗ್ಗೆ ಯಾವುದೇ ನಿರ್ಧಾರ ಇಲ್ಲದ ಕಾರಣ, ಹೊಸ ಮನೆ ನಿರ್ಮಿಸಿದವರು ಹಾಗೂ ಬಾಡಿಗೆ ಮನೆ ಬದಲಾಯಿಸಿದವರು ಈ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ.
Why Are New Homeowners Missing Out on Gruha Jyothi Benefits
Our Whatsapp Channel is Live Now 👇