ಈ ದಿನಾಂಕದ ಒಳಗೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳಿ! ಇಲ್ಲದಿದ್ರೆ 10,000 ದಂಡ

Aadhaar Card Update : ನಿಮ್ಮ ಬಳಿ 10 ವರ್ಷಗಳ ಹಿಂದೆ ಪಡೆದುಕೊಂಡ ಆಧಾರ್ ಕಾರ್ಡ್ ಇದ್ದರೆ ಅದನ್ನು ತಕ್ಷಣ ಅಪ್ಡೇಟ್ ಮಾಡಿಸಿಕೊಳ್ಳಿ

Aadhaar Card Update : ಆಧಾರ್ ಕಾರ್ಡ್ (Aadhaar card) ಎಲ್ಲಾ ಕೆಲಸಗಳಿಗೂ ಪ್ರಮುಖ ದಾಖಲೆ ಆಗಿರುವ ಹಿನ್ನೆಲೆಯಲ್ಲಿ ನೀವು ನಿಮ್ಮ ದಾಖಲೆಯನ್ನು ಸರಿಯಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯ

ನೀವು ಬಳಸುವ ಆಧಾರ್ ಕಾರ್ಡ್ ಹಳೆಯದಾಗುತ್ತಾ ಬಂದಂತೆ ನೀವು ಅದನ್ನು update ಮಾಡಿಸಿಕೊಳ್ಳಬೇಕಾಗುತ್ತದೆ. ಉದಾಹರಣೆಗೆ ನೀವು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸ್ಥಳಾಂತರಗೊಂಡಿರಬಹುದು. ಅಂತಹ ಸಂದರ್ಭದಲ್ಲಿ ನೀವು ನಿಮ್ಮ ಆಧಾರ್ ಕಾರ್ಡ್ ನಲ್ಲಿ ವಿಳಾಸ (address) ವನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ.

ಅಂಚೆ ಕಚೇರಿಯಲ್ಲಿ ಮಹಿಳೆಯರಿಗಾಗಿ ವಿಶೇಷ ಯೋಜನೆ! ಜನರಿಂದ ಭರ್ಜರಿ ರೆಸ್ಪಾನ್ಸ್

ಈ ದಿನಾಂಕದ ಒಳಗೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳಿ! ಇಲ್ಲದಿದ್ರೆ 10,000 ದಂಡ - Kannada News

ಒಂದು ವೇಳೆ ಆ ರೀತಿ ಮಾಡಿಕೊಳ್ಳದೆ ಸರ್ಕಾರಿ ಕೆಲಸಗಳಿಗೆ ಅಥವಾ ಇತರ ಉದ್ದೇಶಗಳಿಗೆ ಆಧಾರ್ ಕಾರ್ಡ್ ಬಳಕೆ ಮಾಡಿದರೆ ಖಂಡಿತವಾಗಿಯೂ ದೊಡ್ಡ ಸಮಸ್ಯೆ ಅನುಭವಿಸುತ್ತೀರಿ.

ಹಳೆಯ ಕಾರ್ಡ್ ಅಪ್ಡೇಟ್ ಗೆ ಗಡುವು ವಿಸ್ತರಿಸಿದ ಸರ್ಕಾರ! (Last date to update Aadhaar card)

ನಿಮ್ಮ ಬಳಿ 10 ವರ್ಷಗಳ ಹಿಂದೆ ಪಡೆದುಕೊಂಡ ಆಧಾರ್ ಕಾರ್ಡ್ ಇದ್ದರೆ ಅದನ್ನು ತಕ್ಷಣ ಅಪ್ಡೇಟ್ ಮಾಡಿಸಿಕೊಳ್ಳಿ. ಆಧಾರ್ ಕಾರ್ಡ್ ನಲ್ಲಿ ಹೆಸರು, ವಿಳಾಸ, ಲಿಂಗ, ಜನ್ಮ ದಿನಾಂಕ ಮೊದಲಾದವುಗಳನ್ನು ಬದಲಾಯಿಸಿಕೊಳ್ಳಲು ಸಾಧ್ಯವಿದೆ

ನೀವು 10 ವರ್ಷಕ್ಕಿಂತ ಹಳೆಯ ಕಾರ್ಡ್ ಹೊಂದಿದ್ದರೆ ತಕ್ಷಣ ಅದನ್ನು ಅಪ್ಡೇಟ್ ಮಾಡಿಸಿಕೊಳ್ಳಿ. ಇನ್ನು ಸರ್ಕಾರ ಮಾರ್ಚ್ 14, 2024ರ ವರೆಗೆ ಕಾಲಾವಕಾಶ ನೀಡಿದ್ದು, ಅಷ್ಟರ ಒಳಗೆ ನೀವು ಆಧಾರ ಅಪ್ಡೇಟ್ ಮಾಡಿಸಿಕೊಳ್ಳಬೇಕು ಇಲ್ಲವಾದರೆ ಭಾರಿ ಪ್ರಮಾಣದ ದಂಡ ತೆರ ಬೇಕಾಗಬಹುದು.

ಮಾರುಕಟ್ಟೆಗೆ ಮೂರು ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳು ಎಂಟ್ರಿ! ಖರೀದಿಗೆ ಮುಗಿಬಿದ್ದ ಜನ

ಆನ್ಲೈನಲ್ಲಿಯೇ ಮಾಡಿಕೊಳ್ಳಿ ಆಧಾರ್ ಅಪ್ಡೇಟ್! (Online Aadhaar update)

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಆಧಾರ್ ಕಾರ್ಡ್ ನವೀಕರಣಕ್ಕಾಗಿಯೇ ವಿಶೇಷ ವೆಬ್ಸೈಟ್ ಅನ್ನು ಬಿಡುಗಡೆ ಮಾಡಿದ್ದು ಅಲ್ಲಿ ನೀವು ಆಧಾರ್ ಅಪ್ಡೇಟ್ ಮಾಡಿಸಿಕೊಳ್ಳಬಹುದು.

Aadhaar Card* ಇದಕ್ಕಾಗಿ ನೀವು https://tathya.uidai.gov.in/access/login ಲಿಂಕ್ ಮೇಲೆ ಕ್ಲಿಕ್ ಮಾಡುವ ಮೂಲಕ ಯು ಐ ಡಿ ಎ ಐ ವೆಬ್ ಸೈಟ್ ಓಪನ್ ಮಾಡಿ.

* ಸ್ಕ್ರೀನ್ ಮೇಲೆ ಆಧಾರ ಕಾರ್ಡ್ ಸಂಖ್ಯೆ ಮತ್ತು ಕಾಣಿಸುತ್ತಿರುವ ಕ್ಯಾಪ್ಚ ಕೋಡ್ ಅನ್ನು ನಮೂದಿಸಿ.

* ಈಗ ನಿಮ್ಮ ಮೊಬೈಲ್ ಗೆ ಒಂದು ಒಟಿಪಿ ಕಳುಹಿಸಲಾಗುತ್ತದೆ ಅದನ್ನ ನಮೂದಿಸಿ.

* ಈಗ ನೀವು ನಿಮ್ಮ ಆಧಾರ್ ಕಾರ್ಡ್ ನಲ್ಲಿ ಹೆಸರು, ವಿಳಾಸ, ಜನ್ಮ ದಿನಾಂಕ ಹೀಗೆ ಮೊದಲಾದ ವಿವರಗಳು ಸರಿಯಾಗಿ ಇದೆಯೋ ಇಲ್ಲವೋ ಎನ್ನುವುದನ್ನು ಪರಿಶೀಲಿಸಿಕೊಳ್ಳಿ. ಒಂದು ವೇಳೆ ಸರಿಯಾಗಿ ಇಲ್ಲದೆ ಇದ್ದರೆ ಇಲ್ಲಿಯೇ ತಿದ್ದುಪಡಿ ಮಾಡಿಕೊಳ್ಳಬಹುದು. ಅಥವಾ ಎಲ್ಲವೂ ಸರಿಯಾಗಿದ್ದರೆ ನಾನು ವೆರಿಫೈ ಮಾಡಿದ್ದೇನೆ ಎನ್ನುವ ಆಯ್ಕೆಯನ್ನು ಕ್ಲಿಕ್ ಮಾಡಿ ಸಬ್ಮಿಟ್ ಮಾಡಿ.

ನಿಮ್ಮ ಫಿಕ್ಸೆಡ್ ಡೆಪಾಸಿಟ್ ಗೆ ಅತಿ ಹೆಚ್ಚು ಬಡ್ಡಿ ನೀಡುವ ಬ್ಯಾಂಕ್‌ಗಳ ಪಟ್ಟಿ ಇಲ್ಲಿದೆ!

* ನೀವು ವಿಳಾಸ ಪ್ರಮಾಣ ಪತ್ರಕ್ಕಾಗಿ ಪ್ಯಾನ್ ಕಾರ್ಡ್ ಆಧಾರ್ ಕಾರ್ಡ್ ದಾಖಲೆಗಳನ್ನು ಕೊಡಬೇಕು.

* ಈ ರೀತಿ ಮಾಡುವ ಮೂಲಕ ನೀವು ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳಬಹುದು. ಇದಕ್ಕೆ ನಿಗದಿತ ಶುಲ್ಕವನ್ನು ಕೂಡ ಪಾವತಿ ಮಾಡಬೇಕು ಆಧಾರ್ ಕಾರ್ಡ್ ಅಪ್ಡೇಟ್ ಅಪ್ಲಿಕೇಶನ್ ಸಲ್ಲಿಸಿದ ಕೆಲವೇ ದಿನಗಳಲ್ಲಿ ನವೀಕರಣಗೊಂಡಿರುವ ಆಧಾರ್ ಕಾರ್ಡ್ ನಿಮ್ಮ ಕೈ ಸೇರುತ್ತದೆ.

ನೀವು ಆಫ್ ಲೈನ್ (offline) ಮೂಲಕ ಅಂದರೆ ಹತ್ತಿರದ ಆಧಾರ್ ಕೇಂದ್ರಕ್ಕೆ ಹೋಗಿ ಬೇಕಾದರೂ ಆಧಾರ ಅಪ್ಡೇಟ್ ಮಾಡಿಸಬಹುದು. ಅಥವಾ ಹತ್ತಿರದ ಸೈಬರ್ ಕೇಂದ್ರಕ್ಕೆ ಹೋದರೆ ಅಲ್ಲಿಯೂ ಕೂಡ ಆಧಾರ್ ಅಪ್ಡೇಟ್ ಮಾಡಿಕೊಡಲಾಗುತ್ತದೆ. ಹಾಗಾಗಿ ಮಾರ್ಚ್ 14, 2024ರ ಒಳಗೆ ಆಧಾರ್ ಅಪ್ಡೇಟ್ ಮಾಡಿಸಿಕೊಳ್ಳಿ.

ಈ ಕ್ರೆಡಿಟ್ ಕಾರ್ಡ್‌ ಇದ್ರೆ ಕೇವಲ ಎರಡು ರೂಪಾಯಿಗೆ ಬಹಳಷ್ಟು ಪ್ರಯೋಜನಗಳು

Update Aadhaar Card by this date, Here is the Details

Follow us On

FaceBook Google News

Update Aadhaar Card by this date, Here is the Details