Kannada News Business News

ಮಾವನ ಆಸ್ತಿಯಲ್ಲಿ ಸೊಸೆಗೆ ಇರುವ ಹಕ್ಕು ಎಷ್ಟು? ಅಷ್ಟಕ್ಕೂ ಆಸ್ತಿಯಲ್ಲಿ ನಿಜಕ್ಕೂ ಪಾಲು ಸಿಗುತ್ತಾ?

What is the right of daughter-in-law in father-in-law's property

Story Highlights

ನೇರವಾಗಿ ಅತ್ತೆ ಮಾವನ ಆಸ್ತಿಯ ಮೇಲೆ ಮಹಿಳೆ ಹಕ್ಕು ಹೊಂದುವುದಿಲ್ಲ. ಆದರೆ ಮದುವೆ ವೇಳೆ ಆಕೆಗೆ ಬಂದಿರುವ ಎಲ್ಲಾ ಉಡುಗೊರೆಗಳು ಮಾತ್ರ, ಆಕೆಗೆ ಸೇರುತ್ತದೆ.

ರಾಷ್ಟ್ರದಲ್ಲಿ ಆಸ್ತಿಯ ವಿಚಾರಕ್ಕೆ ಸಂಬಂಧಿಸಿದ ಹಾಗೆ ಕಟ್ಟುನಿಟ್ಟಿನ ಕಾನೂನನ್ನು ಮಾಡಲಾಗಿದೆ. ದೇಶದ ಎಲ್ಲರೂ ಕೂಡ ಈ ಕಾನೂನಿನ ನಿಯಮಗಳನ್ನು ಅನುಸರಿಸಬೇಕು. ಆಸ್ತಿ (Property) ವಿಚಾರದಲ್ಲಿ ಕುಟುಂಬಗಳ ನಡುವೆ ಜಗಳ, ಕದನ, ಮನಸ್ತಾಪ ಇದೆಲ್ಲವೂ ಸಾಮಾನ್ಯವಾಗಿ ನಡೆಯುತ್ತಲೇ ಇರುತ್ತದೆ.

ಒಡಹುಟ್ಟಿದವರ ನಡುವೆಯೇ ಆಸ್ತಿ ವಿಷಯಕ್ಕೆ ಭಿನ್ನಾಭಿಪ್ರಾಯಗಳು ಶುರುವಾಗಬಹುದು. ಹಾಗಾಗಿ ಆಸ್ತಿ ಬಗೆಗಿನ ಕಾನೂನನ್ನು (Property Rules) ತಿಳಿದುಕೊಳ್ಳುವುದು ಒಳ್ಳೆಯದು.. ಆಸ್ತಿಗೆ ಸಂಬಂಧಿಸಿದ ಕಾನೂನನ್ನು ತಿಳಿದುಕೊಂಡರೆ, ಅದನ್ನು ಅನುಸರಿಸಿದರೆ, ಆಗ ಮನೆಯವರ ನಡುವೆ ಮನಸ್ತಾಪ ಮೂಡುವುದು ಕಡಿಮೆ ಆಗುತ್ತದೆ.

ಈ 2 ರೂಪಾಯಿ ನೋಟ್ ನಿಮ್ಮತ್ರ ಇದ್ರೆ ಬಂಪರ್ ಲಾಟರಿ, ಕುಂತಲ್ಲೇ ಲಕ್ಷ ಗಳಿಸಬಹುದು! ಹೇಗೆ ಗೊತ್ತಾ?

2005ರಲ್ಲಿ ಆಸ್ತಿಗೆ ಸಂಬಂಧಿಸಿದ ಹಾಗೆ ಕೆಲವು ನಿಯಮಗಳನ್ನು ಜಾರಿಗೆ ತರಲಾಯಿತು. ಹಿಂದೂ ಉತ್ತರಾಧಿಕಾರಿ ಕಾಯ್ದೆಯಲ್ಲಿ ಬದಲಾವಣೆ ತಂದು, ಹೆಣ್ಣುಮಕ್ಕಳಿಗೆ ಕೂಡ ತಂದೆ ಆಸ್ತಿಯಲ್ಲಿ ಸಮಪಾಲು ಇರುತ್ತದೆ ಎಂದು ತಿದ್ದುಪಡಿ ಮಾಡಲಾಯಿತು. ಇದರಿಂದ ಮನೆಯ ಮಗಳಿಗೆ ಪೂರ್ವಾರ್ಜಿತ ಆಸ್ತಿಯಲ್ಲಿ ಸಮಪಾಲು ಸಿಗುವ ಹಾಗೆ ಆಯಿತು..

ಸೊಸೆಗೆ ಸಿಗುವ ಹಕ್ಕು ಏನು?

ಹೌದು, ಈಗ ಕಾನೂನಿನ ಅನುಸಾರ ಒಂದು ಕುಟುಂಬದ ಪೂರ್ವಾರ್ಜಿತ ಆಸ್ತಿಯಲ್ಲಿ ಗಂಡು ಮಗನಿಗೆ ಎಷ್ಟು ಹಕ್ಕು ಇರುತ್ತದೆಯೋ ಹೆಣ್ಣು ಮಗಳಿಗೆ ಕೂಡ ಅಷ್ಟೇ ಹಕ್ಕು ಇರುತ್ತದೆ. ಪೂರ್ವಾರ್ಜಿತ ಆಸ್ತಿಯಲ್ಲಿ ಭಾಗ ಸಿಗದೆ ಹೋದರೆ, ಹೆಣ್ಣುಮಕ್ಕಳು ಕೋರ್ಟ್ ನಲ್ಲಿ ಆಸ್ತಿ ಪಡೆಯಬಹುದು.

ಹೆಣ್ಣುಮಗಳಿಗೆ ಆಸ್ತಿ ಮೇಲೆ ಪೂರ್ತಿ ಹಕ್ಕು ಇದೆ. ಆದರೆ ಸೊಸೆಗೆ ಆಸ್ತಿ ಮೇಲೆ ಇರುವ ಹಕ್ಕು ಕಡಿಮೆ. ಹೆಣ್ಣುಮಗಳಿಗೆ ಇರುವಂಥ ಅಧಿಕಾರ, ಹಕ್ಕು ಸೊಸೆಗೆ ಅತ್ತೆ ಮಾವನ ಆಸ್ತಿ ಮೇಲೆ ಇರುವುದಿಲ್ಲ.

ಸಿಬಿಲ್ ಸ್ಕೋರ್ ಕಡಿಮೆ ಇದ್ರೂ ಪರವಾಗಿಲ್ಲ ಸಿಗಲಿದೆ ₹50 ಸಾವಿರ ಪರ್ಸನಲ್ ಲೋನ್! ಹೇಗೆ ಗೊತ್ತಾ?

Property Rightsಒಂದು ಹೆಣ್ಣಿನ ಜೀವನದಲ್ಲಿ ಮದುವೆ ಬಹಳ ಮುಖ್ಯವಾದ ಹಂತ, ಮದುವೆಯಾಗಿ ಗಂಡನ ಮನೆಗೆ ಹೋದಾಗ, ಆಕೆ ಆ ಮನೆಗೆ ಸೇರಿದವಳಾಗುತ್ತಾಳೆ. ಆಕೆಗೆ ಗಂಡನ ಮನೆಯಲ್ಲಿ ಕೆಲವು ವಿಚಾರಗಳಲ್ಲಿ ಹಕ್ಕು ಬರುತ್ತದೆ ನಿಜ, ಆದರೆ ಆಸ್ತಿ ವಿಷಯದಲ್ಲಿ ಮನೆಯ ಸೊಸೆಗೆ ಹಕ್ಕು ಇರುವುದಿಲ್ಲ.

ಗಂಡನ ಆಸ್ತಿಯಲ್ಲಿ ಹೆಂಡತಿಗೆ ಹಕ್ಕು ಇರುತ್ತದೆ. ಆದರೆ ಅತ್ತೆ ಮಾವನ ಆಸ್ತಿಯಲ್ಲಿ ಸೊಸೆ ಆದವಳಿಗೆ ಯಾವುದೇ ಹಕ್ಕು ಇರುವುದಿಲ್ಲ. ಸೊಸೆಯ ವಿಷಯದಲ್ಲಿ ಇರುವ ಕಾನೂನಿನ ನಿಯಮ ಇದು.

ಈ ರೀತಿ ಹೋಮ್ ಲೋನ್ ಪಡೆದವರು ₹32 ಲಕ್ಷ ಉಳಿಸಬಹುದು, ಈ ಟ್ರಿಕ್ 90% ಜನಕ್ಕೆ ಗೊತ್ತೇ ಇಲ್ಲ

ಒಂದು ವೇಳೆ ಅತ್ತೆ ಮಾವ ಆದವರು ಮರಣ ಹೊಂದಿದರೆ, ಆಗಲು ಕೂಡ ಆ ಆಸ್ತಿಯ (Property Rights) ಮೇಲೆ ಮನೆಯ ಸೊಸೆಗೆ ಯಾವುದೇ ಹಕ್ಕು ಇರುವುದಿಲ್ಲ. ಆ ಆಸ್ತಿ ಆಕೆಯ ಗಂಡನಿಗೆ ಸಿಗುತ್ತದೆ. ಒಂದು ವೇಳೆ ಅತ್ತೆ ಮಾವ ವಿಲ್ ಮಾಡಿಟ್ಟಿಲ್ಲ ಎಂದರೆ ಆಗ ಆಸ್ತಿಯ ಗಂಡನಿಗೆ ಹೋಗಿ, ಅದರಿಂದ ಮಹಿಳೆಗೆ ಸಿಗಬಹುದು.

ಆದರೆ ನೇರವಾಗಿ ಅತ್ತೆ ಮಾವನ ಆಸ್ತಿಯ ಮೇಲೆ ಮಹಿಳೆ ಹಕ್ಕು ಹೊಂದುವುದಿಲ್ಲ. ಆದರೆ ಮದುವೆ ವೇಳೆ ಆಕೆಗೆ ಬಂದಿರುವ ಎಲ್ಲಾ ಉಡುಗೊರೆಗಳು ಮಾತ್ರ, ಆಕೆಗೆ ಸೇರುತ್ತದೆ.

What is the right of daughter-in-law in father-in-law’s property