ಹಿರಿಯ ನಾಗರಿಕರ 1 ಲಕ್ಷ ಹೂಡಿಕೆಗೆ ಸಿಗುತ್ತೆ 26 ಸಾವಿರ ಬಡ್ಡಿ! ಬಂಪರ್ ಯೋಜನೆ

ಒಂದು ಲಕ್ಷ ಠೇವಣಿಗೆ 26,000 ಬಡ್ಡಿ ಕೊಡುವ ಬಂಪರ್ ಯೋಜನೆ; ತಕ್ಷಣ ಹೂಡಿಕೆ ಮಾಡಿ!

ನಮ್ಮ ಭವಿಷ್ಯ (Future) ವನ್ನು ಭದ್ರವಾಗಿಸಿಕೊಳ್ಳಲು ನಾವು ಬಯಸುವುದು ಸಹಜ. ಇದಕ್ಕಾಗಿ ದುಡಿಯುವ ಹಣದಲ್ಲಿ ಒಂದಿಷ್ಟು ಮೊತ್ತವನ್ನು ನನ್ನದಲ್ಲ ಎನ್ನುವಂತೆ ತೆಗೆದಿಡಬೇಕು

ಅದಕ್ಕಾಗಿ ಬ್ಯಾಂಕ್ (Bank) ನಲ್ಲಿ ಯಾವುದಾದರೂ ಉತ್ತಮ ಯೋಜನೆಯಲ್ಲಿ ಹೂಡಿಕೆ (Investment) ಮಾಡುವುದು ಒಳ್ಳೆಯದು. ಇದರಿಂದ ಸುಖಾ ಸುಮ್ಮನೆ ಅನಗತ್ಯವಾಗಿ ಖರ್ಚು ಮಾಡುವ ಹಣ ಉಳಿತಾಯವಾಗುತ್ತದೆ. ಹಾಗೂ ಭವಿಷ್ಯದಲ್ಲಿ ಆರ್ಥಿಕ ಸಮಸ್ಯೆಯೂ ಕೂಡ ದೂರವಾಗುತ್ತದೆ.

ಇನ್ನು ಸಾಮಾನ್ಯವಾಗಿ ಬ್ಯಾಂಕ್ ಗಳು (Banks) ಬೇರೆ ಬೇರೆ ಠೇವಣಿ (deposit) ಯ ಮೇಲೆ ಬೇರೆ ಬೇರೆ ರೀತಿಯ ಲಾಭವನ್ನು ನೀಡುತ್ತದೆ. ಕೆಲವು ಠೇವಣಿಯ ಮೇಲೆ ಉತ್ತಮವಾಗಿರುವ ಬಡ್ಡಿಯನ್ನು ಕೂಡ ಇತ್ತೀಚಿನ ದಿನಗಳಲ್ಲಿ ಘೋಷಿಸಲಾಗಿದೆ.

ಹಿರಿಯ ನಾಗರಿಕರ 1 ಲಕ್ಷ ಹೂಡಿಕೆಗೆ ಸಿಗುತ್ತೆ 26 ಸಾವಿರ ಬಡ್ಡಿ! ಬಂಪರ್ ಯೋಜನೆ - Kannada News

ಈ ದಿನಾಂಕದ ಒಳಗೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳಿ! ಇಲ್ಲದಿದ್ರೆ 10,000 ದಂಡ

ಅದರಲ್ಲೂ ಸಾಮಾನ್ಯ ಗ್ರಾಹಕರಿಗಿಂತ ಹಿರಿಯ ನಾಗರಿಕರು ಠೇವಣಿಗೆ ಇದ್ದರೆ ಅದಕ್ಕೆ ಹೆಚ್ಚಿನ ಬಡ್ಡಿ ದರ ಸಿಗುತ್ತದೆ. ಯಾಕಂದ್ರೆ ವೃದ್ದಾಪ್ಯ, ನಿವೃತ್ತಿಯ ನಂತರದ ಬದುಕನ್ನು ಸುಲಭವಾಗಿ ಸಾಗಿಸಲು ಹಿರಿಯ ನಾಗರಿಕರಿಗೆ (senior citizens) ಅನುಕೂಲವಾಗುವಂತೆ ಉತ್ತಮ ಬಡ್ಡಿದರ ನೀಡುತ್ತವೆ ಬ್ಯಾಂಕ್ ಗಳು.

ಹಾಗಾದ್ರೆ ಯಾವ ಬ್ಯಾಂಕ್ ಗಳು ಹಿರಿಯ ನಾಗರಿಕರಿಗೆ ಮೂರು ವರ್ಷಗಳ ಅವಧಿಯ ಠೇವಣಿಯ ಮೇಲೆ ಎಷ್ಟು ಲಾಭವನ್ನು ಕೊಡುತ್ತವೆ ನೋಡೋಣ.

ಆಕ್ಸಿಸ್ ಬ್ಯಾಂಕ್; ಇಲ್ಲಿಯವರೆಗೆ ಗ್ರಾಹಕರಿಗೆ ಉತ್ತಮ ಸೇವೆಯನ್ನು ಒದಗಿಸಿರುವ ಆಕ್ಸಿಸ್ ಬ್ಯಾಂಕ್ ನಲ್ಲಿ ಹಿರಿಯ ನಾಗರಿಕರು 3 ವರ್ಷಗಳ ಅವಧಿಗೆ ಠೇವಣಿ ಮಾಡಿದರೆ 7.60% ಬಡ್ಡಿ ದರವನ್ನು ನೀಡಲಾಗುವುದು. ಹಾಗಾಗಿ ಒಂದು ಲಕ್ಷ ನಿಶ್ಚಿತ ಠೇವಣಿಯನ್ನು (Fixed Deposit) ಮೂರು ವರ್ಷಗಳ ಅವಧಿಗೆ ಇಟ್ಟರೆ ಯೋಜನೆ ಮುಕ್ತಾಯದ ವೇಳೆಗೆ 1.25 ಲಕ್ಷಗಳನ್ನು ಪಡೆಯಬಹುದು.

ಬ್ಯಾಂಕ್ ಆಫ್ ಬರೋಡ; ಹಿರಿಯ ನಾಗರಿಕರ ಎಫ್ ಡಿ ಮೇಲೆ 7.75% ನಷ್ಟು ಬಡ್ಡಿದರವನ್ನು ನಿಗದಿಪಡಿಸಲಾಗಿದ್ದು, ಮೂರು ವರ್ಷಗಳ ಅವಧಿಗೆ ಒಂದು ಲಕ್ಷ ರೂಪಾಯಿಗಳನ್ನು ಠೇವಣೆ ಮಾಡಿದರೆ ಒಂದು ಲಕ್ಷದ 26 ಸಾವಿರ ರೂಪಾಯಿಗಳನ್ನು ಹಿಂಪಡೆಯಬಹುದು.

ಅಂಚೆ ಕಚೇರಿಯಲ್ಲಿ ಮಹಿಳೆಯರಿಗಾಗಿ ವಿಶೇಷ ಯೋಜನೆ! ಜನರಿಂದ ಭರ್ಜರಿ ರೆಸ್ಪಾನ್ಸ್

Fixed Depositಬ್ಯಾಂಕ್ ಆಫ್ ಇಂಡಿಯಾ!

ಈ ಹಿರಿಯ ನಾಗರಿಕರ ಎಫ್ ಡಿ ಮೇಲೆ 7% ಬಡ್ಡಿ ದರವನ್ನು ನಿಗದಿ ಪಡಿಸಲಾಗಿದೆ. ಹಾಗಾಗಿ ಮೂರು ವರ್ಷಗಳ ಕಾಲ ಸ್ಥಿರ ಠೇವಣಿಯನ್ನು ಒಂದು ಲಕ್ಷ ರೂಪಾಯಿಗಳನ್ನು ಇಟ್ಟರೆ 1.23 ಲಕ್ಷ ರೂಪಾಯಿಗಳು ಯೋಜನೆಯ ಮುಕ್ತಾಯದ ಅವಧಿಯಲ್ಲಿ ಕೈ ಸೇರುತ್ತದೆ.

ಮಾರುಕಟ್ಟೆಗೆ ಮೂರು ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳು ಎಂಟ್ರಿ! ಖರೀದಿಗೆ ಮುಗಿಬಿದ್ದ ಜನ

ಇಂಡಿಯನ್ ಬ್ಯಾಂಕ್; ಇತರ ಬ್ಯಾಂಕುಗಳಿಗೆ ಹೋಲಿಸಿದರೆ ಈ ಬ್ಯಾಂಕ್ ನಲ್ಲಿ ಬಡ್ಡಿದರ ಸ್ವಲ್ಪ ಕಡಿಮೆ ಎನ್ನಬಹುದು. ಆದರೂ ಕೂಡ ಹಿರಿಯ ನಾಗರಿಕರು ಒಂದು ಲಕ್ಷ ರೂಪಾಯಿಗಳನ್ನು 3 ವರ್ಷಗಳ ಅವಧಿಗೆ ಠೇವಣಿ ಮಾಡಿದರೆ, ಬರೋಬ್ಬರಿ 1.22 ಸಾವಿರ ರೂಪಾಯಿಗಳನ್ನು ಹಿಂಪಡೆಯಲು ಸಾಧ್ಯವಿದೆ.

ಈ ರೀತಿ ಬೇರೆ ಬೇರೆ ಬ್ಯಾಂಕುಗಳಲ್ಲಿ ಬೇರೆ ಬೇರೆ ರೀತಿಯ ಬಡ್ಡಿ ದರವನ್ನು ನಿಶ್ಚಿತ ಠೇವಣಿಯ ಮೇಲೆ ನೀಡಲಾಗುತ್ತಿದ್ದು ಹಿರಿಯ ನಾಗರಿಕರು ಈ ಸೌಲಭ್ಯದ ಪ್ರಯೋಜನ ಪಡೆದುಕೊಳ್ಳಬಹುದು.

ನಿಮ್ಮ ಫಿಕ್ಸೆಡ್ ಡೆಪಾಸಿಟ್ ಗೆ ಅತಿ ಹೆಚ್ಚು ಬಡ್ಡಿ ನೀಡುವ ಬ್ಯಾಂಕ್‌ಗಳ ಪಟ್ಟಿ ಇಲ್ಲಿದೆ!

1 lakh investment of senior citizens will get 26 thousand interest

Follow us On

FaceBook Google News

1 lakh investment of senior citizens will get 26 thousand interest