Bank Cheque : ದೊಡ್ಡ ದೊಡ್ಡ ವ್ಯವಹಾರಗಳು ಅಥವಾ ಬ್ಯುಸಿನೆಸ್ ಗಳು ಆಫೀಸ್ ಕೆಲಸಗಳು ಇದೆಲ್ಲವೂ ನಡೆಯುವುದು ಚೆಕ್ ಮೂಲಕ. ಬ್ಯಾಂಕ್ ನಲ್ಲಿ ಚೆಕ್ ವ್ಯವಹಾರಗಳು ಹೆಚ್ಚಾಗಿ ನಡೆಯುತ್ತದೆ. ಅವೆಲ್ಲವೂ ಅಧಿಕೃತವಾಗಿ ನಡೆಯುವ ವ್ಯವಹಾರ ಆಗಿರುತ್ತದೆ. ಆದರೆ ಕೆಲವೊಮ್ಮೆ ಕೊಡುವ ಚೆಕ್ ಗಳು ಬೌನ್ಸ್ (Cheque Bounce) ಆಗುವುದು ಉಂಟು.
ಒಂದು ವೇಳೆ ಈ ರೀತಿ ಆದರೆ, ಬೌನ್ಸ್ ಆಗಿರುವ ಚೆಕ್ ಕೊಟ್ಟ ವ್ಯಕ್ತಿಗೆ ಸಿಗುವ ಶಿಕ್ಷೆ ಏನು? ಇರುವ ನಿಯಮಗಳೇನು? ಇಂದು ಪೂರ್ತಿಯಾಗಿ ತಿಳಿದುಕೊಳ್ಳೋಣ..
ಇತ್ತೀಚೆಗೆ ಬಾಲಿವುಡ್ ನ ಖ್ಯಾತ ನಿರ್ಮಾಪಕ ರಾಜ್ ಕುಮಾರ್ ಸಂತೋಷಿ ಅವರು ಚೆಕ್ ಬೌನ್ಸ್ ಪ್ರಕರಣದಲ್ಲಿ ಸಿಲುಕಿಕೊಂಡಿದ್ದರು. ಇವರ ಕೇಸ್ ಗುಜರಾತ್ ಕೋರ್ಟ್ ನಲ್ಲಿ ನಡೆದು, ಈ ವ್ಯಕ್ತಿಗೆ 2 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಜೊತೆಗೆ 2 ಕೋಟಿ ದಂಡ ಕಟ್ಟುವಂತೆ ತೀರ್ಪು ಕೊಡಲಾಯಿತು.
ಮಾವನ ಆಸ್ತಿಯಲ್ಲಿ ಸೊಸೆಗೆ ಇರುವ ಹಕ್ಕು ಎಷ್ಟು? ಅಷ್ಟಕ್ಕೂ ಆಸ್ತಿಯಲ್ಲಿ ನಿಜಕ್ಕೂ ಪಾಲು ಸಿಗುತ್ತಾ?
ನಿರ್ಮಾಪಕನಾಗಿ ರಾಜಕುಮಾರ್ ಸಂತೋಷಿ ಅವರು ಘಾಯಲ್, ದಾಮಿನಿ, ಲಜ್ಜಾ, ಖಾಕಿ, ದಿ ಲೆಜೆಂಡ್ಸ್ ಆಫ್ ಭಗತ್ ಸಿಂಗ್ ಈ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.
ಅಷ್ಟಕ್ಕೂ ಆಗಿರುವುದು ಏನು ಎಂದರೆ, ಜಾಮ್ ನಗರಕ್ಕೆ ಸೇರಿದ ಪ್ರಮುಖ ಉದ್ಯಮಿ, ಶಿಪಿಂಗ್ ಮ್ಯಾಗ್ನೆಟ್ ಎಂದು ಹೆಸರು ಪಡೆದಿರುವ ಅಶೋಕ್ ಲಾಲ್ ಎನ್ನುವ ವ್ಯಕ್ತಿ ರಾಜಕುಮಾರ್ ಸಂತೋಷಿ ಅವರ ಸಿನಿಮಾಗಾಗಿ 1 ಕೋಟಿ ಹೂಡಿಕೆ ಮಾಡುತ್ತೇನೆ ಎಂದು ಹೇಳಿದ್ದಾರೆ, ಇದಕ್ಕಾಗಿ ರಾಜಕುಮಾರ್ ಸಂತೋಷಿ ಅವರು 10 ಲಕ್ಷ ರೂಪಾಯಿಗಳ 10 ಚೆಕ್ ಗಳನ್ನು ಅಶೋಕ್ ಲಾಲ್ ಅವರಿಗೆ ನೀಡಿದ್ದಾರೆ.
ಆ ಚೆಕ್ ಗಳು ಬೌನ್ಸ್ ಆಗಿದ್ದು, ರಾಜಕುಮಾರ್ ಸಂತೋಷಿ ಅವರನ್ನು ಕಾಂಟ್ಯಾಕ್ಟ್ ಮಾಡಲು ಟ್ರೈ ಮಾಡಿದರೆ, ಅವರು ಕೂಡ ಸಿಗಲಿಲ್ಲ ಎಂದು ಅಶೋಕ್ ಲಾಲ್ ಹೇಳಿದ್ದು, ರಾಜಕುಮಾರ್ ಸಂತೋಷಿ ವಿರುದ್ಧ ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ ಆಕ್ಟ್ ನಲ್ಲಿ ಕೇಸ್ ಹಾಕಿದ್ದಾರೆ.
ಈ 2 ರೂಪಾಯಿ ನೋಟ್ ನಿಮ್ಮತ್ರ ಇದ್ರೆ ಬಂಪರ್ ಲಾಟರಿ, ಕುಂತಲ್ಲೇ ಲಕ್ಷ ಗಳಿಸಬಹುದು! ಹೇಗೆ ಗೊತ್ತಾ?
ಚೆಕ್ ಬೌನ್ಸ್ ಆಗೋದು ಯಾವಾಗ?
*ನೀವು ನೀಡಿರುವ ಚೆಕ್ ಗಿಂತ ನಿಮ್ಮ ಅಕೌಂಟ್ ನಲ್ಲಿ ಹಣ ಕಡಿಮೆ ಇದ್ದಾಗ, ಅಥವಾ ಅಕೌಂಟ್ ನಲ್ಲಿ (Bank Account) ಹಣವೇ ಇಲ್ಲದೇ ಇದ್ದಾಗ
*ನೀವು ಹಾಕಿರುವ ಸೈನ್ ಸರಿಯಾಗಿ ಟ್ಯಾಲಿ ಆಗದೇ ಇದ್ದಾಗ
*ಅಕೌಂಟ್ ನಂಬರ್ ನಲ್ಲಿ ತಪ್ಪು ಕಂಡುಬಂದಾಗ
*ಚೆಕ್ ಡ್ಯುಪ್ಲಿಕೇಟ್ ಆಗಿದ್ದಾಗ
*ಚೆಕ್ ನಲ್ಲಿ ಕಂಪನಿ ಮಾರ್ಕ್ ಇಲ್ಲದೇ ಇದ್ದಾಗ
ಸಿಬಿಲ್ ಸ್ಕೋರ್ ಕಡಿಮೆ ಇದ್ರೂ ಪರವಾಗಿಲ್ಲ ಸಿಗಲಿದೆ ₹50 ಸಾವಿರ ಪರ್ಸನಲ್ ಲೋನ್! ಹೇಗೆ ಗೊತ್ತಾ?
ಚೆಕ್ ಬೌನ್ಸ್ ಗೆ ಎಷ್ಟು ದಂಡ ಬೀಳುತ್ತದೆ;
1881ರಲ್ಲಿ ಜಾರಿಗೆ ತಂದ ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ ಆಕ್ಟ್ ಸೆಕ್ಷನ್ 138ನ ಅನುಸಾರ ಚೆಕ್ ಬೌನ್ಸ್ ಆಗುವುದು ಕಾನೂನಿನ ಪ್ರಕಾರ ಅಪರಾಧ ಆಗಿದೆ. ಚೆಕ್ ಬೌನ್ಸ್ ಆದರೆ 2 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ.
ಈ ರೀತಿ ಹೋಮ್ ಲೋನ್ ಪಡೆದವರು ₹32 ಲಕ್ಷ ಉಳಿಸಬಹುದು, ಈ ಟ್ರಿಕ್ 90% ಜನಕ್ಕೆ ಗೊತ್ತೇ ಇಲ್ಲ
ಹಾಗೆಯೇ ಚೆಕ್ ನಲ್ಲಿ ಇರುವಷ್ಟು ಮೊತ್ತದ ಎರಡು ಪಟ್ಟು ಹಣ ದಂಡ ವಿಧಿಸಲಾಗುತ್ತದೆ. ಅಥವಾ ಜೈಲು ಮತ್ತು ದಂಡ ಎರಡನ್ನು ವಿಧಿಸುವ ಸಾಧ್ಯತೆ ಕೂಡ ಇರುತ್ತದೆ. ಕಾರಣ ಏನು ಎನ್ನುವುದರ ಮೇಲೆ ದಂಡ ಅವಲಂಬಿಸಿರುತ್ತದೆ.
How many years in jail if your Cheque bounces, Do you know how much fine to pay
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.