₹10 ರೂಪಾಯಿ ನಾಣ್ಯ ರದ್ದಾಗಿದೆಯೇ? ಆರ್‌ಬಿಐ ಕೊಟ್ಟ ಸ್ಪಷ್ಟನೆ ಇಲ್ಲಿದೆ

10 ರೂಪಾಯಿ ನಾಣ್ಯದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿಗಳ ನಡುವೆ RBI ಸ್ಪಷ್ಟನೆ ನೀಡಿದೆ. ಹೊಸ ಹಾಗೂ ಹಳೆಯ ಡಿಸೈನ್‌ಗಳ ₹10 ರೂಪಾಯಿ ನಾಣ್ಯಗಳು ಎಲ್ಲವೂ ಚಲಾವಣೆಯಲ್ಲೇ ಇವೆ.

ಸಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ “₹10 ರೂಪಾಯಿ ನಾಣ್ಯವನ್ನು ರದ್ದುಪಡಿಸಲಾಗಿದೆ” ಎಂಬ ಸುದ್ದಿಯು ಸಂಪೂರ್ಣ ಸುಳ್ಳು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಸ್ಪಷ್ಟಪಡಿಸಿದೆ. ಹಳೆಯ ಡಿಸೈನ್‌ ಅಥವಾ ಹೊಸದಾಗಿರಲಿ, ಎಲ್ಲಾ ₹10 ರೂಪಾಯಿ ನಾಣ್ಯಗಳೂ ಚಲಾವಣೆಯಲ್ಲೇ ಇವೆ ಎಂದು RBI ತಿಳಿಸಿದೆ.

ಭಾರತದಲ್ಲಿ ಮೊದಲ ಬಾರಿಗೆ ₹10 ರೂಪಾಯಿ ನಾಣ್ಯವನ್ನು 2005ರಲ್ಲಿ RBI ಬಿಡುಗಡೆ ಮಾಡಿತ್ತು ಮತ್ತು 2006ರಲ್ಲಿ ಸಾರ್ವಜನಿಕರಿಗೆ ಪರಿಚಯಿಸಿತು. ಇದು ದೇಶದ ಮೊದಲ ದ್ವಿಲೋಹ ನಾಣ್ಯ (bi-metallic coin) ಆಗಿದ್ದು, ಮಧ್ಯ ಭಾಗದಲ್ಲಿ ತಾಮ್ರ-ನಿಕಲ್ ಮತ್ತು ಹೊರ ಭಾಗದಲ್ಲಿ ಅಲ್ಯೂಮಿನಿಯಂ ಮಿಶ್ರಣದಿಂದ ತಯಾರಿಸಲಾಯಿತು. ಇದರ ತೂಕ 7.71 ಗ್ರಾಂ ಮತ್ತು ವ್ಯಾಸ 27 ಮಿ.ಮೀ. ಆಗಿದೆ.

ಈ ನಾಣ್ಯವನ್ನು ಬಿಡುಗಡೆ ಮಾಡಿದ ಬಳಿಕ, RBI ವಿವಿಧ ಅವಧಿಗಳಲ್ಲಿ ಸುಮಾರು 14 ವಿನ್ಯಾಸಗಳ ₹10 ರೂಪಾಯಿ ನಾಣ್ಯಗಳು ಬಿಡುಗಡೆ ಮಾಡಿದೆ. ಜನರ ಬಳಕೆಯ ಅಗತ್ಯಗಳಿಗೆ ತಕ್ಕಂತೆ ವಿನ್ಯಾಸ ಬದಲಾಗುತ್ತಿರಬಹುದು, ಆದರೆ ಎಲ್ಲಾ ನಾಣ್ಯಗಳೂ ಚಲಾವಣೆಗೆ ಮಾನ್ಯವೆಂದು ಬ್ಯಾಂಕ್ ಸ್ಪಷ್ಟನೆ ನೀಡಿದೆ.

2011ರಲ್ಲಿ ರೂಪಾಯಿ ಚಿಹ್ನೆ (₹) ಅಧಿಕೃತವಾಗಿ ಪರಿಚಯಿಸಲಾಯಿತು. ಅದಕ್ಕಿಂತ ಮೊದಲು ಮುದ್ರಿತ ನಾಣ್ಯಗಳಲ್ಲಿ ಆ ಚಿಹ್ನೆ ಇರದು. ಇದರ ಪರಿಣಾಮವಾಗಿ ಕೆಲವು ವ್ಯಾಪಾರಿಗಳು ಹಳೆಯ ನಾಣ್ಯಗಳನ್ನು ಸ್ವೀಕರಿಸದೆ ಗೊಂದಲ ಉಂಟುಮಾಡಿದರು. ಈ ಪಕ್ಕಾ ಸುಳ್ಳು ಸುದ್ದಿಯನ್ನು ತಡೆಗಟ್ಟಲು RBI ಅನೇಕ ಬಾರಿ ಸ್ಪಷ್ಟನೆ ನೀಡಿದೆ.

ಪ್ರಸ್ತುತ ದೇಶದ ಮಾರುಕಟ್ಟೆಯಲ್ಲಿ ನಾಲ್ಕು ಬಗೆಗಿನ ₹10 ರೂಪಾಯಿ ನಾಣ್ಯಗಳು ಚಲಾವಣೆಯಲ್ಲಿವೆ. ಪುರಾತನ ವಿನ್ಯಾಸಗಳೂ ಸಹ ಮಾನ್ಯ. ಹೀಗಾಗಿ ಯಾರಾದರೂ ಈ ನಾಣ್ಯವನ್ನು ಸ್ವೀಕರಿಸಲು ನಿರಾಕರಿಸಿದರೆ, ಅವರು ಕಾನೂನಿನ ಉಲ್ಲಂಘನೆ ಮಾಡುತ್ತಿರುವಂತೆಯೇ ಆಗುತ್ತದೆ.

RBI ಸ್ಪಷ್ಟಪಡಿಸಿರುವಂತೆ, “ರೂಪಾಯಿ ಚಿಹ್ನೆ ಇರುವ ಅಥವಾ ಇಲ್ಲದ ಎಲ್ಲಾ ನಾಣ್ಯಗಳು ಮಾನ್ಯವಾಗಿವೆ, ಅವುಗಳನ್ನು ಎಲ್ಲೆಡೆ ಬಳಸಿ” ಎಂದು ಜನರಿಗೆ ಮನವಿ ಮಾಡಿದೆ. ಹೀಗಾಗಿ ತಪ್ಪು ಸುದ್ದಿಗಳನ್ನು ನಂಬದೆ, ಅಧಿಕೃತ ಮಾಹಿತಿಯನ್ನೇ ವಿಶ್ವಾಸಿಸಲು ತಜ್ಞರು ಸಲಹೆ ನೀಡಿದ್ದಾರೆ.

10 Rupee Coins Are Still Valid, Don’t Believe Rumors

Related Stories