ಸರ್ಕಾರದಿಂದಲೇ ಸಿಗಲಿದೆ 10 ಲಕ್ಷ ಹಣ! ಸ್ವಂತ ಬ್ಯುಸಿನೆಸ್ ಮಾಡಬೇಕು ಅನ್ನೋರಿಗೆ ಹೊಸ ಯೋಜನೆ

Story Highlights

ಕೇಂದ್ರ ಸರ್ಕಾರವು ಜನರಿಗೆ ಸ್ವಂತ ಉದ್ಯೋಗ, ಸ್ವಂತ ಉದ್ಯಮ ಶುರು ಮಾಡುವುದಕ್ಕೆ ಪಿಎಮ್ ಮುದ್ರಾ ಲೋನ್ ಯೋಜನೆಯನ್ನು (Mudra Loan) ಜಾರಿಗೆ ತಂದಿದೆ. ಈ ಒಂದು ಯೋಜನೆಯ ಮೂಲಕ ಅತೀ ಕಡಿಮೆ ಬಡ್ಡಿಗೆ ಸ್ವಂತ ಉದ್ಯಮ ಶುರು ಮಾಡಲು ಸಾಲ ಕೊಡಲಾಗುತ್ತದೆ.

Business Loan : ಹಲವಾರು ಜನರಿಗೆ ಓದಿಗೆ ತಕ್ಕಂಥ ಕೆಲಸ ಸಿಗುವುದಿಲ್ಲ. ಚೆನ್ನಾಗಿ ಓದಿಕೊಂಡಿದ್ದರು ಸಹ, ಅವರ ಓದಿಗೆ ತಕ್ಕ ಹಾಗೆ ಸಂಬಳ ಸಿಗುವುದಿಲ್ಲ ಎಂದು ಕೆಲಸಕ್ಕೆ ಸೇರದೆ ಇರುವವರು ಸಹ ಇರುತ್ತಾರೆ. ಇನ್ನು ಕೆಲವರು ಅವರಿಗೆ ಸಮಾಧಾನ ಇಲ್ಲದೇ ಇರುವ ಸಂಬಳ ಸಿಕ್ಕರೂ ಬೇರೆ ವಿಧಿ ಇಲ್ಲದೇ ಕೆಲಸ ಮಾಡುತ್ತಿರುತ್ತಾರೆ.

ಅಂಥವರಿಗೆ ತಮ್ಮದೇ ಸ್ವಂತ ಬ್ಯುಸಿನೆಸ್ ಮಾಡಬೇಕು ಎಂದು ಕನಸು ಇರುತ್ತದೆ. ಆದರೆ ಹೆಚ್ಚಿನ ಜನರಿಗೆ ಸರಿಯಾದ ದಾರಿ ಸಿಗುವುದಿಲ್ಲ. ಇನ್ನು ಕೆಲವರಿಗೆ ಆರ್ಥಿಕ ಸಮಸ್ಯೆ ಇರುತ್ತದೆ.

ಕೆಲವರಿಗೆ ಮನೆಯವರಿಂದ ಸಪೋರ್ಟ್ ಸಿಗುವುದಿಲ್ಲ. ಅಂಥವರು ಹಣದ ಸಮಸ್ಯೆ ಇಂದಲೋ, ಇನ್ನೇನೋ ಸಮಸ್ಯೆ ಇಂದಲೋ ಬ್ಯುಸಿನೆಸ್ ಶುರು (Own Business) ಮಾಡಲು ಆಗಿರುವುದಿಲ್ಲ. ಅಂಥವರಿಗೆ ಈಗ ಕೇಂದ್ರ ಸರ್ಕಾರ ಸಹಾಯ ಮಾಡಲಿದೆ.

ಕೇಂದ್ರ ಸರ್ಕಾರದ ಈ ಒಂದು ಯೋಜನೆಯ ಮೂಲಕ ಬ್ಯುಸಿನೆಸ್ ಶುರು ಮಾಡುವವರಿಗೆ 10 ಲಕ್ಷ ರೂಪಾಯಿಗಳವರೆಗು Loan ಸಿಗುತ್ತದೆ. ಹಾಗಿದ್ದಲ್ಲಿ ಈ ಯೋಜನೆ ಯಾವುದು? ಇದಕ್ಕೆ ಅಪ್ಲೈ ಮಾಡುವುದು ಹೇಗೆ? ಎಲ್ಲವನ್ನು ತಿಳಿಸುತ್ತೇವೆ ನೋಡಿ..

ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಪ್ರತಿ ತಿಂಗಳು ಪಡೆಯಿರಿ ₹5000! ಇಂದೇ ಅಕೌಂಟ್ ಓಪನ್ ಮಾಡಿ

ಪಿಎಮ್ ಮುದ್ರಾ ಲೋನ್ ಯೋಜನೆ:

ಕೇಂದ್ರ ಸರ್ಕಾರವು ಜನರಿಗೆ ಸ್ವಂತ ಉದ್ಯೋಗ, ಸ್ವಂತ ಉದ್ಯಮ ಶುರು ಮಾಡುವುದಕ್ಕೆ ಪಿಎಮ್ ಮುದ್ರಾ ಲೋನ್ ಯೋಜನೆಯನ್ನು (Mudra Loan) ಜಾರಿಗೆ ತಂದಿದೆ. ಈ ಒಂದು ಯೋಜನೆಯ ಮೂಲಕ ಅತೀ ಕಡಿಮೆ ಬಡ್ಡಿಗೆ ಸ್ವಂತ ಉದ್ಯಮ ಶುರು ಮಾಡಲು ಸಾಲ ಕೊಡಲಾಗುತ್ತದೆ.

ಈ ಸಾಲ ಪಡೆದು ನೀವು ನಿಮಗೆ ಇಷ್ಟ ಆಗುವ ಸ್ವಂತ ಕೆಲಸವನ್ನು ಶುರು ಮಾಡಿಕೊಳ್ಳಬಹುದು. ಮಹಿಳೆಯರಿಗೆ ಇದು ಮುಖ್ಯವಾದ ಸೌಲಭ್ಯ ಆಗಿದ್ದು, ಮಹಿಳೆಯರು ಕೂಡ ಈ ಒಂದು ಯೋಜನೆಯ ಮೂಲಕ Loan ಪಡೆಯಬಹುದು.

ಮುದ್ರಾ ಯೋಜನೆಯ ಮೂಲಕ ಸಿಗಲಿದೆ 10 ಲಕ್ಷ ಸಾಲ:

ಮುದ್ರಾ ಯೋಜನೆಯ ಸಾಲವನ್ನು 3 ವಿಭಿನ್ನ ಹಂತಗಳಲ್ಲಿ ನೀಡಲಾಗುತ್ತದೆ..

ಮೊದಲ ಹಂತ: ಮೊದಲ ಹಂತದಲ್ಲಿ ಶಿಶು ಸಾಲ ಎಂದು ಕೊಡಲಾಗುತ್ತದೆ, ಇದರಲ್ಲಿ 50 ಸಾವಿರ ರೂಪಾಯಿಗಳ ಸಾಲ ಕೊಡಲಾಗುತ್ತದೆ.

ಎರಡನೇ ಹಂತ: ಈ ಹಂತದ ಸಾಲವನ್ನು ಕಿಶೋರ್ ಸಾಲ ಎಂದು ಕರೆಯಲಾಗುತ್ತದೆ, ಈ ಹಂತದಲ್ಲಿ 5 ಲಕ್ಷ ರೂಪಾಯಿಗಳವರೆಗು ಸಾಲ ಸಿಗುತ್ತದೆ.

ಮೂರನೇ ಹಂತ: ಇನ್ನು ದೊಡ್ಡ ಬ್ಯುಸಿನೆಸ್ ಅನ್ನು ಶುರು ಮಾಡಬೇಕು ಎಂದರೆ, ಮೂರನೆಯ ಹಂತ ಆಗಿರುಗ ತರುಣ್ ಹಂತದಲ್ಲಿ ಸಾಲ ಸಿಗಲಿದ್ದು, 10 ಲಕ್ಷ ರೂಪಾಯಿ ಸಾಲ ಪಡೆಯಬಹುದು.

1959ರಲ್ಲಿ 1 ಗ್ರಾಂ ಚಿನ್ನದ ಬೆಲೆ ಎಷ್ಟಿತ್ತು ಗೊತ್ತಾ? ಚಾಕಲೇಟ್ ಬೆಲೆ! ವೈರಲ್ ಆಯ್ತು ಚಿನ್ನ ಖರೀದಿ ಬಿಲ್

Mudra Loanಮುದ್ರಾ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ:

*ಮುದ್ರಾ ಯೋಜನೆಗೆ ಅರ್ಜಿಯನ್ನು ಯಾವುದೇ ಬ್ಯಾಂಕ್ (Bank) ಮೂಲಕ ಸಲ್ಲಿಸಬಹುದು. ಅಲ್ಲಿನ ಅಧಿಕಾರಿಗಳಿಗೆ ನಿಮ್ಮ ಬ್ಯುಸಿನೆಸ್ ಬಗ್ಗೆ ಪೂರ್ತಿ ಮಾಹಿತಿ ಕೊಡಬೇಕು.

*ನಿಮ್ಮ ಬ್ಯುಸಿನೆಸ್ ಗೆ ಎಷ್ಟು ಮೊತ್ತ ಬೇಕಾಗುತ್ತದೆ ಎನ್ನುವುದರ ಮೇಲೆ 10 ಲಕ್ಷ ರೂಪಾಯಿಗಳವರೆಗು ಸಾಲ ಕೊಡಲಾಗುತ್ತದೆ.

*ನಿಮ್ಮ ಬ್ಯುಸಿನೆಸ್ ಗೆ ಬೇಕಾದ 75% ಹಣವನ್ನು ಬ್ಯಾಂಕ್ ಇಂದ ಕೊಡಲಾಗುತ್ತದೆ, 25% ಹಣವನ್ನು ನೀವು ವೆಚ್ಚ ಮಾಡಬೇಕಾಗುತ್ತದೆ.

*ಸಣ್ಣ ಉದ್ಯಮಗಳನ್ನು ಶುರು ಮಾಡುವುದಕ್ಕೆ ಪಿಎಂ ಮುದ್ರಾ ಸಾಲ ಯೋಜನೆಯ ಮೂಲಕ ಸಾಲ ಕೊಡಲಾಗುತ್ತದೆ.

*ಅರ್ಜಿ ಸಲ್ಲಿಸಲು ಬ್ಯಾಂಕ್ ಗೆ ನೇರವಾಗಿ ಭೇಟಿ ನೀಡಬಹುದು ಅಥವಾ mudra.org.in ಈ ಲಿಂಕ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಜಾಸ್ತಿ ಕಂಡೀಷನ್ ಇಲ್ಲದೆ ಕಡಿಮೆ ಬಡ್ಡಿಗೆ ಪರ್ಸನಲ್ ಲೋನ್ ಕೊಡುವ ಟಾಪ್ 10 ಬ್ಯಾಂಕುಗಳು ಇವು!

Get 10 lakh loan from the government Scheme, a new Scheme for start Your own business

Related Stories