ಜಾಸ್ತಿ ಕಂಡೀಷನ್ ಇಲ್ಲದೆ ಕಡಿಮೆ ಬಡ್ಡಿಗೆ ಪರ್ಸನಲ್ ಲೋನ್ ಕೊಡುವ ಟಾಪ್ 10 ಬ್ಯಾಂಕುಗಳು ಇವು!

Story Highlights

Personal Loan : ಇದು ಅಸುರಕ್ಷಿತ ಸಾಲ ಆಗಿರುವ ಕಾರಣ ಬ್ಯಾಂಕ್ ಗಳು ಕೂಡ ಹೆಚ್ಚು ಬಡ್ಡಿದರ ವಿಧಿಸುತ್ತದೆ. ಆದರೆ ಕೆಲವು ಬ್ಯಾಂಕ್ ಗಳಲ್ಲಿ ಪರ್ಸನಲ್ ಲೋನ್ (Personal Loan) ಮೇಲೆ ಅತಿಯಾಗಿ ಬಡ್ಡಿ ವಿಧಿಸುವುದಿಲ್ಲ ತಕ್ಕ ಮಟ್ಟದಲ್ಲಿ ಕಡಿಮೆ ಬಡ್ಡಿ ವಿಧಿಸಲಾಗುತ್ತದೆ.

Personal Loan : ಹಣಕಾಸಿನ ವಿಷಯದಲ್ಲಿ ತುರ್ತು ಪರಿಸ್ಥಿತಿ ಯಾವಾಗ ಎದುರಾಗುತ್ತದೆ ಎಂದು ನಿರೀಕ್ಷೆ ಮಾಡೋಕೆ ಆಗೋದಿಲ್ಲ. ಯಾವುದೋ ಒಂದು ಅವಶ್ಯಕತೆ, ಸಮಸ್ಯೆ ದಿಢೀರ್ ಎಂದು ಬರಬಹುದು. ಆ ಥರದ ಸಮಸ್ಯೆ ಎದುರಾದಾಗ ತಕ್ಷಣವೇ ಹಣ ಬೇಕು ಎಂದಾಗ ಜನರು ಬ್ಯಾಂಕ್ ಗಳಲ್ಲಿ ಪರ್ಸನಲ್ ಲೋನ್ ಮೊರೆ ಹೋಗುತ್ತಾರೆ.

ಪರ್ಸನಲ್ ಲೋನ್ ಗಳು ಬ್ಯಾಂಕ್ ನಲ್ಲಿ (Bank Loan) ಸಿಗುವ ಅಸುರಕ್ಷಿತ ಸಾಲ ಆಗಿರುತ್ತದೆ.ಜೊತೆಗೆ ಎಲ್ಲಾ ಬ್ಯಾಂಕ್ ಗಳಲ್ಲಿ ಪರ್ಸನಲ್ ಲೋನ್ ಸಿಗುತ್ತದೆ. ಕೆಲವು ಬ್ಯಾಂಕುಗಳು ಈ ಬಗ್ಗೆ ಕೆಲವು ನಿಯಮಗಳನ್ನು ಇಟ್ಟಿದ್ದರೆ, ಇನ್ನೂ ಕೆಲವು ಬ್ಯಾಂಕುಗಳು (Banks) ಹೆಚ್ಚಿನ ಕಂಡೀಷನ್ ಇಲ್ಲದೆ ಲೋನ್ ಕೊಡುತ್ತವೆ.

ಅಕಸ್ಮಾತ್ ನೀವು ಕೊಟ್ಟ ಚೆಕ್ ಬೌನ್ಸ್ ಆದ್ರೆ ಎಷ್ಟು ವರ್ಷ ಜೈಲು ಶಿಕ್ಷೆ? ಎಷ್ಟು ದಂಡ ಕಟ್ಟಬೇಕು ಗೊತ್ತಾ?

ಆದರೆ ಪರ್ಸನಲ್ ಲೋನ್ ಗಳ ಮೇಲೆ ಬ್ಯಾಂಕ್ ಗಳು ವಿಧಿಸುವ ಬಡ್ಡಿದರ ಹೆಚ್ಚು. ಇದು ಅಸುರಕ್ಷಿತ ಸಾಲ ಆಗಿರುವ ಕಾರಣ ಬ್ಯಾಂಕ್ ಗಳು ಕೂಡ ಹೆಚ್ಚು ಬಡ್ಡಿದರ ವಿಧಿಸುತ್ತದೆ. ಆದರೆ ಕೆಲವು ಬ್ಯಾಂಕ್ ಗಳಲ್ಲಿ ಪರ್ಸನಲ್ ಲೋನ್ (Personal Loan) ಮೇಲೆ ಅತಿಯಾಗಿ ಬಡ್ಡಿ ವಿಧಿಸುವುದಿಲ್ಲ ತಕ್ಕ ಮಟ್ಟದಲ್ಲಿ ಕಡಿಮೆ ಬಡ್ಡಿ ವಿಧಿಸಲಾಗುತ್ತದೆ.

ಆ ರೀತಿಯಾಗಿ ಕಡಿಮೆ ಬಡ್ಡಿಗೆ ಹೋಮ್ ಲೋನ್ ಕೊಡುವ ಟಾಪ್ 10 ಬ್ಯಾಂಕ್ ಗಳು ಯಾವುವು? ಅವುಗಳಲ್ಲಿ ಎಷ್ಟು ಬಡ್ಡಿದರ ವಿಧಿಸಲಾಗುತ್ತದೆ? ಇದೆಲ್ಲವನ್ನು ಪೂರ್ತಿಯಾಗಿ ತಿಳಿದುಕೊಳ್ಳೋಣ..

ಕಡಿಮೆ ಬಡ್ಡಿಗೆ ಪರ್ಸನಲ್ ಲೋನ್ ಕೊಡುವ ಟಾಪ್ 10 ಬ್ಯಾಂಕ್ ಗಳು:

*HDFC ಬ್ಯಾಂಕ್ ಇಂದ ಪರ್ಸನಲ್ ಲೋನ್ ಪಡೆದರೆ 10.75% ಇಂದ 24% ವರೆಗು ಬಡ್ಡಿ ವಿಧಿಸಲಾಗುತ್ತದೆ.

*ICICI ಬ್ಯಾಂಕ್ ನಲ್ಲಿ ವಯಕ್ತಿಕ ಸಾಲ ಪಡೆದರೆ 10.65% ಇಂದ 16% ವರೆಗು ಬಡ್ಡಿ ವಿಧಿಸಲಾಗುತ್ತದೆ.

*SBI ಇಂದ ಲೋನ್ ಪಡೆದರೆ, 11.15% ಇಂದ 11.90% ವರೆಗು ಬಡ್ಡಿ ವಿಧಿಸಲಾಗುತ್ತದೆ.

*ಕೋಟಕ್ ಮಹಿಂದ್ರ ಬ್ಯಾಂಕ್ ಇಂದ ಲೋನ್ ಪಡೆದರೆ, ಅದರ ಮೇಲೆ 10.99% ಅಷ್ಟು ಬಡ್ಡಿ ವಿಧಿಸಲಾಗುತ್ತದೆ.

ಈ 2 ರೂಪಾಯಿ ನೋಟ್ ನಿಮ್ಮತ್ರ ಇದ್ರೆ ಬಂಪರ್ ಲಾಟರಿ, ಕುಂತಲ್ಲೇ ಲಕ್ಷ ಗಳಿಸಬಹುದು! ಹೇಗೆ ಗೊತ್ತಾ?

Personal loan*Axis Bank ಇಂದ ಪರ್ಸನಲ್ ಲೋನ್ ಪಡೆದರೆ 10.65% ಇಂದ 22% ವರೆಗು ಬಡ್ಡಿ ವಿಧಿಸಲಾಗುತ್ತದೆ.

*ಇಂಡಸ್ ಇಂಡ್ ಬ್ಯಾಂಕ್ ಇಂದ ವಯಕ್ತಿಕ ಸಾಲ ಪಡೆದರೆ ಅದರ ಮೇಲೆ 10.25% ಇಂದ 26% ವರೆಗು ಬಡ್ಡಿ ವಿಧಿಸಲಾಗುತ್ತದೆ.

*ಬ್ಯಾಂಕ್ ಆಫ್ ಬರೋಡಾ ಇಂದ ಲೋನ್ ಪಡೆದರೆ, ಅದರ ಮೇಲೆ 11.40% ಇಂದ 18.75% ವರೆಗೂ ಬಡ್ಡಿ ವಿಧಿಸಲಾಗುತ್ತದೆ.

*ಪಂಜಾಬ್ ನ್ಯಾಷನಲ್ ಬ್ಯಾಂಕ್ ಇಂದ ಲೋನ್ ಪಡೆದರೆ, ಅದರ ಮೇಲೆ 11.40% ಇಂದ 12.75% ವರೆಗು ಬಡ್ಡಿ ವಿಧಿಸಲಾಗುತ್ತದೆ.

ಸಿಬಿಲ್ ಸ್ಕೋರ್ ಕಡಿಮೆ ಇದ್ರೂ ಪರವಾಗಿಲ್ಲ ಸಿಗಲಿದೆ ₹50 ಸಾವಿರ ಪರ್ಸನಲ್ ಲೋನ್! ಹೇಗೆ ಗೊತ್ತಾ?

*ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಇಂದ ಪರ್ಸನಲ್ ಲೋನ್ ಪಡೆದರೆ, ಅದರ ಮೇಲೆ 11.35% ಇಂದ 15.45% ವರೆಗು ಬಡ್ಡಿ ವಿಧಿಸಲಾಗುತ್ತದೆ.

*IDBI ಬ್ಯಾಂಕ್ ಇಂದ ವಯಕ್ತಿಕ ಸಾಲ ಪಡೆದರೆ ಅದರ ಮೇಲೆ 10.50% ಇಂದ 13.50% ವರೆಗು ಬಡ್ಡಿ ವಿಧಿಸಲಾಗುತ್ತದೆ.

These are the top 10 banks that give personal loans at low interest without more conditions

Related Stories