ತಂದೆಯಿಂದ ₹5 ಲಕ್ಷಕ್ಕೆ ಬೇಡಿಕೆ, ಮಗನೇ ಸೃಷ್ಟಿಸಿದ ಕಿಡ್ನಾಪ್ ನಾಟಕ! ಆಮೇಲೆ ಆಗಿದ್ದೇನು ಗೊತ್ತಾ

ಆನ್‌ಲೈನ್ ಆಟಗಳಲ್ಲಿ ಹಣ ಕಳೆದುಕೊಂಡ 17 ವರ್ಷದ ನೀಟ್ ಆಕಾಂಕ್ಷಿ, ತಂದೆಯಿಂದ ₹5 ಲಕ್ಷ ಪಡೆಯಲು ಅಪಹರಣದ ನಾಟಕವಾಡಿದ್ದಾನೆ. ಮಗನ ಜೀವಕ್ಕೆ ಅಪಾಯವೆಂದು ಭಾವಿಸಿದ ಕುಟುಂಬ ಆತಂಕಗೊಂಡಿದ್ದು, ಪೊಲೀಸರ ತನಿಖೆಯಲ್ಲಿ ಸತ್ಯ ಬಯಲಾಗಿದೆ.

  • ಆನ್‌ಲೈನ್ ಗೇಮಿಂಗ್‌ನಲ್ಲಿ ಹಣ ಕಳೆದುಕೊಂಡ ಯುವಕ
  • ತಂದೆಯಿಂದ ₹5 ಲಕ್ಷ ಪಡೆಯಲು ಅಪಹರಣದ ನಾಟಕ
  • ಪ್ರೇಯಸಿಯ ಜೊತೆಗಿದ್ದ ಯುವಕ, ಪತ್ತೆಹಚ್ಚಿದ ಪೊಲೀಸರು

ಉತ್ತರ ಪ್ರದೇಶದ ಲಕ್ನೋದಲ್ಲಿ (Lucknow) 17 ವರ್ಷದ ಯುವಕನೊಬ್ಬ ತಂದೆಯಿಂದ ಹಣ ಪಡೆಯಲು ತನ್ನದೇ ಕಿಡ್ನಾಪ್ ನಾಟಕವಾಡಿರುವ ಘಟನೆ ಬೆಳಕಿಗೆ ಬಂದಿದೆ. ಆನ್‌ಲೈನ್ ಆಟಗಳಲ್ಲಿ ಹಣ ಕಳೆದುಕೊಂಡು ಸಾಲ ಮಾಡಿಕೊಂಡಿದ್ದ ಯುವಕ, ಕುಟುಂಬದಿಂದ ₹5 ಲಕ್ಷ ಪಡೆಯಲು ಈ ತಂತ್ರ ರೂಪಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ನೀಟ್ (NEET Exam) ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ಈ ಯುವಕ, ಈ ಹಿಂದೆ ಆನ್‌ಲೈನ್ ಗೇಮಿಂಗ್‌ನಲ್ಲಿ ₹70,000 ಕಳೆದುಕೊಂಡಿದ್ದ. ಆಗ ಕುಟುಂಬದವರು ಆ ಹಣವನ್ನು ಪಾವತಿಸಿದ್ದರು. ಆದರೂ ಆಟ ಮುಂದುವರಿಸಿದ ಆತ ಮತ್ತೊಮ್ಮೆ ₹50,000 ಕಳೆದುಕೊಂಡಿದ್ದ. ಪದೇಪದೇ ಹಣ ಕೇಳುತ್ತಿದ್ದ ಮಗನಿಗೆ ಕುಟುಂಬದವರು ಹಣ ನೀಡುವುದನ್ನು ನಿಲ್ಲಿಸಿದ ಬಳಿಕ ಅಪಹರಣದ ಯೋಜನೆ ರೂಪಿಸಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ: Video: ಹೋಟೆಲ್‌ನಲ್ಲಿ ಏಕಾಏಕಿ ಕುಸಿದು ಬಿದ್ದು ನವವಧು ಸಾವು; ಸಿಸಿಟಿವಿ ದೃಶ್ಯ ವೈರಲ್

₹5 ಲಕ್ಷಕ್ಕೆ ಬೇಡಿಕೆ, ಕೊಲೆ ಬೆದರಿಕೆಯ ವಾಯ್ಸ್ ಮೆಸೇಜ್!

ಅಕ್ಟೋಬರ್ 20ರ ರಾತ್ರಿ 9 ಗಂಟೆಯ ನಂತರ ಯುವಕ ಮನೆಯಿಂದ ಹೊರಟು ಹೋಗಿದ್ದಾನೆ. ಬಳಿಕ ಮೊಬೈಲ್‌ನಿಂದ ಸಿಮ್ ಕಾರ್ಡ್ ತೆಗೆದು, ವೈ-ಫೈ ಮೂಲಕ ವಾಟ್ಸಾಪ್ (WhatsApp) ಬಳಸಿ ತಾಯಿ, ತಂದೆ ಹಾಗೂ ಸಂಬಂಧಿಕರಿಗೆ ಅಪಹರಣದ ಸಂದೇಶ ಕಳುಹಿಸಿದ್ದಾನೆ.

ನಂತರ ಅಪಹರಣಕಾರನಂತೆ ಬೇರೆ ಧ್ವನಿಯಲ್ಲಿ ಮಾತನಾಡುವ ವಾಯ್ಸ್ ಮೆಸೇಜ್ ಕಳುಹಿಸಿ ₹5 ಲಕ್ಷ ನೀಡುವಂತೆ ಬೇಡಿಕೆ ಇಟ್ಟಿದ್ದಾನೆ. ಮಗನಿಗೆ ಅಪಾಯವಾಗಬಹುದು ಎಂದು ಆತಂಕಗೊಂಡ ದೆಹಲಿಯಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ತಂದೆ ₹3 ಲಕ್ಷ ಹೊಂದಿಸಲು ಮುಂದಾಗಿದ್ದರು.

ಇದರಿಂದಲೂ ಕುಟುಂಬದ ಮೇಲೆ ಒತ್ತಡ ಹೆಚ್ಚಿಸಲು ಯುವಕನನ್ನು ಕೊಲೆ ಮಾಡಿರುವುದಾಗಿ ಮತ್ತೊಂದು ವಾಯ್ಸ್ ಮೆಸೇಜ್ (Voice Message) ಕಳುಹಿಸಿದ್ದಾನೆ ಎನ್ನಲಾಗಿದೆ. ಇದರಿಂದ ಬೆಚ್ಚಿಬಿದ್ದ ತಾಯಿ ಲಕ್ನೋದ ಪಾರಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಇದನ್ನೂ ಓದಿ: ಭೀಕರ ಅಪಘಾತ: ಕೆಟ್ಟು ನಿಂತಿದ್ದ ಟ್ರಕ್‌ಗೆ ಬಸ್ ಡಿಕ್ಕಿ; ಮೂವರು ಸಾವು, ಹಲವರಿಗೆ ಗಂಭೀರ ಗಾಯ

ಪೊಲೀಸರ ತನಿಖೆಯಲ್ಲಿ ಬಯಲಾದ ನಿಜಾಂಶ

ದೂರು ದಾಖಲಿಸಿಕೊಂಡ ಪೊಲೀಸರು ತಾಂತ್ರಿಕ ಸಾಕ್ಷ್ಯಗಳನ್ನು ಪರಿಶೀಲಿಸಿ ತನಿಖೆ ನಡೆಸಿದಾಗ, ಅಪಹರಣದ ಹಿಂದೆ ಯುವಕನೇ ಇದ್ದಾನೆ ಎಂಬುದು ಗೊತ್ತಾಗಿದೆ. ಬಳಿಕ ಆತನನ್ನು ಪ್ರೇಯಸಿಯ ಜೊತೆಗಿದ್ದಾಗ ಪತ್ತೆಹಚ್ಚಿ ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.

ಯುವಕ ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಂಡ ಪೊಲೀಸರು ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ. ಆನ್‌ಲೈನ್ ಗೇಮಿಂಗ್‌ನಿಂದ (Online Game) ಉಂಟಾದ ಹಣಕಾಸಿನ ಸಮಸ್ಯೆಯನ್ನು ಮುಚ್ಚಿಡಲು ಯುವಕ ಇಂತಹ ನಾಟಕವಾಡಿದ್ದಾನೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

English Summary▼

ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories