ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಪ್ರತಿ ತಿಂಗಳು ಪಡೆಯಿರಿ ₹5000! ಇಂದೇ ಅಕೌಂಟ್ ಓಪನ್ ಮಾಡಿ
ಯಾರೆಲ್ಲಾ ತಮಗೆ ಸಿಗುವ ಸಂಬಳದಲ್ಲಿ ಒಂದಷ್ಟು ಮೊತ್ತವನ್ನು ಉಳಿಸಿ, ಹೂಡಿಕೆ (Investment) ಮಾಡಿ ಮುಂದೊಂದು ದಿನ ಒಳ್ಳೆಯ ಆದಾಯ ಪಡೆಯಬೇಕು ಎಂದು ಬಯಸುತ್ತಾರೋ ಅಂಥವರಿಗೆ ಪೋಸ್ಟ್ ಆಫೀಸ್ ಉತ್ತಮವಾದ ಆಯ್ಕೆ ಆಗಿದೆ. ಹೌದು, ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡುವುದಕ್ಕೆ ಹಲವು ಒಳ್ಳೆಯ ಸ್ಕೀಮ್ ಗಳು ಇವೆ. ಹಾಗೆಯೇ ಇಲ್ಲಿ ನೀವು ಹೂಡಿಕೆ ಮಾಡುವ ಹಣ ಬಹಳ ಸುರಕ್ಷಿತವಾಗಿಯೂ ಇರುತ್ತದೆ.
ಹಾಗಾಗಿ ಹೆಚ್ಚಿನ ಜನರು ಪೋಸ್ಟ್ ಆಫೀಸ್ ನಲ್ಲಿ (Post Office Scheme) ಹೂಡಿಕೆ ಮಾಡುವುದಕ್ಕೆ ಮುಂದೆ ಬರುತ್ತಾರೆ. ಹಾಗೆಯೇ ಸಾಮಾನ್ಯ ವರ್ಗದ ಜನರಿಂದ ಹಿಡಿದು, ಎಲ್ಲರಿಗೂ ಅನುಕೂಲ ಆಗುವಂಥ ಅನೇಕ ಯೋಜನೆಗಳು ಪೋಸ್ಟ್ ಆಫೀಸ್ ನಲ್ಲಿ ಲಭ್ಯವಿದೆ.
ಪೋಸ್ಟ್ ಆಫೀಸ್ ನಲ್ಲಿ ಲಭ್ಯವಿರುವ ಯೋಜನೆಗಳಿಗೆ ಒಳ್ಳೆಯ ರಿಟರ್ನ್ಸ್ (Good Returns) ಕೂಡ ಸಿಗುತ್ತದೆ. ಹಾಗಾಗಿ ಹೂಡಿಕೆ ಮಾಡುವುದಕ್ಕೆ ಇದು ಅತ್ಯುತ್ತಮವಾದ ಆಯ್ಕೆ ಆಗಿದೆ. ಇಂಥದ್ದೊಂದು ಉತ್ತಮವಾದ ಯೋಜನೆ ಬಗ್ಗೆ ಇಂದು ತಿಳಿಸುತ್ತೇವೆ..
1959ರಲ್ಲಿ 1 ಗ್ರಾಂ ಚಿನ್ನದ ಬೆಲೆ ಎಷ್ಟಿತ್ತು ಗೊತ್ತಾ? ಚಾಕಲೇಟ್ ಬೆಲೆ! ವೈರಲ್ ಆಯ್ತು ಚಿನ್ನ ಖರೀದಿ ಬಿಲ್
ಪೋಸ್ಟ್ ಆಫೀಸ್ ಮಾಸಿಕ ಉಳಿತಾಯ ಯೋಜನೆ:
ಪೋಸ್ಟ್ ಆಫೀಸ್ ನಲ್ಲಿ ಲಭ್ಯವಿರುವ, ಪ್ರತಿ ತಿಂಗಳು ಆದಾಯ ಬರುವಂಥ ಪ್ರಮುಖವಾದ ಯೋಜನೆ Post Office Monthly Investment Scheme (ಪೋಸ್ಟ್ ಆಫೀಸ್ ಮಂತ್ಲಿ ಇನ್ವೆಸ್ಟ್ಮೆಂಟ್ ಸ್ಕೀಮ್). ಈ ಒಂದು ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ಕೂಡ ₹5000 ಆದಾಯ ಕೊಡುವಂಥ ಯೋಜನೆ ಇದಾಗಿದ್ದು, ಇದರಲ್ಲಿ ಹೂಡಿಕೆ ಮಾಡುವವರಿಗೆ ಒಳ್ಳೆಯ ಸುರಕ್ಷತೆ ಕೊಡುತ್ತದೆ..
ಅತೀ ಕಡಿಮೆ ಅಪಾಯ ತಂದೊಡ್ಡುವ ಯೋಜನೆ ಇದಾಗಿದೆ, ಈ ಒಂದು ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ಪ್ರತಿ ತಿಂಗಳು ಕೂಡ ನಿರ್ದಿಷ್ಟ ಆದಾಯವನ್ನು ಪಡೆಯಬಹುದು.
ಪ್ರತಿ ತಿಂಗಳು ಒಳ್ಳೆಯ ಆದಾಯ ಪಡೆಯಬೇಕು ಎಂದರೆ, ಈ ಒಂದು ಯೋಜನೆ ಒಳ್ಳೆಯ ಆಯ್ಕೆ ಆಗಿದೆ. ಇದು ಸಾಮಾನ್ಯವಾಗಿ 5 ವರ್ಷದ ಯೋಜನೆ ಆಗಿದ್ದು, ಅಲ್ಪಾವಧಿ ಮತ್ತು ದೀರ್ಘಾವಧಿ ಎರಡು ರೀತಿಯಲ್ಲಿ ಲಭ್ಯವಿದೆ.
ಜಾಸ್ತಿ ಕಂಡೀಷನ್ ಇಲ್ಲದೆ ಕಡಿಮೆ ಬಡ್ಡಿಗೆ ಪರ್ಸನಲ್ ಲೋನ್ ಕೊಡುವ ಟಾಪ್ 10 ಬ್ಯಾಂಕುಗಳು ಇವು!
ಪೋಸ್ಟ್ ಆಫೀಸ್ ಮಂತ್ಲಿ ಸ್ಕೀಮ್ ನಲ್ಲಿ ನೀವು ಸಿಂಗಲ್ ಖಾತೆ ಅಥವಾ ಜಾಯಿಂಟ್ ಅಕೌಂಟ್ ಎರಡು ರೀತಿಯಲ್ಲಿ ಪಡೆಯಬಹುದು. ಈ ಯೋಜನೆಯ ಮೂಲಕ ಗಂಡ ಹೆಂಡತಿ ಇಬ್ಬರು ಕೂಡ ಜೊತೆಯಾಗಿ ಹೂಡಿಕೆ ಮಾಡಬಹುದು.
ಈ ಯೋಜನೆಯಲ್ಲಿ ನೀವು ಹೂಡಿಕೆ ಮಾಡಿದರೆ, ಪ್ರತಿ ತಿಂಗಳು ಕೂಡ ಒಳ್ಳೆಯ ಆದಾಯವನ್ನು ಕೂಡ ಪಡೆದುಕೊಳ್ಳಬಹುದು. ಹಾಗಾಗಿ ಇದು ಗಂಡ ಹೆಂಡತಿ ಇಬ್ಬರು ಜೊತೆಯಾಗಿ ತೆರೆಯುವುದಕ್ಕೆ ಇದು ಉತ್ತಮವಾದ ಯೋಜನೆ ಆಗಿದೆ.
ಅಕಸ್ಮಾತ್ ನೀವು ಕೊಟ್ಟ ಚೆಕ್ ಬೌನ್ಸ್ ಆದ್ರೆ ಎಷ್ಟು ವರ್ಷ ಜೈಲು ಶಿಕ್ಷೆ? ಎಷ್ಟು ದಂಡ ಕಟ್ಟಬೇಕು ಗೊತ್ತಾ?
ಈ ಯೋಜನೆಯಲ್ಲಿ ಸಿಂಗಲ್ ಖಾತೆ ತೆರೆಯುವುದಕ್ಕೆ ಮ್ಯಾಕ್ಸಿಮಮ್ 9 ಲಕ್ಷ ರೂಪಾಯಿ ಹೂಡಿಕೆ ಮಾಡಬಹುದು. ಇದರಲ್ಲಿ ನೀವು ₹5550 ರೂಪಾಯಿ ಪ್ರತಿ ತಿಂಗಳು ಆದಾಯ ಸಿಗುತ್ತದೆ. ಇನ್ನು ಗಂಡ ಹೆಂಡತಿ ಇಬ್ಬರು ಜೊತೆಯಾಗಿ ಜಂಟಿ ಖಾತೆ ತೆರೆದರೆ 15 ಲಕ್ಷದವರೆಗು ಹೂಡಿಕೆ ಮಾಡಬಹುದು.
15 ಲಕ್ಷ ಹೂಡಿಕೆ ಮಾಡಿದರೆ, 7.5% ಬಡ್ಡಿದರ ಸಿಗಲಿದ್ದು, ₹1,11,000 ರೂಪಾಯಿ ವರ್ಷಕ್ಕೆ ಬಡ್ಡಿ ರೂಪದಲ್ಲಿ ಸಿಗುತ್ತದೆ. ಈ ರೀತಿಯಲ್ಲಿ ಹೂಡಿಕೆ ಮಾಡಿ ಲಾಭ ಪಡೆಯಬಹುದು.
Post Office Monthly Investment Scheme Details