10ನೇ ತರಗತಿ ಪಾಸ್ ಆಗಿರೋ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು ಸಿಗಲಿದೆ ₹8000 ರೂಪಾಯಿ! ಹೊಸ ಯೋಜನೆ

ಈ ಕೋರ್ಸ್ ಅನ್ನು ಸ್ಕಿಲ್ ಇಂಡಿಯಾ ಡಿಜಿಟಲ್ (Skill India Digital) ಹೆಸರಿನಲ್ಲಿ ಶುರು ಮಾಡಲಾಗುತ್ತಿದ್ದು, ಈ ಕೋರ್ಸ್ ಮಾಡಿಕೊಂಡವರಿಗೆ ಪ್ರತಿ ತಿಂಗಳು ₹8000 ರೂಪಾಯಿ ಹಣಗಳಿಸುವುದಕ್ಕೆ ಸಾಧ್ಯವಾಗುತ್ತದೆ.

Bengaluru, Karnataka, India
Edited By: Satish Raj Goravigere

ನಮ್ಮ ದೇಶದಲ್ಲಿ ಹೆಚ್ಚಾಗಿ ಕಾಡುತ್ತಿರುವ ಸಮಸ್ಯೆ ನಿರುದ್ಯೋಗ ಸಮಸ್ಯೆ. ಚೆನ್ನಾಗಿ ಓದಿ, ಡಿಗ್ರಿ (Degree), ಮಾಸ್ಟರ್ ಡಿಗ್ರಿ ಮಾಡಿಕೊಂಡಿದ್ದರೂ ಕೂಡ ಒಳ್ಳೆಯ ಕೆಲಸ ಸಿಗದೆ, ಓದಿಗೆ ತಕ್ಕಂಥ ಕೆಲಸವಿಲ್ಲದೆ ಹಲವಾರು ಜನರು ನಿರುದ್ಯೋಗಿಗಳಾಗಿದ್ದಾರೆ. ಅಂಥವರಿಗೆ ಸಹಾಯ ಮಾಡುವುದಕ್ಕಾಗಿ ಸರ್ಕಾರ ಕೂಡ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ.

ಇದೀಗ ಕೇಂದ್ರ ಸರ್ಕಾರವು ನಿರುದ್ಯೋಗಿಗಳಿಗೆ ಸಹಾಯ ಮಾಡುವುದಕ್ಕಾಗಿ ಹೊಸದೊಂದು ಯೋಜನೆಯನ್ನು ಜಾರಿಗೆ ತಂದಿದೆ.. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಕೂಡ ನಿರುದ್ಯೋಗಳಿಗೆ ಸಹಾಯ ಆಗಲಿ ಎಂದು ಯುವನಿಧಿ ಯೋಜನೆಯನ್ನು ಜಾರಿಗೆ ತಂದಿದೆ.

10th class pass unemployed will get 8000 rupees every month by this Scheme

ಈ ಯೋಜನೆಯ ಮೂಲಕ ಪದವಿ ಮುಗಿಸಿ (Education) ಕೆಲಸ ಸಿಗದವರಿಗೆ ಪ್ರತಿ ತಿಂಗಳು ₹3000, ಡಿಪ್ಲೊಮಾ (Diploma) ಮಾಡಿ ಕೆಲಸ ಸಿಗದವರಿಗೆ ಪ್ರತಿ ತಿಂಗಳು ₹1500 ಸ್ಟೈಪಂಡ್ ಕೊಡಲಾಗುತ್ತಿದೆ. ಅದೇ ರೀತಿ ಈಗ ಕೇಂದ್ರ ಸರ್ಕಾರವು ಪಿಎಮ್ ಮೋದಿ ಅವರ ನೇತೃತ್ವದಲ್ಲಿ ಹೊಸದೊಂದು ಯೋಜನೆಯನ್ನು ಜಾರಿಗೆ ತಂದಿದ್ದು, ನಿರುದ್ಯೋಗಿಗಳಿಗೆ ಅನುಕೂಲ ಮಾಡಿಕೊಡಲಿದೆ.

ಈ 10 ರೂಪಾಯಿ ನೋಟು ನಿಮ್ಮನ್ನು ಲಕ್ಷಾಧಿಪತಿ ಮಾಡುತ್ತೆ ಅಂದ್ರೆ ನೀವು ನಂಬಲೇಬೇಕು! ಹೇಗೆ ಗೊತ್ತಾ?

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಈ ಹೊಸ ಯೋಜನೆಯ ಹೆಸರು ಪ್ರಧಾನಮಂತ್ರಿ ಕೌಶಲ್ ವಿಕಾಸ್ ಯೋಜನೆ. ಈ ಯೋಜನೆಯ ಮೂಲಕ 10ನೇ ತರಗತಿ ಪಾಸ್ ಆಗಿರುವ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು 8000 ರೂಪಾಯಿಗಳವರೆಗು ಸ್ಟೈಪಂಡ್ ಸಿಗಲಿದೆ.

ಜೊತೆಗೆ ಅವರುಗಳು ಕೆಲಸ ಮಾಡುವುದಕ್ಕೆ ಕೌಶಲ್ಯ ತರಬೇತಿಯನ್ನು ಕೂಡ ನೀಡಲಾಗುತ್ತದೆ. ಈ ಯೋಜನೆಗೆ ಯಾರೆಲ್ಲಾ ಅರ್ಹತೆ ಪಡೆಯುತ್ತಾರೆ? ಅಪ್ಲೈ ಮಾಡೋದು ಹೇಗೆ? ಪೂರ್ತಿಯಾಗಿ ತಿಳಿಯೋಣ..

ಈ ಯೋಜನೆಯ ಕೆಲಸ ಮಾಡುವುದಕ್ಕೆ ಕೌಶಲ್ಯ ತರಬೇತಿ ಕೊಡಲಾಗುತ್ತದೆ, 40 ವಿವಿಧ ವಿಭಾಗಗಳಲ್ಲಿ ಈ ತರಬೇತಿ ಸಿಗಲಿದ್ದು, ಆನ್ಲೈನ್ ಮೂಲಕ ತರಬೇತಿ ಪಡೆಯುವುದಕ್ಕೆ ಕೂಡ ಅವಕಾಶ ನೀಡಲಾಗಿದೆ.

ಈ ಕೋರ್ಸ್ ಅನ್ನು ಸ್ಕಿಲ್ ಇಂಡಿಯಾ ಡಿಜಿಟಲ್ (Skill India Digital) ಹೆಸರಿನಲ್ಲಿ ಶುರು ಮಾಡಲಾಗುತ್ತಿದ್ದು, ಈ ಕೋರ್ಸ್ ಮಾಡಿಕೊಂಡವರಿಗೆ ಪ್ರತಿ ತಿಂಗಳು ₹8000 ರೂಪಾಯಿ ಹಣಗಳಿಸುವುದಕ್ಕೆ ಸಾಧ್ಯವಾಗುತ್ತದೆ. ಇದರಿಂದ ಇನ್ನಷ್ಟು ಅನುಕೂಲಗಳು ಸಹ ಇದೆ.

ಸರ್ಕಾರದಿಂದಲೇ ಸಿಗಲಿದೆ 10 ಲಕ್ಷ ಹಣ! ಸ್ವಂತ ಬ್ಯುಸಿನೆಸ್ ಮಾಡಬೇಕು ಅನ್ನೋರಿಗೆ ಹೊಸ ಯೋಜನೆ

ಈ ಕೋರ್ಸ್ ಮಾಡಿಕೊಂಡವರಿಗೆ ಕೇಂದ್ರ ಸರ್ಕಾರದ ಕಡೆಯಿಂದ ಸರ್ಟಿಫಿಕೇಟ್ ಕೂಡ ಸಿಗುತ್ತದೆ.. ಯಾವ್ಯಾವ ಕೋರ್ಸ್ ಲಭ್ಯವಿರುತ್ತದೆ, ಅದರಿಂದ ಏನೆಲ್ಲಾ ಕಲಿಯಬಹುದು, ಕೋರ್ಸ್ ಯಾವಾಗ ಶುರುವಾಗುತ್ತದೆ ಎನ್ನುವುದರ ಬಗ್ಗೆ ಪೂರ್ತಿ ಮಾಹಿತಿಯನ್ನು https://www.pmkvyofficial.org/home-page ಈ ಲಿಂಕ್ ಗೆ ಭೇಟಿ ನೀಡುವ ಮೂಲಕ ತಿಳಿದುಕೊಳ್ಳಬಹುದು.

ಹಿಂದಿ ಮತ್ತು ಇಂಗ್ಲಿಷ್ ಭಾಷೆ ಚೆನ್ನಾಗಿ ಗೊತ್ತಿರುವ, 18 ವರ್ಷ ಮೇಲ್ಪಟ್ಟ ಅಭ್ಯರ್ಥಿಗಳು ಈ ಕೋರ್ಸ್ ಗೆ ಸೇರಿಕೊಳ್ಳಬಹುದು.

10th class pass unemployed will get 8000 rupees every month by this Scheme