ಮಹಿಳೆಯರಿಗೆ ಸ್ಟೇಟ್ ಬ್ಯಾಂಕ್ ನಿಂದ 10 ಲಕ್ಷ ಸಬ್ಸಿಡಿ ಸಾಲ, ಯಾವುದೇ ದಾಖಲೆಗಳು ಬೇಕಿಲ್ಲ
- ಮಹಿಳೆಯರಿಗೆ ಸಿಗುತ್ತೆ 24 ಲಕ್ಷ ರೂಪಾಯಿಗಳ ಸಾಲ
- 10 ಲಕ್ಷಕ್ಕಿಂತ ಕಡಿಮೆ ಸಾಲಕ್ಕೆ ಬೇಕಾಗಿಲ್ಲ ಯಾವುದೇ ಮೇಲಾಧಾರ
- ಹೊಸ ಉದ್ಯಮ ಆರಂಭಿಸುವುದಕ್ಕೆ ಈಗಿರುವ ಉದ್ಯಮ ವಿಸ್ತರಿಸುವುದಕ್ಕೆ ಈ ಯೋಜನೆ ಸಹಕಾರಿ
Loan Scheme : ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Banak Of India) ವಿಶೇಷವಾಗಿ ಮಹಿಳಾ ಉದ್ಯಮಿಗಳನ್ನು ಉತ್ತೇಜಿಸುವುದಕ್ಕಾಗಿ ಹೊಸ ಯೋಜನೆ ಒಂದನ್ನು ಜಾರಿಗೆ ತಂದಿದೆ. ಈ ಯೋಜನೆಯ ಅಡಿಯಲ್ಲಿ ಮಹಿಳೆಯರು ಆರ್ಥಿಕವಾಗಿ ಸಾಕಷ್ಟು ಲಾಭವನ್ನು ಪಡೆದುಕೊಳ್ಳಲಿದ್ದಾರೆ. ಎಸ್ ಬಿ ಐ ಬ್ಯಾಂಕ್ (SBI Bank) ಘೋಷಿಸಿರುವ ಯೋಜನೆಯ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
ಮಹಿಳಾ ಉದ್ಯಮಿಗಳಿಗೆ 24 ಲಕ್ಷದವರೆಗೆ ಆರ್ಥಿಕ ನೆರವು!
ಎಸ್ ಬಿ ಐ ಸ್ತ್ರೀ ಶಕ್ತಿ ಸಾಲ ಯೋಜನೆಯನ್ನು ಘೋಷಣೆ ಮಾಡಿದೆ. ಈ ಯೋಜನೆ ಅಡಿಯಲ್ಲಿ 24 ಲಕ್ಷದವರೆಗೆ ಬ್ಯಾಂಕ್ನಿಂದ ಸಾಲವನ್ನು (Bank Loan) ಪಡೆದುಕೊಳ್ಳಬಹುದು. ಇದು ಬಹಳ ವಿಶೇಷವಾಗಿರುವ ಯೋಜನೆಯಾಗಿದ್ದು, ಮಹಿಳಾ ಉದ್ಯಮಿಗಳು ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆದುಕೊಳ್ಳಬಹುದು. ಇನ್ನು ಮಹಿಳೆಯರು ಎರಡು ಲಕ್ಷ ರೂಪಾಯಿಗಿಂತ ಕಡಿಮೆ ಸಾಲ ಮಾಡಿದ್ರೆ 0.5% ಹೆಚ್ಚುವರಿ ಸಬ್ಸಿಡಿಯನ್ನು ಬಡ್ಡಿಯಲ್ಲಿ ಪಡೆದುಕೊಳ್ಳಬಹುದು.
ಸಾಲಕ್ಕೆ ದಾಖಲೆಗಳೆ ಬೇಕಾಗಿಲ್ಲ!
ಮಹಿಳಾ ಉದ್ಯಮಿಗಳು 10 ಲಕ್ಷಕ್ಕಿಂತ ಕಡಿಮೆ ಸಾಲ ಮಾಡಿದ್ರೆ ಯಾವುದೇ ರೀತಿಯ ಮೇಲಾಧಾರ ನೀಡಬೇಕಾದ ಅಗತ್ಯವಿಲ್ಲ. ಜೊತೆಗೆ ಯಾವುದೇ ರೀತಿಯಾದಂತಹ ಪ್ರೋಸೆಸ್ಸಿಂಗ್ ಚಾರ್ಜಸ್ ಕೂಡ ಇರುವುದಿಲ್ಲ.
ಯಾರಿಗೆ ಸಿಗುತ್ತೆ ಸಾಲ!
ಯಾವುದೇ ವ್ಯಾಪಾರದಲ್ಲಿ ಮಹಿಳೆಯರು 51% ನಷ್ಟು ಪಾಲನ್ನು ಹೊಂದಿರಬೇಕಾಗುತ್ತದೆ. ಹೊಸ ವ್ಯಾಪಾರ ಆರಂಭಿಸಲು ಅಥವಾ ಈಗಾಗಲೇ ಮಾಡುತ್ತಿರುವ ಉದ್ಯಮವನ್ನು ಇನ್ನಷ್ಟು ವಿಸ್ತರಿಸಲು ಪಡೆದುಕೊಳ್ಳಬಹುದು.
ಅರ್ಜಿ ಸಲ್ಲಿಸುವುದು ಹೇಗೆ?
ಸಾಲ ಪಡೆದುಕೊಳ್ಳಲು ಹತ್ತಿರದ ಎಸ್ ಬಿ ಐ ಬ್ಯಾಂಕ್ ಗೆ ಭೇಟಿ ನೀಡಿ ಅಲ್ಲಿ ಅರ್ಜಿ ಫಾರಂ ತೆಗೆದುಕೊಂಡು ಅದನ್ನು ಭರ್ತಿ ಮಾಡಿ ಮತ್ತು ಅಗತ್ಯ ದಾಖಲೆಗಳನ್ನು ನೀಡಿ. ನಿಮ್ಮ ಉದ್ಯಮದ ಬಗ್ಗೆ ಸಂಪೂರ್ಣ ಪ್ಲಾನ್ ಅನ್ನು ಬ್ಯಾಂಕ್ ಗೆ ಕೊಡಬೇಕು. ನಿಮ್ಮ ಪ್ಲಾನ್ ಪರಿಶೀಲಿಸಿದ ನಂತರ ನೀವು ಅರ್ಹರಾಗಿದ್ದರೆ ತಕ್ಷಣ ಎಸ್ ಬಿ ಐ ಸಾಲವನ್ನು ಮಂಜೂರು ಮಾಡುತ್ತದೆ.
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು:
* ಉದ್ಯಮದ ಬಗ್ಗೆ ಸಂಪೂರ್ಣ ವರದಿ
* ಪಾಸ್ ಪೋರ್ಟ್ ಗಾತ್ರದ ಭಾವಚಿತ್ರ
* ಪಾನ್ ಕಾರ್ಡ್
* ಆಧಾರ್ ಕಾರ್ಡ್
* ಆದಾಯ ಪುರಾವೆ
ಇಷ್ಟು ದಾಖಲೆಗಳನ್ನು ನೀಡಿ ನೀವು ಸಾಲವನ್ನು ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದು. ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಬಹಳ ಉತ್ತಮವಾಗಿರುವ ಯೋಜನೆ ಇದಾಗಿದ್ದು, ಇದರಿಂದ ಆರ್ಥಿಕವಾಗಿ ಸಾಕಷ್ಟು ಪ್ರಯೋಜನವಾಗಲಿದೆ
10 Lakh Subsidy Loan for Women from State Bank, No Documents Required