ಈ ರೀತಿ ಹೋಮ್ ಲೋನ್ ಪಡೆದವರು ₹32 ಲಕ್ಷ ಉಳಿಸಬಹುದು, ಈ ಟ್ರಿಕ್ 90% ಜನಕ್ಕೆ ಗೊತ್ತೇ ಇಲ್ಲ
Home Loan : ಹೋಮ್ ಲೋನ್ (Home Loan) ಪಾವತಿ ಮಾಡಬೇಕಾದ ಅವಧಿಯನ್ನು ಕಡಿಮೆ ಮಾಡಿಕೊಳ್ಳಿ, 30 ವರ್ಷದ ಲೋನ್ ಅನ್ನು 15 ವರ್ಷಕ್ಕೆ ಇಳಿಸಿಕೊಳ್ಳಿ, ಇದರಿಂದ ಲೋನ್ ಬೇಗ ಮುಗಿಯುತ್ತದೆ.
Home Loan : ಹಲವು ಜನರ ಸ್ವಂತ ಮನೆ ಮಾಡಿಕೊಳ್ಳಬೇಕು ಎನ್ನುವ ಕನಸು ನನಸಾಗುವುದು ಹೋಮ್ ಲೋನ್ ಇಂದ. ಹೌದು, ಒಂದು ಸ್ವಂತ ಮನೆ (Own House) ಕಟ್ಟಲು ಈಗಿನ ಕಾಲದಲ್ಲಿ ಲಕ್ಷಗಟ್ಟಲೇ, ಕೋಟಿಗಟ್ಟಲೆ ಹಣ ಬೇಕಾಗುತ್ತದೆ. ಎಲ್ಲರ ಬಳಿ ಕೂಡ ಅಷ್ಟು ಹಣ ಇರುವುದಿಲ್ಲ.
ಅಂಥವರು ಬ್ಯಾಂಕ್ ನಲ್ಲಿ ಹೋಮ್ ಲೋನ್ ಪಡೆದು, ಸ್ವಂತ ಮನೆಯ ಕನಸನ್ನು ನನಸು ಮಾಡಿಕೊಳ್ಳುತ್ತಾರೆ. ಆದರೆ ಹೋಮ್ ಲೋನ್ ಒಂದು ರೀತಿ ಹೊರೆ ಆಗಿರುತ್ತದೆ. ಹೌದು, ಹೋಮ್ ಲೋನ್ ಮೇಲೆ ಭಾರಿ ಬಡ್ಡಿ ಬೀಳುತ್ತದೆ. ಪ್ರತಿ ತಿಂಗಳು ಇಎಂಐ (Loan EMI) ಕಟ್ಟುವುದು ಸಹ ಹೊರೆ ಅನ್ನಿಸುತ್ತದೆ.
ಹೋಮ್ ಲೋನ್ ಗೆ ಕಟ್ಟುವ ಬಡ್ಡಿ ನೆನೆದರೆ ಬೇಸರ ಆಗುವುದಂತೂ ಖಂಡಿತ. ಹಲವರಿಗೆ ಲೋನ್ ಪಡೆದ ನಂತರ, ಅದನ್ನು ಕಟ್ಟುವುದಕ್ಕೆ ಕಷ್ಟ ಆಗಬಹುದು. ಆದರೆ ಇಂದು ನಾವು ತಿಳಿಸುವ ಕೆಲವು ಟ್ರಿಕ್ಸ್ ಬಳಸಿದರೆ, ನಿಮ್ಮ ಹೋಮ್ ಲೋನ್ ನಲ್ಲಿ ಸುಮಾರು 32 ಲಕ್ಷ ರೂಪಾಯಿ ಉಳಿತಾಯ ಮಾಡಬಹುದು. ಅದು ಹೇಗೆ ಗೊತ್ತಾ? ಪೂರ್ತಿ ಮಾಹಿತಿ ತಿಳಿಯೋಣ..
ಫೋನ್ ಪೇ ಆಪ್ ನಲ್ಲಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್ ಆಡ್ ಮಾಡೋದು ಹೇಗೆ? ಇಲ್ಲಿದೆ ಡೀಟೇಲ್ಸ್
ಹೋಮ್ ಲೋನ್ ಹಣ ಉಳಿಸಲು ಈ ರೀತಿ ಮಾಡಿ:
ಹೋಮ್ ಲೋನ್ ಮೇಲೆ ವಿವಿಧ ಬ್ಯಾಂಕ್ ಗಳಲ್ಲಿ ಬೇರೆ ಬೇರೆ ಬಡ್ಡಿದರ ಇರುತ್ತದೆ. ಹಾಗಾಗಿ ಹೋಮ್ ಲೋನ್ ಹೊರೆ ಕಡಿಮೆ ಮಾಡಿ, ಪಾವತಿ ಮಾಡುವ ಬಡ್ಡಿಯನ್ನು ಉಳಿಸಿಕೊಳ್ಳಬಹುದು.
ಅದು ಹೇಗೆ ಎಂದರೆ ಹೋಮ್ ಲೋನ್ (Home Loan) ಪಾವತಿ ಮಾಡಬೇಕಾದ ಅವಧಿಯನ್ನು ಕಡಿಮೆ ಮಾಡಿಕೊಳ್ಳಿ, 30 ವರ್ಷದ ಲೋನ್ ಅನ್ನು 15 ವರ್ಷಕ್ಕೆ ಇಳಿಸಿಕೊಳ್ಳಿ, ಇದರಿಂದ ಲೋನ್ ಬೇಗ ಮುಗಿಯುತ್ತದೆ. ಜೊತೆಗೆ ಬಡ್ಡಿಯಾಗಿ ಕಟ್ಟಬೇಕಾದ ಭಾರಿ ಮೊತ್ತವನ್ನು ಉಳಿಸಬಹುದು. 32 ಲಕ್ಷದವರೆಗು ಹಣ ಉಳಿಸಬಹುದು. ಅದು ಹೇಗೆ ಎಂದು ತಿಳಿಯೋಣ..
ಗಂಡ ಹೆಂಡತಿ ಇಬ್ಬರಿಗೂ ಪ್ರತಿ ತಿಂಗಳು ಸಿಗುತ್ತೆ 10 ಸಾವಿರ ರೂಪಾಯಿ, ಕೇಂದ್ರದಿಂದ ಹೊಸ ಯೋಜನೆ
ಇದಕ್ಕೆ ಒಂದು ಉದಾಹರಣೆ ಕೊಡುವುದಾದರೆ, HDFC Bank ಇಂದ 30 ವರ್ಷಗಳ ಅವಧಿಗೆ 30 ಲಕ್ಷ ಸಾಲ ಪಡೆದರೆ, ಈ ಮೊತ್ತಕ್ಕೆ 9% ಬಡ್ಡಿ ಬೀಳುತ್ತದೆ ಎಂದರೆ, 30 ವರ್ಷಗಳಲ್ಲಿ ನೀವು ₹56,89,294 ರೂಪಾಯಿಗಳನ್ನು ಬ್ಯಾಂಕ್ ಗೆ ಬಡ್ಡಿಯಾಗಿ ಪಾವತಿ ಮಾಡುತ್ತೀರಿ.
ಪಡೆಯುವ 30 ಲಕ್ಷ ಸಾಲಕ್ಕೆ, ₹86,89,294 ರೂಪಾಯಿ ಪಾವತಿ ಮಾಡುತ್ತೀರಿ, ಅಂದರೆ ಸಾಲ ಪಡೆಯುವುದಕ್ಕಿಂತ 2 ಪಟ್ಟು ಹಣಕ್ಕಿಂತಲು ಜಾಸ್ತಿ ಪಾವತಿ ಮಾಡುತ್ತೀರಿ. ಇಷ್ಟು ದೊಡ್ಡ ಮೊತ್ತವನ್ನು ಕಟ್ಟಿ, ಹಣವನ್ನು ವ್ಯರ್ಥ ಮಾಡುವುದಕ್ಕಿಂತ ತಜ್ಞರು ಹೇಳುವ ಹಾಗೆ, 30 ವರ್ಷದ ಸಾಲವನ್ನು 15 ವರ್ಷಕ್ಕೆ ಮಾಡಿಕೊಂಡರೆ, ನೀವು ಕಟ್ಟುವ ಬಡ್ಡಿ ಮೊತ್ತ ಕಡಿಮೆ ಆಗುತ್ತದೆ.
ನಿನ್ನೆವರೆಗೂ ಏರಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ದಿಢೀರ್ ಇಳಿಕೆ! ಚಿನ್ನಾಭರಣ ಪ್ರಿಯರಿಗೆ ಸಂತಸದ ಸುದ್ದಿ
15 ವರ್ಷಕ್ಕೆ ಇಷ್ಟು ಪಾವತಿ ಮಾಡುತ್ತೀರಿ:
ಇದೇ 30 ಲಕ್ಷ ಹೋಮ್ ಲೋನ್ ಅನ್ನು 15 ವರ್ಷಗಳ ಅವಧಿಗೆ ಪಡೆದರೆ, ಈ ಅವಧಿಗು ಬಡ್ಡಿದರ 9% ಆಗಿರುತ್ತದೆ. ಅದರಲ್ಲಿ ಬದಲಾವಣೆ ಆಗುವುದಿಲ್ಲ. ಆದರೆ 15 ವರ್ಷಕ್ಕೆ ₹24,77,040 ರೂಪಾಯಿಗಳನ್ನು ಬಡ್ಡಿ ರೂಪದಲ್ಲಿ ಪಾವತಿ ಮಾಡುತ್ತೀರಿ.
ಲೋನ್ ಮೊತ್ತ ಮತ್ತು ಬಡ್ಡಿ ಎರಡು ಸೇರಿ ₹54,77,040 ರೂಪಾಯಿ ಆಗುತ್ತದೆ. ಈ ರೀತಿಯಲ್ಲಿ ನೀವು 15 ವರ್ಷದ ಅವಧಿಗೆ ಸಾಲ ಪಡೆದರೆ, 32 ಲಕ್ಷ ರೂಪಾಯಿ ಹೆಚ್ಚುವರಿಯಾಗಿ ಬ್ಯಾಂಕ್ ಗೆ ಹಣ ಪಾವತಿ ಮಾಡುವುದನ್ನು ತಪ್ಪಿಸಬಹುದು.
Home loan borrowers can save 32 lakh in this way