Business News

ಇಂತಹ ವಿದ್ಯಾರ್ಥಿಗಳಿಗೆ ಸಿಗಲಿದೆ 15,000 ಸ್ಕಾಲರ್ಶಿಪ್; ಕೂಡಲೇ ಅರ್ಜಿ ಸಲ್ಲಿಸಿ

Education Scholarship : ಬಡ ವಿದ್ಯಾರ್ಥಿಗಳು (poor family students) ತಮ್ಮ ಮೆಟ್ರಿಕ್ ನಂತರದ ಶಿಕ್ಷಣ ಕೋರ್ಸ್ (after metric courses) ಮುಂದುವರೆಸಲು ವಿದ್ಯಾರ್ಥಿವೇತನ (scholarship) ಪಡೆದುಕೊಳ್ಳಲು ಅವಕಾಶವಿದೆ. ಅರ್ಹ ವಿದ್ಯಾರ್ಥಿಗಳು ತಕ್ಷಣವೇ ಅರ್ಜಿ ಸಲ್ಲಿಸಿ ಪ್ರತಿ ತಿಂಗಳು 1,500 ರೂ. ಪಡೆದುಕೊಳ್ಳಬಹುದು.

ವಿದ್ಯಾಸಿರಿ ವಿದ್ಯಾರ್ಥಿ ವೇತನ! (Vidyasiri scholarship – SSP)

2023 ಜೂನ್ ತಿಂಗಳಿನಿಂದ 2024 ಮಾರ್ಚ್ ತಿಂಗಳಿನ ವರೆಗೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವಿದ್ಯಾಸಿರಿ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಪ್ರತಿ ತಿಂಗಳು 1,500 ರೂಪಾಯಿಗಳಂತೆ, ವರ್ಷಕ್ಕೆ 15,000ಗಳನ್ನು ತಮ್ಮ ಹಾಸ್ಟೆಲ್ ಖರ್ಚು ವೆಚ್ಚವಾಗಿ ಪಡೆದುಕೊಳ್ಳಬಹುದು. ಈ ಹಣವನ್ನು ನೇರವಾಗಿ ವಿದ್ಯಾರ್ಥಿಗಳ ಖಾತೆಗೆ (Bank Account) ವರ್ಗಾವಣೆ ಮಾಡಲಾಗುವುದು.

The central government brought a new scholarship scheme for students

ಫಿಕ್ಸೆಡ್ ಡೆಪಾಸಿಟ್ ವಲಯಕ್ಕೆ ಎಂಟ್ರಿ ಕೊಟ್ಟ ಬಜಾಜ್ ಫೈನಾನ್ಸ್! ಆಕರ್ಷಕ ಬಡ್ಡಿ

ಯಾರಿಗೆ ಸಿಗಲಿದೆ ವಿದ್ಯಾರ್ಥಿ ವೇತನ! (Who can get SSP)

ಸರ್ಕಾರಿ ಮತ್ತು ಖಾಸಗಿ ಅನುದಾನಿತ ವಿದ್ಯಾರ್ಥಿ ನಿಲಯದಲ್ಲಿ ಉಳಿದುಕೊಳ್ಳಲು ಅವಕಾಶ ಸಿಗದೇ ಇರುವವರು, ತಮ್ಮ ತಿಂಗಳ ಖರ್ಚು ವೆಚ್ಚಕ್ಕಾಗಿ 15,000ಗಳನ್ನು ವಾರ್ಷಿಕ (10 ತಿಂಗಳಿಗೆ) ವಿದ್ಯಾರ್ಥಿ ವೇತನವಾಗಿ ಪಡೆಯಬಹುದು.

ಹಿಂದುಳಿದ ವರ್ಗದ ವಿದ್ಯಾರ್ಥಿಗಳಾಗಿರಬೇಕು. SC/ST ಮೊದಲಾದ ಮೀಸಲಾತಿ ಪಡೆದುಕೊಂಡಿರುವವರಾಗಿರಬೇಕು.

ಭಾರತದ ನಿವಾಸಿ ಆಗಿರಬೇಕು. ಕರ್ನಾಟಕದ ಕಾಯಂ ವಾಸಿಗಳಾಗಿರಬೇಕು.

ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ವರಮಾನ ಒಂದು ಲಕ್ಷ ಮೀರಬಾರದು. ಪ್ರವರ್ಗ 1 ಅಡಿಯಲ್ಲಿ ಬರುವ ವಿದ್ಯಾರ್ಥಿಗಳ ಕುಟುಂಬದ ವರಮಾನ 2.50 ಲಕ್ಷ ಮೀರಬಾರದು.

ಕರ್ನಾಟಕದಲ್ಲಿ ಕನಿಷ್ಠ ಏಳು ವರ್ಷ ವಿದ್ಯಾಭ್ಯಾಸ ಮಾಡಿರಬೇಕು. 75% ಗಿಂತ ಹೆಚ್ಚಿನ ಹಾಜರಾತಿ ಇರಬೇಕು.

ಮೆಟ್ರಿಕ್ ನಂತರದ ಕೋರ್ಸುಗಳಿಗೆ ಸೇರಿರುವುದಕ್ಕೆ ದಾಖಲಾತಿ ಒದಗಿಸಬೇಕು.

ವಿದ್ಯಾರ್ಥಿಗಳು ಮೆಟ್ರಿಕ್ ನಂತರದ ಕೋರ್ಸ್ ತೆಗೆದುಕೊಂಡಿದ್ದರೆ, ವಸತಿ ಮತ್ತು ಊಟ ವೆಚ್ಚ, ಅಥವಾ ಮೆಟ್ರಿಕ್ ನಂತರದ ವಿದ್ಯಾಭ್ಯಾಸದ ವೆಚ್ಚ ಈ ಎರಡು ಖರ್ಚುಗಳಲ್ಲಿ ಯಾವುದಾದರೂ ಒಂದಕ್ಕೆ ಹಣಕಾಸಿನ ಸಹಾಯ ಪಡೆಯಬಹುದು.

ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದ (rural area) ವಾಗಿರಬೇಕು ತಾವು ವಿದ್ಯಾಭ್ಯಾಸ ಮಾಡುತ್ತಿರುವ ಶಿಕ್ಷಣ ಸಂಸ್ಥೆಯಿಂದ ಐದು ಕಿಲೋಮೀಟರ್ ಒಳಗಿನ ವ್ಯಾಪ್ತಿಯಲ್ಲಿ ವಾಸವಿರಬೇಕು.

ನಾನ್ ವೆಜ್ ಪ್ರಿಯರಿಗೆ ಸಿಹಿ ಸುದ್ದಿ, ಚಿಕನ್ ಬೆಲೆ ಭಾರೀ ಇಳಿಕೆ! ಕೋಳಿ ಮಾಂಸ ಎಷ್ಟಾಗಿದೆ?

Education scholarshipಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು! (Needed documents)

10ನೇ ತರಗತಿಯ ಮಾರ್ಕ್ಸ್ ಕಾರ್ಡ್ (Marks Card)
ಪಿಯುಸಿ ಹಾಗೂ ಪದವಿ ಸೆಮಿಸ್ಟರ್ ಅಂಕಪಟ್ಟಿ
ಶಾಲಾ ಶುಲ್ಕ ರಶೀದಿ (School Fees)
ಬ್ಯಾಂಕ್ ಖಾತೆಯ ವಿವರ (Bank Account)
ಆಧಾರ್ ಕಾರ್ಡ್ (Aadhaar Card)
ಪಾಸ್ ಪೋರ್ಟ್ ಅಳತೆಯ ಫೋಟೋಗಳು (Photos)
ಜಾತಿ ಪ್ರಮಾಣ ಪತ್ರ (Cast Certificate)
ಆದಾಯ ಪ್ರಮಾಣ ಪತ್ರ (Income Certificate)

ಸ್ವಂತ ಮನೆ ಕಟ್ಟಿಕೊಳ್ಳಲು ಅತಿ ಕಡಿಮೆ ಬಡ್ಡಿಯಲ್ಲಿ ಸಿಗುತ್ತಿದೆ ಹೋಮ್ ಲೋನ್

ವಿದ್ಯಾಸಿರಿ ವಿದ್ಯಾರ್ಥಿ ವೇತನ ಪಡೆದುಕೊಳ್ಳುವ ಅರ್ಜಿ ಸಲ್ಲಿಸುವುದು ಹೇಗೆ? (How to apply for SSP)

https://ssp.postmatric.karnataka.gov.in/ ಎಸ್ ಎಸ್ ಬಿ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಲ್ಲಿ ಕೊಡಲಾಗಿರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ ದಾಖಲೆಗಳನ್ನು ಸಬ್ಮಿಟ್ ಮಾಡಿ. ನಿಮ್ಮ ಹಾಗೂ ನಿಮ್ಮ ಪಾಲಕರ ಬಗೆಗಿನ ಎಲ್ಲಾ ಮಾಹಿತಿಗಳು ಸರಿಯಾಗಿ ಇದ್ದರೆ ನಿಮಗೆ ಸುಲಭವಾಗಿ ವಿದ್ಯಾಸಿರಿ ವಿದ್ಯಾರ್ಥಿ ವೇತನ ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

15,000 scholarship will be given to such students, Apply immediately

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories