1959ರಲ್ಲಿ 1 ಗ್ರಾಂ ಚಿನ್ನದ ಬೆಲೆ ಎಷ್ಟಿತ್ತು ಗೊತ್ತಾ? ಚಾಕಲೇಟ್ ಬೆಲೆ! ವೈರಲ್ ಆಯ್ತು ಚಿನ್ನ ಖರೀದಿ ಬಿಲ್
Old Gold Rate : ಪ್ರಸ್ತುತ ಚಿನ್ನದ ಬೆಲೆ ಭಾರಿ ಏರಿಕೆ ಆಗಿರುವ ಈ ಸಮಯದಲ್ಲಿ, 50ರ ದಶಕದಲ್ಲಿ ಚಿನ್ನದ ಬೆಲೆ ಎಷ್ಟಿತ್ತು ಎನ್ನುವ ವಿಚಾರ ವೈರಲ್ (Gold Purchase Bill Goes Viral) ಆಗಿದೆ.
Old Gold Rate : ಭಾರತ ದೇಶದ ಮಹಿಳೆಯರಿಗೆ ಚಿನ್ನದ ಮೇಲೆ ಎಷ್ಟು ಪ್ರೀತಿ ಇದೆ ಎಂದು ವಿಶೇಷವಾಗಿ ಹೇಳಬೇಕಿಲ್ಲ. ಮದುವೆ, ಹಬ್ಬ, ಹರಿದಿನ ಇಂಥ ಸಂದರ್ಭಗಳಲ್ಲಿ ಬಹಳಷ್ಟು ಜನ ಚಿನ್ನ ಖರೀದಿ (Buy Gold) ಮಾಡುತ್ತಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಚಿನ್ನದ ಬೆಲೆ (Gold Price) ಭಾರಿ ಏರಿಕೆ ಆಗುತ್ತಲೇ ಇದೆ.
ಅದರಲ್ಲೂ ಈ ವರ್ಷ ಅತಿಹೆಚ್ಚಾಗಿ ಚಿನ್ನದ ಬೆಲೆ ಏರಿಕೆ ಆಗಿದೆ. 2024ರ ಮಾರ್ಚ್ ನಲ್ಲಿ ಅತಿಹೆಚ್ಚಾಗಿ ಚಿನ್ನದ ಬೆಲೆ (Gold Rate) ಏರಿಕೆ ಆಗಿತ್ತು ಎಂದು ತಿಳಿದುಬಂದಿದೆ.. ಸಾಮಾನ್ಯ ವರ್ಗದ ಜನರಿಗೆ ಈಗಿನ ಬೆಲೆ ಏರಿಕೆ ಕಾರಣದಿಂದ ಚಿನ್ನ ಖರೀದಿ ಮಾಡುವುದು ಕನಸಾಗಿ ಉಳಿಯುತ್ತಿದೆ ಎಂದರೆ ತಪ್ಪಲ್ಲ.
ಜಾಸ್ತಿ ಕಂಡೀಷನ್ ಇಲ್ಲದೆ ಕಡಿಮೆ ಬಡ್ಡಿಗೆ ಪರ್ಸನಲ್ ಲೋನ್ ಕೊಡುವ ಟಾಪ್ 10 ಬ್ಯಾಂಕುಗಳು ಇವು!
![1959ರಲ್ಲಿ 1 ಗ್ರಾಂ ಚಿನ್ನದ ಬೆಲೆ ಎಷ್ಟಿತ್ತು ಗೊತ್ತಾ? ಚಾಕಲೇಟ್ ಬೆಲೆ! ವೈರಲ್ ಆಯ್ತು ಚಿನ್ನ ಖರೀದಿ ಬಿಲ್ - kannada news Do you know the price of 1 gram of gold in 1959, Gold purchase bill Goes viral](https://kannadanews.today/wp-content/uploads/2024/07/Do-you-know-the-price-of-1-gram-of-gold-in-1959-Gold-purchase-bill-Goes-viral.jpg.webp)
ಹೌದು, ಚಿನ್ನದ ಖರೀದಿ ಒಂದು ರೀತಿ ಕೈಗೆ ನಿಲುಕದ ನಕ್ಷತ್ರದ ರೀತಿ ಆಗಿ ಹೋಗಿದೆ. ಜನರು ಚಿನ್ನ ಖರೀದಿ ಮಾಡುವುದಕ್ಕೆ ಸಾವಿರ ಬಾರಿ ಯೋಚಿಸುವ ಪರಿಸ್ಥಿತಿ ಎದುರಾಗಿದೆ. ಈಗಂತೂ ಚಿನ್ನದ ಬೆಲೆ 60 ಸಾವಿರ ದಾಟಿ, 70 ಸಾವಿರದ ಅಂಚಿಗೆ ಬಂದಿದ್ದು ಜನರು ಚಿನ್ನ ಖರೀದಿಗೆ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ ಎಂದು ಹೇಳಲಾಗುತ್ತಿದೆ.
ಪ್ರಸ್ತುತ ಚಿನ್ನದ ಬೆಲೆ ಭಾರಿ ಏರಿಕೆ ಆಗಿರುವ ಈ ಸಮಯದಲ್ಲಿ, 50ರ ದಶಕದಲ್ಲಿ ಚಿನ್ನದ ಬೆಲೆ ಎಷ್ಟಿತ್ತು ಎನ್ನುವ ವಿಚಾರ ವೈರಲ್ (Gold Purchase Bill Goes Viral) ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ (Social Media) ಅನೇಕ ವಿಚಾರಗಳು ವೈರಲ್ ಆಗುತ್ತಲೇ ಇರುತ್ತದೆ.
ಅವುಗಳ ಪೈಕಿ ಈಗ 1959ರಲ್ಲಿ ಚಿನ್ನದ ಬೆಲೆ ಎಷ್ಟಿತ್ತು ಎನ್ನುವ ಮಾಹಿತಿ ಈಗ ವೈರಲ್ ಆಗಿದೆ. ಹಾಗೆಯೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ವ್ಯತ್ಯಾಸ ಆದಾಗ ನಮ್ಮ ದೇಶದ ಮಾರುಕಟ್ಟೆಯಲ್ಲಿ ಕೂಡ ಚಿನ್ನದ ಬೆಲೆಯಲ್ಲಿ ಏರಿಕೆ ಆಗಲಿದೆ.
ಅಕಸ್ಮಾತ್ ನೀವು ಕೊಟ್ಟ ಚೆಕ್ ಬೌನ್ಸ್ ಆದ್ರೆ ಎಷ್ಟು ವರ್ಷ ಜೈಲು ಶಿಕ್ಷೆ? ಎಷ್ಟು ದಂಡ ಕಟ್ಟಬೇಕು ಗೊತ್ತಾ?
ಈಗ ಚಿನ್ನದ ಬೆಲೆಯಲ್ಲಿ ಇಷ್ಟೆಲ್ಲಾ ಏರಿಕೆ ಆಗುತ್ತಿರುವಾಗ, 1959ರಲ್ಲಿ ಚಿನ್ನದ ಬೆಲೆ ಎಷ್ಟಿತ್ತು ಎಂದರೆ, ಕೇವಲ 113 ರೂಪಾಯಿಗಳಾಗಿತ್ತು ಎಂದರೆ ನಂಬಲು ಅಸಾಧ್ಯ ಎಂದರೆ ತಪ್ಪಲ್ಲ. 50ರ ದಶಕದಲ್ಲಿ ಅಷ್ಟು ವರ್ಷಗಳ ಹಿಂದೆ ಒಂದು ಗ್ರಾಮ್ ಚಿನ್ನದ ಬೆಲೆ ಕೇವಲ 10 ರೂಪಾಯಿ ಆಗಿತ್ತು. ಇದನ್ನು ಈಗಿನ ಬೆಲೆಗೆ ಹೋಲಿಸಿ ನೋಡುವುದಾದರೆ, ಈಗ 10 ರೂಪಾಯಿಗೆ ಯಾವುದೇ ಒಂದು ಸ್ನ್ಯಾಕ್ಸ್ ಕೂಡ ಬರುವುದಿಲ್ಲ.
ಮಾವನ ಆಸ್ತಿಯಲ್ಲಿ ಸೊಸೆಗೆ ಇರುವ ಹಕ್ಕು ಎಷ್ಟು? ಅಷ್ಟಕ್ಕೂ ಆಸ್ತಿಯಲ್ಲಿ ನಿಜಕ್ಕೂ ಪಾಲು ಸಿಗುತ್ತಾ?
ಇದೀಗ 1959ರ ಈ ಬಿಲ್ ವೈರಲ್ ಆಗಿದೆ, ಆಗಿನ ಬೆಲೆ ಭಾರಿ ಸಂಚಲನ ಸೃಷ್ಟಿ ಆಗಿದೆ. 1959ರ ಮಾರ್ಚ್ 3ರಂದು ಈ ಒಂದು ಬಿಲ್ ಬರೆಯಲಾಗಿದೆ, ಆ ಬಿಲ್ ನಲ್ಲಿ ಚಿನ್ನ ಮತ್ತು ಬೆಳ್ಳಿ (Gold and Silver) ಎರಡನ್ನು ಸಹ ಖರೀದಿ ಮಾಡಲಾಗಿದ್ದು, ಇದರ ಬೆಲೆ ₹909 ರೂಪಾಯಿ ಮಾತ್ರ ಆಗಿದೆ.
ಇದು ಮಹಾರಾಷ್ಟ್ರ ರಾಜ್ಯಕ್ಕೆ ಸೇರಿದ ಅಂಗಡಿಯ ಬಿಲ್ ಆಗಿದ್ದು, ಶಿವಲಿಂಗ ಎನ್ನುವ ವ್ಯಕ್ತಿ ಖರೀದಿ ಮಾಡಿದ್ದು, ಈ ಬಿಲ್ ನ ಫೋಟೋ ಈಗ ಭಾರಿ ವೈರಲ್ ಆಗಿದೆ.
Do you know the price of 1 gram of gold in 1959, Gold purchase bill Goes viral