ಬೆಂಗಳೂರು: ಬ್ಯಾಂಕ್ ನಲ್ಲಿ ಸಾಲ ಕೊಡಿಸುವುದಾಗಿ ವಂಚನೆ, ಖತರ್ನಾಕ್ ಮಹಿಳೆ ಬಂಧನ
ಬೆಂಗಳೂರು (Bengaluru): ಬ್ಯಾಂಕ್ ನಲ್ಲಿ ಸಾಲ (Bank Loan) ಕೊಡಿಸುವುದಾಗಿ ಭರವಸೆ ನೀಡಿ ಸಾವಿರಾರು ಮಂದಿಯಿಂದ ಸಂಸ್ಕರಣಾ ಶುಲ್ಕವಾಗಿ ಲಕ್ಷಾಂತರ ರೂಪಾಯಿ ವಸೂಲಿ ಮಾಡಿದ ಕಿಲಾಡಿ ಗ್ಯಾಂಗ್ ನ ಕೃತ್ಯ ಬೆಳಕಿಗೆ ಬಂದಿದೆ.
ಇವರಿಂದ ಮೋಸಹೋದ ಸಂತ್ರಸ್ತರು ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸರಿಗೆ ದೂರು ನೀಡಿದ್ದು, ರೇಷ್ಮಾ ಎಂಬ ಮಹಿಳೆಯನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಆನಂದ್, ರೇಷ್ಮಾ, ಅಂಜುಮ್ ಮತ್ತು ಅನಿಯಾ ಎಂಬ ನಾಲ್ವರು ಸೇರಿದ್ದಾರೆ ಎಂದು ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು: ಬೈಕ್‌ಗೆ ಬಿಎಂಟಿಸಿ ಬಸ್ ಡಿಕ್ಕಿ, ಇಬ್ಬರು ಸಾವು
ಪೊಲೀಸರ ಪ್ರಕಾರ, ಶ್ರೀಕರ ಕೋ ಆಪರೇಟಿವ್ ಸೊಸೈಟಿ ಬ್ಯಾಂಕ್ ನಿಂದ 1 ಲಕ್ಷದಿಂದ 25 ಲಕ್ಷದವರೆಗೆ ಸುಲಭವಾಗಿ ಸಾಲ (Loan) ನೀಡುವುದಾಗಿ ಜಾಹೀರಾತು ನೀಡಿದ್ದರಿಂದ ಸಾಕಷ್ಟು ಮಂದಿ ಇವರ ಬುಟ್ಟಿಗೆ ಬಿದ್ದಿದ್ದಾರೆ.
ಸಾಲ ಪ್ರಕ್ರಿಯೆ ಶುಲ್ಕ ಎಂದು ಸಂತ್ರಸ್ತರಿಂದ ಲಕ್ಷಗಟ್ಟಲೆ ಹಣ ವಸೂಲಿ ಮಾಡಿದ್ದಾರೆ. ಆದರೆ ಯಾರಿಗೂ ಯಾವುದೇ ಸಾಲ ನೀಡಿಲ್ಲ.ಕೊನೆಗೆ, ವಂಚನೆಗೊಳಗಾದ ನೂರಾರು ಸಂತ್ರಸ್ತರು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕಿಲಾಡಿ ರೇಷ್ಮಾ ಈ ದಂಧೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಆಕೆಗೆ ರಾಜಕಾರಣಿಗಳ ಪರಿಚಯವಿತ್ತು ಎನ್ನಲಾಗಿದೆ.
Woman arrested for cheating in the name of bank loan
Our Whatsapp Channel is Live Now 👇