ಫೋನ್ ಪೇ ಆಪ್ ನಲ್ಲಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್ ಆಡ್ ಮಾಡೋದು ಹೇಗೆ? ಇಲ್ಲಿದೆ ಡೀಟೇಲ್ಸ್
ನೀವು ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್ ಅನ್ನು ನಿಮ್ಮ ಫೋನ್ ಪೇ ಖಾತೆಗೆ ಲಿಂಕ್ ಮಾಡಬಹುದು. ಇದಕ್ಕೆ ಫೋನ್ ಪೇ ಅವಕಾಶ ಮಾಡಿಕೊಡುತ್ತದೆ. ಫೋನ್ ಪೇ ಆಪ್ ನಲ್ಲಿ ಹೆಚ್ಚು ಬ್ಯಾಂಕ್ ಅಕೌಂಟ್ಸ್ (Multiple Bank Account) ಲಿಂಕ್ ಮಾಡಿ
ಈಗ ಡಿಜಿಟಲ್ ಪೇಮೆಂಟ್ಸ್ ಗಳನ್ನು ಮಾಡುವುದೇ ಜಾಸ್ತಿ. ಒಂದು ಸಣ್ಣ ಅಂಗಡಿಗೆ ಹೋದರು ಸಹ ಅಲ್ಲಿ ಮಾಡುವ ಯುಪಿಐ ಮೂಲಕ ಪೇಮೆಂಟ್ (UPI Payment) ಮಾಡುತ್ತೇವೆ. ಗೂಗಲ್ ಪೇ, ಫೋನ್ ಪೇ, ಪೇಟಿಎಂ ಹೀಗೆ ಅನೇಕ ಆಪ್ ಗಳ ಮೂಲಕ ಆನ್ಲೈನ್ ಯುಪಿಐ ಪೇಮೆಂಟ್ ಮಾಡಬಹುದು.
ಇವುಗಳಲ್ಲಿ ಫೋನ್ ಪೇ (PhonePe) ಪ್ರಮುಖವಾದ ಆಪ್ ಗಳಲ್ಲಿ ಒಂದು ಎಂದು ಹೇಳಿದರೆ ಖಂಡಿತ ತಪ್ಪಲ್ಲ. ಬಹಳಷ್ಟು ಜನರು ಫೋನ್ ಪೇ ಆಪ್ ಮೂಲಕ ಹಣಕಾಸಿನ ವಹಿವಾಟು ನಡೆಸುತ್ತಾರೆ. ಈ ಆಪ್ ಮೂಲಕ ಒಂದೇ ಕ್ಲಿಕ್ ನಲ್ಲಿ ಸುಲಭವಾಗಿ ಹಣ ವರ್ಗಾವಣೆ ಮಾಡಬಹುದು.
ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಕೂಡ ಯುಪಿಐ ಮೂಲಕ ಪೇಮೆಂಟ್ ಮಾಡಬಹುದು. ಸಾಮಾನ್ಯವಾಗಿ ಯಾವುದೇ ಯುಪಿಐ ಪೇಮೆಂಟ್ ಆಪ್ ಮೂಲಕ ಹಣ ವರ್ಗಾವಣೆ ಮಾಡಬೇಕು ಎಂದರೆ, ನಿಮ್ಮ ಬ್ಯಾಂಕ್ ಅಕೌಂಟ್ (Bank Account) ಲಿಂಕ್ ಮಾಡಬೇಕು. ಡೆಬಿಟ್ ಕಾರ್ಡ್, ಅಕೌಂಟ್ ಗೆ ಲಿಂಕ್ ಆಗಿರುವ ಫೋನ್ ನಂಬರ್ ಬಳಿ, ಫೋನ್ ಪೇ ಗೆ ಲಿಂಕ್ ಮಾಡಬೇಕು.
ಗಂಡ ಹೆಂಡತಿ ಇಬ್ಬರಿಗೂ ಪ್ರತಿ ತಿಂಗಳು ಸಿಗುತ್ತೆ 10 ಸಾವಿರ ರೂಪಾಯಿ, ಕೇಂದ್ರದಿಂದ ಹೊಸ ಯೋಜನೆ
ಆದರೆ ಕೆಲವರ ಬಳಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್ ಗಳು ಇರುತ್ತದೆ. ಅಂಥವರು ಹೆಚ್ಚು ಅಕೌಂಟ್ ಗಳನ್ನು ಫೋನ್ ಪೇ ಗೆ ಲಿಂಕ್ ಮಾಡಬಹುದಾ ಎನ್ನುವ ಪ್ರಶ್ನೆ ಸಹ ಅವರಲ್ಲಿ ಇರುತ್ತದೆ.
ಅದಕ್ಕೆ ಉತ್ತರ ಹೌದು, ನೀವು ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್ ಅನ್ನು ನಿಮ್ಮ ಫೋನ್ ಪೇ ಖಾತೆಗೆ ಲಿಂಕ್ ಮಾಡಬಹುದು. ಇದಕ್ಕೆ ಫೋನ್ ಪೇ ಅವಕಾಶ ಮಾಡಿಕೊಡುತ್ತದೆ. ಫೋನ್ ಪೇ ಆಪ್ ನಲ್ಲಿ ಹೆಚ್ಚು ಬ್ಯಾಂಕ್ ಅಕೌಂಟ್ಸ್ (Multiple Bank Account) ಲಿಂಕ್ ಮಾಡಿ, ಯಾವುದೇ ಅಕೌಂಟ್ ಇಂದ ಹಣ ವರ್ಗಾವಣೆ ಮಾಡಬಹುದು..
ಫೋನ್ ಪೇ ನಲ್ಲಿ ನೀವು ಒಂದು ಅಕೌಂಟ್ ಮೂಲಕ ಹಣ ವರ್ಗಾವಣೆ ಮಾಡುವಾಗ, ಇನ್ನೊಂದು ಅಕೌಂಟ್ ಆಡ್ ಮಾಡುವ ಆಯ್ಕೆ ಸೆಟ್ಟಿಂಗ್ಸ್ ನಲ್ಲಿ ಸಿಗುತ್ತದೆ. ಅದನ್ನು ಬಳಸಿ ಒಂದಕ್ಕಿಂತ ಹೆಚ್ಚು ಅಕೌಂಟ್ಸ್ ಗಳನ್ನು ಫೋನ್ ಪೇ ಆಪ್ ಗೆ ಲಿಂಕ್ ಮಾಡಿ, ಒಂದು ಅಕೌಂಟ್ ಗೆ ಸಮಸ್ಯೆ ಆದಾಗ ಇನ್ನೊಂದು ಅಕೌಂಟ್ ಇಂದ ಹಣಕಾಸಿನ ವಹಿವಾಟು ನಡೆಸಬಹುದು. ಹಾಗಿದ್ದಲ್ಲಿ ಫೋನ್ ಪೇ ಗೆ ಎರಡನೇ ಅಕೌಂಟ್ ಆಡ್ ಮಾಡುವುದು ಹೇಗೆ ಎಂದು ಪೂರ್ತಿಯಾಗಿ ತಿಳಿಯೋಣ..
ನಿನ್ನೆವರೆಗೂ ಏರಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ದಿಢೀರ್ ಇಳಿಕೆ! ಚಿನ್ನಾಭರಣ ಪ್ರಿಯರಿಗೆ ಸಂತಸದ ಸುದ್ದಿ
ಫೋನ್ ಪೇ ಗೆ ಎರಡನೇ ಅಕೌಂಟ್ ಲಿಂಕ್ ಮಾಡುವ ವಿಧಾನ:
*ಫೋನ್ ಪೇ ಆಪ್ ಓಪನ್ ಮಾಡಿ, ಹೋಮ್ ಪೇಜ್ ನಲ್ಲಿರುವ To Self Account ಎನ್ನುವ ಆಪ್ಶನ್ ಅನ್ನು ಸೆಲೆಕ್ಟ್ ಮಾಡಿ
*ಈ ಆಪ್ಶನ್ ನಲ್ಲಿ ಕೆಳಗೆ ಸ್ಕ್ರೋಲ್ ಮಾಡಿದರೆ, Add Bank Account ಎನ್ನುವ ಆಪ್ಶನ್ ಇರುತ್ತದೆ.
*ರಿಜಿಸ್ಟರ್ ಆಗಿರುವ ಫೋನ್ ನಂಬರ್ ಇಂದ, ಲಿಂಕ್ ಮಾಡಬೇಕಿರುವ ಮತ್ತೊಂದು ಬ್ಯಾಂಕ್ ಅಕೌಂಟ್ ಅನ್ನು ಸೆಲೆಕ್ಟ್ ಮಾಡಿ.
ಗೂಗಲ್ ಪೇ ಅಕೌಂಟ್ ಇದ್ರೆ ಸಿಗುತ್ತೆ ₹15,000 ಪರ್ಸನಲ್ ಲೋನ್, ತಿಂಗಳಿಗೆ ₹111 ರೂ. EMI ಕಟ್ಟಬೇಕಾಗುತ್ತೆ!
*ಫೋನ್ ನಂಬರ್ ಸೆಲೆಕ್ಟ್ ಮಾಡಿದ ನಂತರ, ಆ ನಂಬರ್ ಗೆ ಯಾವೆಲ್ಲಾ ಬ್ಯಾಂಕ್ ಅಕೌಂಟ್ ಲಿಂಕ್ ಆಗಿದೆಯೋ ಅದರ ಡೀಟೇಲ್ಸ್ ಬರುತ್ತದೆ.
*ಇಲ್ಲಿ ನಿಮ್ಮ ಬ್ಯಾಂಕ್ ಅಕೌಂಟ್ ಡೀಟೇಲ್ಸ್ ನೋಡಿ, ಅದನ್ನು ಸೆಲೆಕ್ಟ್ ಮಾಡಿ Proceed to Add ಎನ್ನುವ ಆಪ್ಶನ್ ಕ್ಲಿಕ್ ಮಾಡಿ
*ಬಳಿಕ ನಿಮ್ಮ ಬ್ಯಾಂಕ್ ಅಕೌಂಟ್ ನ ATM ಡೀಟೇಲ್ಸ್ ಹಾಕಿ
*ನಂತರ ನಿಮ್ಮ ಫೋನ್ ನಂಬರ್ ಗೆ ಬಂದಿರುವ OTP ಹಾಕಿ ಬ್ಯಾಂಕ್ ಅಕೌಂಟ್ ಆಡ್ ಮಾಡಿಕೊಳ್ಳಿ.
How to add more than one bank account in phonePe app Account